Connect with us

DAKSHINA KANNADA

‘ಮಂಗಳೂರು ವಿಶ್ವಕರ್ಮ’ ಏರ್‌ಪೋರ್ಟ್‌ ಎನ್ನುವ ಹೆಸರಿಡಿ-ಉದಯ ಜಿ ಆಚಾರ್ಯ

Published

on

ಮಂಗಳೂರು: ಮಂಗಳೂರಿನಲ್ಲಿ ಸೆಪ್ಟೆಂಬರ್ 17ರಂದು ಉಭಯ ಜಿಲ್ಲೆಗಳಲ್ಲಿ ಸರ್ಕಾರಿ ಪ್ರಾಯೋಜಕತ್ವದ ವಿಶ್ವ ಕರ್ಮ ಜಯಂತಿ ಆಚರಣೆ ವಿಚಾರ ಮಾಡಲಾಗಿದೆ. ಸರ್ಕಾರಿ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಗೈರು ಹಾಜರಾಗಿದ್ದು, ನಮಗೆ ತುಂಬಾ ನೋವನ್ನುಂಟು ಮಾಡಿದೆ ಎಂದು ಅಖಿಲ ಭಾರತ ವಿಶ್ವ ಕರ್ಮ ಪರಿಷತ್ ರಾಜ್ಯ ಸಂಚಾಲಕ ಉದಯ ಜಿ ಆಚಾರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಸುದ್ದಿಗಾರರ ಜೊತೆ ಮಾತನಾಡಿದ ಅವರು 3 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ 5 ಗಂಟೆಗೆ ಆರಂಭವಾಗಿದೆ. ಚುನಾವಣೆ ವೇಳೆ ಸಂದರ್ಭ ಮನೆ ಬಾಗಿಲಿಗೆ ಬಂದು ಕಾಲಿಗೆ ಅಡ್ಡ ಬೀಳುವ ನಾಯಕರು ನಮ್ಮ ಕಾರ್ಯಕ್ರಮವನ್ನು ಅಸಡ್ಡೆ ಮಾಡಿರುವುದು ಸರಿಯಲ್ಲ ಎಂದರು.

ಕೋವಿಡ್, ಜಿಎಸ್‌ಟಿ, ನೋಟ್ ಬ್ಯಾನ್‌ನಿಂದ ನಾವು ದೊಡ್ಡ ಹೊಡೆತ ಅನುಭವಿಸಿದ್ದೇವೆ. ಕೊರೋನಾದ ಸಂದರ್ಭದಲ್ಲಿ 200ಕ್ಕೂ ಅಧಿಕ ಚಿನ್ನದಂಗಡಿ ಮುಚ್ಚಿವೆ. 15ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿದ್ದಾರೆ.

ಆದರೆ ಯಾರೂ ಈ ಬಗ್ಗೆ ಯಾರೂ ನಾಯಕರೂ ಮಾತನಾಡುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ವಿಶ್ವಕರ್ಮರನ್ನು ಹಾಡಿಹೊಗಳುವ ಸರಕಾರ ಮಂಗಳೂರು ಏರ್‌ಪೋರ್ಟ್‌ಗೂ ವಿಶ್ವಕರ್ಮ ಏರ್ಪೋರ್ಟ್‌ ಎನ್ನುವ ಹೆಸರನ್ನು ಇಡಲಿ ಎಂದು ಆಗ್ರಹಿಸಿದರು.

ಇನ್ನು ಅಖಿಲ ಭಾರತ ವಿಶ್ವ ಕರ್ಮ ಪರಿಷತ್ ಕರ್ನಾಟಕ ರಾಜ್ಯ ಸಂಚಾಲಕ ಯೋಗೀಶ್ ಆಚಾರ್ಯ ಇನ್ನಾ ಮಾತನಾಡಿ ವಿಶ್ವ ಕರ್ಮ ಸಮಾಜ ಬಿಜೆಪಿಯೊಂದಿಗಿರುವ ಪ್ರಬಲ ಸಮಾಜ ಎನ್ನುವ ಹೇಳಿಕೆಯನ್ನು ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜಾ ನೀಡಿದ್ದಾರೆ.

