Connect with us

    DAKSHINA KANNADA

    ಇಂದು ಮತ್ತು ನಾಳೆ ಮಂಗಳೂರಿನ ಹಲವೆಡೆ ಕರೆಂಟ್ ಇಲ್ಲ….

    Published

    on

    ಮಂಗಳೂರು: ನಗರದ ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ 11ಕೆ.ವಿ ಮಂಗಳಾದೇವಿ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಂಡಿದೆ.

    ಆದ್ದರಿಂದ ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾರ್ನಮಿಕಟ್ಟೆ, ಮಂಕೀಸ್ಟ್ಯಾಂಡ್, ಅಮರ್ ಆಳ್ವ ರೋಡ್, ಸುಭಾಶ್‌ನಗರ, ಶಿವನಗರ, ಹೊಗೆಬಜಾರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.


    ಅದೇ ರೀತಿ ಕದ್ರಿ ಉಪಕೇಂದ್ರದಿಂದ ಹೊರಡುವ 11ಕೆ.ವಿ. ಲೈಟ್ ಹೌಸ್ಹಿಲ್ ರೋಡ್ ಫೀಡರ್ ಮತ್ತು 11ಕೆವಿ ಬಂಟ್ಸ್ ಹಾಸ್ಟೆಲ್ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ

    ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬಂಟ್ಸ್ ಹಾಸ್ಟೆಲ್, ವುಡ್ ಲ್ಯಾಂಡ್ಸ್, ಗೋಲ್ಡ್ ಫಿಂಚ್, ಜ್ಯೋತಿ ಟಾಕೀಸ್, ಲೈಟ್‍ಹೌಸ್, ಲೇಡಿಸ್ ಕ್ಲಬ್, ಸೈಂಟ್ ಅಲೋಶಿಯಸ್ ಕಾಲೇಜು, ಜಾರ್ಜ್ ಮಾರ್ಟಿಸ್ ರೋಡ್, ಮಲ್ಲಿಕಟ್ಟೆ, ಕ್ಯಾಸ್ಟಲ್ ಭಾಗ್, ಸಿಟಿ ಹಾಸ್ಪಿಟಲ್, ಕಾಮತ್ ನಸಿರ್ಂಗ್ ಹೋಂ, ಗಿರಿಯಾಸ್, ಆರ್ಯಸಮಾಜ ರಸ್ತೆ, ಭಾರತ್ ಬೀಡಿ, ಪ್ಲಾಂಟರ್ಸ್ ಲೇನ್, ಪತ್ರಾವೋ ಲೇನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

    ಇನ್ನು ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆ.ವಿ ಮಾರ್ಕೆಟ್ ಫೀಡರ್ ಮತ್ತು 11ಕೆ.ವಿ ವಿವೇಕ್ ಮೋಟಾರ್ ಫೀಡರ್ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಂಡಿರುವುದರಿಂದಲೂ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಲೇಡಿಗೋಷನ್ ಆಸ್ಪತ್ರೆ, ಸೆಂಟ್ರಲ್ ಮಾರ್ಕೆಟ್, ಶಾಂತದುರ್ಗಾ, ಜೆ.ಹೆಚ್.ಎಸ್. ರಸ್ತೆ, ಪಿ.ಎಂ. ರಾವ್ ರೋಡ್, ಗೌರಿಮಠ ರೋಡ್, ರಾಘವೇಂದ್ರ ಮಠ ರೋಡ್, ಮೈದಾನ್ 3ನೇ ಕ್ರಾಸ್, ಮೈದಾನ್ 4ನೇ ಕ್ರಾಸ್, ಬೀಬಿ ಅಲಾಬಿ ರಸ್ತೆ, ರಾವ್ & ರಾವ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

    ಕುಲಶೇಖರ ನಗರದ 110/33/11 ಕೆ.ವಿ. ಕುಲಶೇಖರ ಉಪಕೇಂದ್ರದ 20ಎಂ.ವಿ.ಎ ಶಕ್ತಿ ಪರಿವರ್ತಕ-1 ರಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಮಂಗಳೂರು ನಗರದ ಕಾವೂರಿನ ಕೆ.ಪಿ.ಟಿ.ಸಿ.ಎಲ್. ಅವರು ಹಮ್ಮಿಕೊಂಡಿರುತ್ತಾರೆ.

