LATEST NEWS
Mumbai: ರೈಲಿನಲ್ಲಿ ಗುಂಡಿನ ದಾಳಿ- ಆರ್ಪಿಎಫ್ ಕಾನ್ಸ್ಟೆಬಲ್ ಸೇವೆಯಿಂದ ವಜಾ..!
ಕಳೆದ ತಿಂಗಳು ಚಲಿಸುತ್ತಿದ್ದ ರೈಲಿನಲ್ಲಿ ತನ್ನ ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ರೈಲ್ವೆ ರಕ್ಷಣಾ ಪಡೆ- ಆರ್.ಪಿ.ಎಫ್. ಕಾನ್ಸ್ಟೆಬಲ್ ಚೇತನ್ ಸಿಂಗ್ ಚೌಧರಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.
ಮುಂಬೈ: ಕಳೆದ ತಿಂಗಳು ಚಲಿಸುತ್ತಿದ್ದ ರೈಲಿನಲ್ಲಿ ತನ್ನ ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ರೈಲ್ವೆ ರಕ್ಷಣಾ ಪಡೆ- ಆರ್.ಪಿ.ಎಫ್. ಕಾನ್ಸ್ಟೆಬಲ್ ಚೇತನ್ ಸಿಂಗ್ ಚೌಧರಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.
ಆರ್ಪಿಎಫ್ ವಿಭಾಗೀಯ ಭದ್ರತಾ ಆಯುಕ್ತರು, ಚೌಧರಿ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಜು. 31ರಂದು ಮುಂಬಯಿ ಹೊರವಲಯದಲ್ಲಿ ಪಾಲ್ಘರ್ ರೈಲು ನಿಲ್ದಾಣದ ಸಮೀಪ ಜೈಪುರ- ಮುಂಬೈ ಸೂಪರ್ ಫಾಸ್ಟ್ ರೈಲಿನಲ್ಲಿ 34 ವರ್ಷ ಪ್ರಾಯದ ಚೇತನ್ ಸಿಂಗ್ ಚೌಧರಿ ತನ್ನ ಹಿರಿಯ ಅಧಿಕಾರಿ, ಸಹಾಯಕ ಸಬ್ ಇನ್ಸ್ಪೆಕ್ಟರ್ ಟಿಕರಾಮ್ ಮೀನಾ ಮತ್ತು ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದನು.
ರೈಲಿನ ಬೇರೆ ಬೇರೆ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಹುಸೇನ್ ಭಾನ್ಪುರವಾಲಾ, ಸಯ್ಯದ್ ಸಫುದ್ದೀನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಕನಿಷ್ಠ ಮೂರು ಶಿಸ್ತು ಕ್ರಮ ಸಂಬಂಧಿತ ಘಟನೆಗಳಲ್ಲಿ ಆರೋಪಿ ಭಾಗಿಯಾಗಿದ್ದರಿಂದ ವಜಾ ಮಾಡಲಾಗಿದೆ.
ಸದ್ಯ ಚೌಧರಿ ನ್ಯಾಯಾಂಗ ಬಂಧನದಲ್ಲಿದ್ದು, ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ.
ಈ ನಡುವೆ, ಆರೋಪಿ ಚೇತನ್ ಸಿಂಗ್ ಚೌಧರಿ ಈ ಹಿಂದೆ ಕೆಲವು ಪ್ರಕರಣಗಳಲ್ಲಿ ಭಾಗಿಯಾದ ಆರೋಪಗಳು ಇದೀಗ ಕೇಳಿ ಬಂದಿವೆ.
2017ರಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಚೇತನ್ ಸಿಂಗ್ ಚೌಧರಿ ಶ್ವಾನ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಓರ್ವ ಮುಸಲ್ಮಾನ ವ್ಯಕ್ತಿಯನ್ನು ಆರ್ಪಿಎಫ್ ಪೋಸ್ಟ್ಗೆ ಕರೆತಂದು ವಿನಾಃಕಾರಣ ಹಿಂಸೆ ನೀಡಿದ್ದ.
ಈ ಬಗ್ಗೆ ಚೌಧರಿ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿತ್ತು.
ಗುಜರಾತ್ನಲ್ಲಿ ಕರ್ತವ್ಯದಲ್ಲಿದ್ದಾಗ ಸಹೋದ್ಯೋಗಿಯ ಮೇಲೆ ಚೌಧರಿ ಹಲ್ಲೆ ನಡೆಸಿದ್ದ.
