Connect with us

    DAKSHINA KANNADA

    ದ.ಕ ಜಿಲ್ಲೆಯಲ್ಲಿ ಫೆ.15 ರವರೆಗೆ ನೈಟ್ ಕರ್ಫ್ಯೂ ಹಿಂದಕ್ಕೆ-ಜಿಲ್ಲಾಧಿಕಾರಿ ಆದೇಶ

    Published

    on

    ಮಂಗಳೂರು: ಸಾರ್ವಜನಿಕ ಹಿತದೃಷ್ಟಿಯಿಂದ ಕೋವಿಡ್ ಸೋಂಕಿನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ  ಕಾಯ್ದೆಯಡಿ ಫೆಬ್ರವರಿ 15ರವರೆಗೆ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ನು ಜಾರಿಗೊಳಿಸಿ ಜಿಲ್ಲಾದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ  ಅವರು ಆದೇಶಿಸಿದ್ದಾರೆ.

    ಜಿಲ್ಲೆಯಾದ್ಯಂತ  ಜನವರಿ 31ರಿಂದ  ಜಾರಿಗೆ ಬರುವಂತೆ ಪ್ರತಿ ರಾತ್ರಿ 10ರಿಂದ  ಬೆಳಿಗ್ಗೆ  5 ಗಂಟೆಯವರೆಗೆ ವಿಧಿಸಲಾಗಿದ್ದ ರಾತ್ರಿ ಕರ್ಫ್ಯೂವನ್ನು ಹಿಂಪಡೆಯಲಾಗಿದೆ.

    2  ಡೋಸ್ ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾತ್ರ   ಪಬ್,  ಕ್ಲಬ್,  ಬಾರ್,  ರೆಸ್ಟೋರೆಂಟ್, ಹೋಟೆಲ್ ಗಳು  ಹಾಗೂ  ಹೋಟೆಲ್ ಗಳಲ್ಲಿ ತಿನ್ನುವ ಸ್ಥಳಗಳಿಗೆ ಶೇ. 100 ರಷ್ಟು  ಆಸನ   ವ್ಯವಸ್ಥೆಗೆ  ಅನುಮತಿ   ನೀಡಲಾಗಿದೆ.

    ರಾಜ್ಯ ಸರ್ಕಾರದ ಚಾಲ್ತಿಯಲ್ಲಿರುವ ಮಾರ್ಗಸೂಚಿಯಂತೆ ಮದುವೆ  ಸಮಾರಂಭಗಳಿಗೆ ತೆರೆದ ಸ್ಥಳದಲ್ಲಿ 300 ಜನರಿಗೆ ಮತ್ತು   ಒಳಾಂಗಣದಲ್ಲಿ 200 ಜನರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

    ಚಿತ್ರಮಂದಿರ,  ಮಲ್ಟಿಪ್ಲೆಕ್ಸ್,  ರಂಗಮಂದಿರ,  ಸಭಾಭವನಗಳಲ್ಲಿ ಶೇಕಡ 50 ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ.

    ದೇವಾಲಯಗಳಲ್ಲಿ ದರ್ಶನ ಮತ್ತು ಸೇವೆಗೆ ಅವಕಾಶ ಒಮ್ಮೆಗೆ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

    ರಾಲಿ,  ಧರಣಿ,  ಸಮಾವೇಶ,  ಸಾಮಾಜಿಕ,  ಧಾರ್ಮಿಕ   ಮತ್ತು ರಾಜಕೀಯ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ.

    ಕ್ರೀಡಾ ಸಂಕೀರ್ಣ, ಸ್ಟೇಡಿಯಂ, ಈಜುಕೊಳ  ಮತ್ತು ಜಿಮ್ ಗಳಲ್ಲಿ ಶೇಕಡ 50 ರಷ್ಟು   ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.

    ಸರ್ಕಾರಿ ಕಚೇರಿಗಳಲ್ಲಿ ಶೇಕಡ 100 ರಷ್ಟು  ಎಲ್ಲಾ ನೌಕರರು  ಕಡ್ಡಾಯವಾಗಿ  ಹಾಜರಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರ  ಹೊರಡಿಸಿದ  ಮಾರ್ಗಸೂಚಿಗಳನ್ವಯ ಕೇರಳ ರಾಜ್ಯದಿಂದ ಜಿಲ್ಲೆಗೆ ಪ್ರವೇಶ ಕಲ್ಪಿಸುವ ಗಡಿಭಾಗಗಳಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಚೆಕ್ ಪೋಸ್ಟ್ ಗಳಲ್ಲಿ    ತೀವ್ರ ಕಣ್ಗಾವಲು  ಮತ್ತು  ತಪಾಸಣೆ ಕಾರ್ಯವನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

     

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಕಾರ್ಕಳದಲ್ಲಿ ಭೀಕರ ಅಪಘಾತ; ತಂದೆ ಸಹಿತ ಮೂರು ಮಕ್ಕಳ ದುರ್ಮರಣ

    Published

    on

    ಕಾರ್ಕಳ : ಕಾರ್ಕಳ – ಧರ್ಮಸ್ಥಳ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಬಳಿ ಇಂದು (ಸೆ.30) ಭೀಕರ ಅಪಘಾತ ಸಂಭವಿಸಿದೆ. ಮಿನಿ ಲಾರಿ ಮತ್ತು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.


