Connect with us

    DAKSHINA KANNADA

    ವಾಮಂಜೂರು: ಮಿ*ಸ್‌ಫೈ*ರ್ ಪ್ರಕರಣಕ್ಕೆ ಟ್ವಿಸ್ಟ್; ಇಬ್ಬರು ಅರೆಸ್ಟ್

    Published

    on

    ಮಂಗಳೂರು: ಪಿ*ಸ್ತೂಲಿನಿಂದ ಗುಂ*ಡು ಹಾ*ರಿಸಿ ವ್ಯಕ್ತಿಯೊಬ್ಬ ಗಾ*ಯಗೊಂಡ ಘಟನೆ ವಾಮಂಜೂರು ಮೂಡುಶೆಡ್ಡೆಯಲ್ಲಿ ನಡೆದಿದ್ದು, ಈಗ ಈ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇಬ್ಬರು ರೌ*ಡಿಗಳಾದ ಬದ್ರುದ್ದೀನ್‌ ಮತ್ತು ಇಮ್ರಾನ್‌ ನನ್ನು ಪೊಲೀಸರು ಬಂಧಿಸಿದ್ದಾರೆ.

    ಬದ್ರುದ್ದೀನ್‌ ಹೊಂದಿದ್ದ ಅಕ್ರಮ ಪಿ*ಸ್ತೂಲಿನಿಂದ ಆಕಸ್ಮಿಕವಾಗಿ ಗುಂಡುಹಾರಿದ್ದು, ಪ್ರಿಂಟರ್‌ಗೆ ತಗಲಿ ಮುಂಭಾಗದಲ್ಲಿ ಕುಳಿತಿದ್ದ ಸಫ್ವಾನ್‌ ಎಂಬಾತನ ಹೊಟ್ಟೆಗೆ ತಾ*ಗಿ ಆತ ಗಂ*ಭೀರ ಗಾ*ಯಗೊಂಡಿದ್ದ. ಜ.6ರಂದು ಮೂಡುಶೆಡ್ಡೆಯ ಬದ್ರುದ್ದೀನ್‌ನ ಸೆಕೆಂಡ್‌ ಹ್ಯಾಂಡ್‌ ಸೇಲ್‌ ಅಂಗಡಿಯಲ್ಲಿ ಗುಂ*ಡು ಸಿಡಿದು ಓರ್ವ ಗಾ*ಯಗೊಂಡಿದ್ದರು. ಬಂಧಿತರಿಬ್ಬರೂ ನಿ*ಷೇಧಿತ ಪಿಎಫ್‌ಐ ಸಂಘಟನೆ ಮುಖಂಡರಾಗಿದ್ದು, ಇವರಲ್ಲಿದ್ದ ಪಿ*ಸ್ತೂಲ್‌ಗೆ ಲೈ*ಸೆನ್ಸ್‌ ಇರಲಿಲ್ಲ ಎಂದು ತಿಳಿದುಬಂದಿದೆ.

    ಗಾ*ಯಾಳು ಸಫ್ವಾನ್‌ ಈ ಪ್ರಕರಣವನ್ನು ತಿರುಚಲು ಯತ್ನಿಸಿದ್ದು, ತನ್ನ ಕೈನಿಂದಲೇ ಗುಂ*ಡು ಹಾರಿತ್ತು ಹಾಗೂ ಪಿ*ಸ್ತೂಲ್‌ ಅನ್ನು ಭಾಸ್ಕರ್‌ ಎಂಬಾತ ನೀಡಿದ್ದಾಗಿ ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದ. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದ್ದರು. ಎಫ್‌ಎಸ್‌ಎಲ್‌ ಮತ್ತು ಬ್ಯಾಲಿಸ್ಟಿಕ್‌ ವಿಭಾಗದ ಅಧಿಕಾರಿಗಳೂ ತನಿಖೆ ನಡೆಸಿದಾಗ ಸ್ವಯಂ ಆಗಿ ಗುಂ*ಡು ಹಾರಿಸಿದಾಗ ಈ ರೀತಿ ಗಾ*ಯವಾಗುವುದಿಲ್ಲ ಎನ್ನುವುದು ಗೊತ್ತಾಗಿದೆ. ಅಲ್ಲದೆ ಪ್ರತ್ಯಕ್ಷದರ್ಶಿಗಳ ವಿಚಾರಣೆ ಹಾಗೂ ಸಿಸಿಟಿವಿ ತುಣುಕುಗಳನ್ನು ಪರಿಶೀಲಿಸಿದಾಗ ವಾಸ್ತವಾಂಶ ಬಹಿರಂಗಗೊಂಡಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬದ್ರುದ್ದೀನ್‌ಗೆ ಈ ಪಿ*ಸ್ತೂಲನ್ನು ಇಮ್ರಾನ್‌ ನೀಡಿದ್ದ ಹಾಗೂ ಗಾ*ಯಾಳು ಸಫ್ವಾನ್‌ ಕೂಡ ಪಿಎಫ್‌ಐ ಸದಸ್ಯ ಎಂದು ತಿಳಿದುಬಂದಿದೆ.ನಿಷೇಧಿತ ಪಿಎಫ್‌ಐ ಮುಖಂಡ ಪಿ*ಸ್ತೂಲ್‌ ಇರಿಸಿಕೊಂಡದ್ದು ಯಾಕೆ ಹಾಗೂ ಈತನ ಅಸಲಿ ಗುರಿ ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    DAKSHINA KANNADA

