LATEST NEWS
ಉಡುಪಿ: ಮೀನುಗಾರರ ನಿರ್ಮಾಣ ಹಂತದ ಶೆಡ್ ಕೆಡವಿದ ನಗರಸಭೆ-ಸ್ಥಳೀಯರ ಆಕ್ರೋಶ
Published
2 years agoon
By
Adminಉಡುಪಿ: ಉಡುಪಿಯ ಸ್ವಾಗತ ಗೋಪುರ ಬಳಿ ನಿರ್ಮಾಣ ಹಂತದಲ್ಲಿದ್ದ ಮೀನುಗಾರರ ಶೆಡ್‌ವೊಂದನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪದ ಮೇಲೆ ನಗರಸಭೆ ಉರುಳಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ 40 ವರ್ಷಗಳ ಹಿಂದೆ ಇಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರ ಅನುಕೂಲಕ್ಕಾಗಿ ಶೆಡ್ ವೊಂದನ್ನು ನಿರ್ಮಾಣ ಮಾಡಲಾಗಿತ್ತು.
ಸ್ಥಳೀಯ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಶೆಡ್ಡನ್ನು ನಿರ್ಮಾಣ ಮಾಡಿದ್ದರು .ಆದರೆ ಶೆಡ್ ನಿರ್ಮಾಣ ಹಂತದಲ್ಲಿ ಇರುವಾಗಲೇ ಯಾವುದೇ ನೋಟಿಸ್ ನ್ನು ನೀಡದೆ ಉಡುಪಿ ನಗರ ಸಭೆ ಜೆಸಿಬಿಯನ್ನು ಬಳಸಿ ಶೆಡ್ ನ್ನು ಕೆಡವಿ ಹಾಕಿದೆ.
ಇದರಿಂದ ನಗರಸಭೆಯ ವಿರುದ್ಧ ರೊಚ್ಚಿಗೆದ್ದ ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ನಗರದ ಪ್ರತಿಷ್ಠಿತ ಕಟ್ಟಡಗಳಿಗೆ ಇಲ್ಲದ ಕಾನೂನನ್ನು ಮೇಲೆ ಹೇರಲಾಗುತ್ತಿದೆ ಎಂದು ಆರೋಪವನ್ನು ಮಾಡಿದ್ದಾರೆ.
ಕಳೆದ ಅನೇಕ ವರ್ಷಗಳಿಂದಲೂ ಮೀನುಗಾರಿಕೆ ಮಹಿಳೆಯರಿಗೆ ಶೆಡ್ ನ ನಿರ್ಮಾಣದ ಬೇಡಿಕೆ ಇಡಲಾಗಿದ್ದು ಅದು ಈಡೇರಲಿಲ್ಲ.
ಹೀಗಾಗಿ ತಾತ್ಕಾಲಿಕ ನೆಲೆಯಲ್ಲಿ ಶೆಡ್ ನಿರ್ಮಾಣಕ್ಕೆ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮುಂದಾಗಿದ್ದರು.
ಆದರೆ ಕಟ್ಟಡ ಸಾಮಗ್ರಿಗಳನ್ನು ಬಳಸಿಕೊಳ್ಳಲು ಅವಕಾಶವಿಲ್ಲದಂತೆ ಶೆಡ್ಡನ್ನು ಕೆಡವಿ ಹಾಕಲಾಗಿದ್ದು ನಗರ ಸಭೆಯ ಅಮಾನವೀಯ ಕೃತ್ಯದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
International news
ಎಲನ್ ಮಸ್ಕ್ ಗೆ ಇಷ್ಟವಾದ ಭಾರತದ ಚುನಾವಣಾ ಪ್ರಕ್ರಿಯೆ!
