Wednesday, December 1, 2021

ಬಂಟ್ವಾಳ: ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ‘ಪುದ್ವಾರ್‌ ಅಗೇಲು ಸೇವೆ’

ಬಂಟ್ವಾಳ: ಕಾರಣೀಕ ಕ್ಷೇತ್ರವಾದ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ನಿನ್ನೆ ಹೊಸ ಅಕ್ಕಿ ಅಗೇಲು ಸೇವೆ ನಡೆಯಿತು.
ಅನಾದಿಕಾಲದಿಂದಲೂ ಅಚರಿಸಿಕೊಂಡು ಬಂದಂತೆ ಕಾವೇರಿ ಸಂಕ್ರಮಣದ ದಿನದಂದು ಪಣೋಲಿಬೈಲು ಕಲ್ಲುರ್ಟಿ ದೈವಕ್ಕೆ ಪುದ್ವಾರ್‌ ಅಗೇಲು ನಡೆಯುತ್ತಿತ್ತು.


ಕಾವೇರಿ ಸಂಕ್ರಮಣದಂದು ದೈವಕ್ಕೆ ಹೊಸ ಅಕ್ಕಿಯಲ್ಲಿ ಅಗೇಲು ಸೇವೆಗಾಗಿ ಊರಿನ ಎಲ್ಲರೂ ಅಗೇಲು ನೀಡುವುದು ವಾಡಿಕೆ ಯಾಗಿತ್ತು.

ಇಂದು ಸುಮಾರು 1300 ಅಗೇಲು ನಡೆದಿದೆ ಎಂದು ಇಲ್ಲಿನ ದೈವದ ಅರ್ಚಕ ರಾದ ವಾಸು ಮೂಲ್ಯ ಮತ್ತು ರಮೇಶ್ ಮೂಲ್ಯ ಮತ್ತು ಮೋನಪ್ಪ ಮೂಲ್ಯ  ತಿಳಿಸಿದ್ದಾರೆ.
ಊರಿನವರು ತರಕಾರಿಗಳನ್ನು ಅಗೇಲು ರೂಪದಲ್ಲಿ ನೀಡುತ್ತಾರೆ. ವಿಶೇಷ ವೆಂದರೆ ಕಲ್ಲುರ್ಟಿ ದೈವಕ್ಕೆ ಕೋಳಿ ಪದಾರ್ಥದಲ್ಲಿ ಅಗೇಲು ಸೇವೆ ನೀಡಿದರೆ,

ಹೊಸ ಅಕ್ಕಿ ಅಗೇಲು ಸಂದರ್ಭದಲ್ಲಿ  ಕೋಳಿ ಪದಾರ್ಥದ ಜೊತೆಯಲ್ಲಿ ವಿವಿಧ ಬಗೆಯ ತರಕಾರಿ ಪದಾರ್ಥಗಳನ್ನು ಮಾಡಿ ಬಡಿಸಲಾಗುತ್ತದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...