Sunday, December 4, 2022

ದೇಗುಲ ತೆರವು ವಿಚಾರದಲ್ಲಿ ಇದು ಆ ಸರ್ಕಾರ, ಈ ಸರ್ಕಾರ ಎಂದು ಮಾತಾಡುವುದಲ್ಲ: ಸಂಸದ ಪ್ರತಾಪ್‌ ಸಿಂಹ

ಮೈಸೂರು: ‘ಅಧಿಕಾರಿಗಳು ಮಾಡಿದ ಗೊಂದಲವನ್ನು ರಾಜಕಾರಣಿಗಳು ತಮ್ಮ ಮೈಮೇಲೆ ಎಳೆದುಕೊಳ್ಳಬೇಡಿ’ ದೇಗುಲಗಳ ತೆರವಿನ ವಿಚಾರದಲ್ಲಿ ಇದು ಆ ಸರ್ಕಾರ, ಈ ಸರ್ಕಾರ ಎಂದು ಮಾತಾಡುವುದಲ್ಲ.

ಬದಲಾಗಿ ಇದು ತಾರ್ಕಿಕ ಅಂತ್ಯ ಕಾಣಬೇಕಾದರೆ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ.


ಈ ಬಗ್ಗೆ ಪ್ರತಾಪ್‌ ಸಿಂಹ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಇದೇ ರೀತಿಯಲ್ಲಿ ಮಿಸ್ ಲೀಡ್ ಆಗಿದೆ. ಇಲ್ಲಿ ಅಧಿಕಾರಿಗಳು ನಿಮಗೆ ಹೇಗೆ ಮಿಸ್ ಲೀಡ್ ಮಾಡಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
“2009ರ ಸುಪ್ರೀಂಕೋರ್ಟ್ ಆದೇಶವನ್ನ ಸರಿಯಾಗಿ ಅರ್ಥೈಸಿಕೊಳ್ಳದೇ ಅಧಿಕಾರಿಗಳು ಹೀಗೆ ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಆಡಳಿತದಲ್ಲೂ ಐಎಎಸ್ ಅಧಿಕಾರಿಗಳು ಅವರನ್ನು ಮಿಸ್ ಲೀಡ್ ಮಾಡಿದ್ದಾರೆ.

ಹೀಗಾಗಿ ತೀರ್ಪನ್ನು ಯಾರು ತಪ್ಪಾಗಿ ಅರ್ಥೈಸಿದವರು ಯಾರು? ಎಂಬುದು ಅರಿತುಕೊಳ್ಳಿ” ಎಂದು ಸಂಸದ ಪ್ರತಾಪ್‌ ಸಿಂಹ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

LEAVE A REPLY

Please enter your comment!
Please enter your name here

Hot Topics