Thursday, April 22, 2021

ದಕ್ಷಿಣ ಕನ್ನಡದಲ್ಲಿ ಮುಸ್ಲೀಮರೇ ಟಾರ್ಗೆಟ್ ಯಾಕೆ..!!? ಪೋಲಿಸ್ ಆಯುಕ್ತರಿಗೆ ದೂರು..

ಮಂಗಳೂರು : ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಮರ ಮೇಲೆ ಅಲ್ಲಲ್ಲಿ ನಿರಂತರ ದಾಳಿಗಳು ನಡೆಯಿತ್ತಿದೆ.  ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದನ್ನು ತೀವ್ರವಾಗಿ ಖಂಡಿಸಿದ್ದು, ಸೂಕ್ತ ಕ್ರಮಕ್ಕಾಗಿ ಮಂಗಳೂರು ಕಮಿಷನರಿಗೆ ದೂರು ನೀಡಲಾಗಿದೆ.

ಕೋಮು ಸೂಕ್ಷ್ಮವೆನಿಸಿದ ದ.ಕ.ಜಿಲ್ಲೆಯಲ್ಲಿ ಕೆಲವು ದಿನಗಳಿಂದ, ಸಮಾಜ ಘಾತುಕ ಕಿಡಿಗೇಡಿಗಳಿಂದ ಅನೈತಿಕ ಪೋಲೀಸ್ ಗಿರಿ ನಿರಂತರವಾಗಿ ನಡೆಯುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಯುವಕನಿಗೆ ಸುರತ್ಕಲ್ ನಲ್ಲಿ ಲವ್ ಜಿಹಾದ್ ಹೆಸರಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಬೆಳ್ತಂಗಡಿ ಸಮೀಪದ ಮೇಲಂತಬೆಟ್ಟುವಿನಲ್ಲಿ ಖಾಲಿ ಪಿಕಪ್ ವಾಹನದಲ್ಲಿ ಹೋಗುತ್ತಿದ್ದ ಒಬ್ಬ ಯುವಕನಿಗೆ ಹಾಗೂ ಒಬ್ಬ ಹಿರಿಯ ವ್ಯಕ್ತಿಗೆ ಗೋಸಾಗಾಟ ಹೆಸರಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಮೊನ್ನೆ ತಡರಾತ್ರಿ ಫರಂಗಿಪೇಟೆಯ ಮಸೀದಿಯೊಳಗೆ ಏಕಾಏಕಿ ನುಗ್ಗಿ ಮಸೀದಿಯ ಧರ್ಮಗುರುಗಳಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಅದೇ ರೀತಿ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ವ್ಯಕ್ತಿಗೆ ಪಂಪುವೆಲ್ ನಲ್ಲಿ ಬಸ್ಸಿನಿಂದ ಹೊರಗೆಳೆದು ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ.
ಇಂತಹ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು ಜನಸಾಮಾನ್ಯರು ಆತಂಕಕ್ಕೀಡಾಗಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಪವಿತ್ರ ರಂಝಾನ್ ತಿಂಗಳು ಪ್ರಾರಂಭವಾಗಳಿದ್ದು ಕಿಡಿಗೇಡಿಗಳು ಕೋಮುಗಲಬೆ ನಡೆಸಲು ಸಂಚು ಹೂಡಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ.

ತಪ್ಪು ಯಾರೇ ಮಾಡಲಿ ಅದಕ್ಕೆ ತಕ್ಕುದಾದ ಶಿಕ್ಷೆಯಾಗಲೇಬೆಕು. ಸಮಾಜಘಾತುಕ ಶಕ್ತಿಗಳು ಕಾನೂನು ಕೈಗೆತ್ತಿಕೊಂಡು ಅನೈತಿಕ ಪೋಲೀಸ್ ಗಿರಿ ಹೆಸರಲ್ಲಿ ಹಲ್ಲೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು.

ಆದುದರಿಂದ ತಾವುಗಳು ಇಂತಹ ಕಿಡಿಗೇಡಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ, ಜಿಲ್ಲೆಯಲ್ಲಿ ಕೋಮು ಸಾಮರಸ್ಯವನ್ನು ಹದಗೆಡಿಸುತ್ತಿರುವ ಯಾರೇ ಆದರೂ, ಅವರ ವಿರುದ್ದ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.

ದ.ಕ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನಿಯೋಗದಲ್ಲಿ,* ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್, ಸುರತ್ಕಲ್ ಮುಸ್ಲಿಮ್ ಐಕ್ಯತಾ ವೇದಿಕೆಯ ಅಧ್ಯಕ್ಷರಾದ ಅಶ್ರಫ್ ಬದ್ರಿಯಾ, ಸುರತ್ಕಲ್ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಹ್ಮದ್ ಬಾವ, ಆಹಾರ ಸಂರಕ್ಷಣಾ ಕಾರ್ಯದರ್ಶಿ ಬಶೀರ್ ಹೊಕ್ಕಾಡಿ, ರಾಜ್ಯ ಗೌರವ ಸಾಧಕ ಸನ್ಮಾನಿತ ಸೋಶಿಯಲ್ ಫಾರೂಕ್, ನವಾಝ್ ಚೊಕ್ಕಬೆಟ್ಟು, ಅಖಿಲ ಭಾರತ ಬ್ಯಾರಿ ಪರಿಷತ್ (ರಿ.) ಮಂಗಳೂರು ಇದರ ಅಧ್ಯಕ್ಷರಾದ ಕೆ.ಎಸ್.ಅಬೂಬಕ್ಕರ್ ಪಲ್ಲಮಜಲು, ಬಂದರ್ ಮೀನು ಮಾರಾಟಗಾರರ ಅಧ್ಯಕ್ಷರಾದ ಸಿ. ಎಮ್. ಮುಸ್ತಫಾ, ವಕೀಲರಾದ ಮುಹಮ್ಮದ್ ಹನೀಫ್, ಅದ್ದು ಕೃಷ್ಣಾಪುರ, ಅಹ್ಮದ್ ಬಾವ ಬಜಾಲ್, ಕೆ. ಎಮ್. ಶೆರೀಫ್, ಶೆರೀಫ್ ದೇರಳಕಟ್ಟೆ, ಸಮೀರ್ ಆರ್.ಕೆ.ಅಳೇಕಲ, ನವಾಝ್ ಚೊಕ್ಕಬೆಟ್ಟು, ಅಬ್ದುಲ್ ಅಝೀಝ್ ಸುರತ್ಕಲ್, ಹೈದರ್ ಸೌದಿ ಕೃಷ್ಣಾಪುರ, ನೌಷಾದ್ ಬಂದರ್ ಮೊದಲಾದವರು ಉಪಸ್ತಿತರಿದ್ದರು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...