ನಮ್ಮ ಸಮಾಜ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಅವರ ಹೇಳಿಕೆ ಖಂಡನೀಯ ಎಂದರು.

DAKSHINA KANNADA

ಮಂಗಳೂರು : ನಾಳೆಯಿಂದ ರೇಶನಿಂಗ್ ಆರಂಭ; ಎಲ್ಲೆಲ್ಲಿ ನೀರಿಲ್ಲ?

Published

on

ಮಂಗಳೂರು: ಕರಾವಳಿಗೆ ಬಿರುಬೇಸಿಗೆಯ ಬಿಸಿ ಭಾರೀ ತಟ್ಟಿದ್ದು, ನೀರಿನ ಅಭಾವ ಎದುರಾಗಿದೆ. ಮಂಗಳೂರು ಮಹಾ ನಗರಪಾಲಿಕೆಯ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಹೀಗಾಗಿ ಮಂಗಳೂರು ನಗರ ಪಾಲಿಕೆ ಆಯುಕ್ತರು ಮೇ 5 ರಿಂದ ನೀರಿನ ರೇಶನಿಂಗ್ ಆರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಲಭ್ಯವಿರುವ ನೀರನ್ನು ಮಂಗಳೂರು ನಗರ (ಮಂಗಳೂರು ನಗರ ದಕ್ಷಿಣ) ಮತ್ತು ಸುರತ್ಕಲ್ (ಮಂಗಳೂರು ನಗರ ಉತ್ತರ ಭಾಗಕ್ಕೆ) ಪರ್ಯಾಯ ದಿನಗಳಲ್ಲಿ ನೀರು ಬಿಡಲು ಕ್ರಮ ವಹಿಸಲಾಗಿದೆ.

ಬೆಂದೂರು ಸ್ಥಾವರದಿಂದ ನೀರು ಪೂರೈಕೆ :

ಮೇ 5ರಿಂದ ಬೆಸ ದಿನಗಳಲ್ಲಿ ಬೆಂದೂರು ಸ್ಥಾವರದಿಂದ ಕೋರ್ಟ್ ಪ್ರದೇಶ, ಕಾರ್‌ಸ್ಟ್ರೀಟ್, ಬಾವುಟಗುಡ್ಡ, ಆಕಾಶವಾಣಿ, ಪದವು, ಗೋರಿಗುಡ್ಡ, ಸೂಟರ್‌ಪೇಟೆ, ಶಿವಬಾಗ್, ಕದ್ರಿ, ವಾಸ್‌ಲೇನ್, ಬೆಂದೂರು, ಲೋವರ್ ಬೆಂದೂರು, ಕುದ್ರೋಳಿ, ಕೋಡಿಯಾಲ್ ಬೈಲ್ ಮತ್ತು ಪಡೀಲ್ ಸ್ಥಾವರದಿಂದ ಮಂಗಳಾದೇವಿ, ಅತ್ತಾವರ, ಬಾಬುಗುಡ್ಡ, ವೆಲೆನ್ಸಿಯಾ, ಜಪ್ಪಿನಮೊಗರು, ಬಿಕರ್ನಕಟ್ಟೆ, ಉಲ್ಲಾಸ್‌ನಗರ, ಬಜಾಲ್, ತಿರುವೈಲು, ವಾಮಂಜೂರು ಹಾಗೂ ಶಕ್ತಿನಗ ಟ್ಯಾಂಕ್‌ನಿಂದ ಕುಂಜತ್ತಬೈಲ್, ಮೊಗ್ರೊಡಿ, ಶಕ್ತಿನಗರ, ಸಂಜಯನಗರ, ಪ್ರೀತಿನಗರ, ಮಂಜಡ್ಕ, ರಾಜೀವ ನಗರ, ಬೋಂದೆಲ್, ಗಾಂಧಿ ನಗರ, ಶಾಂತಿನಗರ, ಕಾವೂರು ಮತ್ತು ತುಂಬೆ – ಪಣಂಬೂರು ನೇರ ಲೈನ್‌ನಿಂದ ಕಂಕನಾಡಿ, ನಾಗುರಿ, ಪಂಪ್‌ವೆಲ್, ಬಳ್ಳೂರುಗುಡ್ಡೆ, ಪಡೀಲ್‌ಗೆ ನೀರು ಪೂರೈಕೆ ಮಾಡಲಾಗುವುದು.

