ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮ ಮದ್ದ ನಿವಾಸಿ ಅಬೂಬಕ್ಕರ್ ಎಂಬವರ ಮಗ ಮಹಮ್ಮದ್ ನಿಜಾಮ್ ಬೆಂಗಳೂರಿಗೆ ಕೆಲಸಕ್ಕೆಂದು ಹೋಗಿದ್ದು ಇದೀಗ ನಾಪತ್ತೆಯಾಗಿದ್ದಾನೆ.
ಮಹಮ್ಮದ್ ನಿಜಾಮ್ ಎಸ್.ಎಸ್.ಎಲ್.ಸಿ ತನಕ ವಿದ್ಯಾಭ್ಯಾಸ ಮಾಡಿದ್ದು, ಪ್ರಸ್ತುತ ಕೂಲಿ ಕೆಲಸಕ್ಕೆ ಹೋಗುತ್ತಿದ್ದ.
ಇತ್ತೀಚೆಗೆ ತನ್ನ ಗೆಳೆಯನಾದ ದೇರಳಕಟ್ಟೆಯ ಸಮೀರ್ ಎಂಬಾತನೊಂದಿಗೆ ಕೆಲಸಕ್ಕೆಂದು ಬೆಂಗಳೂರಿಗೆ ತೆರಳಿದ್ದು, ಆ ಬಳಿಕ ಯಾವುದೇ ರೀತಿಯಲ್ಲಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾನೆ.
ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.