    ಈ ಕಾರಣಕ್ಕೆ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ 110/33/11 ಕೆ.ವಿ. ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆ.ವಿ. ಇಂಡಸ್ಟ್ರೀಯಲ್, 11ಕೆ.ವಿ ಪಂಪ್‍ವೆಲ್, 11ಕೆ.ವಿ. ಕಣ್ಣೂರು, 11ಕೆ.ವಿ. ನೀರುಮಾರ್ಗ, 11ಕೆ.ವಿ ಉಜ್ಜೋಡಿ, 11ಕೆ.ವಿ ಎಕ್ಕೂರು, 11ಕೆ.ವಿ ಶಕ್ತಿನಗರ, 11ಕೆ.ವಿ ಕೆನರಾ ವರ್ಕ್‍ಶಾಪ್ ಮತ್ತು 11ಕೆ.ವಿ ಕುಡ್ಸೆಂಪು ಫೀಡರ್ಗಳಲ್ಲಿ ಯೆಯ್ಯಾಡಿ, ಶರಬತ್ತು ಕಟ್ಟೆ, ಇಂಡಸ್ಟ್ರಿಯಲ್ ಏರಿಯಾ, ಪದವು, ಉಜ್ಜೋಡಿ, ನೆಕ್ಕರೆಮಾರ್, ಗೋರಿಗುಡ್ಡ, ಎಕ್ಕೂರು, ನೇತ್ರಾವತಿ ಗ್ಯಾರೇಜ್, ಕಡೆಕಾರ್, ಜೆಪ್ಪಿನಮೊಗರು, ತಾರ್ದೊಲ್ಯ, ತಂದೊಳಿಗೆ,

    ಡೆನ್ಮಾರ್ಕ್ ಲೇಔಟ್, ವಾಸುಕೀನಗರ, ಅಳಪೆಮಠ, ಕನಕರಬೆಟ್ಟು, ರಾಂತೋಟ, ಕುಡ್ಪಾಡಿ ತೋಟ, ಪರಂಜ್ಯೋತಿ ಭಜನಾ ಮಂದಿರ, ಸದಾಶಿವ ನಗರ, ಪಡೀಲ್ ಜಂಕ್ಷನ್, ಕಂಕನಾಡಿ ರೈಲ್ವೇ ಸ್ಟೇಷನ್, ನಾಗುರಿ, ನಾಗುರಿ ಪಂಪ್ ಹೌಸ್, ಗರೋಡಿ, ಕಪಿತಾನಿಯೋ, ಬಲಿಪಮಾರ್, ಮಹಾಲಿಂಗೇಶ್ವರ ಟೆಂಪಲ್, ನೇತ್ರಾವತಿ ಲೇಔಟ್, ಪಂಪ್ವೆಲ್ ಪ್ರಶಾಂತ್ಭಾಗ್, ಪಡೀಲ್ ಗ್ಯಾಸ್ ಗೋಡೌನ್, ಪಡೀಲ್, ಸೈಮನ್ ಲೇನ್, ಮೇಘನಗರ, ಗುಡ್ಡೆತೋಟ, ರೆಡ್ ಬಿಲ್ಡಿಂಗ್, ಕೆಂಬಾರ್, ಕಲ್ಪನೆ, ಕೈಕಂಬ,

    ಶಕ್ತಿನಗರ, ಕೆ.ವಿ.ಎಸ್. ಕುಚ್ಚಿಕಾಡ್, ಸರಕೋಡಿ ನ್ಯೂರೋಡ್, ಬೇಕಲ್ ಕರ್, ಕೊಂಗೂರು, ಕ್ಯಾಸ್ತಲಿನೋ ಕಾಲೋನಿ, ರಾಜೀವನಗರ, ನೀತಿನಗರ, ಬೊಲ್ಯಪದವು, ಪಂಜಿರೆಲ್, ನಲ್ಪಾಡ್, ಉಜ್ಜೋಡಿ, ರಾಮ್ ನಗರ, ಎಸ್.ಎನ್ ಟೆಂಪಲ್, ರಾಲಿ ಗ್ಯಾರೇಜ್, ಜಯನಗರ, ಜೋಡುಕಟ್ಟೆ, ಮರೋಳಿ, ವಸಂತನಗರ, ಕಣ್ಣೂರು, ಕೊಡಕ್ಕಲ್, ಬಲ್ಲೂರು, ಗಾಣದಬೆಟ್ಟು, ಬೋರುಗುಡ್ಡೆ, ಕೆಲರಾಯಿ, ನೀರುಮಾರ್ಗ, ಬೊಂಡಂತಿಲ, ಮಲ್ಲೂರು, ಮಾಣೂರು, ಬಿತ್ತುಪಾದೆ, ಬದ್ರಿಯಾನಗರ,