ಪಣಂಬೂರು ಸ್ಥಾವರದಿಂದ ನೀರು ಪೂರೈಕೆ :

ಮೇ 6 ರಿಂದ ಪಣಂಬೂರು ಸ್ಥಾವರದಿಂದ ಸುರತ್ಕಲ್, ಎನ್‌ಐಟಿಕೆ, ಮುಕ್ಕ, ಹೊಸಬೆಟ್ಟು, ಕುಳಾಯಿ, ಜನತಾ ಕಾಲನಿ, ಬೈಕಂಪಾಡಿ, ಪಣಂಬೂರು, ಮೀನಕಳಿಯ ಮತ್ತು ಪಡೀಲ್ ಸ್ಥಾವರದಿಂದ ಬಜಾಲ್, ಜಲ್ಲಿಗುಡ್ಡ, ಮುಗೇರ್, ಎಕ್ಕೂರು, ಸದಾಶಿವ ನಗರ, ಅಳಪೆ, ಮೇಘ ನಗರ, ಮಂಜಳಿಕೆ, ಕಂಕನಾಡಿ ರೈಲ್ವೆ ಸ್ಟೇಷನ್, ಕುಡುಪು, ಪಾಂಡೇಶ್ವರ, ಸ್ಟೇಟ್‌ ಬ್ಯಾಂಕ್, ಗೂಡ್ಸ್‌ಶೆಡ್, ಬಂದರ್ ದಕ್ಕೆ,ಕಣ್ಣೂರು, ನಿಡ್ಡೆಲ್, ಶಿವನಗರ. ಕೊಡಕ್ಕಲ್, ನೂಜಿ, ಸರಿಪಳ್ಳ, ಉಲ್ಲಾಸ್ ನಗರ, ವೀರನಗದ ಹಾಗೂ ಶಕ್ತಿನಗರ ಟ್ಯಾಂಕ್‌ನಿಂದ ಕಂಡೆಟ್ಟು, ಕುಲಶೇಖರ, ಮರೋಳಿ, ಕಕ್ಕೆಬೆಟ್ಟು, ಸಿಲ್ವರ್ ಗೇಟ್, ಕೊಂಗೂರು ಮಠ, ಪ್ರಶಾಂತ್ ನಗರ ಮತ್ತು ತುಂಬೆ-ಪಣಂಬೂರು ನೇರ ಲೈನ್‌ನಿಂದ ಮುಡಾ ಪಂಪ್ ಹೌಸ್, ಕೊಟ್ಟಾರ ಚೌಕಿ ಪಂಪ್‌ಹೌಸ್, ಕೂಳೂರು ಪಂಪ್‌ಹೌಸ್, ಕಾಪಿಕ್ಕಾಡ್, ದಡ್ಡಲ್‌ಕಾಡ್, ಬಂಗ್ರ ಕೂಳೂರುಗೆ ನೀರು ಸರಬರಾಜು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪೋಲು ಮಾಡಿದಲ್ಲಿ ನೀರು ಕಡಿತ :

ಕಟ್ಟಡ ರಚನೆ ಮತ್ತಿತರ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ತೊಳೆಯುವ ಸರ್ವಿಸ್ ಸೆಂಟರ್‌ಗಳ ಜೋಡಣೆ ಯನ್ನು ಮುಂದಿನ ಸೂಚನೆಯವರೆಗೆ ಕಡಿತಗೊಳಿಸುವುದು. ಸಾರ್ವಜನಿಕರು ನೀರನ್ನು ಅನವಶ್ಯಕವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ಯಾವುದೇ ಸೂಚನೆ ನೀಡದೆ ಜೋಡಣೆ ಕಡಿತಗೊಳಿಸುವುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ :

ಸಂಪರ್ಕ ಸಂಖ್ಯೆ :

ಕುಡಿಯುವ ನೀರಿನ ಸಮಸ್ಯೆಯಾದರೆ ದೂ.ಸಂ: ಪಡೀಲ್ ರೇಚಕ ಸ್ಥಾವರ-0824-2220364 ಹಾಗೂ ಮನಪಾ ವಾಟ್ಸ್‌ಆ್ಯಪ್ ಸಂಖ್ಯೆ 9449007722/ಮನಪಾ ಕಂಟ್ರೋಲ್ ರೂಮ್- 0824-2220319/2220306ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Continue Reading

DAKSHINA KANNADA

ಪ್ರವಾಸಿಗರಿಗೆ ಗುಡ್ ನ್ಯೂಸ್ : ಮತ್ತೆ ಆರಂಭವಾಯ್ತು ಲಕ್ಷದ್ವೀಪ – ಮಂಗಳೂರು ಸ್ಪೀಡ್ ಪ್ಯಾಸೆಂಜರ್ ಹಡಗು

Published

on

ಮಂಗಳೂರು : ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪದ ಬೀಚ್‌ನಲ್ಲಿ ವಾಯುವಿಹಾರ ನಡೆಸುವ ಮೂಲಕ ಲಕ್ಷದ್ವೀಪ ಬಾರಿ ಸುದ್ದಿಯಾಗಿತ್ತು. ಈ ವೇಳೆ ಮಂಗಳೂರು ಲಕ್ಷದ್ವೀಪ ನಡುವೆ ಈ ಹಿಂದೆ ಇದ್ದ ಪ್ರಯಾಣಿಕರ ಹಡಗು ಆರಂಭಿಸಲು ಬೇಡಿಕೆ ಕೂಡಾ ಆರಂಭವಾಗಿತ್ತು.

ಇದೀಗ ಲಕ್ಷದ್ವೀಪದ ಆಡಳಿತ ಮಂಗಳೂರಿಗೆ ಸ್ಪೀಡ್ ಪ್ಯಾಸೆಂಜರ್ ಹಡಗನ್ನು ಆರಂಭಿಸಿದೆ. ಗುರುವಾರ ಸಂಜೆ ಮಂಗಳೂರಿಗೆ ಆಗಮಿಸಿದ ಸ್ಪೀಡ್ ಪ್ಯಾಸೆಂಜರ್ ಬೋಟ್‌ನಲ್ಲಿ 150 ಜನ ಲಕ್ಷದ್ವೀಪವಾಸಿಗಳು ಆಗಮಿಸಿದ್ದಾರೆ.

ಪ್ರಯಾಣ ದರ ಎಷ್ಟು?


ಮಂಗಳೂರು ಲಕ್ಷದ್ವೀಪದ ನಡುವೆ ಮತ್ತೆ ಸಂಪರ್ಕ ಸೇತುವೆ ನಿರ್ಮಿಸಲು ಲಕ್ಷದ್ವೀಪ ಆಡಳಿತ ಸ್ಪೀಡ್ ಪ್ಯಾಸೆಂಜರ್ ಹಡಗು ಆರಂಭಿಸಿದೆ. ಕೋವಿಡ್ ಆರಂಭಕ್ಕೂ ಮೊದಲು ಮಂಗಳೂರು ಲಕ್ಷದ್ವೀಪದ ನಡುವೆ ಎರಡು ಪ್ರಯಾಣಿಕ ಹಡಗುಗಳು ಸಂಚಾರ ಮಾಡುತ್ತಿತ್ತು. ಸಾಕಷ್ಟು ಪ್ರಯಾಣಿಕರು ಮಂಗಳೂರು ಲಕ್ಷದ್ವೀಪ ನಡುವೆ ಪ್ರಯಾಣ ಮಾಡುವ ಮೂಲಕ ಅದರ ಅನುಕೂಲ ಪಡೆದುಕೊಂಡಿದ್ದರು.