    ವೇಣೂರಿನಿಂದ ನಲ್ಲೂರು ಕಡೆಗೆ ಬರುತ್ತಿದ್ದ ಬೈಕ್‌ಗೆ ಕಾರ್ಕಳದಿಂದ ಗುರುವಾಯನಕೆರೆಯತ್ತ ಸಾಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.
    ಬೈಕ್ನಲ್ಲಿ ಪತಿ, ಪತ್ನಿ ಮತ್ತು ಮೂವರು ಮಕ್ಕಳಿದ್ದರು. ತಂದೆ ಸುರೇಶ್ ಆಚಾರ್ಯ (36), ಮಕ್ಕಳಾದ ಸಮಿಕ್ಷಾ (7) ಸುಶ್ಮಿತಾ (5) ಸುಶಾಂತ್ (2) ಮೃತಪಟ್ಟವರು. ತಾಯಿ ಮೀನಾಕ್ಷಿ (32) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಡೆ*ತ್ ನೋಟ್ ಬರೆದು ನೇ*ಣಿಗೆ ಶರಣಾದ ವಿದ್ಯಾರ್ಥಿನಿ !!

    Published

    on

    ಮುಲ್ಕಿ: ಸಣ್ಣ ಸಣ್ಣ ಕಾರಣಗಳಿಗೆ ವಿದ್ಯಾರ್ಥಿಗಳು ಸಾ*ವಿನ ಹಾದಿಯನ್ನಿಡಿಯುವ ಅದೆಷ್ಟೋ ಘಟನೆಗಳು ನಡೆಯುತ್ತಿವೆ. ಇದೀಗ ಅಂತಹದ್ದೇ ಒಂದು ಪ್ರಕರಣ ದಾಖಲಾಗಿದ್ದು, ಡೆ*ತ್ ನೋ*ಟ್ ಬರೆದಿಟ್ಟು ವಿದ್ಯಾರ್ಥಿನಿ ನೇ*ಣಿಗೆ ಶರಣಾಗಿರುವ ಘಟನೆ ಮುಲ್ಕಿ ಸಮೀಪದ ಅತಿಕಾರಿಬೆಟ್ಟು ರೈಲ್ವೆ ಗೇಟ್ ಬಳಿಯ ಕ್ವಾಟರ್ಸ್‌ನಲ್ಲಿ ನಡೆದಿದೆ.


    ಕೊಂಕಣ ರೈಲ್ವೆ ಗೇಟ್ ಸಿಬ್ಬಂದಿ ಮಹೇಶ್ ನಾಯಕ್ ಎಂಬವರ ಪುತ್ರಿ ಉಜ್ವಲ (17) ಶನಿವಾರ (ಸೆ.28) ಸಂಜೆ ರೈಲ್ವೇ ಕ್ವಾಟರ್ಸ್‌ನ ಮನೆಯ ಎದುರು ಬದಿಯ ಕೋಣೆಯಲ್ಲಿ ಡೆ*ತ್ ನೋಟ್ ಬರೆದಿಟ್ಟು ಪ್ಯಾನ್‌ಗೆ ನೇ*ಣು ಬಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ.
    ಉಜ್ವಲ ಮುಲ್ಕಿ ವಿಜಯ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಕಾಲೇಜಿನಲ್ಲಿ ನಡೆದ ಮೀಟಿಂಗ್ ಮುಗಿದ ಬಳಿಕ ಮನೆ ಕಡೆ ಬಂದಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಏಕಾ ಏಕಿ ಈ ಕೃ*ತ್ಯ ಎಸಗಿದ್ದಾಳೆ.
    ಆತ್ಮ*ಹತ್ಯೆ ಸಂದರ್ಭ ತಂದೆ ಮಹೇಶ್ ನಾಯಕ್ ಮೈಲೊಟ್ಟು ರೈಲ್ವೇ ಗೇಟ್ ಬಳಿ ಕರ್ತವ್ಯಕ್ಕೆ ಹೋಗಿದ್ದರು. ತಾಯಿ ತನ್ನ ಊರಾದ ಭಟ್ಕಳಕ್ಕೆ ತೆರಳಿದ್ದರು. ಮೃತಳ ಅಣ್ಣ ಮುಕ್ಕ ಕಾಲೇಜಿನಲ್ಲಿ ಕಲಿಯುತ್ತಿದ್ದು ಕಾಲೇಜು ಮುಗಿಸಿ ಸಂಜೆ 6:30 ಗಂಟೆ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಡೆತ್‌ ನೋಟ್‌ನಲ್ಲಿ ಏನಿದೆ?
    ಮೃತಳ ರೂಮ್‌ನಲ್ಲಿದ್ದ ಡೆ*ತ್ ನೋಟಲ್ಲಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಕೆಯ ಬಗ್ಗೆ ಬರೆದಿದ್ದಾಳೆ. ತೋಟದ ಮನೆಯಲ್ಲಿ ಅಂತಿಮ ಕ್ರಿಯೆ ನಡೆಯಬೇಕು ಎಂಬುವುದಾಗಿಯೂ ಉಲ್ಲೇಖಿಸಿದ್ದಾಳೆ.
    ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಹಾವು ಕಡಿತಕ್ಕೆ ಒಳಗಾದ ಯುವಕ..! ಸ್ಕೂಟರ್ ಸೀಟ್ ಅಡಿಯಲ್ಲಿತ್ತು ವಿಷಕಾರಿ ಹಾವು..!