    ದೆಮ್ಮಲೆ, ಕೆನರಾವರ್ಕ್ ಶಾಪ್, ಕುಡ್ಸೆಂಪ್, ಕುಡ್ತಡ್ಕ, ಮಲ್ಲಿಕಾರ್ಜುನ ಟೆಂಪಲ್, ಕಾಂತನ ಬೆಟ್ಟು, ಕಾಂತಪ್ಪ ಬಡಾವಣೆ, ನೇತ್ರಾವತಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

    DAKSHINA KANNADA

    ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ

    Published

    on

    ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.


    ಉತ್ತರದ ಬ್ರೇಕ್ ವಾಟರ್ 831 ಮೀಟ‌ರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.

    ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
    ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್‌ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್‌ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್‌ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.

    Continue Reading

    DAKSHINA KANNADA

    ವಿದೇಶಿ ಹಡಗಿನಲ್ಲಿ ಬೆಂಕಿ ಅವಘಡ; ಕರ್ನಾಟಕ ಕರಾವಳಿಯಲ್ಲಿ ಲಂಗರು ಹಾಕಿದ ಕಾರ್ಗೋ ಹಡಗು

    Published

    on

    ಮಂಗಳೂರು: ಗುಜರಾತ್‌ನಿಂದ ಕೊಲಂಬೋಕ್ಕೆ ವಿವಿಧ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ವಿದೇಶಿ ಮೂಲದ ಸರಕು ಸಾಗಾಟ ಹಡಗಿನಲ್ಲಿ ಅಗ್ನಿ ಆಕಸ್ಮಿಕ ನಡೆದ ಘಟನೆ ಬೆಳಕಿಗೆ ಬಂದಿದೆ.

     

     

    ಜುಲೈ 19 ರಂದು ಕರ್ನಾಟಕ ಕರಾವಳಿಯ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು, ಕೋಸ್ಟ್‌ ಗಾರ್ಡ್‌ ತಂಡ ಹೆಲಿಕಾಪ್ಟರ್‌ ಹಾಗೂ ರಕ್ಷಣಾ ಹಡಗಿನ ಮೂಲಕ ಸತತ ನಲುವತ್ತು ಘಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಒಬ್ಬ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಹಡಗಿನ ಬೆಂಕಿ ನಂದಿಸಿ ಸಿಬ್ಬಂದಿಗಳ ರಕ್ಷಣೆ ಮಾಡಿದ ಬಳಿಕ ಹಡಗನ್ನು ಕರ್ನಾಟಕ ಕರಾವಳಿ ಭಾಗಕ್ಕೆ ತೆಗೆದುಕೊಂಡು ಬರಲಾಗಿದೆ. ಸದ್ಯ ಸುರತ್ಕಲ್ ಕಡಲ ಕಿನಾರೆಯಿಂದ ಸುಮಾರು 33 ನಾಟಿಕಲ್ ಮೈಲ್‌ ದೂರದಲ್ಲಿ ಹಡಗು ಲಂಗರು ಹಾಕಲಾಗಿದೆ. ಗುಜಾರಾತ್‌ನ ಮುಂದ್ರಾ ಬಂದರಿನಿಂದ ಹೊರಟಿದ್ದ ಈ ಹಡಗು ಪನಾಮ ದೇಶಕ್ಕೆ ಸೇರಿದ್ದಾಗಿ ಮಾಹಿತಿ ಲಭ್ಯವಾಗಿದೆ.

    ಬೆಂಕಿ ಅವಘಡದಿಂದ ಸಂಪೂರ್ಣ ಹಾನಿಯಾಗಿರುವ ಹಡಗು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಹಡಗಿನ ಮೇಲೆ ನಿಗಾ ಇರಿಸಿದ್ದಾರೆ. ಹಡಗು ಮುಳುಗಡೆಯಾಗುವ ಸಾದ್ಯತೆಯ ಜೊತೆಗೆ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವ ಕೂಡಾ ಇದೆ. ಹೀಗಾಗಿ ಹಡಗು ಮುಳುಗಡೆಯಾದಲ್ಲಿ ಸಮುದ್ರಕ್ಕೆ ತೈಲ ಸೋರಿಕೆಯ ಆತಂಕ ಕೂಡಾ ಎದುರಾಗಿದೆ. ಹೀಗಾಗಿ ಹಡಗಿನ ಮೇಲೆ ನಿಗಾ ವಹಿಸಿರುವ ಕೋಸ್ಟ್‌ ಗಾರ್ಡ್‌ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

