Connect with us

    FILM

    ನಿವೇದಿತಾ ಗೌಡ ಹೊಸ ರೀಲ್ಸ್‌ ನೋಡಿ ಗರಂ ಆದ ಫಾಲೋವರ್ಸ್..!

    Published

    on

    ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ಬಿಗ್‌ ಬಾಸ್‌ ಜೋಡಿ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಚೇದನ ಪಡೆದಿದ್ದಾರೆ. ನಿವೇದಿತಾ ಈಗ ಅಮ್ಮನ ಮನೆಯಲ್ಲಿದ್ದಾರೆ. ಮದುವೆಗೂ ಮುನ್ನ ರೀಲ್ಸ್‌ನಿಂದಲೇ ಹೆಚ್ಚು ಫೇಮಸ್‌ ಆಗಿದ್ದು ನಿವೇದಿತಾ ಮದುವೆ ನಂತರ ಪತಿ ಜೊತೆ ವಿಡಿಯೋ ಮಾಡಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು.

    ನಿವೇದಿತಾ ಗೌಡ ಮೊದಲಿಗಿಂತ ಸಖತ್‌ ಹಾಟ್‌ ಕಾಣುತ್ತಿದ್ದಾರೆ. ಅದು ಅವರ ರೀಲ್ಸ್‌ನಲ್ಲಿ ಗೊತ್ತಾಗುತ್ತಿದೆ. ಇತ್ತೀಚೆಗೆ ಇನ್ನಷ್ಟು ತುಂಡು ಬಟ್ಟೆ ಧರಿಸಿ ರೀಲ್ಸ್‌ ಮಾಡುತ್ತಿದ್ದಾರೆ. ಆದರೆ ಇದು ಫಾಲೋವರ್‌ಗಳ ಕೆಂಗಣ್ಣಿಗೆ ಗುರಿ ಆಗಿದೆ. ಡಿವೋರ್ಸ್‌ ನಂತರವಂತೂ ನಿವೇದಿತಾ ಪ್ರತಿದಿನ ಟ್ರೋಲ್‌ ಆಗುತ್ತಲೇ ಇದ್ದಾರೆ. ಸೋಮವಾರ ಅವರು ಹಂಚಿಕೊಂಡಿರುವ ಮತ್ತೊಂದು ವಿಡಿಯೋಗೆ ನೆಗೆಟಿವ್‌ ಕಾಮೆಂಟ್‌ಗಳ ಸುರಿಮಳೆಯೇ ಆಗಿದೆ.

    ನಿವೇದಿತಾ, ಸೀಕ್ವಿನ್‌ ಜೀನ್ಸ್‌ ಧರಿಸಿ ಪಿಂಕ್‌ ಬಣ್ಣದ ಸ್ಲೀವ್‌ಲೆಸ್‌ ಕ್ರಾಪ್‌ ಟಾಪ್‌ ಧರಿಸಿದ್ದಾರೆ. ಸೊಂಟಕ್ಕೆ ಬಿಳಿ ದಾರ ಕಟ್ಟಿದ್ದಾರೆ. ಫ್ರೀ ಹೇರ್‌ ಬಿಟ್ಟು ಕಿವಿಗೆ ಒಂದು ಹೂ ಇಟ್ಟು ಬಾತ್‌ ರೂಮ್‌ನಲ್ಲಿ ರೀಲ್ಸ್‌ ಮಾಡಿ ಅದನ್ನು ಹಂಚಿಕೊಂಡಿದ್ದಾರೆ.

