Connect with us

DAKSHINA KANNADA

ಮಂಗಳೂರಿನಲ್ಲಿ ಕಸಾಯಿಖಾನೆಗೆ ದಾಳಿ: 3 ಕೋಣ ವಶ, ಪ್ರಕರಣ ದಾಖಲು

Published

on

ಮಂಗಳೂರು: ಸರ್ಕಾರ ಅನುಮತಿ ಇರುವ ಕುದ್ರೋಳಿಯ ಕಸಾಯಿಖಾನೆಯಲ್ಲಿ ಕಟ್ಟಿ ಹಾಕಲಾಗಿದ್ದ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ 3 ಕೋಣಗಳನ್ನು ಬಂದರು ಠಾಣಾ ಪೊಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿದ ಘಟನೆ ನಿನ್ನೆ ಮುಂಜಾನೆ 5 ಗಂಟೆಗೆ ನಡೆದಿದೆ.

ಬೆಂಗಳೂರಿನಿಂದ ಬಂದ ಖಚಿತ ಮಾಹಿತಿ ಮೇರೆಗೆ ಪಶುಸಂಗೋಪನೆ ಇಲಾಖೆಯ ದಿಪೀಕಾ ಡಿಸೋಜಾ ಹಾಗೂ ಆರೋಗ್ಯ ಇಲಾಖೆಯ 04 ಜನ ಸಿಬ್ಬಂದಿಯೊಂದಿಗೆ ನಗರದ ಕುದ್ರೋಳಿ ಮಂಡಿಗೆ ಭೇಟಿ ನೀಡಿ ತಪಾಸಣೆ ನಡೆಸಿದಾಗ, ಕಸಾಯಿಖಾನೆಯ ಕೊಠಡಿಯೊಂದರಲ್ಲಿ  03 ವರ್ಷ ಪ್ರಾಯದ 3 ಕೋಣಗಳನ್ನು ಗುತ್ತಿಗೆದಾರರು ಕೂಡಿ ಹಾಕಿದ್ದಾರೆ. ಈ ಕೋಣಗಳ ಮೌಲ್ಯ 45 ಸಾವಿರ ರು. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಠಾಣಾ ಅಕ್ರ ನಂ 74/2021 ಕಲಂ 4,5, 7, 12 ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ ಮತ್ತು 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಈ ಕೋಣಗಳನ್ನು ಸಂರಕ್ಷಿಸಿನ ಪಜೀರಿನ ಗೋವನಿತಾಶ್ರಮಕ್ಕೆ ನೀಡಲಾಗಿದೆ.

DAKSHINA KANNADA

ಚೈತ್ರಾ ಹೆಬ್ಬಾರ್ ನಾಪತ್ತೆ ಹಿಂದೆ ಅನ್ಯಕೋಮಿನ ಯುವಕನ ಕೈವಾಡ ಶಂಕೆ- ಆರೋಪಿಯ ಬಂಧಿಸಲು ಹಿಂದೂ‌ ಸಂಘಟನೆ ಒತ್ತಾಯ

