Connect with us

LATEST NEWS

ಎನ್‌ಎಸ್‌ಯುಐ ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Published

on

ಮಂಗಳೂರು: ಪಠ್ಯ ಪುಸ್ತಕದಲ್ಲಿ ಕೇಸರೀಕರಣವನ್ನು ತುಂಬಲು ಮುಂದಾಗಿರುವ ಸರಕಾರದ ಕ್ರಮದ ವಿರುದ್ಧ ರಾಜ್ಯ ಶಿಕ್ಷಣ ಸಚಿವ ನಾಗೇಶ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ ಎನ್‌ಎಸ್‌ಯುಐ ಕಾರ್ಯಕರ್ತರನ್ನು

ಬಂಧಿಸಿರುವುದನ್ನು ವಿರೋಧಿಸಿ ಇಂದು ಮಂಗಳೂರಿನಲ್ಲಿ ಎನ್‌ಎಸ್‌ಯುಐ ಕಾರ್ಯಕರ್ತರು ಮಂಗಳೂರಿನ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಎನ್‌ಎಸ್‌ಯುಐ ರಾಜ್ಯಾದ್ಯಕ್ಷ ಕೀರ್ತಿಗಣೇಶ್‌ ಅವರನ್ನು ಸುಳ್ಳು ಆರೋಪದಡಿಯಲ್ಲಿ ಬಂಧಿಸಲಾಗಿದ್ದು, ಕೂಡಲೇ ಬಿಡುಗಡೆಗೊಳಿಸಬೇಕೆಂಧು ಆಗ್ರಹಿಸಿ ಏಕಕಾಲದಲ್ಲಿ ಕಾರ್ಯಕರ್ತರು ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಿದರು.

ಅಲ್ಲದೆ ಪಠ್ಯದಲ್ಲಿ ಕೇಸರಿಕರಣವನ್ನು ಕೈಬಿಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ರಸ್ತೆ ತಡೆ ಮಾಡಲು ಮುಂದಾದಾಗ ಪೊಲೀಸರು ಇವರನ್ನು ತೆರವುಗೊಳಿಸಿದರು.

ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಸೋಹನ್‌ ಆಳ್ವ, ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಸಾಹಿಲ್‌ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

FILM

ಬಹುಭಾಷಾ ಖ್ಯಾತ ಗಾಯಕ ಪಂಕಜ್ ಉದಾಸ್ ನಿಧನ..!

Published

on

Film: ಬಾಲಿವುಡ್ ಚಿತ್ರರಂಗದ ಹೆರಾಂತ ಗಾಯಕ ಹಾಗೂ ಜಝಲ್ ಮಾಂತ್ರಿಕ ಪಂಕಜ್ ಉದಾಸ್ ನಿಧನ ಹೊಂದಿದರು.


ಪಂಕಜ್ ಉದಾಸ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇವರು ಬಾಲಿವುಡ್ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಕನ್ನಡದ ಸುದೀಪ್ ನಟನೆಯ ಸ್ಪರ್ಶ ಸಿನಿಮಾದ ‘ಚೆಂದಕ್ಕಿಂತ ಚೆಂದ ನೀನೇ ಸುಂದರ’ ಹಾಡನ್ನು ಹಾಡಿದ್ದಾರೆ. ಪಂಕಜ್ ಉದಾಸ್ ನಿಧನಕ್ಕೆ ಬಾಲಿವುಡ್, ಗಝಲ್ ಪ್ರೇಮಿಗಳ ಕಂಬನಿ ಮಿಡಿದಿದ್ದಾರೆ.

