ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಶಂಕಿತರನ್ನ ಬಂಧಿಸಿದ್ದಾರೆ.
ಕೃತ್ಯವೆಸಗಿದ ಸ್ಥಳದಲ್ಲಿ ದುಷ್ಕರ್ಮಿಗಳು ಮದ್ಯ ಸೇವನೆ ಮಾಡಿದ್ದರು. ಹೀಗಾಗಿ ಪೊಲೀಸರು ವೈನ್ ಶಾಪ್‌ಗಳ ಜಾಡುಹಿಡಿದು ತನಿಖೆ ತೀವ್ರಗೊಳಿಸಿದ್ದರು.
ಆಲನಹಳ್ಳಿಯ ವೈನ್ ಶಾಪ್‌ನಲ್ಲಿ ಮದ್ಯ ಖರೀದಿಸಿದ್ದ ಸಿಸಿ ಟಿವಿ ಫೂಟೇಜ್ ಆಧಾರಿಸಿ ಪೊಲೀಸರು ಸದ್ಯ ಮೂವರು ಶಂಕಿತರನ್ನ ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆಸಿದ್ದಾರೆ.
ಇನ್ನು ಈ ಮಧ್ಯೆ ಇಂದು ಗೃಹ ಸಚಿವರು ಹಾಗೂ ಮಹಿಳಾ ಆಯೋಗದ ಅಧಿಕಾರಿಗಳು ಮೈಸೂರಿಗೆ ಭೇಟಿ ನೀಡಲಿದ್ದಾರೆ.
ಅರಮನೆ ನಗರಿ ಮೈಸೂರಿನಲ್ಲಿ ನಡೆದಿರೋ ಘಟನೆಗೆ ಕೇವಲ ಮೈಸೂರಿನ ಜನ ಮಾತ್ರವಲ್ಲ ಇಡೀ ಕರ್ನಾಟಕವೇ ತಲೆ ತಗ್ಗಿಸುವಂತೆ ಮಾಡಿದೆ. ಸ್ನೇಹಿತನ ಜೊತೆ ಹೋಗಿದ್ದ ಯುವತಿಯ ಮೇಲೆ ಕಾಮ ಕ್ರಿಮಿಗಳು ಅಟ್ಯಾಕ್ ಮಾಡಿದ್ದು ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ.
ಜೊತೆಗೆ ಈ ಕಿರಾತಕರು ವಿದ್ಯಾರ್ಥಿನಿಯ ಬೆತ್ತಲೆ ವಿಡಿಯೋ ಮಾಡಿಕೊಂಡಿದ್ದು ತಮ್ಮ ವಿರುದ್ಧ ದೂರು ನೀಡಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರಂತೆ.
ಪೊಲೀಸರಿಗೆ ದೂರು ಕೊಟ್ಟರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಾರೆ. ನಂತರ ವಿದ್ಯಾರ್ಥಿನಿಯ ಜೊತೆ ಇದ್ದ ಯುವಕನಿಗೆ ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.