Wednesday, December 1, 2021

ಅ.24ಕ್ಕೆ ಭಾರತ-ಪಾಕ್‌ ಟಿ20 ಕ್ರಿಕೆಟ್‌: ಪ್ರಮೋದ್‌ ಮುತಾಲಿಕ್‌ ವಿರೋಧ

ಗದಗ: ಇದೇ ಅ.24ರಂದು ಟಿ-20 ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ಥಾನ ಮುಖಾಮುಖಿಯಾಗಲಿದ್ದು, ಈ ವೇಳೆ ಈ ಮ್ಯಾಚ್‌ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ವಿರೊಧ ವ್ಯಕ್ತಪಡಿಸಿದ್ದಾರೆ.


ಕಾಶ್ಮೀರದಲ್ಲಿ ಸೈನಿಕರ, ನಾಗರಿಕರ ನಿರಂತರ ಹತ್ಯೆಯಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಜೊತೆ ಆಟ ಆಡಿ ನಮ್ಮ ವಿರುದ್ಧವೇ ಅವರು ಮದ್ದು ಗುಂಡು ಹಾರಿಸ್ತಿರೋದು ಸರ್ಕಾರಕ್ಕೆ ಗೊತ್ತಿಲ್ಲವೇ?

ಮೊದಲು ಆಟವಾಡಲು ಅನುಮತಿ ಕೊಟ್ಟಿದ್ದೆ ತಪ್ಪು. ಅವರ ಜೊತೆ ಕ್ರಿಕೆಟ್ ಆಡೋದು ಸ್ವಾಭಿಮಾನದ ಶೂನ್ಯತೆ ತೋರುತ್ತೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.
ಪಾಕಿಸ್ತಾನ ಜಗತ್ತಿಗೆ ಕಂಟಕವಾಗಿದೆ.

ತಾಲಿಬಾನ್ ಗೆ ಸಪೋರ್ಟ್ ಮಾಡುವ ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡ್ತಿರಾ. ರಾಕ್ಷಸರು ರಾಕ್ಷಸರೇ ಭಯೋತ್ಪಾದಕರು ಭಯೋತ್ಪಾದಕರೆ. ಅವರಿಗೆ ಅಮೃತ ಕುಡಿಸಿದ್ರೂ ವಿಷವನ್ನೇ ಕೊಡ್ತಾರೆ.

ಕ್ರಿಕೆಟ್ ಆಟಗಾರರಿಗೆ ದೇಶದ ಸೈನಿಕರ ಬಗ್ಗೆ ಕರುಣೆ ಇದೆಯಾ?ಭಯೋತ್ಪಾದನೆ ನಿಲ್ಲುವವರೆಗೂ ಆಟ ಆಡೋದಿಲ್ಲ ಅಂತಾ ಹೇಳಬೇಕಿತ್ತು ಅಲ್ವಾ ಎಂದು ಮುತಾಲಿಕ್​ ಕಿಡಿಕಾರಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...