    Published

    on

    ಮಂಗಳೂರು : ಸ್ಕೂಟರ್ ಸೀಟಿನ ಕೆಳಗೆ ಇದ್ದ ಹಾವೊಂದು ಸ್ಕೂಟರ್ ಸವಾರಿನಿಗೆ ಕಚ್ಚಿದ ಘಟನೆ ಮಂಗಳೂರು ಹೊರವಲಯದ ಗುರುಪುರದ ಬಳಿಯ ಕೈಕಂಬದಲ್ಲಿ ನಡೆದಿದೆ. ಕುಪ್ಪೆಪದವು ಎಂಬಲ್ಲಿ ಸೈಬರ್ ಸೆಂಟರ್ ನಡೆಸುತ್ತಿದ್ದ ಇಮ್ತಿಯಾಜ್‌ ಎಂಬವರ ಇವಿ ಸ್ಕೂಟರ್‌ ಸೀಟ್ ಒಳಗೆ ಹಾವೊಂದು ಸೇರಿಕೊಂಡಿತ್ತು.

    ಸೀಟ್ ಅಡಿಯಲ್ಲಿತ್ತು ಕೊಳಕಮಂಡಲ (ಕಂದಡಿ) ಹಾವು :

    ಇಮ್ತಿಯಾಜ್‌ ಅವರು ಸ್ಕೂಟರ್ ನಿಲ್ಲಿಸಿ ಹೋಗಿದ್ದ ವೇಳೆ ಅಪಾಯಕಾರಿ ಕೊಳಕಮಂಡಲ ಹಾವು ಇವರ ಸೀಟ್ ಅಡಿಗೆ ಸೇರಿಕೊಂಡಿದೆ. ತುಳುವಿನಲ್ಲಿ ಕಂದಡಿ ಅಥವಾ ಕಂದೊಡಿ, ಎಂದು ಕರೆಯುವ ಈ ಹಾವು ವಿಷಕಾರಿಯಾಗಿದ್ದು, ಇದು ಕಚ್ಚಿದ ಭಾಗ ಕೊಳೆಯಲು ಆರಂಭಿಸುತ್ತದೆ. ಸೆಪ್ಟಂಬರ್ 27 ರಂದು ಇಮ್ತಿಯಾಜ್‌ ಅವರು ಕೆಲಸ ಮುಗಿಸಿ ರಾತ್ರಿ ವೇಳೆ ಮನೆಗೆ ತೆರಳಲು ಸಿದ್ಧತೆ ನಡೆಸಿದ್ದ ವೇಳೆ ಈ ವಿಷಕಾರಿ ಹಾವಿನ ಕಡಿತಕ್ಕೆ ಒಳಗಾಗಿದ್ದಾರೆ. ಸೀಟ್ ಮೇಲೆತ್ತಿ ಕಾಗದ ಪತ್ರಗಳನ್ನು ಒಳಗೆ ಇರಿಸುವ ವೇಳೆ ಅಲ್ಲಿ ಹಾಯಾಗಿ ಮಲಗಿದ್ದ ಈ ಹಾವು ಇಮ್ತಿಯಾಜ್ ಅವರ ಕೈಗೆ ಕಚ್ಚಿದೆ.


    ತಕ್ಷಣವೇ ಇಮ್ತಿಯಾಜ್ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲಾಗಿದ್ದು, ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೊಳಕ ಮಂಡಲ ಹಾವು ವಿಷಕಾರಿಯಾಗಿದ್ದರೂ ತಕ್ಷಣ ಸೂಕ್ತ ಚಿಕಿತ್ಸೆ ದೊರೆತರೆ ಜೀವಕ್ಕೆ ಯಾವುದೇ ಅಪಾಯ ಉಂಟಾಗುವುದಿಲ್ಲ.

    Continue Reading

    LATEST NEWS

    Trending