Connect with us

    LATEST NEWS

    ಪಬ್‌ ದಾಳಿ ಬಗ್ಗೆ ತುಟಿ ಬಿಚ್ಚಿದ್ರೆ ಕಮೀಷನರ್‌ ಗಂಟುಮೂಟೆ ಕಟ್ಬೇಕಾಗುತ್ತೆ: ಮಾಜಿ ಐಪಿಎಸ್‌ ಭಾಸ್ಕರ್‌ ರಾವ್‌ ಸ್ಪಷ್ಟೋಕ್ತಿ..!

    Published

    on

    ಪಬ್‌ನಲ್ಲಿ ನೈತಿಕ ದಾಳಿ ನಡೆದಿದ್ದರೂ ಸ್ಥಳೀಯ ಪೊಲೀಸ್‌ ಕಮೀಷನರ್‌ ಅಲ್ಲಿ ಘಟನೆ ನಡೆದೇ ಇಲ್ಲ ಎಂದು ಹೇಳಲೇಬೇಕು. ಪೊಲೀಸ್‌ ಕಮೀಷನರ್‌ ಅಲ್ಲಿ ನೈತಿಕ ದಾಳಿ ನಡೆಯಿತು, ಕೇಸ್‌ ಮಾಡ್ತೀನಿ ಎಂದು ಹೇಳಿದ್ರೆ ಸಾಯಂಕಲವೇ ಗಂಟು ಮೂಟೆ ಕಟ್ಬೇಕಾಗುತ್ತದೆ.

    ಮಂಗಳೂರು: ಮಂಗಳೂರು ಪಬ್‌ ದಾಳಿ ಬಗ್ಗೆ ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಆಮ್‌ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ಪ್ರತಿಕ್ರಿಯೆ ನೀಡಿದ್ದಾರೆ.


    ಪಬ್‌ನಲ್ಲಿ ನೈತಿಕ ದಾಳಿ ನಡೆದಿದ್ದರೂ ಸ್ಥಳೀಯ ಪೊಲೀಸ್‌ ಕಮೀಷನರ್‌ ಅಲ್ಲಿ ಘಟನೆ ನಡೆದೇ ಇಲ್ಲ ಎಂದು ಹೇಳಲೇಬೇಕು.

    ಪೊಲೀಸ್‌ ಕಮೀಷನರ್‌ ಅಲ್ಲಿ ನೈತಿಕ ದಾಳಿ ನಡೆಯಿತು, ಕೇಸ್‌ ಮಾಡ್ತೀನಿ ಎಂದು ಹೇಳಿದ್ರೆ ಸಾಯಂಕಲವೇ ಗಂಟು ಮೂಟೆ ಕಟ್ಬೇಕಾಗುತ್ತದೆ.

    ಪಾಪ ಆತನಿಗೆ ಏನು ಆಯ್ಕೆಯೇ ಇರುವುದಿಲ್ಲ. ಈ ಸರ್ಕಾರದಲ್ಲಿ ನೇರವಾಗಿ ಮಾತನಾಡುವವರಿಗೆ ಅವ್ರು ಉಳಿಯುವುದು ಕಷ್ಟ.

    ನೈತಿಕ ಪೊಲೀಸ್‌ಗಿರಿಗೆ ರಾಜಕೀಯ ಬೆಂಬಲ ಇದ್ದಾಗ ಮಾತ್ರ ಧೈರ್ಯ ಬರುತ್ತದೆ ಎಂದ ಅವರು ಈ ಬಗ್ಗೆ ನಮ್ಮ ಪಕ್ಷ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಸಾ*ಯುವ ಮೊದಲು ಸಾಲ ತೀರಿಸಿದ ಮುಮ್ತಾಜ್ ಅಲಿ!

    Published

    on

    ಮಂಗಳೂರು : ಮುಮ್ತಾಜ್ ಅಲಿ ಅವರ ಆತ್ಮಹ*ತ್ಯೆ ಒಂದೇ ದಿನದ ನಿರ್ಧಾರ ಆಗಿರಲಿಲ್ಲ ಅನ್ನೋದು ಇದೀಗ ಬೆಳಕಿಗೆ ಬಂದಿದೆ‌. ಹನಿ ಟ್ರ್ಯಾಪ್ ಮಾಡಿ ದುಡ್ಡು ಕೀಳಲು ನಿಂತವರ ಕಿರುಕು*ಳ ತಾಳಲಾರದೆ ಕುಗ್ಗಿ ಹೋಗಿ ಇಂತಹ ಒಂದು ತೀರ್ಮಾನಕ್ಕೆ ಬಂದಿದ್ದಾರೆ.

