ಪುತ್ತೂರು : ನೆಲ್ಯಾಡಿ ಸಮೀಪದ ಉದನೆಯಲ್ಲಿ ಶ್ರೀ ಗಣೇಶ ಕಟ್ಟೆಗೆ ಕಲ್ಲು ಎತ್ತಿ ಹಾಕಿ ಹಾನಿ ಮಾಡಿರುವ ಘಟನೆಗೆ ಸಂಬಂಧಿಸಿದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಬಿಹಾರದ ಬಾಗಲ್ ಪುರ ಜಿಲ್ಲೆಯ ಗೋಪಾಲ್ ಪುರ ತಾಲೂಕಿನ ಗರ್ನಿಯ ನಿವಾಸಿ ರವೀಂದ್ರ ಕುಮಾರ್ (25) ಎಂದು ತಿಳಿದು ಬಂದಿದೆ.
ಉದನೆಯಲ್ಲಿ ನಿನ್ನೆ ಸಾರ್ವಜನಿಕ ಗಣೇಶ ಹಬ್ಬವನ್ನು ಸರಳ ರೀತಿಯಲ್ಲಿ ಅಚರಿಸಲಾಗಿತ್ತು. ಗಣೇಶ ಕಟ್ಟೆ, ಮೆಟ್ಟಿಲು ,ಅಲಂಕರಿಸಲಾಗಿದ್ದ ಬಾಳೆಗಿಡಗಳನ್ನು ರಾತ್ರಿವೇಳೆ ಹಾಳುಗೆಡವಿದ್ದರು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ 24 ಗಂಟೆಗಳಲ್ಲಿ ಅರೋಪಿಯನ್ನು ಬಂಧಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸು ತಿಳಿಸಿದ್ದಾರೆ.