ಇನ್ನೊಂದು ಘಟನೆಯಲ್ಲಿ ಸಹೋದ್ಯೋಗಿಯ ಎಟಿಎಂನಿಂದ ಹಣ ತೆಗೆದುಕೊಂಡಿದ್ದ ಎಂಬ ಆರೋಪಗಳು ಕೇಳಿ ಬಂದಿವೆ.
DAKSHINA KANNADA
ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು..!
ಬಂಟ್ವಾಳ : ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ಬಂಟ್ವಾಳದ ನಾವೂರು ಎಂಬಲ್ಲಿ ಭಾನುವಾರ(ಎ.5) ಸಂಜೆ ನಡೆದಿದೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಮತ್ತು ಇಲಿಯಾಸ್ ಅವರ ಪುತ್ರಿ ಮರಿಯಮ್ ನಾಶೀಯಾ (14 )ಮೃತಪಟ್ಟ ಬಾಲಕಿಯರು.
ಮುಂದೆ ಓದಿ..; ಬರ್ಬರ ಹತ್ಯೆಯಾದ ಬ್ಯೂಟಿ ಕ್ವೀನ್.!! ಮುಳುವಾಯಿತಾ ಇನ್ಸ್ಟಾಗ್ರಾಮ್ ಪೋಸ್ಟ್..! ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ
ಮೂಲತಃ ನಾವೂರ ನಿವಾಸಿಯಾದ ಇಲಿಯಾಸ್ ಅವರು ಇತ್ತೀಚಿಗೆ ಉಳ್ಳಾಲದಲ್ಲಿ ಮನೆ ಕಟ್ಟಿಸಿದ್ದರು. ನಿನ್ನೆ ನಾವೂರು ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಸಂಜೆ ವೇಳೆ ಮನೆಯವರ ಜತೆಗೆ ನಾವೂರಿನ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತೆರಳಿದ್ದರು. ಈ ವೇಳೆ ಮನೆ ಮಂದಿ ಇರುವಾಗಲೇ ಮಕ್ಕಳು ನೀರಿನಲ್ಲಿ ಆಟ ಆಡುತ್ತಾ ಇದ್ದರು. ಈ ಸಂದರ್ಭದಲ್ಲಿ ಇಬ್ಬರು ಮಕ್ಕಳು ಏಕಾ ಏಕಿ ನೀರಿನಲ್ಲಿ ಮುಳುಗಿದ್ದಾರೆ. ನೀರಿನಲ್ಲಿ ಮುಳುಗುವುದನ್ನು ಕಣ್ಣಾರೆ ಕಂಡರೂ ಈಜು ಬಾರದ ಕಾರಣ ಮಕ್ಕಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
FILM
ಸೋಶಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ಚಂದನ್ ಗೌಡ-ಕವಿತಾ ದಂಪತಿ
ಚಂದನ್ ಗೌಡ – ಕವಿತಾ ದಂಪತಿ ಯಾರಿಗೆ ತಾನೇ ಗೊತ್ತಿಲ್ಲ. ಈ ಜೋಡಿ ‘ಲಕ್ಷ್ಮೀ ಬಾರಮ್ಮಾ’ ಮೂಲಕಾನೇ ಫೇಮಸ್. ಈ ಧಾರಾವಾಹಿಯಲ್ಲಿ ಕೆಲವು ಸಮಯ ನಟಿಸಿದ್ದ ಚಂದನ್ ಹೊರಬಂದಿದ್ದರು. ಕವಿತಾ ಕೂಡಾ ಅಷ್ಟೇ ಈ ಧಾರಾವಾಹಿ ಖ್ಯಾತಿ ನೀಡಿದ್ದರೂ, ನಂತರ ದಿನಗಳಲ್ಲಿ ಹೊರನಡೆದಿದ್ದರು. ಆದ್ರೆ, ಈ ಜೋಡಿ ರಿಯಲ್ ನಲ್ಲಿ ಒಂದಾಗಿ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಇದೀಗ ಚಂದು – ಲಚ್ಚಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಖುಷಿ ಸುದ್ದಿ ಹಂಚಿಕೊಂಡ ದಂಪತಿ :
ನಟ ಚಂದನ್ ಕುಮಾರ್, ಕವಿತಾ ಗೌಡ ಅವರು ಬೇಬಿ ಸ್ಕ್ಯಾನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸಂಭ್ರಮ ಹಂಚಿಕೊಂಡಿದ್ದಾರೆ. ನಟಿ ಕವಿತಾ ಗೌಡ ಚಂದನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆಅಭಿಮಾನಿಗಳಿಂದ, ನಟ, ನಟಿಯರಿಂದ ಶುಭ ಹಾರೈಕೆ ಹರಿದು ಬರುತ್ತಿದೆ. ನೇಹಾ ಗೌಡ, ಗೀತಾ ಭಾರತೀ ಭಟ್, ಧನರಾಜ್, ವಿನಯ್ ಗೌಡ, ಪ್ರಿಯಾಂಕಾ ಚಿಂಚೋಳಿ ಮೊದಲಾದವರು ಶುಭಾಶಯ ತಿಳಿಸಿದ್ದಾರೆ. 2021 ಮೇ 14ರಂದು ಲಾಕ್ ಡೌನ್ ಸಂದರ್ಭದಲ್ಲಿ ಈ ಜೋಡಿ ಮದುವೆಯಾಗಿತ್ತು.