Published

on

ಪುತ್ತೂರು: ಮಾಡೂರು ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ ಪ್ರಕರಣದ ಹಿಂದೆ ಡ್ರಗ್ಸ್ ಮಾಫಿಯಾ, ಲವ್ ಜಿಹಾದ್ ಶಂಕೆಯನ್ನು ವ್ಯಕ್ತಪಡಿಸಿದ ಹಿಂದೂ‌ ಸಂಘಟನೆ ಮುಖಂಡರು, ಇದೀಗ ಬಂಟ್ವಾಳದ ಅನ್ಯಕೋಮಿನ ಯುವಕನ ಕೈವಾಡ ಆಕೆ ನಾಪತ್ತೆ ಪ್ರಕರಣದ ಹಿಂದೆ ಇದ್ದು, ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಪುತ್ತೂರಿನ ಕೂರ್ನಡ್ಕದಲ್ಲಿ ವಾಸವಿದ್ದ ಶಾರೂಕ್ ಶೇಖ್ ಮೂಲತಃ ಬಂಟ್ವಾಳದ ನೇರಳಕಟ್ಟೆಯ ನಿವಾಸಿಯಾಗಿದ್ದಾನೆ. ಚೈತ್ರಾ ತಂಗಿದ್ದ ಪಿಜಿಗೆ ಬರುತ್ತಿದ್ದ ಶಂಕಿತ ಬರುತ್ತಿದ್ದ. ಚೈತ್ರಾ ಪೋಷಕರಿಗೆ ಮಾಡೂರು ಬಜರಂಗದಳ ಮುಖಂಡರು ಮಾಹಿತಿಯನ್ನೂ ನೀಡಿದ್ದರು. ಇದೀಗ ಮಾಹಿತಿ ನೀಡಿದ ಬಳಿಕ ನಾಪತ್ತೆಯಾದ ಚೈತ್ರಾ ಹೆಬ್ಬಾರ್‌ ಹಿಂದೆ ಈ ಆರೋಪಿ ಇರುವುದು ದೃಢಪಡುತ್ತಿರುವುದರಿಂದ ಎರಡು ದಿನದಲ್ಲಿ ಚೈತ್ರಾಳನ್ನು ಪೊಲೀಸರು ಕರೆ ತರಬೇಕು. ಇಲ್ಲದೇ ಇದ್ದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಪ್ರಾಂತ ಸಂಚಾಲಕ ಮುರಳಿ ಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.

Continue Reading

DAKSHINA KANNADA

Ullala: ನಾಪತ್ತೆಯಾಗಿದ್ದ ಚೈತ್ರಾ ಹೆಬ್ಬಾರ್ ಸ್ಕೂಟರ್ ಪತ್ತೆ..!

Published

on

ಮಂಗಳೂರು: ಉಳ್ಳಾಲದ ಮಾಡೂರಿನ ಪಿಜಿಯಿಂದ ಫೆ.17 ರಂದು ನಾಪತ್ತೆಯಾಗಿದ್ದ ಚೈತ್ರಾ ಹೆಬ್ಬಾರ್ ಚಲಾಯಿಸಿದ ಸ್ಕೂಟರ್ ಸುರತ್ಕಲ್ ಬಳಿ ಪತ್ತೆಯಾಗಿದೆ.

ಮಾಡೂರಿನ ಪಿಜಿ ಯಿಂದ ಫೆ.17 ರಂದು ಮುಂಜಾನೆ 9 ಗಂಟೆಗೆ ಚೈತ್ರಾ ಇದೇ ಸ್ಕೂಟರ್‌ನಲ್ಲಿ ತೆರಳಿದ್ದರು. ಬಳಿಕ ನಾಪತ್ತೆಯಾಗಿದ್ದ ಚೈತ್ರಾ ಸುಳಿವು ಸಿಗದೆ ಹಿನ್ನೆಲಯಲ್ಲಿ ಚೈತ್ರಾ ದೊಡ್ಡಪ್ಪ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಹಿಂದೂ ಸಂಘಟನೆಗಳೂ ಇದೊಂದು ಲವ್‌ ಜಿಹಾದ್ ಪ್ರಕರಣವೆಂದು ಆರೋಪಿಸಿ ಹೋರಾಟದ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ತನಿಕೆ ಚುರುಕುಗೊಳಿಸಿ ಪೊಲೀಸರಿಗೆ ಇದೀಗ ಚೈತ್ರಾಳ ಸ್ಕೂಟರ್ ಪತ್ತೆಯಾಗಿದೆ. ಚೈತ್ರ ಪಿಜಿಯಿಂದ ಹೊರಟ ಬಳಿಕ ಪಂಪ್‌ವೆಲ್ ಬಳಿ ಮೊಬೈಲ್ ಆಫ್ ಮಾಡಿಕೊಂಡಿದ್ದು ಬಳಿಕ ಸುರತ್ಕಲ್‌ಗೆ ಬಂದು ಅಲ್ಲಿ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದರು, ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸಿರುವ ಪೊಲೀಸರು ಶಂಕಿತ ಯುವಕನ ಬಗ್ಗೆಯೂ ಮಾಹಿತಿ ಕಲೆ ಹಾಕಿದೆ. ಆದರೆ ಆತನ ಮೊಬೈಲ್ ಕೂಡಾ ಸ್ವಿಚ್‌ ಆಫ್ ಆಗಿರುವ ಕಾರಣ ಚೈತ್ರಾ ಆತನ ಜೊತೆಯಲ್ಲಿ ಹೋಗಿರುವ ಬಲವಾದ ಅನುಮಾನ ಮೂಡಿದೆ. ಕೇರಳ ಅಥವಾ ಬೆಂಗಳೂರಿಗೆ ಹೋಗಿರುವ ಸಾದ್ಯತೆ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Continue Reading

