Connect with us

    BELTHANGADY

    ಹೊಸ ರೂಪದಲ್ಲಿ ಕಣ್ಮನ ಸೆಳೆದ ಧರ್ಮಸ್ಥಳದ ದೊಂಡೋಲೆ ಜಂಕ್ಷನ್‌

    Published

    on

    ಧರ್ಮಸ್ಥಳ: ಕಳೆದ ಕೆಲವು ವರ್ಷಗಳಿಂದ ಧರ್ಮಸ್ಥಳ ಗ್ರಾಮದ ದೊಂಡೋಲೆಯ ಈ ಜಂಕ್ಷನ್‌ನಲ್ಲಿ ಒಂದು ಸಣ್ಣ ಧ್ವಜ ಸ್ತಂಭ, ಅದರಲ್ಲಿ ಕೇಸರಿ ಧ್ವಜವಿತ್ತು. ಆದರೆ ಇದೀಗ ಅದೇ ಸ್ಥಳದಲ್ಲಿ ಈ ವಾರ್ಡ್‌ನ ಗ್ರಾಮ ಪಂ. ಸದಸ್ಯ ಹಾಗೂ ಇಲ್ಲಿನ ಯುವಕರ ಶ್ರಮದಿಂದ ಸುಂದರ ಗಾರ್ಡನ್‌ ಜೊತೆಗೆ ಅತೀ ಎತ್ತರ ಹಾಗೂ ಆಕರ್ಷಕ ಧ್ವಜ ಸ್ತಂಭವನ್ನು ನಿರ್ಮಿಸಲಾಗಿದೆ. ಇಷ್ಟೇ ಅಲ್ಲದೆ ನಗರಗಳ ಸರ್ಕಲ್‌ಗಳಲ್ಲಿ ಕಂಡು ಬರುವ ಹೈ ಮಾಸ್ಕ್‌ ಲೈಟ್‌ ಕೂಡ ಅಳವಡಿಸಲಾಗಿದ್ದು ಜನರನ್ನು ಒಂದು ಬಾರಿ ಕಣ್ಮನ ಸೆಳೆಯುತ್ತಿದೆ.

    ಹೌದು, ಈ ಊರಿನ ಏಳಿಗೆಗಾಗಿ ದುಡಿದಿದ್ದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ದಿವಂಗತ ಕೆ ಶಶಿಧರ್ ರಾವ್ ಅವರ ಸ್ಮರಣಾರ್ಥವಾಗಿ ಸುಂದರ ವೃತ್ತವನ್ನು ನಿರ್ಮಿಸಲಾಗಿದ್ದು, ಇಂದು ಇದರ ಉದ್ಘಾಟನಾ ಕಾರ್ಯಕ್ರಮ ನೆರೆವೇರಿತು.

    ವೃತ್ತ ಹಾಗೂ ಹೈ ಮಾಸ್ಟ್ ದೀಪವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು, ಶಶಿಧರ್ ರಾವ್ ಅವರು ಸಾಮಾಜಿಕ ಚಿಂತಕರಾಗಿದ್ರು, ಸದಾ ಸಮಾಜದ ಬಗ್ಗೆ ಕಾಳಜಿ ಹೊಂದಿದವರಾಗಿದ್ರು. ಅವರ ನೆನಪಿನಲ್ಲಿ ವೃತ್ತ ನಿರ್ಮಿಸಿರುವುದು ಶ್ಲಾಘನೀಯ ಎಂದರು. ಒಂದು ಪುಟ್ಟ ಊರಿನಲ್ಲಿ ನಗರದ ರೀತಿಯಲ್ಲಿ ನಿರ್ಮಿಸಲಾಗಿರುವುದು ಇದೇ ಮೊದಲ, ಈ ಕಾರ್ಯ ಮಾಡಿದ ಸದಸ್ಯ ಸುಧಾಕರ್‌ ಗೌಡ ಹಾಗೂ ಯುವಕಲರಿಗೆ ಅಭಿನಂದನೆ ಸಲ್ಲಿಸಿದರು.

    ಸದಸ್ಯ, ಯುವಕರ ಪರಿಶ್ರಮ
    ಸಣ್ಣ ಮಟ್ಟದ ವೃತ್ತ ಈಗ ಸುಂದರ ವೃತ್ತವಾಗಿ ಬದಲಾಗಲು ಕಾರಣ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ ಹಾಗೂ ಯುವಕರು. ಹೌದು, ಸಂಜೆ ಹೊತ್ತು ಕೊಂಚ ಕೊಂಚವೇ ವೃತ್ತದ ಕೆಲಸವನ್ನು ಮಾಡುತ್ತಿದ್ದ ಯುವಕರು ಅದಕ್ಕೊಂದು ರೂಪ ಕೊಟ್ಟರು. ಇವರಿಗೆ ಕೆಲವೊಂದು ದಾನಿಗಳು ಸಾಥ್‌ ನೀಡಿದರು, ಈ ಮೂಲಕ ಸುಂದರ ಗಾರ್ಡನ್‌ ಇರುವ ಹೈ ಮಾಸ್ಕ್‌ ಲೈಟ್‌ ಹೊಂದಿರುವ ವೃತ್ತವೊಂದು ತಯಾರಾಯ್ತು.

