Connect with us

LATEST NEWS

ಉಡುಪಿ ಜಿಲ್ಲಾ 2 ನೇ ಅಡೀಶನಲ್‌ ಎಸ್‌ಪಿ ಆಗಿ ಪರಮೇಶ್ವರ ಅನಂತ್‌ ಹೆಗಡೆ

Published

on

ಉಡುಪಿ: ರಾಜ್ಯ ಸರಕಾರ ಎಲ್ಲ ಜಿಲ್ಲೆಗಳಿಗೂ ಇಬ್ಬರು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ನೇಮಕ ಮಾಡಿದ್ದು, ಅದರಂತೆ ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಪರಮೇಶ್ವರ ಅನಂತ್‌ ಹೆಗಡೆ ಅವರನ್ನು ನೇಮಕ ಮಾಡಲಾಗಿದೆ.

ಪಿ.ಎ. ಹೆಗಡೆ ಅವರು ಈ ಹಿಂದೆ ಮಂಗಳೂರು ನಗರ ಅಪರಾಧ ವಿಭಾಗ- ಸಿಸಿಬಿ ಡಿವೈಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು. 1994ರಲ್ಲಿ ಎಸ್‌.ಯ. ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಅವರು, 2004ರಿಂದ 2006ರವರೆಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ, 2015ರಲ್ಲಿ ಸಿಸಿಬಿಯಲ್ಲಿ ನಿಯೋಜನೆ ಮತ್ತು ವಿಜಯ ನಗರ ಉಪವಿಭಾಗದ ಡ್ಯೂಟಿ ಎಸಿಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬಂಟ್ವಾಳದಲ್ಲಿ ಉಪನಿರೀಕ್ಷಕ ಹಾಗೂ ಮೂಲ್ಕಿಯಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಉಡುಪಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗವನ್ನು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಟಿ. ಸಿದ್ದಲಿಂಗಪ್ಪ ನೋಡಿಕೊಳ್ಳಲಿದ್ದಾರೆ. ಅಪರಾಧ ಹಾಗೂ ಡಿಎಆರ್‌ ವಿಭಾಗವನ್ನು ಪರಮೇಶ್ವರ ಅನಂತ್‌ ಹೆಗಡೆ ನೋಡಿಕೊಳ್ಳಲಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಕಡಬ: ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು

Published

on

ಕಡಬ: ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಎಡಮಂಗಲ ರೈಲು ನಿಲ್ದಾಣ ಸಮೀಪ ಶನಿವಾರ(ಮೇ.11) ಸಂಜೆ ನಡೆದಿದೆ.

rail dikki

ಮುಂದೆ ಓದಿ..; ಬಯಲಾಯ್ತು ಅಕ್ರಮ ಸಂಬಂಧ; ನೇಣಿಗೆ ಶರಣಾದ ವಿವಾಹಿತ!

ಮೃತ ವ್ಯಕ್ತಿಯನ್ನು ಎಡಮಂಗಲ ಗ್ರಾಮದ ಡೆಕ್ಕಳ ನಿವಾಸಿ ಮಹಾಲಿಂಗ ನಾಯ್ಕ್(60) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ವೇಳೆಗೆ ರೈಲ್ವೇ ಹಳಿಯಲ್ಲಿ ಮಹಾಲಿಂಗ ನಾಯ್ಕರು ನಡೆದುಕೊಂಡು ಹೋಗುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿರಬಹುದೆಂದು ಶಂಕಿಸಲಾಗಿದೆ.  ಈ ಬಗ್ಗೆ ಕಡಬ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Continue Reading

LATEST NEWS

ಮಾಜಿ ಸಿಎಂ ಎಸ್.ಎಂ. ಕೃಷ್ಣರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ!

