ಸೀಲಿಂಗ್ ನಿಂದ ಧೊಪ್ಪೆಂದು ಬಿದ್ದ ಭೂಪ; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಿ..!
person who was seen sitting on the ceiling and watching changing dress of ladies.
ವಾಷಿಂಗ್ಟನ್: ಜಿಮ್ ವೊಂದರ ಮಹಿಳೆಯರ ಗ್ರೀನ್ ರೂಂನ ಸೀಲಿಂಗ್ ನಲ್ಲಿ ಕುಳಿತು ಬಟ್ಟೆ ಬದಲಾಯಿಸುವುದನ್ನು ನೋಡುತ್ತಿದ್ದ ಕಾಮುಕ ವ್ಯಕ್ತಿಯೋರ್ವ ಧೊಪ್ಪೆಂದು ಕೆಳಗೆ ಬಿದ್ದ ಘಟನೆ ಅಮೇರಿಕಾದಲ್ಲಿ ನಡೆದಿದೆ. ಈತನೀಗ ಪೊಲೀಸರ ಅತಿಥಿಯಾಗಿದ್ದಾನೆ.
41ರ ಹರೆಯದ ಬ್ರಿಯಾನ್ ಆಂಥೋನಿ ಜೋ ಎಂಬಾತನೇ ಬಂಧಿತ ಆರೋಪಿ. ಈತ ಸ್ಟಾಫರ್ಡ್ ಕೌಂಟಿಯ ವನ್ಲೈಫ್ಫಿಟ್ ನೆಸ್ ನ ಜಿಮ್ ನಲ್ಲಿ ಮಹಿಳೆಯರ ಡ್ರೆಸ್ಸಿಂಗ್ ರೂಂನಲ್ಲಿ ಸೀಲಿಂಗ್ ನಲ್ಲಿ ಅಡಗಿ ಕುಳಿತು ಬಟ್ಟೆ ಬದಲಾಯಿಸುವುದನ್ನು ಕದ್ದು ನೋಡುತ್ತಿದ್ದ
.ಈ ಸಂದರ್ಭ ಓರ್ವ ಮಹಿಳೆ ಬಟ್ಟೆ ಬದಲಾಯಿಸುವ ಸಮಯ ಆತ ಆಯತಪ್ಪಿ 10 ಅಡಿಯಷ್ಟು ಕೆಳಕ್ಕೆ ಅಂದ್ರೆ ಮಹಿಳೆಯ ಮೇಲೆ ಬಿದ್ದಿದ್ದಾನೆ .
ಮಹಿಳೆ ಮತ್ತು ಆರೋಪಿಗೆ ಯಾವುದೇ ಗಾಯಗಳಾಗಿಲ್ಲ ಎನ್ನಲಾಗಿದ್ದು ಬಿದ್ದ ತಕ್ಷಣ ಆರೋಪಿಯನ್ನು ಜಿಮ್ ನ ಸಿಬ್ಬಂದಿಗಳು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.