    ಉದ್ಘಾಟನಾ ಕಾರ್ಯಕ್ರಮದ ವೇಳೆ ದೊಂಡೋಲೆ ವೃತ್ತ ನಿರ್ಮಾಣದಲ್ಲಿ ಮೇಸ್ತ್ರಿ ಕೆಲಸ ನಿರ್ವಹಿಸಿದ ಜಯಪ್ರಕಾಶ್, ಸುತ್ತಲಿನ ಕಬ್ಬಿಣದ ಬೇಲಿ ನಿರ್ಮಿಸಿದ ವಿಶ್ವನಾಥ್ ಆಚಾರ್ಯ ಮತ್ತು ಪೈಂಟ್ ಮಾಡಿದ ಹರೀಶ್ ರನ್ನು ಸನ್ಮಾನಿಸಲಾಯ್ತು. ಇದೇ ವೇಳೆ ಈ ಕಾರ್ಯಕ್ರಮದ ರೂವಾರಿ ಸುಧಾಕರ್ ಗೌಡರನ್ನು ಕೂಡ ಊರಿನ ಯುವಕರು ಸನ್ಮಾನಿಸಿ ಗೌರವಿಸಿದರು.

    ಮಳೆಯ ನಡುವೆಯೆ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಶಶಿಧರ್ ರಾವ್ ಸಹೋದರರಾದ ಅನಂತ್ ರಾವ್ ಚಾರ್ಮಾಡಿ, ಪುರಂದರ ರಾವ್ ದೊಂಡೋಲೆ, ಮಕ್ಕಳಾದ ಅಜೇಯ್ ರಾವ್, ರಂಜನಿ ಹೊಳ್ಳ , ಸಂಬಂಧಿ ಸೂರ್ಯನಾರಾಯಣ ರಾವ್ ದೊಂಡೋಲೆ, ಸ್ಥಳೀಯರಾದ ಸತ್ಯಪ್ರಿಯ ಭಟ್, ಶ್ರೀನಿವಾಸ್ ಭಟ್, ದಿನೇಶ್ ರಾವ್, ನಿತಿನ್,ಮನೋಹರ್,ಮಧುಕರ್,ಶಿವ,ನವೀನ್,ಡಿ.ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

    BELTHANGADY

    ಹಿರಿಯ ಸಾಹಿತಿ, ವಿಶ್ರಾಂತ ಪ್ರಧ್ಯಾಪಕ ಪ್ರೊ. ಎನ್.ಜಿ ಪಟವರ್ಧನ್ ಅಸ್ತಂಗತ

    Published

    on

    ಬೆಳ್ತಂಗಡಿ; ತಾಲೂಕಿನ ಹಿರಿಯ ಸಾಹಿತಿ, ಉಜಿರೆ ಎಸ್ ಡಿ ಎಂ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಎನ್ ಜಿ ಪಟವರ್ಧನ್ ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಜು.1 ರಂದು ಕೊನೆಯುಸಿರೆಳೆದಿದ್ದಾರೆ.

    ಮುಂಡಾಜೆ ಗ್ರಾಮದ ಮೂಲಾರು ಎಂಬಲ್ಲಿ ಮೂಲ ಮನೆ ಹೊಂದಿದ್ದ‌ ಅವರು ಕಳೆದ ಅನೇಕ ವರ್ಷಗಳಿಂದ ಉಜಿರೆಯಲ್ಲಿ ನೆಲೆಸಿದ್ದರು.
    ಚಿತ್ಪಾವನ ಸಮಾಜದ ಹಿರಿಯರೂ ಆಗಿದ್ದ ಅವರು ಹಲವು ಕಥೆ, ಕವನ, ವಿಮರ್ಷೆ ರಚನಾಕರ್ತರಾಗಿದ್ದರು‌. ಅವರ ಹಲವು ಕೃತಿಗಳು ಸಾಹಿತ್ಯ ಲೋಕಕ್ಕೆ ಸಮರ್ಪಿತ ವಾಗಿತ್ತು.
    ಉತ್ತಮ ಶೋತೃ ಹಾಗೂ ಸಾಹಿತ್ಯ ವಿಷಯಾಸಕ್ತಿ ಹೊಂದಿದ್ದ ಅವರು ಹಲವಾರು ಯುವ ಬರಹಗಾರರ ಬರಹಗಳ ಬಗ್ಗೆ ವಿಮರ್ಷೆ ಬರೆದು ಆ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಬೆಳ್ತಂಗಡಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ತಾಲೂಕು ಮಟ್ಟದ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ದೀರ್ಘ ವರ್ಷ ಅಂಕಣಗಳನ್ನೂ ಪ್ರಕಟಿಸುತ್ತಿದ್ದರು.

