Monday, January 24, 2022

ಸುಳ್ಯದಲ್ಲಿ ಪಿಕಪ್​ಗೆ ಕಂಟೇನರ್ ಲಾರಿ ಡಿಕ್ಕಿ: ಓರ್ವ ಸಾವು, ಮೂವರು ಗಂಭೀರ..!

ಸುಳ್ಯ: ಪಿಕಪ್ ವಾಹನಕ್ಕೆ ಕಂಟೇನರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ  ಜಾಲ್ಸೂರು ಗ್ರಾಮದ ಅಡ್ಕಾರಿನ ಮಾವಿನಕಟ್ಟೆ ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.
ಸಂಪಾಜೆ ಕಡೆಗೆ ತೆರಳುತ್ತಿದ್ದ ಪಿಕಪ್​ಗೆ ಮಂಗಳೂರು ಕಡೆಗೆ ಬರುತ್ತಿದ್ದ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದ್ದ ಓರ್ವ ಸಾವನ್ನಪ್ಪಿದ್ದು ಅವರನ್ನು.  ಪೆರಾಜೆಯ ಪಾಲೆಗುಂಡಿಯ ದಿನಕರ (32) ಎಂದು ಗುರುತ್ತಿಸಲಾಗಿದೆ.

ಇತರ ಮೂವರು ಗಂಭೀರಗಾಯಗೊಂಡಿದ್ದು ಕೆವಿಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಂಟೇನರ್ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಿಕಪ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hot Topics

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...

ಕವಿ ಮುದ್ದಣ ಜನ್ಮದಿನಾಚರಣೆ ಪ್ರಯುಕ್ತ 150 ರೂ. ನಾಣ್ಯ ಬಿಡುಗಡೆಗೊಳಿಸಿದ ಸಂಸದ ನಳಿನ್‌

ಮಂಗಳೂರು: ಹೊಸಗನ್ನಡದ ಮುಂಗೋಳಿ ಎಂದು ಪ್ರಖ್ಯಾತರಾಗಿದ್ದ ಕವಿ ಮುದ್ದಣ ಅವರ 150ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ 150 ರೂ. ಹೊಸ ನಾಣ್ಯವನ್ನು ಇಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅನಾವರಣ.ಬಳಿಕ...

ಮಂಗಳೂರಿನ ಕುವರಿ ರೆಮೊನಾ ಇವೆಟ್ಟಾ ಪಿರೇರಾಗೆ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ

ಮಂಗಳೂರು: ಈ ಬಾರಿಯ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ ಮಂಗಳೂರಿನ ರೆಮೊನಾ ಇವೆಟ್ಟಾ ಪಿರೇರಾ ಅವರಿಗೆ ದೊರೆತಿದೆ.ಸಾಂಸ್ಕೃತಿಕ ರಂಗದಲ್ಲಿ ಮಾಡಿದ ಸಾಧನೆಗೆ ಈ ಗೌರವ ಲಭಿಸಿದ್ದು, ಪುರಸ್ಕಾರವು ಒಂದು ಲಕ್ಷ ಮೊತ್ತ,...