ತಮಿಳಿನ ಖ್ಯಾತ ಹಾಸ್ಯ ನಟ ಮನೋಬಾಲ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ನಿಧನರಾಗಿದ್ದಾರೆ.
ಚೆನ್ನೈ: ತಮಿಳಿನ ಖ್ಯಾತ ಹಾಸ್ಯ ನಟ ಮನೋಬಾಲ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ನಿಧನರಾಗಿದ್ದಾರೆ.
ತಮಿಳಿನ ಖ್ಯಾತ ಹಾಸ್ಯ ನಟ ಹಾಗೂ ನಿರ್ದೇಶಕ ಮನೋಬಾಲ(69), ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರು, 45 ವರ್ಷಗಳಿಂದ ನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ದಿಗ್ಗಜ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ತಮಿಳಿನ ಸ್ಟಾರ್ ಹೀರೋ ಸಿನಿಮಾಗಳಲ್ಲಿ ಮನೋಬಾಲಾ ಇಲ್ಲದೆ ಅದು ಪೂರ್ಣವಾಗುತ್ತಿರಲಿಲ್ಲ.
ಖ್ಯಾತಿ ಪಡೆದಿರುವ ಇವರು ವಿಜಯ್ ಮತ್ತು ರಜನಿ ಅವರೊಂದಿಗೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಮನೋಬಾಲ ಅವರ ನಿಧನಕ್ಕೆ ತಮಿಳು ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
69 ವರ್ಷದ ಮನೋಬಾಲ ಅವರು, ಲಿವರ್ ಸಂಬಂಧಿತ ಸಮಸ್ಯೆಯಿಂದ ಸಮಸ್ಯೆಯಿಂದ ಬಳಲುತ್ತಿದ್ದರು. ಮೂರೂವರೆ ದಶಕಕ್ಕೂ ಹೆಚ್ಚು ಕಾಲ ಕಲಾ ಕ್ಷೇತ್ರದಲ್ಲಿ ಬಣ್ಣ ಹಚ್ಚಿದ್ದರು.
ಸುಮಾರು 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮನೋಬಾಲ ನಟಿಸಿದ್ದರು. ಪರದೆಯಲ್ಲಿ ಮನೋಬಾಲ ಬರುತ್ತಿದ್ದಂತೆಯೇ ಪ್ರೇಕ್ಷಕರನ್ನು ಬಿದ್ದು ಬಿದ್ದು ನಗಿಸುವ ಸಾಮರ್ಥ್ಯವನ್ನು ಹೊಂದಿದ್ದ ಪ್ರತಿಭಾನ್ವಿತ ನಟರಾಗಿದ್ದರು.
ಇಂದು ಕಾಲಿವುಡ್ ಬೃಹತ್ ಪ್ರತಿಭೆಯೊಂದನ್ನು ಕಳೆದುಕೊಂಡು ಬರಿದಾಗಿದೆ ಎಂದು ಮನೋಬಾಲ ಅವರ ಅಭಿಮಾನಿಗಳು, ಸಿನಿಮಾ ಕ್ಷೇತ್ರದ ಗಣ್ಯರು ಕಣ್ಣೀರು ಹಾಕಿದ್ದಾರೆ.