Continue Reading

LATEST NEWS

ಒಂದೇ ವಾರದಲ್ಲಿ ಚಿಕಿತ್ಸೆಗೆಂದು ಬಂದ 3 ಮಹಿಳೆಯರು ಸಾವು

Published

on

ತುಮಕೂರು : ತುಮಕೂರಿನ ಪಾವಗಡ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಒಂದೇ ವಾರದಲ್ಲಿ ಮೂವರು ಯುವತಿಯರು ಸಾವನ್ನಪ್ಪಿರುವ ಘಟನೆ ನಡೆದಿದೆ.ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಜವಂತಿ ಗ್ರಾಮದ ಅಂಜಲಿ (25), ಬ್ಯಾಡನೂರು ಗ್ರಾಮದ ನರಸಮ್ಮ (40), ವೀರಲಗೊಂದಿ ಗ್ರಾಮದ ಅನಿತಾ (30) ಸಾವನ್ನಪ್ಪಿದ್ದಾರೆ.

ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅನಿತಾ ಫೆ.22ರಂದು, ಅಂಜಲಿ ಎಂಬ ಮಹಿಳೆ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಫೆಬ್ರವರಿ 24ರಂದು, ಹಾಗೂ ಫೆಬ್ರವರಿ 25ರಂದು ನರಸಮ್ಮ ಎಂಬಾಕೆ ಸಾವನ್ನಪ್ಪಿದ್ದರು. ಸದ್ಯ ಮೃತ ಮಹಿಳೆಯ ಕುಟುಂಬಸ್ಥರು ಪಾವಗಡ ಪಟ್ಟಣದಲ್ಲಿ ಬಳ್ಳಾರಿ ರಸ್ತೆ ತಡೆದು ಘೋಷಣೆ ಕೂಗಿ ಪ್ರತಿಭಟಿಸಿದ್ದಾರೆ. ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Continue Reading

LATEST NEWS

ಧಗ ಧಗನೆ ಹೊತ್ತಿ ಉರಿದ ಬೋರ್‌ವೆಲ್ ಲಾರಿಗಳು ಸಂಪೂರ್ಣ ಭಸ್ಮ..!

Published

on

ದಾವಣಗೆರೆ: ನೀರಿಗಾಗಿ ಕೊಳವೆ ಬಾವಿ ಕೊರೆಯುತ್ತಿದ್ದ ಎರಡು ಬೋರ್‌ವೆಲ್‌ ವಾಹನಗಳು ಹೊತ್ತಿ ಉರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯ ಕುಕ್ಕುವಾಡ ಗ್ರಾಮದ ಕೊಳೇನಹಳ್ಳಿಯಲ್ಲಿ ರೈತರೊಬ್ಬರ ಜಮೀನಿನಲ್ಲಿ ಬೋರ್‌ವೆಲ್ ಕೊರೆಯಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಒಂದು ಲಾರಿಗೆ ಬೆಂಕಿ ತಗುಲಿದ್ದು, ಬಳಿಕ ಅದು ಮತ್ತೊಂದು ಲಾರಿಗೂ ವ್ಯಾಪಿಸಿದೆ. ಎರಡೂ ಲಾರಿಗಳು ಧಗಧಗ ಹೊತ್ತಿ ಉರಿದಿದ್ದು, ಬೆಂಕಿ ನಂದಿಸಲಾಗದೆ ಸ್ಥಳೀಯರು ಪರದಾಡಿದ್ದಾರೆ. ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಲಾರಿಗಳೆರಡೂ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಬೋರ್‌ವೆಲ್ ಲಾರಿಗಳಿಗೆ ಅಷ್ಟೊಂದು ತೀವೃತೆಯಲ್ಲಿ ಬೆಂಕಿ ಹೇಗೆ ಹತ್ತಿಕೊಂಡಿತು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಒಣ ಹುಲ್ಲಿದ್ದ ಕೃಷಿ ಭೂಮಿಗೆ ಬೆಂಕಿ ಹಬ್ಬಿ ದೂರದಲ್ಲಿ ನಿಂತಿದ್ದ ಇನ್ನೊಂದು ಲಾರಿಗೂ ಬೆಂಕಿ ತಗುಲಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Continue Reading

LATEST NEWS

Trending