    Continue Reading

    DAKSHINA KANNADA

    ದಕ್ಷಿಣ ಕನ್ನಡ ಜಿಲ್ಲೆಯ ಮಹಾಪ್ರವಾಹಕ್ಕೆ 50 ವರ್ಷ; ಮರುಕಳಿಸದಿರಲಿ ‘ಆ ಶುಕ್ರವಾರ’ ಎನ್ನುತ್ತಿದ್ದಾರೆ ಕರಾವಳಿಗರು!

    Published

    on

    ಮಂಗಳೂರು: 1974 ಜುಲೈ 26ರ ಶುಕ್ರವಾರ ರಾತ್ರಿ ಇಡೀ ಸುರಿದ ಭಾರೀ ಮಳೆ ಮುಂಜಾನೆಯ ವೇಳೆಗೆ ನೆರೆ ರೌದ್ರಾವತಾರ ತಾಳಿತ್ತು.

    ಹಿಂದೆ ಎಂದೂ ಕಾಣದ ರೀತಿ ನೇತ್ರಾವತಿ ನದಿ ಉಕ್ಕಿ ಹರಿದಿತ್ತು. ನಸುಕಿನ ಜಾವ ನೇತ್ರಾವತಿ ನದಿ ಮನೆಯೊಳಗೆಯೇ ಪ್ರವೇಶಿಸಿತ್ತು.

    ಬಂಟ್ವಾಳ ಪೇಟೆ, ಪಕ್ಕದೂರುಗಳಿಗೆ ಸಂಪರ್ಕಿಸುವ ರಸ್ತೆಗಳೆಲ್ಲವೂ ಕ್ಷಣಮಾತ್ರದಲ್ಲೆ ಜಲಮಯ. ಎಲ್ಲಿಗೆ ಹೋಗೋದು? ಏನು ಮಾಡೋದು ಅನ್ನೋದನ್ನು ಯೋಚಿಸುವಷ್ಟರಲ್ಲೇ ಊರಿಗೆ ಊರೇ ಮುಳುಗಿತ್ತು. ಬಂಟ್ವಾಳ ಮತ್ತು ಉಪ್ಪಿನಂಗಡಿ ಪೇಟೆಯಲ್ಲಿ ವಾಹನಗಳ ಬದಲು ದೋಣಿಗಳು ಸಂಚರಿಸಿದ್ದವು. ಆ ಕಾಲದಲ್ಲಿಯೇ ಐವತ್ತು ಲಕ್ಷ ರೂಪಾಯಿ ನಷ್ಟ ಉಂಟಾಗಿತ್ತು.

    ಆ ಸಮಯದಲ್ಲಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆ ನೀರಿನಿಂದ ಆವರಿಸಿದ್ದವು, ಆವತ್ತಿನ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ನೂರಾರು ಮನೆ ಅಂಗಡಿ ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದವು. ಈಗಲೂ ಕೂಡಾ ಆ ಭೀಕರ ನೆರೆಯು ನಮ್ಮ ಹಿರಿಯರ ಬಾಯಲ್ಲಿ (ಎಲ್ಪತ್ತ ನಾಲೆತ್ತ ಬೊಲ್ಲ) ಎಂದು ಪ್ರಖ್ಯಾತಿ ಹೊಂದಿದೆ.

    ಕಾಕತಾಳೀಯ ಎಂಬಂತೇ ಪ್ರವಾಹದ ಆ ದಿನ, ವಾರ ಎಲ್ಲವೂ ಸೇಮ್ ಆಗಿದ್ದು, ಮತ್ತೆ ಅದೇ ರೀತಿಯ ಪ್ರವಾಹ ಪರಿಸ್ಥಿತಿಯೂ ನೇತ್ರಾವತಿ ತಟದಲ್ಲಿದೆ. ಈಗಾಗಲೇ ನೇತ್ರಾವತಿ ಅಪಾಯ ಮಟ್ಟ ಮೀರಿದ್ದು, ಈ ಆತಂಕಕ್ಕೆ ಕಾರಣವೂ ಆಗಿದೆ.

    Continue Reading

    LATEST NEWS

    Trending