Connect with us

    DAKSHINA KANNADA

    ರಾಮಮಂದಿರ ಟ್ರಸ್ಟ್‌ನಲ್ಲಿ ಯಾವುದೇ ಅವ್ಯವಹಾರವೂ ನಡೆದಿಲ್ಲ: ಪೇಜಾವರ ಶ್ರೀ

    Published

    on

    ಉಡುಪಿ: ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಟ್ರಸ್ಟ್‌ನಲ್ಲಿ ಯಾವುದೇ ಅವ್ಯವಹಾರವೂ ನಡೆದಿಲ್ಲ. ಈ ಬಗ್ಗೆ ಎರಡು ದಿನಗಳಲ್ಲಿ ಎಲ್ಲವನ್ನೂ ಸಮಾಜದ ಮುಂದಿಡಲಿದ್ದೇವೆ ಎಂದು ರಾಮಂದಿರ ಟ್ರಸ್ಟ್ ನ ವಿಶ್ವಸ್ಥ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ ಯವರು ಹೇಳಿದ್ದಾರೆ.

    ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ರಾಮಮಂದಿರ ಜಾಗ ಖರೀದಿಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿದೆ ಎಂಬ ಬಗ್ಗೆ  ಪ್ರತಿಕ್ರಿಯಿಸಿರುವ ಸ್ವಾಮೀಜಿಗಳು ರಾಮಮಂದಿರ ಟ್ರಸ್ಟ್ ಈ ಆರೋಪವನ್ನು ಗಮನಿಸಿದೆ ಮತ್ತು ಈ ಸಂಬಂಧ ಟ್ರಸ್ಟ್ ನ ಕಾರ್ಯದರ್ಶಿಗಳು, ಖಜಾಂಜಿ ಮತ್ತು ಸದಸ್ಯರು ಮಾತುಕತೆ ಕೂಡ ನಡೆಸಿದ್ದಾರೆ. ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಅವರು ಸಮಾಜದ ಮುಂದೆ ಇಡಲಿದ್ದಾರೆ ಎಂದ ಸ್ವಾಮೀಜಿ ಟ್ರಸ್ಟ್ ನಿಂದ  ಈ ಬಗ್ಗೆ ಪರಿಪೂರ್ಣ ವಿವರಗಳನ್ನು‌ ಟ್ರಸ್ಟ್ ಜನರ ಮುಂದೆ ತೆರೆದಿಡಲಿದೆ ಎಂದು ಹೇಳಿದ್ದಾರೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮಂಗಳೂರು : ಅ*ಕ್ರಮವಾಗಿ ನಗರದಲ್ಲಿ ನೆಲೆಸಿದ್ದ ಬಾಂಗ್ಲಾ ಪ್ರಜೆ ಅರೆಸ್ಟ್

    Published

    on

    ಮಂಗಳೂರು: ಅ*ಕ್ರಮವಾಗಿ ಮುಕ್ಕ ಗ್ರಾಮದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ  ಪ್ರಜೆಯನ್ನು ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ನಿವಾಸಿ ಅನರುಲ್ ಶೇಖ್​ (25)ನನ್ನು ಬಂಧಿತ ವ್ಯಕ್ತಿ ಎಂದು ಗುರುತಿಸಲಾಗಿದೆ.

    ಅನರುಲ್ ಶೇಖ್ ಮೂರು ವರ್ಷಗಳ ಹಿಂದೆ ಅಂತಾರಾಷ್ಟ್ರಿಯ ಗಡಿರೇಖೆ ಲಾಲ್​​​ಗೋಲ್ ಮೂಲಕ ಅಕ್ರಮವಾಗಿ ಭಾರತದೊಳಗೆ ಪ್ರವೇಶಿಸಿದ್ದನು. ಬಳಿಕ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಿಂದ ಉಡುಪಿಗೆ ಬಂದಿದ್ದನು. ಇಲ್ಲಿಂದ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಮುಕ್ಕ ಗ್ರಾಮದ ರೋಹನ್ ಎಸ್ಟೇಟ್​​ನಲ್ಲಿ ಅನರುಲ್​ ಶೇಖ್​​​ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು.