    Continue Reading

    BELTHANGADY

    ಅನಂತಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಕೊಕ್ಕಡ ಸತ್ಯನಾರಾಯಣ ತೋಡ್ತಿಲ್ಲಾಯ

    Published

    on

    ಬೆಳ್ತಂಗಡಿ:  ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ತಿರುವನಂತಪುರದ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸತ್ಯನಾರಾಯಣ (ನಾಗೇಶ) ತೋಡ್ತಿಲ್ಲಾಯ ಜೂ.16ರಂದು ನೇಮಕಗೊಂಡಿದ್ದಾರೆ.

    ಇವರು ಮೂಲತಃ ಕೊಕ್ಕಡ ಗ್ರಾಮದ ಬಡೆಕ್ಕರ ನಿವಾಸಿಯಾಗಿದ್ದು, ದಿ. ಸುಬ್ರಾಯ ತೋಡ್ತಿಲ್ಲಾಯ ಮತ್ತು ದಿ.ಯಶೋಧ ದಂಪತಿ ಪುತ್ರರಾಗಿದ್ದಾರೆ. ಹಿಂದೆ ಸುಬ್ರಾಯ ತೋಡ್ತಿಲ್ಲಾಯರು ಕೂಡ ಇದೇ ದೇವಸ್ಥಾನದಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
    ಅವರ ಅಜ್ಜ ದಿ.ನಾರಾಯಣ ತೋಡ್ತಿಲ್ಲಾಯರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಲವು ವರ್ಷಗಳ ಕಾಲ ಪೂಜಾ ಸೇವೆಯನ್ನು ಸಲ್ಲಿಸಿದ್ದರು.

    Read More..; ದೇವಸ್ಥಾನದ ಗೋಶಾಲೆಯಿಂದ ಗೋ ಕಳವಿಗೆ ಯತ್ನ..!

    ಪಾಲಾಲೆ ದಿ. ಸತೀಶ ಯಡಪಡಿತ್ತಾಯರಲ್ಲಿ ವೇದ ಅಭ್ಯಾಸವನ್ನು ಮಾಡಿದ್ದ ಸತ್ಯನಾರಾಯಣ ತೋಡ್ತಿಲ್ಲಾಯರು ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಪೂಜಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ ಸ್ನೇಹ ಹಾಗೂ ಪುತ್ರ ಸೌರಭ್ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.

    ಅಕ್ಕರ ದೇಸಿ ಸಮುದಾಯ ಸಂಘವು ಸತ್ಯನಾರಾಯಣರವರ ನೇಮಕಕ್ಕೆ ಶಿಫಾರಸು ಮಾಡಿತ್ತು. ಕೊಕ್ಕಡದ ಎಡಪಡಿತ್ತಾಯ, ಬಾಳ್ತಿಲ್ಲಾಯ, ಶಬರಾಯ, ಉಪ್ಪಾರ್ಣ, ತೋಡ್ತಿಲ್ಲಾಯ ಕುಲದ ಸದಸ್ಯರಿಗೆ ಈ ಹಿಂದಿನಿಂದಲೂ ಶ್ರೀಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಹಕ್ಕು ಇದೆ.

    Continue Reading

    BELTHANGADY

    ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ ಯತ್ನ..! ಬಿಜೆಪಿ ಮುಖಂಡ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

    Published

    on

    ಬೆಳ್ತಂಗಡಿ:  ಗಲಾಟೆ ವೇಳೆ ಅಪ್ರಾಪ್ತೆ ಬಾಲಕಿ ಮೇಲೆ ಮಾನಭಂಗ ಯತ್ನಿಸಿದ್ದಾನೆ ಎಂದು ಆರೋಪಿಸಿ ಬೆಳ್ತಂಗಡಿ ಬಿಜೆಪಿ ಮಂಡಲದ ಎಸ್ ಟಿ ಮೋರ್ಚಾದ ಅಧ್ಯಕ್ಷನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮುಂದೆ ಓದಿ..; ಬೈಕ್ – ಕಾರು ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಮೃ*ತ್ಯು
    ಬೆಳ್ತಂಗಡಿ ಕಳೆಂಜ ಗ್ರಾಮದ ನಿವಾಸಿ ಬೆಳ್ತಂಗಡಿ ಬಿಜೆಪಿ ಮಂಡಲದ ಎಸ್ ಟಿ ಮೋರ್ಚಾದ ಅಧ್ಯಕ್ಷ ರಾಜೇಶ್ ಎಮ್ ಕೆ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಪೋಕ್ಸೋ ಅಡಿಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending