Connect with us

    LATEST NEWS

    ಗುಂಡು ಹಾರಿಸಿಕೊಂಡು ಪೊಲೀಸ್‌ ಕಾನ್‌ಸ್ಟೇಬಲ್‌ ಆತ್ಮಹತ್ಯೆ..!

    Published

    on

    ತಹಶೀಲ್ದಾರ್‌ ಕಚೇರಿಯ ಕಟ್ಟಡದ ಮೇಲೆ ಪೊಲೀಸ್‌ ಕಾನ್ಸ್ಟೇಬಲ್‌ ಒಬ್ಬರು ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯ ಚಿತ್ತಾಪುರ ಪಟ್ಟಣದಲ್ಲಿ ಇಂದು ಮುಂಜಾನೆ ನಡೆದಿದೆ.

    ಕಲಬುರಗಿ : ತಹಶೀಲ್ದಾರ್‌ ಕಚೇರಿಯ ಕಟ್ಟಡದ ಮೇಲೆ ಪೊಲೀಸ್‌ ಕಾನ್ಸ್ಟೇಬಲ್‌ ಒಬ್ಬರು ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯ ಚಿತ್ತಾಪುರ ಪಟ್ಟಣದಲ್ಲಿ ಇಂದು ಮುಂಜಾನೆ ನಡೆದಿದೆ.

    ಸ್ಥಳೀಯ ಪೊಲೀಸ್‌ ಠಾಣೆಯ ಕಾನ್‌ಸ್ಟೇಬಲ್‌ ಮಲ್ಲಿಕಾರ್ಜುನ ಎಂಬುವವರು ಮೃತಪಟ್ಟವರು ಎಂದು ತಿಳಿದು ಬಂದಿದೆ.

    ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಮಲ್ಲಿಕಾರ್ಜುನ ಬೆಳಗಿನ ಜಾವ ಮೂರು ಗಂಟೆಗೆ ತಹಶೀಲ್ದಾರ್‌ ಕಚೇರಿಗೆ ಬಂದಿದ್ದಾರೆ.

    ಜೊತೆಯಲ್ಲಿದ್ದವರಿಗೆ ಸ್ವಲ್ಪ ಮೇಲೆ ಹೋಗಿ ಬರುತ್ತೇನೆ ಎಂದು ಕಟ್ಟಡದ ಮೇಲೆ ಹೋಗಿದ್ದು, ನಂತರ ಅವರ ಮೊಬೈಲಿಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸದಿದ್ದಾಗ ನಿದ್ದೆ ಮಾಡುತ್ತಿರಬೇಕು ಎಂದು ಜೊತೆಯಲ್ಲಿದ್ದವರು ಸುಮ್ಮನಾಗಿದ್ದರು.

    ಮುಂಜಾನೆ ಕಚೇರಿಯ ಸ್ವಚ್ಛತಾ ಸಿಬ್ಬಂದಿ ಕಟ್ಟಡದ ಮೇಲೆ ಬಂದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿರುತ್ತದೆ.

    ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕ ಶಿವಾನಂದ ಅಂಬಿಗೇರ, ಪಿಎಸ್‌ಐ ನಂದಕುಮಾರ, ತಹಶೀಲ್ದಾರ್‌ ಷಾಷಾವಲಿ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    BANTWAL

    ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಾಧಾರಣ ಮಳೆ

    Published

    on

    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಿನ್ನೆ ಸಂಜೆ ಮತ್ತು ರಾತ್ರಿ ಮಳೆಯಾಗಿದ್ದು, ಕೆಲವೆಡೆ ಮಳೆಗಾಲದಂತೆ ಜೋರಾಗಿ ಮಳೆಯಾಗಿದೆ.

    ಬೆಳ್ತಂಗಡಿ,ಸುಳ್ಯ ತಾಲೂಕಿನಲ್ಲಿ ಮಳೆಯಿಂದಾಗಿ ರೈತರು ಒಣ ಹಾಕಿದ್ದ ಅಡಿಕೆಗಳು ಒದ್ದೆಯಾಗಿ ನಷ್ಟ ಉಂಟಾಗಿದೆ. ಬಂಟ್ವಾಳದಲ್ಲಿ ಸಾಧಾರಣ ಮಳೆಯಾಗಿದ್ದು, ಮೆಲ್ಕಾರಿನಲ್ಲಿ ನಡೆಯುತ್ತಿದ್ದ ಕಟೀಲು ಯಕ್ಷಗಾನ ಬಯಲಾಟ ವೀಕ್ಷಣೆ ಮಾಡುತ್ತಿದ್ದವರು ಎದ್ದು ಮಳೆಯಿಂದ ರಕ್ಷಣೆ ಪಡೆದುಕೊಂಡಿದ್ದಾರೆ.

