Connect with us

DAKSHINA KANNADA

ವಿದ್ಯುತ್ ಪ್ರಕರಣದಲ್ಲಿ ಡಿಕೆಶಿ ಕೋರ್ಟ್‌ನಲ್ಲಿ ಸಾಕ್ಷ್ಯ ಹೇಳುವಾಗ ಕೈಕೊಟ್ಟ ಕರೆಂಟ್‌

Published

on

ಪುತ್ತೂರು: ವಿದ್ಯುತ್ ಸಮಸ್ಯೆ ಬಗ್ಗೆ ವ್ಯಕ್ತಿಯಿಂದ ಅವ್ಯಾಚ್ಯ ಶಬ್ದಗಳ ಪ್ರಯೋಗ ಪ್ರಕರಣದ ವಿಚಾರಣೆ ನಡೆಯುತ್ತಿರುವ ವೇಳೆಯೇ ವಿದ್ಯುತ್‌ ಕೈಕೊಟ್ಟ ಘಟನೆ ನಡೆದಿದೆ.

ಇದೇ ಸಂದರ್ಭದಲ್ಲಿ ಡಿಕೆಶಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರೂ ವಿದ್ಯುತ್ ಸಮಸ್ಯೆಯ ಬಗ್ಗೆ ಡಿಕೆಶಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

2016 ರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯದ ಬೆಳ್ಳಾರೆಯ ಸಾಯಿ ಗಿರಿಧರ್ ಎಂಬ ವ್ಯಕ್ತಿ ಅಂದಿನ ಇಂಧನ ಸಚಿವರಾಗಿದ್ದ ಡಿಕೆಶಿಗೆ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನಡೆದ ವಿಚಾರಣೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ನ್ಯಾಯಾಲಯದಲ್ಲಿ ಡಿ.ಕೆ. ಶಿವಕುಮಾರ್ ಸಾಕ್ಷಿ ದಾಖಲಿಸಿಕೊಳ್ಳುತ್ತಿರುವ ಸಂದರ್ಭ ವಿದ್ಯುತ್ ಕೈಕೊಟ್ಟಿದೆ. ಇದೇ ಸಂದರ್ಭದಲ್ಲಿ ಡಿಕೆಶಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರೂ ವಿದ್ಯುತ್ ಸಮಸ್ಯೆಯ ಬಗ್ಗೆ ಡಿಕೆಶಿಗೆ ಮನವರಿಕೆ ಮಾಡಿಕೊಟ್ಟು, ಎಲ್ಲರೂ ಪ್ರತೀ ದಿನ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ನಿಮಗೂ ಇಂದು ವಿದ್ಯುತ್ ನ ಸಮಸ್ಯೆಯ ಅರಿವಾಗಿದೆ ಎಂದರು.
ಕೋರ್ಟ್ ನಲ್ಲಿ ಸಾಕ್ಷ್ಯ ನುಡಿದು ಹೊರ ಬಂದ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಕಾನೂನಿಗೆ ತಲೆ ಬಾಗಿ ಕೋರ್ಟ್ ಗೆ ಹಾಜರಾಗಿದ್ದೇನೆ.

ಆ ವ್ಯಕ್ತಿ ನನಗೆ ಮಾತ್ರವಲ್ಲದೇ ಅಧಿಕಾರಿಗಳಿಗೂ ಅವಾಚ್ಯ ಶಬ್ದದಿಂದ ಬೈದಿದ್ದಾರೆ. ಸಾರ್ವಜನಿಕ ಕೆಲಸ ಮಾಡೋವಾಗ ಕರ್ತವ್ಯಕ್ಕೆ ಅಡ್ಡಿ ಪ್ರಯತ್ನ ನಡೆಯುತ್ತದೆ. ಈ ಕಾರಣಕ್ಕಾಗಿ ಅಧಿಕಾರಿಗಳು ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ವಿಚಾರವನ್ನು ಕೋರ್ಟ್ ಮುಂದೆ ಹೇಳಿದ್ದೇನೆ. ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಇದೆ. ನಾನು ಸಚಿವನಾಗಿದ್ದ ಸಂದರ್ಭ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿದ್ದೇನೆ.

ಈಗಿನ‌ ನೂತನ ಸಚಿವರು ಸಮಸ್ಯೆ ಬಗೆಹರಿಸಬಹುದು ಎಂಬ ಭರವಸೆ ಇದೆ. ಸುಳ್ಯದಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

BANTWAL

ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!

Published

on

ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.

Continue Reading

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

LATEST NEWS

Trending