     

    ಇದನ್ನೂ ಓದಿ : ಟ್ಯೂಷನ್‌ಗೆ ಬರುತ್ತಿದ್ದ ವಿದ್ಯಾರ್ಥಿನಿಯೊಡನೆ ಪರಾರಿಯಾಗಿದ್ದ ಶಿಕ್ಷಕ ಅರೆಸ್ಟ್

     

    ಅನರುಲ್​ ಶೇಖ್ ಬಗ್ಗೆ ಖಚಿತ ಮಾಹಿತಿ ಪಡೆದ ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನರುಲ್ ಶೇಖ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

    Continue Reading

    DAKSHINA KANNADA

    ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ; ಮಾ*ದಕ ವಸ್ತು ಪೂರೈಕೆ ಮಾಡುತ್ತಿದ್ದ ಆರೋಪಿ ಬಂಧನ

    Published

    on

    ಮಂಗಳೂರು :  ‘ಡ್ರ*ಗ್ಸ್ ಫ್ರಿ ಮಂಗಳೂರು’ ಅಭಿಯಾನದ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಗೋವಾದಿಂದ ಮಂಗಳೂರಿಗೆ ಮತ್ತು ಕೇರಳಕ್ಕೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪಿಯೋರ್ವನನ್ನು ದಸ್ತಗಿರಿ ಮಾಡಿದ್ದಾರೆ. ಆತನಿಂದ 73 ಲಕ್ಷ ರೂಪಾಯಿ ಮೌಲ್ಯದ ಹೈಡ್ರೋವಿಡ್ ಗಾಂ*ಜಾ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಕೇರಳದ ಕೋಝಿಕೋಡ್‌ ಜಿಲ್ಲೆಯ ಕಂದಲಾಡ್‌ ಗ್ರಾಮದ ಕುನ್ನು ಹೌಸ್‌ ನಿವಾಸಿ ಶಮೀರ್‌ ಪಿ.ಕೆ. ಬಂಧಿತ  ಆರೋಪಿ. ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮೂಲ್ಕಿ ಬಪ್ಪನಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರೊಂದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ಹೈಡ್ರೋವಿಡ್‌ ಗಾಂ*ಜಾ ಪತ್ತೆಯಾಗಿದೆ.

    ಆರೋಪಿಯಿಂದ 73 ಲಕ್ಷ ರೂಪಾಯಿ ಮೌಲ್ಯದ 738 ಗ್ರಾಂ ಹೈಡ್ರೋವಿಡ್ ಗಾಂ*ಜಾ, ಕೇರಳ ನೋಂದಣಿಯ ಕೆಂಪು ಬಣ್ಣದ ಹುಂಡೈ ಕಂಪೆನಿಯ ಕಾರು ಮತ್ತು ಮೊಬೈಲ್ ಫೋನ್ ಸೇರಿದಂತೆ ಒಟ್ಟು 80,10,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.  ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹೈಡ್ರೋವಿಡ್ ಗಾಂ*ಜಾವನ್ನು ವಿದೇಶದಿಂದ ತಂದಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

    ಇದನ್ನೂ ಓದಿ : ದರ್ಶನಕ್ಕೆ ಪಾಸ್‌ ಸಿಗದಿದ್ದಕ್ಕೆ ತಿರುಪತಿ ತಿಮ್ಮಪ್ಪನನ್ನೇ ಮನೆಗೆ ಕರೆಸಿದ ಭಕ್ತ!

    ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಎಚ್ ಎಂ., ಪಿಎಸ್ಐ  ಶರಣಪ್ಪ ಭಂಡಾರಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

    Continue Reading

    DAKSHINA KANNADA

    ವಾಮಂಜೂರು: ಮಿ*ಸ್‌ಫೈ*ರ್ ಪ್ರಕರಣಕ್ಕೆ ಟ್ವಿಸ್ಟ್; ಇಬ್ಬರು ಅರೆಸ್ಟ್

    Published

    on

    ಮಂಗಳೂರು: ಪಿ*ಸ್ತೂಲಿನಿಂದ ಗುಂ*ಡು ಹಾ*ರಿಸಿ ವ್ಯಕ್ತಿಯೊಬ್ಬ ಗಾ*ಯಗೊಂಡ ಘಟನೆ ವಾಮಂಜೂರು ಮೂಡುಶೆಡ್ಡೆಯಲ್ಲಿ ನಡೆದಿದ್ದು, ಈಗ ಈ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇಬ್ಬರು ರೌ*ಡಿಗಳಾದ ಬದ್ರುದ್ದೀನ್‌ ಮತ್ತು ಇಮ್ರಾನ್‌ ನನ್ನು ಪೊಲೀಸರು ಬಂಧಿಸಿದ್ದಾರೆ.