    ಆತ್ಮಹ*ತ್ಯೆ ಮಾಡಿಕೊಳ್ಳುವ ಮೊದಲು ಸಾಲಗಾರರಿಗೆ ಬಾಕಿ ಇಟ್ಟಿದ್ದ ಒಂದೂವರೆ ಕೋಟಿ ಸಾಲವನ್ನು ಮುಮ್ತಾಜ್ ಅಲಿ ಮರು ಪಾವತಿ ಮಾಡಿದ್ದಾರೆ.

    ಇದನ್ನೂ ಓದಿ : ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ : ಇಬ್ಬರು ಅರೆಸ್ಟ್

    ಅಷ್ಟೇ ಅಲ್ಲದೆ,  ಶಾಲೆ ಹಾಗೂ ತನ್ನ ಫಿಶ್ ಮಿಲ್ ನೋಡಿಕೊಳ್ಳುವಂತೆ ತಮ್ಮ ಸಹೋದರರ ಹೆಸರಿನಲ್ಲಿ ಪತ್ರ ಬರೆದಿಟ್ಟಿದ್ದಾರೆ. ಈ ವಿಚಾರ ಇದೀಗ ಬೆಳಕಿಗೆ ಬಂದಿದ್ದು ಸಾಯುವ ನಿರ್ಧಾರ ಮೊದಲೇ ಮಾಡಿದ್ದರು ಅನ್ನೋದು ಸ್ಪಷ್ಟವಾಗಿದೆ. ಸಾಲಗಾರರಿಗೆ ಮೋಸ ಮಾಡದೇ ಹಣ ಹಿಂತಿರುಗಿಸಿದ ಮುಮ್ತಾಜ್ ಬಳಿಕ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಸಾವಿನಲ್ಲೂ ತನ್ನ ಬದ್ಧತೆ ಮರೆಯದ ಮುಮ್ತಾಜ್ ಅಲಿ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Continue Reading

    LATEST NEWS

    ಲಕ್ಷ – ಲಕ್ಷ ಗೋಲ್ ಮಾಲ್ ಪ್ರಕರಣ; ಆರೋಪಿ ವಿರುದ್ಧ ಎಫ್ಐಆರ್‌ಗೆ ಮನವಿ

    Published

    on

    ಮಂಗಳೂರು/ದಾವಣಗೆರೆ: ಗೋಲ್ ಮಾಲ್ ಮಾಡಿ ಲಕ್ಷ ಲಕ್ಷ ಒಳ ಹಾಕಿಕೊಂಡ ಪ್ರಕರಣದಲ್ಲಿ ಹಾಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣಿಹಳ್ಳಿ ಗ್ರಾಪಂ ಪಿಡಿಓ ಟಿ. ಸಿದ್ದಪ್ಪ ಸಿಕ್ಕಿ ಬಿದ್ದಿದ್ದಾನೆ. ಅಧ್ಯಕ್ಷರ ಸಹಿ ತಾನೇ ಮಾಡಿ ತಮಗೆ ಬೇಕಾದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿದ್ದಾರೆ.