Published
15 hours agoon
24/11/2024By
NEWS DESK3ಮಂಗಳೂರು : ಎಲನ್ ಮಸ್ಕ್ ಜಗತ್ತಿನ ನಂಬರ್ ಒನ್ ಶ್ರೀಮಂತ ವ್ಯಕ್ತಿ. ಮಸ್ಕ್ ಅಮೆರಿಕಾದ ಚುನಾವಣಾ ಪ್ರಕ್ರಿಯೆಯನ್ನು ಟೀಕಿಸಿ, ಭಾರತದ ಚುನಾವಣಾ ಪ್ರಕ್ರಿಯೆಯನ್ನು ಹೊಗಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಮಸ್ಕ್, ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಅದ್ಬುತವಾಗಿ ನಡೆಯುತ್ತದೆ. ಒಂದೇ ಒಂದು ದಿನದಲ್ಲಿ ಇಡೀ ಲೋಕಸಭಾ ಚುನಾವಣೆಯ ಮತ ಎಣಿಕೆ ಮಾಡಿದ ಶ್ರೇಯಸ್ಸು ಭಾರತದ್ದು ಎಂದಿದ್ದಾರೆ.
ಇದನ್ನೂ ಓದಿ: ಸಾಯಿ ಪಲ್ಲವಿಯವರ ಕೈಯಲ್ಲಿದೆ ಹಲವಾರು ಸಿನಿಮಾಗಳು !
ಕ್ಯಾಲಿಫೋರ್ನಿಯಾದ ಚುನಾವಣಾ ಪ್ರಕ್ರಿಯೆಯನ್ನು ಟೀಕಿಸಿರುವ ಅವರು, ತಮ್ಮ ಎಕ್ಸ್ ಖಾತೆಯಲ್ಲಿ ಈ ಪೊಸ್ಟ್ ಹಾಕಿದ್ದಾರೆ. ಅದರ ಅಡಿಬರಹದಲ್ಲಿ, ಭಾರತದಲ್ಲಿ ಚುನಾವಣೆ ಎಂದರೆ ವಂಚನೆಯೇ ಮೊದಲ ಗುರಿ ಇರುವಲ್ಲಿ ಒಂದೇ ಒಂದು ದಿನದಲ್ಲಿ 64 ಕೋಟಿ ಮತಗಳನ್ನು ಎಣಿಕೆ ಮಾಡಿದ್ದಾರೆ. ಆದ್ರೆ ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಕೂಡ ಮತಗಳು ಎಣಿಕೆ ಆಗುತ್ತಲೇ ಇವೆ ಎಂದು ಬರೆದಿದ್ದಾರೆ.ಕ್ಯಾಲಿಫೋರ್ನಿಯಾದಲ್ಲಿ
ಮತ ಎಣಿಕೆ ಕಾರ್ಯ ವಿಳಂಬ ಯಾಕೆ :
ಅಮೆರಿಕಾದಲ್ಲಿ ಮೇಲ್ ಇನ್ ವೋಟಿಂಗ್ ವ್ಯವಸ್ಥೆ ಇದೆ. ಇದನ್ನು ಎಣಿಕೆ ಮಾಡುವ ಅನೇಕ ರೀತಿಯ ಪ್ರಕ್ರಿಯೆಗಳನ್ನು ಮಾಡುವ ಕಾರಣ ಚುನಾವಣಾ ಪ್ರಕ್ರಿಯೆ ವಿಳಂಬವಾಗುತ್ತಿದೆ. ಅದರಲ್ಲೂ ಕ್ಯಾಲಿಫೋರ್ನಿಯಾದಂತಹ ದೊಡ್ಡ ದೊಡ್ಡ ನಗರಗಳಲ್ಲಿ ಈ ಮೇಲ್ ಇನ್ ವೋಟಿಂಗ್ ಗಳು ತುಂಬಾ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಈ ವಿಳಂಬ ನೀತಿಯನ್ನು ಎಲನ್ ಮಸ್ಕ್ ಟೀಕಿಸಿ ಭಾರತವನ್ನು ಹೋಗಳಿದ್ದಾರೆ.