    ಒಬ್ಬರೋ ಇಬ್ಬರೋ ನಿವೇದಿತಾ ಗೌಡ ರೀಲ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಾಮೆಂಟ್‌ ಮಾಡಿದರೆ, ಕಾಮೆಂಟ್‌ ಬಾಕ್ಸ್‌ ತುಂಬಾ ನೆಗೆಟಿವ್‌ ಸಾಲುಗಳೇ ತುಂಬಿವೆ. ದಯವಿಟ್ಟು ರೀಲ್ಸ್‌ ಮಾಡುವಾಗ ಮೈ ತುಂಬಾ ಬಟ್ಟೆ ಧರಿಸಿ, ದಯವಿಟ್ಟು ಬಾತ್‌ ರೂಮ್‌ನಲ್ಲಿ ರೀಲ್ಸ್‌ ಮಾಡೋದನ್ನು ನಿಲ್ಲಿಸಿ, ಲೈಕ್‌, ಕಾಮೆಂಟ್‌ಗೋಸ್ಕರ ಈ ರೀತಿ ಲೀಲ್ಸ್‌ ಮಾಡೋದು ಅವಶ್ಯಕತೆ ಇದೆಯಾ? ಎತ್ತ ಹುಡುಕಿದರೂ ಒಂದೊಳ್ಳೆ ಕಾಮೆಂಟ್‌ ಸಿಗ್ತಿಲ್ಲ ಎಂದೆಲ್ಲಾ ಜನರು ಕಾಮೆಂಟ್‌ ಮಾಡುತ್ತಿದ್ದಾರೆ.

    ಇದಕ್ಕೂ ಮುನ್ನ ನಿವೇದಿತಾ ಈ ರೀತಿಯ ಕಾಮೆಂಟ್‌ಗಳನ್ನು ಎದುರಿಸಿದರೂ ಆಕೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಹೊಸ ಹೊಸ ರೀಲ್ಸ್‌ ಮಾಡಿ ಹಂಚಿಕೊಳ್ಳುತ್ತಲೇ ಇದ್ದಾರೆ.

    BIG BOSS

    ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಹೆಸರು ಘೋಷಣೆ- ಯಾರದು?

    Published

    on

    ಬಿಗ್ ಬಾಸ್ ಕನ್ನಡ 11ಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದೇ ಸೆ.29ಕ್ಕೆ ಶೋ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಹೀಗಿರುವಾಗ ಪ್ರೇಕ್ಷಕರಿಗೊಂದು ಸಿಹಿಸುದ್ದಿ ಸಿಕ್ಕಿದೆ. ದೊಡ್ಮನೆ ಆಟ ಶುರುವಾಗುವ ಮೊದಲೇ ಬಿಗ್ ಬಾಸ್ ಗೆ ಕಾಲಿಡುವ ಸ್ಪರ್ಧಿಯ ಹೆಸರನ್ನು ರಿವೀಲ್ ಮಾಡಲಿದೆ ವಾಹಿನಿ.

     

    ಹೌದು, ಬಿಗ್ ಬಾಸ್ ಲಾಂಚ್ ಗೂ ಮೊದಲೇ‌ ಕಂಟೆಸ್ಟೆಂಟ್ ಗಳ ಹೆಸರನ್ನು ರಿವೀಲ್ ಮಾಡುವ ಪ್ಲ್ಯಾನ್ ಇದೆ ಎಂದು ಕಲರ್ಸ್ ವಾಹಿನಿಯ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ತಿಳಿಸಿದ್ದಾರೆ. ಸೆ.28ರಂದು ಸಂಜೆ 6ಕ್ಕೆ ‘ರಾಜಾ ರಾಣಿ ರೀಲೋಡ್’ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದು, ಇದರಲ್ಲಿ ಕೆಲ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡೋದಾಗಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಬಿಗ್ ಬಾಸ್ ಲಾಂಚ್ ಗಿಂತ ಮೊದಲೇ ಸ್ಪರ್ಧಿಗಳ ಹೆಸರು ರಿವೀಲ್ ಆಗುತ್ತಿರೋದು ಈ ಸೀಸನ್ ಸ್ಪೆಷಾಲಿಟಿ ಎಂದಿದ್ದಾರೆ. ಕಳೆದ ಸೀಸನ್ ಗಿಂತ ಭಿನ್ನವಾಗಿರುವ ಸ್ಪರ್ಧಿಗಳೇ ಬರಲಿದ್ದಾರೆ ಎಂದು ತಿಳಿಸಿದ್ದಾರೆ.