    ಈತನ ವಿರುದ್ಧ ಲಕ್ಷ ಲಕ್ಷ ಗೋಲ್ ಮಾಲ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಿದ್ದಪ್ಪ ಮಾಡಿದ ಗೋಲ್ ಮಾಲ್ ಬಗ್ಗೆ ಇಲಾಖೆ ತನಿಖೆ ಮಾಡಿ ವರದಿ ಪಡೆದು‌ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.
    ಬಸವನಕೋಟೆ ಗ್ರಾ.ಪಂನಲ್ಲಿ ಅಧ್ಯಕ್ಷರ ಅಪ್ಪಣೆ ಇಲ್ಲದೇ ಲಕ್ಷಾಂತರ ರೂಪಾಯಿ ಗುತ್ತಿಗೆದಾರರಿಗೆ ಪಾವತಿ ಮಾಡಿದ್ದಾರೆ. ಸದ್ಯ ತನಿಖೆ ಮಾಡಿ ವರದಿ ನೀಡಿದ ಪ್ರಕಾರ ಒಟ್ಟು 27.51 ಲಕ್ಷ ರೂಪಾಯಿ ದುರುಪಯೋಗ ಪಡೆಸಿಕೊಂಡ ಆರೋಪ ಇವರ ಮೇಲಿದೆ. ಈ ಹಿಂದೆ ಕೂಡಾ ಇವರ ಮೇಲೆ ಹತ್ತಾರು ಆರೋಪಗಳು ಕೇಳಿ ಬಂದಿದ್ದವು.‌ ಆದರೆ ಅಧಿಕೃತವಾಗಿ ದೂರು ದಾಖಲಾಗಿರಲಿಲ್ಲ. ಈಗ ಪ್ರತಿ ಗ್ರಾಮ ಪಂಚಾಯತಿ ಲೆಕ್ಕ ಪರಿಶೀಲನೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಸಿದ್ದಪ್ಪ ಮಾಡಿದ ಕರ್ಮಕಾಂಡಗಳು ಹೊರ ಬರುತ್ತಿವೆ. ಇತನ ವಿರುದ್ಧ ಇಲಾಖೆ ತನಿಖೆ ಕೂಡಾ ಶುರುವಾಗಿದೆ.
    ಸದ್ಯ ಪೊಲೀಸ್ ಠಾಣೆಗೆ ದೂರು ಮಾತ್ರ ದಾಖಲಾಗಿದೆ. ಎಫ್​ಐಆರ್ ದಾಖಲಾದರೆ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವುದು ಖಚಿತ.

    Continue Reading

    LATEST NEWS

    ಸುಬ್ರಹ್ಮಣ್ಯ: ಕುಮಾರ ಪರ್ವತ ಚಾರಣ ಕೈಗೊಂಡ ಮೊದಲ ತಂಡ

    Published

    on

    ಸುಬ್ರಹ್ಮಣ್ಯ: ಅರಣ್ಯ ಇಲಾಖೆಯ ಹೊಸ ಮಾರ್ಗ ಸೂಚಿಯೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತ ಚಾರಣಕ್ಕೆ ಇದೀಗ ಅವಕಾಶ ನೀಡಲಾಗಿದೆ. ಕುಮಾರ ಪರ್ವತ ಚಾರಣಕ್ಕೆ ತೆರಳುವ ಚಾರಣಿಗರು ಆನ್‌ಲೈನ್‌ ಮೂಲಕ ಬುಕ್‌ ಮಾಡಿದ್ದು, ಮಂಗಳವಾರ ಚಾರಣ ಆರಂಭಿಸಿದ್ದಾರೆ.

    ಆನ್‌ಲೈನ್‌ ಮೂಲಕ ನೋಂದಾಯಿಸಿದ ಮೊದಲ ತಂಡ ನಿನ್ನೆ ಚಾರಣ ಕೈಗೊಂಡಿದೆ. ಹೊಸ ಮಾರ್ಗಸೂಚಿ ಜಾರಿಯಾದ ಬಳಿಕ ಚಾರಣಿಗರು ಕುಕ್ಕೆ ಸುಬ್ರಹ್ಮಣ್ಯದ ದೇವಗದ್ದೆ ಮೂಲಕ ಚಾರಣ ಕೈಗೊಂಡಿದ್ದಾರೆ.

    ನಿನ್ನೆ ಚಾರಣ ಕೈಗೊಂಡ ಈ ಮೊದಲ ತಂಡದಲ್ಲಿ 9 ಮಂದಿ ಚಾರಣಿಗರು ಇದ್ದಾರೆ. ಕಳೆದ ವರ್ಷದವರೆಗೆ ಕುಮಾರಪರ್ವತ ಚಾರಣ ಸುಲಭವಾಗಿತ್ತು. ಕೆಲ ಕಠಿಣ ನಿಯಮಗಳೊಂದಿಗೆ ನೇರವಾಗಿ ಚಾರಣ ಆರಂಭಿಸಬಹುದಿತ್ತು. ಮಧ್ಯೆ ಮಧ್ಯೆ ತಂಗಲು ಅವಕಾಶವಿತ್ತು. ಆದರೆ ಈ ಬಾರಿ ಚಾರಣದ ನಡುವೆ ತಂಗಲು ನಿರ್ಬಂಧ ಹೇರಲಾಗಿದ್ದು, ಚಾರಣಿಗರು ಒಂದೇ ದಿನದಲ್ಲಿ ಚಾರಣ ಮುಗಿಸಬೇಕಾದ ಅನಿವಾರ್ಯತೆಯಿದೆ.

    Continue Reading

    LATEST NEWS

    Trending