ಅಮೇರಿಕಾದಲ್ಲಿ ಹಿಂದಿನಿಂದಲೂ ಮೇಲ್ ಇನ್ ವೋಟಿಂಗ್ ವ್ಯವಸ್ಥೆ ಇದ್ದು, ಈಗಲೂ ಮುಂದುವರಿದುಕೊಂಡು ಬಂದಿದೆ.
LATEST NEWS
ಸಾಯಿ ಪಲ್ಲವಿಯವರ ಕೈಯಲ್ಲಿದೆ ಹಲವಾರು ಸಿನಿಮಾಗಳು !
Published
16 hours agoon
24/11/2024By
NEWS DESK3ಮಂಗಳೂರು: ತಮಿಳಿನ ಶಿವ ಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ‘ಅಮರನ್’ ಚಿತ್ರ ಬಿಡುಗಡೆಯಾದಾಗಿನಿಂದಲೂ ಬಾಕ್ಸ್ ಆಫೀಸ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದಾಗಲೇ ಸಾಯಿ ಪಲ್ಲವಿಯವರ ಮುಂದೆ ಸಾಲು ಸಾಲು ಸಿನಿಮಾಗಳು ಕಾಯುತ್ತಿದೆ.
ನಟಿ ಸಾಯಿ ಪಲ್ಲವಿಯವರು ದಕ್ಷಿಣ ಭಾರತದ ಜನಪ್ರಿಯ ನಟಿ ಹಾಗೂ ತನ್ನ ಪ್ರತಿಭೆಯಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ. ಸದಾ ಒಂದಲ್ಲಾ ಒಂದು ಸಿನಿಮಾದಲ್ಲಿ ಕಾರ್ಯನಿರತರಾಗಿರುವ ಸಾಯಿ ಪಲ್ಲವಿಯವರ ಮುಂದೆ ಸಾಲು ಸಾಲು ಸಿನಿಮಾಗಳು ಕಾಯುತ್ತಿದೆ.
ಇದನ್ನೂ ಓದಿ: ಹಾಸಿಗೆ ಹಿಡಿದಿದ್ದ 80ರ ಅಜ್ಜಿ ಮೇಲೆಯೂ ವರದಕ್ಷಿಣೆ ಕೇಸ್: ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ರಣಬೀರ್ ಕಪೂರ್, ಯಶ್ ನಟನೆಯ ಹಿಂದಿಯ ರಾಮಾಯಣ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ನಂತರ ಅಮೀರ್ ಖಾನ್ ನಿರ್ಮಾಣ ಮಾಡಿ ಅವರ ಮಗ ನಟಿಸುತ್ತಿರುವ ಹೊಸ ಹಿಂದಿ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಈಗಾಗಲೇ, ನಟ ನಾಗಚೈತನ್ಯ ನಟಿಸಿರುವ ‘ತಾಂಡೇಲ್’ ಸಿನಿಮಾದಲ್ಲೂ ಸಾಯಿ ಪಲ್ಲವಿಯವರು ನಟಿಸಿದ್ದಾರೆ. ಇದರ ಚಿತ್ರೀಕರಣ ಮುಗಿದಿದ್ದು, ಕೆಲವೇ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಸುಕುಮಾರ್ ನಿರ್ದೇಶನದ ಹೊಸ ಸಿನಿಮಾದಲ್ಲೂ ಸಾಯಿ ಪಲ್ಲವಿ ನಟಿಸಲಿದ್ದಾರೆ. ಇದರಲ್ಲಿ ನಾಯಕನಾಗಿ ರಾಮ್ ಚರಣ್ ಅಭಿನಯಿಸಲಿದ್ದಾರೆ.
ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಯಿ ಪಲ್ಲವಿ, ಪಕ್ಕಾ ಫ್ಯಾಮಿಲಿ ಗರ್ಲ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಿಯೇ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
International news
80ರ ಪ್ರಾಯದಲ್ಲೂ ಅಜ್ಜಿಯ ಟ್ರೆಂಡಿಂಗ್ ಡ್ರೆಸ್ ಗೆ ಎಲ್ಲರೂ ಬೋಲ್ಡ್ !
Published
16 hours agoon
24/11/2024By
NEWS DESK3ಮಂಗಳೂರು : ವಯಸ್ಸು ಎಂಬುದು ಕೇವಲ ಅಂಕೆಗಳು ಅಷ್ಟೇ. ಸಾಧನೆಗೆ ವಯಸ್ಸು ಅಡ್ಡಿ ಅಲ್ಲ, ಅದು ನೆಪ ಅಷ್ಟೇ. 80ರ ವಯಸ್ಸಿನಲ್ಲೂ ಫ್ಯಾಶನ್ ಲೋಕವನ್ನೆ ನಿದ್ದೆಗೆಡಿಸಿರುವ ಈ ಅಜ್ಜಿಯ ಸ್ಟೋರಿ ತುಂಬಾ ಕುತೂಹಲದಾಯಕವಾಗಿದೆ.
‘ಆಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಎಂದು ಕೆಲಸವ’ ಎಂಬ ಹಾಡಿನ ಸಾಲಿನಂತೆ ಈ ಅಜ್ಜಿಗೆ ತನ್ನ ಮೊಮ್ಮಗಳೇ ಸ್ಪೂರ್ತಿ. ಕೆಲವೊಬ್ಬರು ಅಜ್ಜಿಯಂದಿರು, ಮೊಮ್ಮಕ್ಕಳು ಏನೇ ಹೇಳಿದರು ಅದನ್ನು ಮಾಡುತ್ತಾರೆ. ಹಾಗೆನೇ ಈ ಅಜ್ಜಿ ಕೂಡ ತನ್ನ ಮೊಮ್ಮಗಳ ಆಸೆ ಈಡೇರಿಸಲು ಹೋಗಿ ಇಂದು ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಜಾಂಬಿಯಾ ದೇಶದ 80ರ ಹರೆಯದ ಈ ವೃದ್ದೆಯ ಹೆಸರು ಮಾರ್ಗರೇಟಾ ಚೋಲಾ. ಕಟ್ಟಿಗೆ ಚೇರಲ್ಲಿ ಕೂತು, ಕಣ್ಣಿಗೆ ಸ್ಟೈಲಿಶ್ ಗ್ಲಾಸ್ ಹಾಕಿಕೊಂಡು, ಬಣ್ಣ ಬಣ್ಣದ ಕಾಸ್ಟ್ಯೂಮ್ ಗಳು ಹಾಕಿಕೊಂಡಿರುವುದನ್ನು ನೋಡಿದರೆ ಎಂಥವರಿಗೂ, ಒಂದು ಕ್ಷಣ ರೋಮಾಂಚನಕಾರಿಯಾಗಬೇಕು. ಹಾಗಂತ ಇವರು ಯಾವುದೋ ರಾಯಲ್ ಫ್ಯಾಮೀಲಿಗೆ ಸೇರಿದವರಲ್ಲ. ಮಾರ್ಗರೇಟ್ ಚೋಲಾ 12-13 ವರ್ಷದಲ್ಲಿಯೇ ಶಿಕ್ಷಣಕ್ಕೆ ಗುಡ್ ಬೈ ಹೇಳಿ, 30ನೇ ವಯಸ್ಸಿಗೆ ಮದುವೆಯಾಗಿ ಬಡತನ, ಕಷ್ಟ ಎಲ್ಲವನ್ನೂ ಕಂಡವರು.