    ಇನ್ನು ಸೆ.29ರಂದು ಸಂಜೆ 6ಕ್ಕೆ ಗ್ರ್ಯಾಂಡ್ ಆಗಿ ಲಾಂಚ್ ಆಗುತ್ತಿದ್ದು, ಪ್ರತಿದಿನ ರಾತ್ರಿ 9:30ಕ್ಕೆ ಶೋ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ. ಕಿಚ್ಚನ ನಯಾ ಖದರ್ ನೋಡೋಕೆ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.

    Continue Reading

    BIG BOSS

    Bigg Boss Kannada 11: ದೊಡ್ಮನೆಯಲ್ಲಿ ಸ್ವರ್ಗ, ನರಕ ಎನ್ನುವ ಎರಡು ಥೀಮ್

    Published

    on

    ‘ಬಿಗ್ ಬಾಸ್ ಕನ್ನಡ 11’ಕ್ಕೆ ಕೌಂಟ್ ಡೌನ್ ಶುರುವಾಗಿದೆ. ದೊಡ್ಮನೆ 2ನೇ ಪ್ರೋಮೋ ರಿಲೀಸ್ ಆಗಿ ಮೆಚ್ಚುಗೆ ಗಳಿಸಿತ್ತು. ಈ ಬಾರಿ ಬಿಗ್ ಬಾಸ್‌ನಲ್ಲಿ ಸ್ವರ್ಗ ಮತ್ತು ನರಕ ಎಂದು ಥೀಮ್ ಇರಲಿದೆ ಎಂದು ಸುದೀಪ್‌ ಇಂಟರೆಸ್ಟಿಂಗ್ ಮಾಹಿತಿ  ತಿಳಿಸಿದ್ದಾರೆ.

    ನಾವು ಮಾಡಿ ಕಳುಹಿಸಲಿಲ್ಲ ಅಂದರೆ ಒಳಗೆ ಹೋಗಿರುವ ಸ್ಪರ್ಧಿಗಳೇ ಟೀಮ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡುವಾಗಲೇ 2 ತಂಡ ಮಾಡುವುದೇ ಈ ಸೀಸನ್‌ನ ಸ್ಪೆಷಾಲಿಟಿ ಎಂದು ಸುದೀಪ್ ತಿಳಿಸಿದರು.

    ಕಳೆದ ಬಾರಿ ಬಿಗ್ ಬಾಸ್ ಸೀಸನ್ 10 ಪ್ರಾರಂಭವಾದ ವೇಳೆ, ಸ್ಪರ್ಧಿಗಳಿಗೆ ಸಮರ್ಥರು ಮತ್ತು ಅಸಮರ್ಥರು ಎಂದು ಪರಿಗಣಿಸಿ ತಂಡಗಳಾಗಿ ವಿಂಗಡಿಸಿದ್ದರು. ಅದರಂತೆಯೇ ಈ ಬಾರಿಯು ಕೂಡ ಹೊಸ ರೀತಿಯಲ್ಲಿ ಸ್ವರ್ಗ ಮತ್ತು ನರಕ ಎಂದು ಎರಡು ತಂಡ ಮಾಡಿ ಸ್ಪರ್ಧಿಗಳನ್ನು ಕಳುಹಿಸಲಾಗುತ್ತದೆ.

    ಸುದೀಪ್ ನಿರೂಪಣೆಯಲ್ಲಿ ಇದೇ ಸೆ.29ಕ್ಕೆ ಬಿಗ್ ಬಾಸ್ ಗ್ರ್ಯಾಂಡ್ ಆಗಿ ಲಾಂಚ್ ಆಗುತ್ತಿದೆ. ಪ್ರತಿದಿನ ರಾತ್ರಿ 9:30ಕ್ಕೆ ಶೋ ಪ್ರಸಾರವಾಗಲಿದೆ.