    ಭ್ರೂಣ ಲಿಂಗ ಕಾಯ್ದೆ ಉಲ್ಲಂಘಿಸಿದರೆ ಕಠಿಣ ಕ್ರಮ

    Published

    on

    ಮಂಗಳೂರು : ಆರೋಗ್ಯ ಇಲಾಖೆಯ ಜಿಲ್ಲಾ ಸಲಹಾ ಸಮಿತಿ ಮತ್ತು ಜಿಲ್ಲಾ ಮೇಲ್ವಿಚಾರಣಾ ಹಾಗೂ ತಪಾಸಣಾ ಸಮಿತಿಯ ಸಭೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷೆ ಡಾ. ಅಮೃತ ಭಂಡಾರಿಯ ಅಧ್ಯಕ್ಷತೆಯಲ್ಲಿ ನಡೆಯಿತು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಮಾತನಾಡಿ ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸಂಸ್ಥೆಗಳಿಗೆ ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ ಪರಿಶೀಲಿಸಬೇಕು. ಪಿಸಿ ಪಿಎನ್‌ಡಿಟಿ ಕಾಯ್ದೆ ಮತ್ತು ಕಾನೂನು ಸಮರ್ಪಕವಾಗಿ ಅನುಷ್ಠಾನಗೊಳಿಸದಿರುವ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಇದನ್ನೂ ಓದಿ: ಕಳ್ಳತನ ನಡೆದ 7 ಗಂಟೆಯೊಳಗೆ ಆರೋಪಿ ದಂಪತಿ ಅಂದರ್ 

    ಸರಕಾರಿ/ಖಾಸಗಿ ಆಸ್ಪತ್ರೆಗೆ ಸ್ಕ್ಯಾನಿಂಗ್ ಮಾಡಿಸಲು ಬರುವ ಪ್ರತಿ ಗರ್ಭಿಣಿಯರು ಕಡ್ಡಾಯವಾಗಿ ತಾಯಿ ಕಾರ್ಡ್ ತರಲು ಮಾಹಿತಿ ನೀಡಬೇಕು. ಹೆಣ್ಣು ಭ್ರೂಣ ಮತ್ತು ಶಿಶು ಹತ್ಯೆ ತಡೆಯುವ ನಿಟ್ಟಿನಲ್ಲಿ ಜ.24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಎಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಪಿಂಕ್ ಲೈಟ್ ಹಾಕಿ ಆಚರಿಸಬೇಕು.

    ಪೂರ್ವಲಿಂಗ ಪತ್ತೆ ಮತ್ತು ಹತ್ಯೆಯನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಡಾ. ತಿಮ್ಮಯ್ಯ ಸೂಚಿಸಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ದೀಪಾ ಪ್ರಭು ಕಾರ್ಯಸೂಚಿಯನ್ನು ಸಭೆಯ ಗಮನಕ್ಕೆ ತಂದರು. ಜಿಲ್ಲಾ ಸಲಹಾ ಸಮಿತಿಯ ಸದಸ್ಯರು ಮತ್ತು ಜಿಲ್ಲಾ ಮೇಲ್ವಿಚಾರಣಾ ಮತ್ತು ತಪಾಸಣಾ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

    Continue Reading

    DAKSHINA KANNADA

    ಮಹಾಕುಂಭ ಮೇಳದಲ್ಲಿ ಭಾಗಿಯಾದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್

    Published

    on

    ಮಂಗಳೂರು/ಪ್ರಯಾಗ್‌ರಾಜ್ : ಮಂಗಳೂರು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ.