ಮುಂದೆ ಓದಿ..; ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್ಗೆ ಏನಾಗಿದೆ? ಎಂದು ಹೇಳಿದ್ಯಾಕೆ?
ಬ್ಯುಸಿ ಲೈಫ್ :
ಕೆಲ ತಿಂಗಳುಗಳಿಂದ ಕವಿತಾ ಗೌಡ ಅವರು ಉದ್ಯಮದ ಕಡೆಗೆ ಮುಖ ಮಾಡಿದ್ದರು. ಚಂದನ್ ಜೊತೆ ಸೇರಿ ಒಂದಾದ ಮೇಲೆ ಒಂದರಂತೆ ಹೋಟೆಲ್ ಬ್ರ್ಯಾಂಚ್ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಮೇಕಪ್ ಸ್ಟುಡಿಯೋವನ್ನು ಕೂಡ ಆರಂಭಿಸಿದ್ದಾರೆ.
FILM
ಬರ್ಬರ ಹತ್ಯೆಯಾದ ಬ್ಯೂಟಿ ಕ್ವೀನ್.!! ಮುಳುವಾಯಿತಾ ಇನ್ಸ್ಟಾಗ್ರಾಮ್ ಪೋಸ್ಟ್..! ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ
ಬ್ಯೂಟಿ ಕ್ವೀನ್ ಎಂದು ಕಿರೀಟ ಮುಡಿಗೇರಿಸಿಕೊಂಡವಳು ಎರಡೇ ವರ್ಷಕ್ಕೆ ಹಂತಕರ ಗುಂಡೇಟಿಕೆ ಬಲಿಯಾಗಿದ್ದಾಳೆ. ರೆಸ್ಟೋರೆಂಟ್ನಲ್ಲಿ ಆರಾಮವಾಗಿ ವಿರಾಮಿಸಿ ಬಗೆ ಬಗೆಯ ಸೀಫುಡ್ ಆರ್ಡರ್ ಮಾಡಿದ್ರು. ಇನ್ನೇನು ಫುಡ್ಅನ್ನು ಆಹ್ಲಾದಿಸಬೇಕು ಅನ್ನೋವಷ್ಟರಲ್ಲಿ ದುರಂತ ಅಂದ್ರೆ ಹಂತಕರ ಗುಂಡೇಟಿಗೆ ಈ ಸುಂದರಿ ಬಲಿಯಾಗಿದ್ದಾರೆ.
23ವರ್ಷಕ್ಕೆ ಬ್ಯೂಟಿ ಕ್ವೀನ್ ಆದ ಲ್ಯಾಂಡಿ
ಲ್ಯಾಂಡಿ ಪರ್ರಾಗಾ ಗೊಯ್ಬುರೊ ತನ್ನ 23 ವರ್ಷಕ್ಕೆ ಬ್ಯೂಟಿ ಕ್ವೀನ್ ಕಿರೀಟವನ್ನು ಮುಡಿಗೇರಿಸಿಕೊಂಡವಳು. 2022ರ ಮಿಸ್ ಈಕ್ವೆಡಾರ್ ಸ್ಪರ್ಧೆಯಲ್ಲಿ ಬ್ಯೂಟಿ ಕ್ವೀನ್ ಆಗಿ ಲಕ್ಷಾಂತರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾಳೆ. ಬಿಕಿನಿ ಕ್ವೀನ್ ಎಂದೆನಿಸಿಕೊಂಡ ಈಕೆ ಇನ್ಸ್ಟಾಗ್ರಾಮ್ನಲ್ಲಿ ಲಕ್ಷಾಂತರ ಫಾಲೋವರ್ಸ್ಗಳನ್ನು ಹೊಂದಿದ್ದಾಳೆ. ಹಲವು ಉದ್ಯಮಗಳನ್ನು ಕೂಡ ಈಕೆ ನಡೆಸುತ್ತಿದ್ದಳು. ಲ್ಯಾಂಡಿ ಪರ್ರಾಗಾ ಸಾವಿನ ಸುದ್ದಿ ಕೇಳಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.
ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್ಗೆ ಏನಾಗಿದೆ? ಎಂದು ಹೇಳಿದ್ಯಾಕೆ?
ಸಾವಿಗೆ ಕಾರಣವಾದ ಇನ್ಸ್ಟಾಗ್ರಾಮ್ ಪೋಸ್ಟ್:
ಎ.28ರಂದು ಕ್ವೆವೆಡೊ ನಗರದ ರೆಸ್ಟೋರೆಂಟ್ವೊಂದಕ್ಕೆ ಲ್ಯಾಂಡಿ ತೆರಳಿದ್ದರು. ಈ ವೇಳೆ ವೆರೈಟಿ ಸೀ ಫುಡ್ಗಳನ್ನು ಆರ್ಡರ್ ಮಾಡಿದ್ದಾರೆ. ಫುಡ್ಗಳು ಟೇಬಲ್ ಮೇಲೆ ಬಂದ ಕೂಡಲೇ ಫೊಟೋ ಕ್ಲಿಕ್ಕಿಸಿ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೊಟೋ ಲ್ಯಾಂಡಿಯ ಪ್ರಾಣಕ್ಕೆ ಕುತ್ತು ತಂದಿತ್ತು. ಹಂತಕರು ಪೋಸ್ಟ್ ಮಾಡಿದ್ದ ಫೊಟೋದ ಜಾಲವನ್ನು ಹಿಡಿದು ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು ಲ್ಯಾಂಡಿ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾರೆ. ರೆಸ್ಟೋರೆಂಟ್ಗೆ ಬಂದ ದುಷ್ಕರ್ಮಿಗಳು ಲ್ಯಾಂಡಿ ಮೇಲೆ ಗನ್ನಿಂದ ಶೂಟ್ ಮಾಡಿ ಪರಾರಿಯಾಗಿದ್ದಾರೆ. ಈಕ್ವೆಡಾರ್ನ ಸುಂದರಿ ದುಷ್ಕರ್ಮಿಗಳ ಗುಂಡೇಟಿಗೆ ರಕ್ತದ ಮಡುವಿನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಹಂತಕರು ಈಕೆಯ ಇನ್ಸ್ಟಾಗ್ರಾಮ್ನ್ನು ಫಾಲೋ ಮಾಡಿ ಹತ್ಯೆ ಮಾಡಿದ್ದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ವೀಡಿಯೋ ರೆಸ್ಟೋರೆಂಟ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹತ್ಯೆಗೆ ಕಾರಣವೇನು ಎಂಬುದನ್ನು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು ವಿಶೇಷ ತಂಡ ರಚನೆ ಮಾಡಿದ್ದಾರೆ. 2023ರಲ್ಲಿ ಅಟಾರ್ನಿ ಜನರಲ್ ಕಚೇರಿಯಲ್ಲಿ ನಡೆದ ಸಂಘಟಿತ ಅಪರಾಧ ಪ್ರಕರಣದಲ್ಲಿ, ಡ್ರಗ್ ಕಳ್ಳ ಸಾಗಾಣಿಕೆಯಲ್ಲಿ ಲ್ಯಾಂಡಿ ಹೆಸರು ಕೇಳಿಬಂದಿತ್ತು. ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದ ತನ್ನ ಬಾಯ್ಫ್ರೆಂಡ್ನಿಂದ ದೂರಾಗಿದ್ದ ಲ್ಯಾಂಡ್ರಿಯ ಈ ನಿಗೂಢ ಬರ್ಬರ ಹತ್ಯೆಗೆ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ.
- DAKSHINA KANNADA3 days ago
ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್ಗಳ ಹಗಲು ದರೋಡೆ..! ಏನಿದು ಘಟನೆ?
- FILM5 days ago
ಬಿಗ್ ಬಾಸ್ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ನಮ್ರತಾ ಗೌಡ!
- dehali4 days ago
ನಾಯಿಗಳಿಗೂ ಬಂತು ಆಧಾರ್ ಕಾರ್ಡ್.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?
- BELTHANGADY4 days ago
ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು