Tuesday, May 30, 2023

ಪಾಕಿಸ್ತಾನಿ ಮಹಿಳೆಯ ಭಟ್ಕಳದ ಪತಿ ಜಾವೇದ್ ಹೃದಯಾಘಾತಕ್ಕೆ ಬಲಿ..!

ಭಟ್ಕಳ : ಕಳೆದ ವರ್ಷ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ಬಂಧಿಸಿದ ಪಾಕಿಸ್ತಾನ ಪ್ರಜೆ ಖತೀಜಾ ಮೆಹ್ರೀನ್ ಪತಿ ಜಾವೇದ್ ಮೋಹಿದ್ದಿನ್ ರುಕ್ನುದ್ದಿನ್  ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಭಟ್ಕಳದಲ್ಲಿ 2014 ರಲ್ಲಿ ಪಾಕಿಸ್ತಾನ ಪ್ರಜೆ ಖತೀಜಾ ಮೆಹ್ರೀನ್ ಕಾನೂನು ಬಾಹಿರವಾಗಿ ಭಾರತದೊಳಗೆ ನುಸುಳಿ ಅನಧಿಕೃತವಾಗಿ ಭಟ್ಕಳದ ನವಾಯತ ಕಾಲೋನಿ ವೈಟ್ ಹೌಸ್ ಮನೆಯಲ್ಲಿ ವಾಸವಾಗಿದ್ದಳು.

ಈ ಬಗ್ಗೆ ಮಾಹಿತಿ ಕಲೆ ಹಾಕಿದ ಭಟ್ಕಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯನ್ನು ಕಳೆದ ವರ್ಷ ಜೂ.9 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆಕೆಯನ್ನು ಬಂದಿಸಿದ್ದರು.

ಈಕೆಯ ಪತಿ ಭಟ್ಕಳ ನವಾಯತ್ ಕಾಲೋನಿ ನಿವಾಸಿಯಾದ ಜಾವೇದ್ ಮೋಹಿದ್ದಿನ್ ರುಕ್ನುದ್ದಿನ್ ನೂರೂಲಾ ಅಮೀನ್ ರುಕ್ನುದ್ದಿನ್ , ನಿನ್ನೆ ಆರೋಗ್ಯದಲ್ಲಿ ಏರುಪೇರು ಆದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ನಿಧನ ಹೊಂದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಮೃತ ವ್ಯಕ್ತಿ ಎರಡು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Hot Topics