    144  ವರ್ಷಗಳ ನಂತ್ರ ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. 45 ದಿನಗಳ ಕಾಲ ನಡೆಯುವ ಮಹಾಕುಂಭ ಮೇಳ ಈಗಾಗಲೇ 9ನೇ ದಿನಕ್ಕೆ ಕಾಲಿಟ್ಟಿದೆ. ದೇಶ, ವಿದೇಶದಿಂದ ಭಕ್ತರು ಮಹಾಕುಂಭ ಮೇಳಕ್ಕೆ ಬಂದು ಪುಣ್ಯ ಸ್ನಾನ ಮಾಡ್ತಿದ್ದಾರೆ. ರಾಜಕರಣಿ, ಸೆಲೆಬ್ರಿಟಿಗಳಿಂದ ಹಿಡಿದು ಕೋಟಿ ಲೆಕ್ಕದಲ್ಲಿ ಜನರು ಪ್ರಯಾಗರಾಜ್ ಗೆ ಬರುತ್ತಿದ್ದಾರೆ.

     

    ಇದನ್ನೂ ಓದಿ : ಮಹಾಕುಂಭ ಮೇಳ : ಪುಣ್ಯಸ್ನಾನದಲ್ಲಿ ಭಾಗಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್

     

    ಉತ್ತರ ಪ್ರದೇಶ ವಿಧಾನಸಭೆ ಅಧ್ಯಕ್ಷ ಸತೀಶ್ ಮಹಾನ ಅವರ ಆಹ್ವಾನದ ಮೇರೆಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಅದ್ದೂರಿಯಾಗಿ ಆಯೋಜನೆಗೊಂಡಿರುವ ಮಹಾಕುಂಭಮೇಳ ಕಾರ್ಯಕ್ರಮದಲ್ಲಿ ಖಾದರ್ ಭಾಗವಹಿಸಿದ್ದಾರೆ. ಸಹಾಯಕ ಆಯುಕ್ತ ದಶರಥ ಕುಮಾರ್ ಅವರನ್ನು ಆತ್ಮೀಯವಾಗಿ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

    Continue Reading

    DAKSHINA KANNADA

    ಶ್ವೇತಾ ಜ್ಯುವೆಲರ್ಸ್‌ನ ಮಾಲಿಕ ಅಶೋಕ್ ಶೇಟ್‌ ನಿ*ಧನ

    Published

    on

    ಮಂಗಳೂರು : ಶ್ವೇತಾ ಜ್ಯುವೆಲರ್ಸ್‌ನ ಮಾಲಿಕರಾಗಿರುವ ಎಂ. ಅಶೋಕ್ ಶೇಟ್ ಇಂದು ಬೆಳಿಗ್ಗೆ (ಜ,22) ಸುಮಾರು 10 ಗಂಟೆಗೆ ಸ್ವ ಗೃಹದಲ್ಲಿ ನಿ*ಧನರಾಗಿದ್ದಾರೆ.

    ಪಡೀಲ್ ಕಂಕನಾಡಿ ಲಯನ್ಸ್ ಕ್ಲಬ್‌ನ ಕ್ರಿಯಾಶೀಲ ವ್ಯಕ್ತಿ, ಸದಾ ಮುಖದಲ್ಲಿ ಮುಗುಳ್ನಗು ಹೊಂದಿದ್ದ ಮಂಗಳೂರಿನ ವಿ.ಟಿ. ರೋಡ್ ನಿವಾಸಿ 64 ವರ್ಷದ ಅಶೋಕ್ ಶೇಟ್ ಹೃ*ದಯಾಘಾತದಿಂದ ಮೃತಪಟ್ಟಿದ್ದಾರೆ.

     

    ಇದನ್ನೂ ಓದಿ : ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಿಗ್ ಬಾಸ್ ಸ್ಪರ್ಧಿ ಕೀರ್ತಿ ಮತ್ತು ಜೈತ್ರಾ ಕುಂದಾಪುರ: ಆಶೀಶ್‌ ಮೈಕಾಲ

     

    ಪ್ರಸ್ತುತ ಮಂಗಳೂರು ದೈವಜ್ಞ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಹಾಲಿ ಅಧ್ಯಕ್ಷರಾಗಿದ್ದ ಅಶೋಕ್ ಶೇಟ್ ಈ ಹಿಂದೆ ಅನೇಕ ಸಂಘ- ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ದೈವಜ್ಞ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿಯ ಮುಖ್ಯ ಪ್ರವರ್ತಕರಾಗಿದ್ದ ಅವರು ದೈವಜ್ಞ ಸೌರಭ ಪತ್ರಿಕೆಯ ಸಂಸ್ಥಾಪಕ ಪ್ರಕಾಶಕರಾಗಿ ಸಮಾಜಕ್ಕಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ.

    ಮೃ*ತರು ಪತ್ನಿ ಸಂಧ್ಯಾ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ

    Continue Reading

    LATEST NEWS

    Trending