Thursday, December 1, 2022

ಉಡುಪಿಯಲ್ಲಿ ಮಾದಕ ದ್ರವ್ಯ-ಟ್ರಾಫಿಕ್ ರೂಲ್ಸ್‌ ಬ್ರೇಕರ್‌ ಗಳ ವಿರುದ್ದ ಪೋಲೀಸ್ ಕಾರ್ಯಾಚರಣೆ..!

ಉಡುಪಿಯಲ್ಲಿ ಮಾದಕ ದ್ರವ್ಯ-ಟ್ರಾಫಿಕ್ ರೂಲ್ಸ್‌ ಬ್ರೇಕರ್‌ ಗಳ ವಿರುದ್ದ ಪೋಲೀಸ್ ಕಾರ್ಯಾಚರಣೆ..!

ಉಡುಪಿ :  ಮುಂಬೈ , ಬೆಂಗಳೂರು, ಮಂಗಳೂರು ಸೇರಿದಂತೆ ದೇಶಾದ್ಯಂತ ಇದೀಗ ಮಾದಕ ದೃವ್ಯ ಹಾಗೂ ಗಾಂಜಾದ್ದೇ ಸದ್ದು- ಸುದ್ದಿ.  ಮಾದಕ ದ್ರವ್ಯದ ಕೇಂದ್ರ ಬಿಂದು ಕರಾವಳಿಯಾಗಿದೆ.   

ಕರಾವಳಿ ನಗರಿ ಉಡುಪಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ಮಾರಾಟ ಮಾಡುವವರು ಮತ್ತು ಗಾಂಜಾ ಸೇವಿಸುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಚೆಕ್ ಪೋಸ್ಟ್, ನಗರ ಪ್ರದೇಶ, ತಾಲೂಕು ಜಿಲ್ಲಾ ಗಡಿಯಲ್ಲಿ ಹೆಚ್ಚು ಹೆಚ್ಚು ತಪಾಸಣೆ ಮಾಡುತ್ತಿದ್ದಾರೆ. ವಾಹನಗಳ ತಪಾಸಣೆ ಮಾಡುವ ಜೊತೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಕೂಡ ಕೇಸುಗಳನ್ನು ದಾಖಲಿಸುತ್ತಿದ್ದಾರೆ.

ಎಸ್ ಪಿ ವಿಷ್ಣುವರ್ಧನ್, ಎ ಎಸ್ಪಿ ಕುಮಾರ ಚಂದ್ರ ಖುದ್ದಾಗಿ ಫೀಲ್ಡಿಗೆ ಇಳಿದಿದ್ದಾರೆ.

ದಡಬಡ ಶಬ್ದಮಾಡುತ್ತಾ ಕರ್ಕಶವಾಗಿ ಓಡಾಡುವ ಬುಲೆಟ್ ಬೈಕುಗಳಿಗೆ ಫೈನ್ ಹಾಕಿದ್ದಾರೆ.

ಕಣ್ಣುಕೋರೈಸುವ ನೀಲಿ ಲೈಟುಗಳು , ಹೆಡ್ಲೈಟ್ ನ ಪಕ್ಕದಲ್ಲಿ ಇತೃ ಸವಾರರಿಗೆ ಇರಿಟೇಷನ್ ಮಾಡುವ ನೀಲಿಬಣ್ಣದ ಎಲ್ಇಡಿ ಲೈಟ್ ಗಳನ್ನು ಅಳವಡಿಸಿರುವ ಸವಾರರ ಮೇಲೆ ದಂಡ ಬೀಸಿದ್ದಾರೆ.

ಎರಡು ಗಂಟೆಯಲ್ಲಿ ಸುಮಾರು 70 ಕೇಸುಗಳನ್ನು ದಾಖಲಿಸಿ 40,000 ಟ್ರಾಫಿಕ್ ಪೊಲೀಸರು ಫೈನ್ ವಸೂಲಿ ಮಾಡಿದ್ದಾರೆ.

ಟ್ರಾಫಿಕ್ ಗಳನ್ನು ಮೋಟಾರು ಕಾಯ್ದೆಗಳನ್ನು ಉಲ್ಲಂಘಿಸಿದ ಸುಮಾರು 25 ಕೇಸುಗಳು ದಾಖಲಾಗಿದ್ದು 15,000 ರಷ್ಟು ದಂಡವನ್ನು ಉಡುಪಿ ನಗರ ಪೊಲೀಸರು ವಶಪಡಿಸಿದ್ದಾರೆ.

ಇನ್ನೆರಡು ದಿನದಲ್ಲಿ ಡ್ರಗ್ ಪೆಡ್ಲರ್ ಪರೇಡ್ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಮಾದಕ ದ್ರೌವ್ಯ ಮಾರಾಟ, ಟ್ರಾಫಿಕ್ ರೂಲ್ಸ್ ಬ್ರೇಕ್ ವಿರುದ್ಧ ಜಾಗೃತಿ ಮೂಡಿಸಿ ದಂಡ ಹಾಕುವುದಾಗಿ ಎಸ್ ಪಿ ವಿಷ್ಣುವರ್ಧನ್ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics