Sunday, December 4, 2022

ಪುಣೆಯಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಪ್ರಾರಂಭ: ಶಾಲಾ ಕಾಲೇಜುಗಳ ಮುಚ್ಚುಗಡೆ..!

ಪುಣೆಯಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಪ್ರಾರಂಭ: ಶಾಲಾ ಕಾಲೇಜುಗಳ ಮುಚ್ಚುಗಡೆ..!

ಪುಣೆ: ನಗರದಾದ್ಯಂತ ಮತ್ತೆ ಮಹಾಮಾರಿ ಕೊರೊನಾ ರೂಪಾಂತರ ವೈರಸ್ ಹರಡಲು ಆರಂಭವಾಗಿದ್ದ ಪುಣೆಯಲ್ಲಿ ರಾತ್ರಿ ಕರ್ಫ್ಯೂ ಘೋಷಿಸಿದ್ದಾರೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಪುಣೆಯಲ್ಲಿ ರಾತ್ರಿ 11ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೆ ಯಾವುದೇ ಸಾರ್ವಜನಿಕ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂಬ ಮಾಹಿತಿಯಿದೆ.  ಅಗತ್ಯ ಸೇವೆಗಳನ್ನು ಹೊರತುಪಡಿಸಿ ಪುಣೆಯಲ್ಲಿ ರಾತ್ರಿ 11ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೆ ಯಾವುದೇ ಸಾರ್ವಜನಿಕ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂಬ ಮಾಹಿತಿಯಿದೆ.  ಇದಲ್ಲದೆ, ಫೆಬ್ರವರಿ 28 ರವರೆಗೆ ಶಾಲಾ- ಕಾಲೇಜುಗಳು ಸಹ ಮುಚ್ಚಲ್ಪಡುತ್ತವೆ ಮತ್ತು ಸೋಮವಾರ ಹೊಸ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ಪುಣೆ ವಿಭಾಗೀಯ ಆಯುಕ್ತರು ತಿಳಿಸಿದ್ದಾರೆ. ಕಳೆದ ಕೆಲ ದಿನಗಳಿಂದ ವಿವಿಧ ಜಿಲ್ಲೆಗಳು, ಮುಂಬೈ ಮತ್ತು ಪುಣೆಯಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಿ. ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಇತ್ತೀಚೆಗೆ ದೈನಂದಿನ ಕೊರೋನ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ವಿದರ್ಭದ ಅಂಕೋಲಾ, ಅಮರಾವತಿ, ಯವತ್ಮಾಲ್, ಬುಲ್ಡಾನಾ, ವಾರ್ಧಾ ಮತ್ತು ನಾಗ್ಪುರದ ಆರು ಜಿಲ್ಲೆಗಳು ಕೊರೋನಾ ವೈರಸ್ ಪ್ರಕರಣಗಳಲ್ಲಿ ಸ್ಥಿರ ಏರಿಕೆ ಕಂಡು ಬರುತ್ತಿದೆ. ಪ್ರವಲಸೆಯ ಕಾರಣದಿಂದ ಮತ್ತು ಕೋವಿಡ್‌ ನೀತಿ ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣ ವೈರಸ್‌ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ ಎನ್ನಲಾಗಿದೆ.ಮಹಾರಾಷ್ಟ್ರದಲ್ಲಿ ಕರೋನವೈರಸ್ ಪ್ರಕರಣ ಹೆಚ್ಚಳವು ರಾಜ್ಯ ಅಧಿಕಾರಿಗಳಲ್ಲಿ ಮತ್ತು ಕೇಂದ್ರದಲ್ಲಿ ಕಳವಳವನ್ನು ಉಂಟುಮಾಡಿದೆ. ಕೇಂದ ಆರೋಗ್ಯ ಸಚಿವಾಲಯವು ಕೊರೋನ ವೈರಸ್‌ ಹರಡುವಿಕೆಗೆ ಸಾಕ್ಷಿಯಾಗುತ್ತಿರುವ ಐದು ರಾಜ್ಯಗಳಿಗೆ ಎಚ್ಚರಿಕೆಯ ಸೂಚನೆಯನ್ನು ನೀಡಿದ್ದು ಮತ್ತು ವೈರಸ್ ಹರಡುವಿಕೆಯ ಕುರಿತಾದಂತೆ ಹೆಚ್ಚಿನ ಪರೀಕ್ಷೆಗೆ ಕರೆ ನೀಡಿದೆ.

LEAVE A REPLY

Please enter your comment!
Please enter your name here

Hot Topics