    ಬದ್ರುದ್ದೀನ್‌ ಹೊಂದಿದ್ದ ಅಕ್ರಮ ಪಿ*ಸ್ತೂಲಿನಿಂದ ಆಕಸ್ಮಿಕವಾಗಿ ಗುಂಡುಹಾರಿದ್ದು, ಪ್ರಿಂಟರ್‌ಗೆ ತಗಲಿ ಮುಂಭಾಗದಲ್ಲಿ ಕುಳಿತಿದ್ದ ಸಫ್ವಾನ್‌ ಎಂಬಾತನ ಹೊಟ್ಟೆಗೆ ತಾ*ಗಿ ಆತ ಗಂ*ಭೀರ ಗಾ*ಯಗೊಂಡಿದ್ದ. ಜ.6ರಂದು ಮೂಡುಶೆಡ್ಡೆಯ ಬದ್ರುದ್ದೀನ್‌ನ ಸೆಕೆಂಡ್‌ ಹ್ಯಾಂಡ್‌ ಸೇಲ್‌ ಅಂಗಡಿಯಲ್ಲಿ ಗುಂ*ಡು ಸಿಡಿದು ಓರ್ವ ಗಾ*ಯಗೊಂಡಿದ್ದರು. ಬಂಧಿತರಿಬ್ಬರೂ ನಿ*ಷೇಧಿತ ಪಿಎಫ್‌ಐ ಸಂಘಟನೆ ಮುಖಂಡರಾಗಿದ್ದು, ಇವರಲ್ಲಿದ್ದ ಪಿ*ಸ್ತೂಲ್‌ಗೆ ಲೈ*ಸೆನ್ಸ್‌ ಇರಲಿಲ್ಲ ಎಂದು ತಿಳಿದುಬಂದಿದೆ.

    ಗಾ*ಯಾಳು ಸಫ್ವಾನ್‌ ಈ ಪ್ರಕರಣವನ್ನು ತಿರುಚಲು ಯತ್ನಿಸಿದ್ದು, ತನ್ನ ಕೈನಿಂದಲೇ ಗುಂ*ಡು ಹಾರಿತ್ತು ಹಾಗೂ ಪಿ*ಸ್ತೂಲ್‌ ಅನ್ನು ಭಾಸ್ಕರ್‌ ಎಂಬಾತ ನೀಡಿದ್ದಾಗಿ ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದ. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದ್ದರು. ಎಫ್‌ಎಸ್‌ಎಲ್‌ ಮತ್ತು ಬ್ಯಾಲಿಸ್ಟಿಕ್‌ ವಿಭಾಗದ ಅಧಿಕಾರಿಗಳೂ ತನಿಖೆ ನಡೆಸಿದಾಗ ಸ್ವಯಂ ಆಗಿ ಗುಂ*ಡು ಹಾರಿಸಿದಾಗ ಈ ರೀತಿ ಗಾ*ಯವಾಗುವುದಿಲ್ಲ ಎನ್ನುವುದು ಗೊತ್ತಾಗಿದೆ. ಅಲ್ಲದೆ ಪ್ರತ್ಯಕ್ಷದರ್ಶಿಗಳ ವಿಚಾರಣೆ ಹಾಗೂ ಸಿಸಿಟಿವಿ ತುಣುಕುಗಳನ್ನು ಪರಿಶೀಲಿಸಿದಾಗ ವಾಸ್ತವಾಂಶ ಬಹಿರಂಗಗೊಂಡಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬದ್ರುದ್ದೀನ್‌ಗೆ ಈ ಪಿ*ಸ್ತೂಲನ್ನು ಇಮ್ರಾನ್‌ ನೀಡಿದ್ದ ಹಾಗೂ ಗಾ*ಯಾಳು ಸಫ್ವಾನ್‌ ಕೂಡ ಪಿಎಫ್‌ಐ ಸದಸ್ಯ ಎಂದು ತಿಳಿದುಬಂದಿದೆ.ನಿಷೇಧಿತ ಪಿಎಫ್‌ಐ ಮುಖಂಡ ಪಿ*ಸ್ತೂಲ್‌ ಇರಿಸಿಕೊಂಡದ್ದು ಯಾಕೆ ಹಾಗೂ ಈತನ ಅಸಲಿ ಗುರಿ ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending