Thursday, February 9, 2023

ನಾರಾಯಣ ಗುರು ಜಯಂತಿ ಆಚರಣೆಗೆ ಯಾರ ಅನುಮತಿ ಅಗತ್ಯವಿಲ್ಲ-ಹರಿಕೃಷ್ಣ ಬಂಟ್ವಾಳ

ಮಂಗಳೂರು: ಮಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಮಾಡಲು ನಾವು ಯಾರನ್ನು ಕೇಳಿ ಮಾಡಬೇಕಾಗಿಲ್ಲ. ಬ್ರಹ್ಮಶ್ರೀಗಳು ಒಂದು ಜಾತಿಗೆ ಸೀಮಿತರಾದವರು ಅಲ್ಲ. ಅವರು ಸಮಸ್ತ ಭಾರತದ ಮಾನವ ಕುಲಕ್ಕೆ ಸೇರಿದವರು. ಆದರೆ ಯಾರನ್ನೋ ಕೇಳಿಕೊಂಡು ಅವರ ಜಯಂತಿ ಮಾಡುವ ಅಗತ್ಯ ಇಲ್ಲ. ಅವರ ಸ್ವಾರ್ಥಕ್ಕೋಸ್ಕರ, ಅವರ ರಾಜಕೀಯಕ್ಕೋಸ್ಕರ ಜಯಂತಿ ಮಾಡಲಿ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್‌ ಹೇಳಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗುರುಬೆಳದಿಂಗಳು ಸೇವಾ ಸಂಸ್ಥೆ ಅಧ್ಯಕ್ಷ ಆರ್ ಪದ್ಮರಾಜ್‌ ಅವರು ನೀಡಿದ ಹೇಳಿಕೆಗೆ ಪದ್ಮರಾಜ್ ಅವರ ಹೆಸರು ಎತ್ತದೇ ಮಾತನಾಡಿ ‘ಈ ವ್ಯಕ್ತಿಗೂ ನಮಗೂ ಸಂಬಂಧವಿಲ್ಲ.

ಇವರ ನಾರಾಯಣ ಗುರುಗಳು ಯಾರು ಎಂದು ಕೂಡಾ ನಮಗೆ ತಿಳಿದಿಲ್ಲ. ಒಂದೇ ಜಾತಿ, ಒಂದೇ ದೇವರು ಎಂದು ಹೇಳಿದ ನಾರಾಯಣ ಗುರು ಯಾವ ಒಂದು ಜಾತಿಯ ಗೋಡೆಯೊಳಗೂ ಇಲ್ಲ.

ಹಿಂದೆ ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಡಳಿತ ನಾರಾಯಣ ಗುರುಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಈ ಬಾರಿ ದ.ಕ ಜಿಲ್ಲೆಯ ಆಡಳಿತಕ್ಕೆ, ಸಿಎಂನ ಆದೇಶದಂತೆ ಅವರ ಜನ್ಮದಿನವನ್ನು ಸಮಸ್ತ ನಾಗರಿಕರ ಸಮ್ಮುಖದಲ್ಲಿ ಮಾಡಬೇಕೆಂದು ಆದೇಶ ಬಂದ ಕಾರಣ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದ್ದೇವೆ.

ಅವರು ಜಾತಿಗೆ ಸೀಮಿತವಾದ ದಾರ್ಶನಿಕರೇ ಅಲ್ಲ. ನಮಗೆ ಯಾರಲ್ಲೂ ಕೇಳಿ ಮಾಡುವ ಅಗತ್ಯವಿಲ್ಲ. ಇನ್ನೊಬ್ಬರ ಟೀಕೆ ನಮಗೆ ನಗಣ್ಯ. ನಾವು ವಿವಾದ ಮಾಡುವುದಿಲ್ಲ. ಕಳೆದ ಬಾರಿ ಗಣರಾಜ್ಯೋತ್ಸವ, ಪಠ್ಯಪುಸ್ತಕದಲ್ಲೂ ವಿನಾ ಕಾರಣ ವಿವಾದ ಎಬ್ಬಿಸಿದರು.


ಅಲ್ಲಿ ಕಾಂಗ್ರೆಸ್ಸಿಗರು ಇದ್ದರೆ ವಿನಾಃ ನಾರಾಯಣ ಗುರು ಅನುಯಾಯಿಗಳು ಇರಲಿಲ್ಲ. ಅವರು ಪ್ರತಿಭಟನೆ ಮಾಡುವವರೂ ಅಲ್ಲ.

ಈಗ ಬೇರೆ ವಿಚಾರ ಸಿಗದಿರುವುದಕ್ಕೆ ಜನ್ಮಜಯಂತಿ ವಿಚಾರದಲ್ಲಿ ವಿವಾದ ಎಬ್ಬಿಸಿದ್ದಾರೆ. ಅವರು ಯಾರ ಆಸ್ತಿಯೂ ಅಲ್ಲ. ವಿವಾದ ಹುಟ್ಟಿಸುವವರು ನಮಗೆ ಲೆಕ್ಕಕ್ಕೇ ಇಲ್ಲ. ಇವರ ಆಚರಣೆಗೆ ಸರ್ಕಾರ ಮಂಗಳೂರನ್ನು ಆಯ್ಕೆ ಮಾಡಿಕೊಂಡಿದೆ.

ಮುಂದೆ ಬೇರೆ ಬೇರೆ ಜಿಲ್ಲೆಯಲ್ಲಿ ನಾರಾಯಣ ಗುರುಗಳ ಜನ್ಮದಿನೋತ್ಸವ ಆಗುವ ಸೂಚನೆಯಿದೆ. ಅದರಂತೆ ಮಾಡುತ್ತೇವೆ’ ಎಂದು ಹೇಳಿದರು.

ಅದೇನೇ ಆದರೂ ರಾಜ್ಯಮಟ್ಟದಲ್ಲಿ ಸೆಫ್ಟೆಂಬರ್ 10ರಂದು ನಾರಾಯಣ ಗುರು ಜಯಂತಿ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಧಾಕೃಷ್ಣ, ರವಿಶಂಕರ್ ಮಿಜಾರ್‌ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here

Hot Topics

ಸುರತ್ಕಲ್ ವ್ಯಾಪ್ತಿಯಲ್ಲಿ ಲಘು ಅಪಘಾತ: ಇತ್ತಂಡಗಳ ಮಧ್ಯೆ ಹೊಯ್‌ಕೈ- ಮಾತಿನ ಚಕಮಕಿ..!

ಮಂಗಳೂರು : ಮಂಗಳೂರು ಹೊವಲಯದ  ಸುರತ್ಕಲ್ ಠಾಣಾ ವ್ಯಾಪ್ತಿಯ ಗಣೇಶ್ ಪುರ ಎಂಬಲ್ಲಿ ಬುಧವಾರ ರಾತ್ರಿ ಬೈಕ್- ಕಾರ್ ನಡುವೆ ಲಘು ಅಪಘಾತ ಸಂಭವಿಸಿದ್ದು, ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೆಲ ಕಾಲ...

ಚಾರ್ಮಾಡಿಯಲ್ಲಿ ಶಿಕಾರಿಗಳ ಗುಂಡೇಟಿಗೆ ಕಡವೆ ಬಲಿ..!

ದುಷ್ಕರ್ಮಿಗಳ ಗುಂಡೇಟಿಗೆ ಕಡವೆಯೊಂದು ಬಲಿಯಾದ ಘಟನೆ ಚಿಕ್ಕಮಗಳೂರು ಸಮೀಪದ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್‌ನ ಮಲಯಮಾರುತ ಬಳಿ ನಿನ್ನೆ ನಡೆದಿದೆ.ಬೆಳ್ತಂಗಡಿ : ದುಷ್ಕರ್ಮಿಗಳ ಗುಂಡೇಟಿಗೆ ಕಡವೆಯೊಂದು ಬಲಿಯಾದ ಘಟನೆ ಚಿಕ್ಕಮಗಳೂರು ಸಮೀಪದ ಕೊಟ್ಟಿಗೆಹಾರ...

ಸುರತ್ಕಲ್ ‌ಫಾಝಿಲ್ ಕೊಲೆ ಆರೋಪಿಯಿಂದ ಹಣಕ್ಕಾಗಿ ಬೆದರಿಕೆ: ಉಳ್ಳಾಲ ಠಾಣೆಯಲ್ಲಿ ‌ಪ್ರಕರಣ ದಾಖಲು

ಕೇಳಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರು ಬಳಿ ನಡೆದಿದೆ.ಉಳ್ಳಾಲ: ಕೇಳಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ...