ನವದೆಹಲಿ: ಮತಾಂತರವಾದವರಿಗೆ ಪರಿಶಿಷ್ಟ ಜಾತಿ ಸ್ಥಾನ ನೀಡುವ ಕುರಿತಂತೆ ಕೇಂದ್ರದಿಂದ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.
ಹಿಂದುಳಿದ ಜಾತಿಗೆ ಸೇರಿದ ಯಾವುದೇ ವ್ಯಕ್ತಿಗಳಿಗೆ ಅವರು ಕ್ರಿಶ್ಚಿಯನ್, ಮುಸ್ಲಿಂ ಮೊದಲಾದ ಧರ್ಮಗಳಿಗೆ ಮತಾಂತರವಾದರೆ ಮೀಸಲಾತಿ ನೀಡಿಕೆ ಕುರಿತ ಪ್ರಕರಣದಲ್ಲಿ ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಲಾಗಿದ್ದು, ಮತಾಂತರ ಹೊಂದಿದವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ಪರೋಕ್ಷವಾಗಿ ಹೇಳಿದೆ.
ಈ ಬಗ್ಗೆ ಅಭಿಪ್ರಾಯವನ್ನು ವ್ಯಪ್ತಪಡಿಸಿ ‘ಪರಿಶಿಷ್ಟ ಜಾತಿ ವ್ಯಕ್ತಿಗಳು ಬೌದ್ಧ, ಸಿಖ್ ಧರ್ಮಗಳಿಗೆ ಮತಾಂತರ ಆಗುವುದಕ್ಕೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಮತಾಂತರ ಹೊಂದುವುದಕ್ಕೂ ವ್ಯತ್ಯಾಸವಿದೆ.
ಬೌದ್ಧ ಮತ್ತು ಸಿಖ್ ಧರ್ಮಗಳು ಭಾರತದಲ್ಲಿಯೇ ಹುಟ್ಟಿವೆ. ಆದರೆ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮಗಳು ವಿದೇಶಗಳಿಂದ ಬಂದಿವೆ. ಭಾರತದ ಧರ್ಮ ಮತ್ತು ಕ್ರಿಶ್ಚಿಯನ್, ಮುಸ್ಲಿಂ ಧರ್ಮದ ಆಚರಣೆಗಳು ವಿಭಿನ್ನವಾಗಿವೆ.
ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದನ್ನೇ ಕ್ರಿಶ್ಚಿಯನ್, ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿದವರಿಗೆ ಸಮಾನವಾಗಿ ಪರಿಗಣಿಸಲು ಸಾಧ್ಯವಿಲ್ಲವೆಂದು ಹೇಳಲಾಗಿದೆ.