    ಇದನ್ನೂ ಓದಿ: ಮಂಗಳೂರಿಗೆ ಆಗಮಿಸಲಿದ್ದಾರೆ ಡಾಲಿ ಚಾಯ್ ವಾಲ

    ಮಂಗಳೂರು ಸುತ್ತಮುತ್ತ ಕೂಡಾ ಮಳೆಯಾಗಿದ್ದು ,ಉಳ್ಳಾಲದಲ್ಲಿ ಅರ್ಧಗಂಟೆಗೂ ಅಧಿಕ ಕಾಲ ಮಳೆ ಸುರಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಧ್ಯ ಪಾಕಿಸ್ತಾನ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದ ಈಶಾನ್ಯ ಅರೇಬಿಯನ್ ಸಮುದ್ರದಿಂದ ಪಶ್ಚಿಮ ಮಾರುತ ಬೀಸುತ್ತಿರುವುದು ಈ ಮಳೆಗೆ ಕಾರಣ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    Continue Reading

    DAKSHINA KANNADA

    ಮಂಗಳೂರಿಗೆ ಆಗಮಿಸಲಿದ್ದಾರೆ ಡಾಲಿ ಚಾಯ್ ವಾಲ

    Published

    on

    ಮಂಗಳೂರು : ಮಹಾರಾಷ್ಟ್ರದ ನಾಗ್ಪುರದ ಖ್ಯಾತ ಡಾಲಿ ಚಾಯ್ ವಾಲ ಮತ್ತು ಹಿಂದಿ ಬಿಗ್ ಬಾಸ್ 18ರ ಸ್ಪರ್ಧಿ ಸುನಿಲ್ ಪಾಟೀಲ್ ಅವರು ಮಂಗಳೂರಿಗೆ ಆಗಮಿಸುತ್ತಿದ್ದಾರೆ.

    ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಜ. 18 ರಿಂದ 22 ರವರೆಗೆ ಐದು ದಿನಗಳ ಕಾಲ ನಗರದಲ್ಲಿ “ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್” ನಡೆಯಲಿದೆ. ಈ ಕಾರ್ಯಕ್ರಮದ ಮೊದಲ ಆಕರ್ಷಣೆಯಾಗಿ ಡಾಲಿ ಚಾಯ್ ವಾಲ ಅವರು ಭಾಗವಹಿಸಲಿದ್ದಾರೆ.

    ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣ: ದಾಖಲೆಯ ಪ್ರಯಾಣಿಕರ ನಿರ್ವಹಣೆ

    ತನ್ನ ಬರುವಿಕೆಯ ಕುರಿತು ಡಾಲಿ ಚಾಯ್ ವಾಲ ಅವರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿದ್ದು, ಜ. 18ರಂದು ಮಂಗಳೂರಿನಲ್ಲಿ ಸಿಗುತ್ತೇನೆ. “ಮಜಾ ಕರೇಂಗೆ..ಚಾಯ್ ಪಿಯೇಂಗೆ” ಎಂದು ಪೋಸ್ಟ್ ಮಾಡಿದ್ದಾರೆ.

    ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಡಾಲಿ ಅವರ ಚಹಾ ಅಂಗಡಿಗೆ ಭೇಟಿ ನೀಡಿ ಚಹಾ ಕುಡಿದು ಪೋಸ್ಟ್ ಹಂಚಿಕೊಂಡಿದ್ದರು. ಇದಾದ ಬಳಿಕ ಡಾಲಿ ಚಯ್ ವಾಲರವರ ಖ್ಯಾತಿ ದೇಶದಾದ್ಯಂತ ಇನ್ನಷ್ಟು ಜಾಸ್ತಿಯಾಯಿತು.

    Continue Reading

    BIG BOSS

    ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ?

    Published

    on

    ಬಿಗ್ ಬಾಸ್ ಫಿನಾಲೆಗೆ ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಬಿಗ್ ಬಾಸ್ ಮನೆಯಲೀಗ ಮಿಡ್ ವೀಕ್ ಎಲಿಮಿನೇಷನ್ ಟೆನ್ಶನ್ ಶುರುವಾಗಿದೆ.

    ಇದೇ ಹೊತ್ತಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದಾರೆ. ಹೀಗಾಗಿ 7 ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ನಾಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್ ನೀಡಲಿದ್ದಾರೆ.

    ಇದನ್ನೂ ಓದಿ: ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?

    ಬಿಗ್ ಬಾಸ್ ಕೊಟ್ಟ ಟಾಸ್ಕ್ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್ ನಿಂದ ಪಾರಾಗಲಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಒಟ್ಟು 8 ಸ್ಪರ್ಧಿಗಳು ಉಳಿದುಕೊಂಡಿದ್ದು, ಈ ಪೈಕಿ ಒಬ್ಬರು ಮಿಡ್ ವೀಕ್ ಎಲಿಮಿನೇಟ್ ಆಗಲಿದ್ದಾರೆ. ಇನ್ನು ಇಬ್ಬರು ವಾರಾಂತ್ಯಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ. ಕೊನೆಗೆ ವಾರಾಂತ್ಯದಲ್ಲಿ ಮೂರು ಜನ ಬಿಗ್ ಬಾಸ್ ಮನೆಯಿಂದ ಹೊರಬರಲಿದ್ದಾರೆ.

    ಹೀಗಾಗಿ ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಕೊಟ್ಟ ಟಾಸ್ಕ್ ಗಳನ್ನು ಕಷ್ಟಪಟ್ಟು ಆಡುತ್ತಿದ್ದಾರೆ. ಅದರಲ್ಲೂ ರಿಲೀಸ್ ಆದ ಪ್ರೋಮೋದಲ್ಲಿ, ಇದು ಮಿಡ್ ವೀಕ್ ಎಲಿಮಿನೇಷನ್ ನಿಂದ ತಮ್ಮನ್ನು ತಾವು ಉಳಿಸಿಕೊಳ್ಳಲು ಇರುವ ಕೊನೆಯ ಟಾಸ್ಕ್ ಎಂದು ಭಯ ಹುಟ್ಟಿಸಿದ್ದಾರೆ.

     

    Continue Reading

    LATEST NEWS

    Trending