ಇದನ್ನೂ ಓದಿ: ಯಶ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಖ್ಯಾತ ಕ್ರಿಕೆಟಿಗನ ಪತ್ನಿ
ಆದರೆ ಮೊಮ್ಮಗಳಾದ ಡಿಯಾನಾ ಕುಂಬಾ ನ್ಯೂಯಾರ್ಕ್ ಮೂಲದ ಸ್ಟೈಲಿಸ್. ಈಕೆಗೆ, ತನ್ನ ಅಜ್ಜಿಯನ್ನು ಹೊಸ ಹೊಸ ಅವತಾರದಲ್ಲಿ ನೋಡಲು ಇಷ್ಟವಂತೆ. ಈಗಾಗೀ ಹೊಸ ಹೊಸ ಬಗೆಯ ಕಾಸ್ಟ್ಯೂಮ್ ಹಾಕಿ ಖುಷಿ ಪಡುತ್ತಾರೆ. ಈ ಅಜ್ಜಿಯ ಜನಪ್ರೀಯತೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳೇ ಸಂದರ್ಶನ ಮಾಡಲು ಬರುತ್ತಿವೆ. ತನ್ನ ಫ್ಯಾಶನ್ ಬಗ್ಗೆ ಮಾರ್ಗರೇಟ್ ಹೆಳೋದು ಹೀಗೆ, ನಾನು ಈ ರೀತಿಯ ಉಡುಗೆ-ತೊಡುಗೆಗಳನ್ನು ಹಾಕಿಕೊಳ್ಳುವುದರಿಂದ ನನ್ನನ್ನು ನಾನು ಉಳಿದವರಿಗಿಂತ ಭಿನ್ನ ಎಂದುಕೊಳ್ಳುವಂತಹ ಭಾವ ಬರುತ್ತದೆ. ನಾನು ಇಂತಹ ಬಟ್ಟೆಗಳನ್ನು ಧರಿಸಿಕೊಳ್ಳುತ್ತಾ ಮತ್ತಷ್ಟು ಜೀವಂತಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮಾರ್ಗರೇಟ್ ರವರ ಈ ಫ್ಯಾಶನ್ ಫೋಟೋಗಳಿಗೆ, ಕ್ಲೀನ್ ಬೊಲ್ಡ್ ಆಗಿರುವ ಅವರ ಅಭಿಮಾನಿಗಳು ಅಜ್ಜಿಯನ್ನು ಕೊಂಡಾಡುತ್ತಿದ್ದಾರೆ. ಇವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ ಮತ್ತು ಇನ್ ಸ್ಟಾ ಗ್ರಾಮ್ ನಲ್ಲಿ 1 ಲಕ್ಷ 13 ಸಾವಿರದಷ್ಟು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ನಿಮ್ಮ ವಯಸ್ಸು, ನಿಮ್ಮ ಗುರಿ ಸಾಧನೆಗೆ ಅಡ್ಡಿಯಾಗುವುದಿಲ್ಲ. ಗುರು ಮತ್ತು ಗುರಿ ಎರಡು ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಮಾರ್ಗರೇಟ್ ಚೋಲಾ ನಿದರ್ಶನ.
LATEST NEWS
ಪತ್ನಿಗೆ ಬೆಂ*ಕಿ ಹಚ್ಚಿ ತಲೆಮರೆಸಿಕೊಂಡಿದ್ದ ವ್ಯಕ್ತಿ 12 ವರ್ಷಗಳ ಬಳಿಕ ಅರೆಸ್ಟ್
ಯಶ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ ಖ್ಯಾತ ಕ್ರಿಕೆಟಿಗನ ಪತ್ನಿ
ಬಿಗ್ಬಾಸ್ ಮನೆಯಲ್ಲಿನ ಸ್ಪರ್ಧಿಗಳ ವಯಸ್ಸೆಷ್ಟು ಗೊತ್ತಾ..?
ಮಂಗಳೂರಲ್ಲಿ ಸಮುದ್ರಕ್ಕೆ ಜಿಗಿದು ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆಗೆ ಯತ್ನ
ಚಲಿಸುತ್ತಿರುವ ಬಸ್ಸಿನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟ ಯುವಕ
ನಿದ್ದೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ: ನಿಮಗೆ ಗೊತ್ತಾ!
Trending
- LATEST NEWS5 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru3 days ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION4 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- LATEST NEWS7 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!