ಯಶಸ್ವಿ ಜನಪ್ರತಿನಿಧಿಯಾಗಿ ಎರಡು ದಶಕ ಪೂರೈಸಿದ ನಮೋ: ಸೋಲಿಲ್ಲದ ಸರದಾರನಿಗೆ ಅಭಿನಂದನೆಗಳ ಮಹಾಪೂರ..!
ನವದೆಹಲಿ: ಕಳೆದ ಎರಡು ದಶಕಗಳಿಂದ ಚುನಾವಣೆಗಳಲ್ಲಿ ಒಮ್ಮೆಯೂ ಸೋಲು ಕಾಣದೇ ಯಶಸ್ವಿ ಚುನಾಯಿತ ಪ್ರತಿನಿಧಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಂತಹ ಉನ್ನತ ಹುದ್ದೆಗಳಲ್ಲಿ ಮುನ್ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಜೆಪಿ ಶ್ಲಾಘಿಸಿದೆ.
‘ಮೋದಿ ಅವರು ರಾಜಕೀಯದಲ್ಲಿ ದೊಡ್ಡ ದೊಡ್ಡ ಗೆಲುವುಗಳನ್ನು ಸಾಧಿಸಿದ್ದಾರೆ ಮತ್ತು ಜನಪ್ರಿಯತೆಯ ತುತ್ತ ತುದಿಗೆ ತಲುಪಿದ್ದಾರೆ’,
‘ಅಕ್ಟೋಬರ್ 7, 2001ರಲ್ಲಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರವಹಿಸಿಕೊಂಡಿದ್ದು, ಭಾರತೀಯ ರಾಜಕೀಯ ಇತಿಹಾಸದಲ್ಲೇ ಒಂದು ಮೈಲಿಗಲ್ಲು’ ಎಂದು ಬಣ್ಣಿಸಿದ್ದಾರೆ.
ಎಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಟ್ವೀಟ್ ಮಾಡಿದ್ದಾರೆ. ಅಲ್ಲದೇ ‘ಗುಜರಾತ್ ಮುಖ್ಯಮಂತ್ರಿಯಾಗಿರಲಿ ಅಥವಾ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯಾಗಿರಲಿ, ಮೋದಿ ಅವರು ಸದಾ ಜನರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ’ ಎಂದು ಬಿಜೆಪಿ ಕೂಡ ಮೋದಿಯವರನ್ನು ಶ್ಲಾಘಿಸಿದೆ.
ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಹರದೀಪ್ ಸಿಂಗ್ ಪುರಿ, ’20 ವರ್ಷಗಳ ಕಾಲ ಬದ್ಧತೆ, ದೂರದರ್ಶಿತ್ವ ಹಾಗೂ ನಿಸ್ವಾರ್ಥವಾಗಿ ಭಾರತ ಮಾತೆಗೆ ಸೇವೆ ಸಲ್ಲಿಸಿದ್ದಾರೆ’ ಎಂದು ಹೊಗಳಿದ್ದಾರೆ.
‘ಪ್ರಜಾಪ್ರಭುತ್ವದ ಅನುಸಾರ ಆಯ್ಕೆಯಾಗಿ 20 ವರ್ಷಗಳಿಂದ ನಿರಂತರವಾಗಿ ಜನಸೇವೆ ಮಾಡುತ್ತಿರುವ ವಿಶ್ವದ ಅಪರೂಪದ ನಾಯಕ ಮೋದಿ ಅವರಿಗೆ ಅಭಿನಂದನೆ’ ಎಂದು ಟ್ವೀಟ್ ಮಾಡಿದ್ದಾರೆ.
20 years in service of humanity & Maa Bharati with dedication, vision & selflessness.
Heartiest congratulations to PM @narendramodi Ji for becoming the only democratically elected world leader to serve the people continuously for 20 years since 2001. pic.twitter.com/YSBDwOWhMa
— Hardeep Singh Puri (@HardeepSPuri) October 7, 2020