    Continue Reading

    FILM

    ಟಾಲಿವುಡ್‌ ಮೆಗಾಸ್ಟಾರ್‌ಗೆ ಗಿನ್ನಿಸ್ ವಿಶ್ವದಾಖಲೆಯ ಗೌರವ

    Published

    on

    ಹೈದರಾಬಾದ್/ಮಂಗಳೂರು: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸರ್ಜಾ ಅವರ ನೃತ್ಯಗಳಿಗಾಗಿ ಕ್ರಿಯಾತ್ಮಕ ತಾರೆ ಎಂಬ ಬಿರುದಿನೊಂದಿಗೆ ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದ್ದಾರೆ. ಚಿರಂಜೀವಿ ತಮ್ಮ ಚಿತ್ರಗಳಲ್ಲಿ ಪ್ರದರ್ಶಿಸಿರುವ ನೃತ್ಯಗಳಿಗಾಗಿ ಭಾರತೀಯ ಚಲನಚಿತ್ರೋದ್ಯಮ ಅತ್ಯಂತ ಕ್ರಿಯಾತ್ಮಕ ತಾರೆ ಎಂದು ಗಿನ್ನಿಸ್ ವಿಶ್ವದಾಖಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ.

    ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ಅವರು ಈ ಕ್ಷಣ ಅವಿಸ್ಮರಣೀಯವಾಗಿದೆ. ನನ್ನ ನೃತ್ಯಕ್ಕೆ ವಿಶ್ವ ದಾಖಲೆಯನ್ನು ಪಡೆದುಕೊಳ್ಳುತ್ತೇನೆ ಎಂದು ನಾನು ಭಾವಿಸಿರಲಿಲ್ಲ. ಇದು ನಿಜವಾಗಿಯೂ ನನ್ನನ್ನು ನಟನಾಗಿ ಮಾಡಿದೆ. ನೃತ್ಯವೂ ನನ್ನ ವೃತ್ತಿ ಜೀವನದುದ್ದಕ್ಕೂ ನನಗೆ ಪ್ರಶಂಸೆಯನ್ನು ತಂದುಕೊಟ್ಟಿದೆ. ಸಾವಿತ್ರಿಯಂತಹ ದಂತಕಥೆಯುಳ್ಳ ನಾಯಕಿಯರೊಂದಿಗೆ ಪರದೆ ಮೇಲೆ ಕಾಣಿಸಿಕೊಂಡಿದ್ದು ಸಿನೆಮಾದಲ್ಲಿ ಅವರ ಜತೆ ಹೆಜ್ಜೆ ಹಾಕಿದ್ದು ಎಲ್ಲವನ್ನೂ ಸದಾ ನೆನಪಿಸಿಕೊಳ್ಳುತ್ತೇನೆ. ನನ್ನನ್ನು ನಟನಾಗಿ ಮಾಡಲು ನಿರ್ದೇಶಕರು, ನಿರ್ಮಾಪಕರು, ನೃತ್ಯ ಸಂಯೋಜಕರ ಪ್ರಯತ್ನ ಅಪಾರವಾಗಿದೆ. ಇವರೆಲ್ಲರಿಗೂ ನಾನು ಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.

    ‘ಬಿಗ್ ಬಾಸ್’ ಟೀಮ್ ಜೊತೆ ಅಪ್‌ಡೇಟ್ ಹೊತ್ತು ತರುತ್ತಿದ್ದಾರೆ ಸುದೀಪ್- ಏನದು?

    ನಟ ಚಿರಂಜೀವಿ 45 ವರ್ಷಗಳ ಸಿನಿ ಪ್ರಯಾಣದಲ್ಲಿ 156 ಚಿತ್ರಗಳಲ್ಲಿ ಅಭಿನಯಿಸಿದ್ದು, 537 ಹಾಡುಗಳಲ್ಲಿ 24,000 ಡ್ಯಾನ್ಸ್‌ ಸ್ಟಪ್ ಹಾಕಿದ್ದಾರೆ.

    Continue Reading

    LATEST NEWS

    Trending