ಲಕ್ಷದ್ವೀಪದವರಿಗೆ ತಮ್ಮ ದೈನಂದಿನ ಅವಶ್ಯಕತೆಗೆ ಮಂಗಳೂರು ಅವಲಂಬಿತರಾಗಿದ್ದರೆ, ಮಂಗಳೂರಿನ ಜನರಿಗೆ ಲಕ್ಷದ್ವೀಪ ವೀಕೆಂಡ್ ಪಾಯಿಂಟ್. ಆದ್ರೆ ಕೋವಿಡ್ ಕಾರಣದಿಂದ ಲಕ್ಷಾದ್ವೀಪಕ್ಕೆ ಇದ್ದ ಹಡಗಿನ ವ್ಯವಸ್ಥೆ ನಿಂತು ಹೋಗಿದ್ದು, ಈಗ ಮತ್ತೆ ಆರಂಭವಾಗಿದೆ. ಹಿಂದೆ 24 ಗಂಟೆ ಇದ್ದ ಪ್ರಯಾಣ ಕೇವಲ 5.30 ರಿಂದ 6 ಗಂಟೆಗಳಿಗೆ ಇಳಿದಿದೆ. ಹಡಗಿನಲ್ಲಿ ಎಲ್ಲಾ ವ್ಯವಸ್ಥೆ ಇರೋ ಕಾರಣದಿಂದ ಜನರು ಕೂಡಾ ಉತ್ಸಾಹದಿಂದ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಅಂದಹಾಗೆ, ಈ ಹೈ-ಸ್ಪೀಡ್ ಪ್ರಯಾಣಿಕ ಹಡಗಿನ ದರ ಕೇವಲ 450 ರೂ. ಆಗಿದೆ.

ಹೆಚ್ಚಿನ ಹಡಗಿಗೆ ಬೇಡಿಕೆ :


ಲಕ್ಷದ್ವೀಪದ ನಡುವೆ ಪ್ರಯಾಣಿಕರ ಹಡಗು ಆರಂಭದಿಂದ ಮಂಗಳೂರಿನಲ್ಲಿ ವ್ಯಾಪಾರ ವಹಿವಾಟು ಇನ್ನಷ್ಟು ಹೆಚ್ಚಾಗಲಿದೆ. ಅಷ್ಟೇ ಅಲ್ಲದೆ, ಲಕ್ಷದ್ವೀಪಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮಂಗಳೂರಿನಿಂದ ತೆರಳುವ ಮೂಲಕ ಅಲ್ಲೂ ಕೂಡಾ ಆರ್ಥಿಕ ಅಭಿವೃದ್ದಿ ಆಗಲಿದೆ.


ಸ್ಪೀಡ್ ಪ್ಯಾಸೆಂಜರ್ ಹಡಗು ಕನಿಷ್ಟ ಎರಡು ದಿನಕ್ಕೊಮ್ಮೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೋಗುವ ವ್ಯವಸ್ಥೆ ಮಾಡಬೇಕು ಅನ್ನೋದು ಸ್ಥಳೀಯರ ಆಗ್ರಹ. ಈಗ ಆರಂಭವಾಗಿರೋ ಹಡಗಿನಲ್ಲಿ ಸುಖಕರ ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಯಾಣಿಕರಿಗೆ ಟಿವಿ, ಎಸಿ, ಸೇರಿದಂತೆ ಅಗತ್ಯ ಸೇವೆಗಳು ಲಭ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಹಡಗಿನ ಬಳಕೆ ಮಾಡುವ ಸಾಧ್ಯತೆ ಇರುವ ಕಾರಣ ಹೆಚ್ಚಿನ ಹಡಗಿನ ವ್ಯವಸ್ಥೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದೀಗ ಆರಂಭಗೊಂಡಿರೋ ಪ್ರಯಾಣಿಕರ ಹಡಗು ಸೇವೆ ಜೂನ್ ತಿಂಗಳ ಬಳಿಕ ಸ್ಥಗಿತವಾಗಲಿದೆ.

ಇದನ್ನೂ ಓದಿ :  ‘ಅರ್ಜುನ’ ಆನೆಯನ್ನು ನೆನೆದ ಡಿಬಾಸ್; ದರ್ಶನ್ ಕೋರಿಕೆ ಏನು?

ಮಳೆಗಾಲ ಕಳೆದ ಬಳಿಕ ಇದು ಮತ್ತೆ ಆರಂಭವಾಗುತ್ತದೆಯೋ ಇಲ್ಲವೋ ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ಆದ್ರೆ, ಮತ್ತೆ ಆರಂಭಿಸುವ ಬಗ್ಗೆ ಲಕ್ಷಾದ್ವೀಪ ಆಡಳಿತ ಭರವಸೆ ನೀಡಿದೆ. ಒಟ್ಟಾರೆ ಹೇಳೋದಾದ್ರೆ ಸದ್ಯಕ್ಕಂತೂ ಲಕ್ಷದ್ವೀಪಕ್ಕೆ ಸ್ಪೀಡ್ ಪ್ಯಾಸೆಂಜರ್ ಹಡಗು ಆರಂಭದಿಂದ ಮಂಗಳೂರಿನ ಜನರಿಗಂತೂ ಸಾಕಷ್ಟು ಖುಷಿಯಾಗಿರೋದಂತು ನಿಜ.

Continue Reading

BELTHANGADY

ಮುಂದಿನ ನಾಲ್ಕು ದಿನ ಕರಾವಳಿಯಲ್ಲಿ ಮಳೆಯ ಸಿಂಚನ..! ಹವಾಮಾನ ಇಲಾಖೆ ಮುನ್ಸೂಚನೆ

Published

on

ಮಂಗಳೂರು: ಕಳೆದ ಕೆಲವು ದಿನಗಳಿಂದ ಸುಡು ಬಿಸಿಲಿಗೆ ಬಸವಳಿದು ಜನರು ಕಂಗಾಲಾಗಿದ್ದು, ಕೆಲವೊಂದು ಕಡೆ ವರುಣನ ಕೃಪೆಗಾಗಿ ಜನರು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ.

rain

ಈ ನಡುವೆ ಬಿಸಿ ಶಾಖದಿಂದ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರಿನ ಜನರು ನಿನ್ನೆ ಕೆಲವೆಡೆ ಸುರಿದ ಮಳೆಯಿಂದಾಗಿ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಬೆಂಗಳೂರಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಅಲ್ಲಲ್ಲಿ ಅಲ್ಪಾ ಸ್ವಲ್ಪ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ. ಇದೇ ವೇಳೆ ರಾಜ್ಯದ ​ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ.

ಮುಂದೆ ಓದಿ..; ಈ ಸರ್ವಾಧಿಕಾರಿಗೆ ಬೇಕಂತೆ ವರ್ಷಕ್ಕೆ 25 ಕನ್ಯೆಯರು..!! ಏನಿದು ಕಾಮಕಾಂಡ?

ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಹಗುರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಅದರಲ್ಲೂ ಬೆಂಗಳೂರಿನಲ್ಲಿ ಗುಡುಗು, ಮಿಂಚಿನ ಜತೆಗೆ ಅಲ್ಲಲ್ಲಿ ಚದುರಿದ ಮಳೆ ಬೀಳುವ ಸಂಭವವಿದೆ. ಮೇ 6 ಮತ್ತು 7 ರಂದು ಸಾಧಾರಣ ಅಥವಾ ಅದಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಿಜಾಪುರ, ಬಾಗಲಕೋಟೆ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಬಿಸಿಗಾಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Continue Reading

LATEST NEWS

Trending