Published

on

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ(91) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ, ತೀವ್ರ ನಿಗಾ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಏಪ್ರಿಲ್ 21ರಂದು ಜ್ವರ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚೇತರಿಸಿಕೊಂಡಿದ್ದ ಅವರು ಡಿಸ್ಚಾರ್ಜ್ ಆಗಿದ್ದರು.
ಮತ್ತೆ ಎಸ್‌.ಎಂ. ಕೃಷ್ಣ ಅವರನ್ನು ಏಪ್ರಿಲ್ 29 ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನು ಓದಿ:ಪ್ರತಿ ಮಹಿಳೆಗೆ ಸಿಗುತ್ತೆ 3 ಲಕ್ಷ ರೂಪಾಯಿ..! ಈ ಹಣ ಸಿಗಲು ಹೀಗೆ ಮಾಡಿ ಸಾಕು!

ಆಸ್ಪತ್ರೆ ಪ್ರಕಟಣೆ :

ಎಸ್ ಎಂ ಕೃಷ್ಣ ಅವರು ಐಸಿಯುನಲ್ಲಿದ್ದಾರೆ . ವಿಶೇಷ ನಿಗಾ ವಹಿಸಲಾಗುತ್ತಿದೆ. ಅವರಿಗೆ ಡಾ.ಸತ್ಯನಾರಾಯಣ ಮೈಸೂರು ಹಾಗೂ ಡಾ.ಸುನೀಲ್ ಕಾರಂತ್ ನೇತೃತ್ವದ ಕ್ರಿಟಿಕಲ್ ಕೇರ್ ತಂಡ ಚಿಕಿತ್ಸೆ ನೀಡುತ್ತಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Continue Reading

BANTWAL

ಬಯಲಾಯ್ತು ಅಕ್ರಮ ಸಂಬಂಧ; ನೇಣಿಗೆ ಶರಣಾದ ವಿವಾಹಿತ!

Published

on

ಪುತ್ತೂರು : ವ್ಯಕ್ತಿಗಳು ಸಾಲಬಾಧೆಯಿಂದಲೋ, ಅನಾರೋಗ್ಯದಿಂದಲೋ ಅಥವಾ ಜೀವನದಲ್ಲಿ ಜಿಗುಪ್ಸೆ ಹೊಂದಿಯೋ ಜೀವಾಂತ್ಯಗೊಳಿಸುವುದನ್ನು ಕಾಣುತ್ತೇವೆ. ಆದರೆ, ಇಲ್ಲೊಬ್ಬ,
ಅಕ್ರಮ ಪ್ರೇಮ ಸಂಬಂಧದ ಹಿನ್ನಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪ ಶನಿವಾರ ಘಟನೆ ಸಂಭವಿಸಿದೆ.

ಈಶ್ವರಮಂಗಲ ಸಮೀಪದ ಕತ್ರಿಬೈಲುವಿನ ಪ್ರಶಾಂತ್ ಮುಖಾರಿ (೩೮) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ ತನ್ನ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿರುವ ಚಿಮುಣಿಗುಡ್ಡೆ ಎಂಬಲ್ಲಿನ ಗುಡ್ಡದ ರಸ್ತೆ ಬದಿಯಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

 

ಇದನ್ನು ಓದಿ: ಈ ವೀಡಿಯೋವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ ? ವೀಡಿಯೋವೊಂದನ್ನು ಹಂಚಿಕೊಂಡು ಸವಾಲೆಸೆದ ನಟಿ ಜ್ಯೋತಿ ರೈ

ಅಕ್ರಮ ಸಂಬಂಧ ಬಯಲು – ನೇಣಿಗೆ ಶರಣು :

ಪ್ರಶಾoತ್ ಮುಖಾರಿ ಅವರಿಗೆ ಪತ್ನಿ ಮತ್ತು ಎಳೆಯ ವಯಸ್ಸಿನ ಪುತ್ರನಿದ್ದಾನೆ. ಈ ನಡುವೆ ಇನ್ನೊಬ್ಬಳು ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರ ಬಹಿರಂಗಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಅಪಮಾನಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.
ಮೃತರ ಪತ್ನಿ ನೀಡಿರುವ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

Trending