DAKSHINA KANNADA

Mangaluru: ಮನೆಗೆ ಆಕಸ್ಮಿಕ ಬೆಂಕಿ- ಸೊತ್ತುಗಳು ಸಂಪೂರ್ಣ ನಾಶ..!

Published

on

ಮಂಗಳೂರು: ಮಂಗಳೂರಿನ ಸಸಿಹಿತ್ಲು ಬೀಚ್ ಬಳಿಯ ದಾoಡಿ ಮನೆಯ ಶ್ಯಾಮಲಾ ಎಂಬವರ ಮನೆಗೆ ಬೆಂಕಿ ತಗುಲಿ ಮನೆ ಸಂಪೂರ್ಣ ಸುಟ್ಟು ಹೋದ ಘಟನೆ ಫೆ.24ರಂದು ನಡೆದಿದೆ.

ಮನೆಯಲ್ಲಿ ಶ್ಯಾಮಲಾ ಮತ್ತು ಅವರ ಪುತ್ರ ಮಾತ್ರ ವಾಸಿಸುತ್ತಿದ್ದು, ಇಬ್ಬರೂ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಗ್ನಿ ದುರಂತ ನಡೆದಿದೆ. ಬೆಂಕಿ ತಗುಲಿದ್ದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅಗ್ನಿಶಾಮಕ ದಳದವರಿಗೂ ಮಾಹಿತಿ ನೀಡಿದ್ದು, ಬಳಿಕ ಅವರೂ ಬಂದಿದ್ದಾರೆ. ಕ್ಯಾಟರಿಂಗ್ ಸಂಸ್ಥೆಯ 4 ಟ್ಯಾಂಕ್‌ ನೀರನ್ನು ತರಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಲಾಗಿದೆ. ಆದರೆ ಅಷ್ಟರಲ್ಲಿ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.

ಗ್ಯಾಸ್‌ ಸಂಪರ್ಕವನ್ನು ತೆಗೆದು ಹೊರಗೆ ಇರಿಸಿದ್ದರಿಂದ ಭಾರೀ ದುರಂತ ತಪ್ಪಿದೆ. ಬಟ್ಟೆ ಬರೆಗಳೆಲ್ಲ ಸುಟ್ಟು ಹೋಗಿವೆ. ಕಪಾಟಿನಲ್ಲಿದ್ದ 20 ಸಾವಿರ ರೂಪಾಯಿ ನಗದು ಮತ್ತು ಒಂದು ಲಕ್ಷ ರೂಪಾಯಿ ಅಂದಾಜು ಬೆಲೆಯ ಚಿನ್ನಾಭರಣ ಬೆಂಕಿಗೆ ಆಹುತಿಯಾಗಿದೆ ಎಂದು ಶ್ಯಾಮಲಾ ಅವರು ತಿಳಿಸಿದ್ದಾರೆ. ಮಾಹಿತಿ ಲಭಿಸಿದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಮನೆ ಮಂದಿಗೆ ತಾತ್ಕಾಲಿಕವಾಗಿ ಪಕ್ಕದ ಬಾಡಿಗೆ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ.

ನಷ್ಟದ ಪ್ರಮಾಣ ಅಂದಾಜಿಸಿಲ್ಲ. ದೇವರ ದೀಪಕ್ಕೆ ಇರಿಸಿದ್ದ ಹಣತೆಯನ್ನು ಇಲಿ ಮಗುಚಿ ಹಾಕಿದ ಪರಿಣಾಮ ಬೆಂಕಿ ಹಿಡಿದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Continue Reading

LATEST NEWS

Trending