Connect with us

    LATEST NEWS

    ಅಪ್ರಾಪ್ತ ಸ್ವಂತ ಮಗನೊಂದಿಗೆ ತಾಯಿಯ ಅಶ್ಲೀಲ ಡ್ಯಾನ್ಸ್ : ಪ್ರಕರಣ ದಾಖಲು

    Published

    on

    ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆ, ಲೈಕ್ಸ್, ವೀಕ್ಷಕರು ಮತ್ತು ಅನುಯಾಯಿಗಳನ್ನು ಹೆಚ್ಚಿಸಲು ಹಲವರು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ.

    ಅದರಲ್ಲಿ ಕೆಲವರು ಮಾಡಬಾರದ ಹಲ್ಕಟ್ ಕೆಲಸಗಳನ್ನೂ ಮಾಡುತ್ತಾರೆ. ದೆಹಲಿಯ ಮಹಿಳೆಯೊಬ್ಬರು ಇಂತಹದ್ದೇ ನೀಚ ಕೆಲಸವನ್ನು ಮಾಡಿದ್ದಾರೆ.

    ಆಕೆ ತನ್ನ 12 ವರ್ಷದ ಮಗನೊಂದಿಗೆ ಮಾಡಿರುವ ನೃತ್ಯವನ್ನು ಕಂಡು ದೆಹಲಿ ಮಹಿಳಾ ಆಯೋಗ ಮತ್ತು ಪೊಲೀಸರು ಸಹ ಬೆರಗಾಗಿದ್ದಾರೆ. ಈ ತಾಯಿ ತನ್ನ 10-12 ವರ್ಷದ ಮಗನೊಂದಿಗೆ ಮಾಡಿರುವ ಅಂತಹ ನೃತ್ಯಗಳ ವೀಡಿಯೊಗಳನ್ನು ಅಶ್ಲೀಲವೆಂದು ಪರಿಗಣಿಸಿದ್ದಾರೆ.

    ದೆಹಲಿ ಮಹಿಳಾ ಆಯೋಗವು ಈಗ ಈ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದ್ದು ಕ್ರಮಕ್ಕೆ ಆದೇಶಿಸಿದೆ.
    ಮೂಲತಃ ದೆಹಲಿಯವರು ಎಂದು ಹೇಳಲಾಗುತ್ತಿರುವ ಈ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಸಿದ್ಧರಾಗಿದ್ದಾರೆ ಮತ್ತು 1.5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

    ಕೆಲವು ಸಮಯದ ಹಿಂದೆ ಮಹಿಳೆ ಡ್ಯಾನ್ಸ್ ವಿಥ್ ಸನ್ (Dance with Son) ಹೆಸರಿನಲ್ಲಿ ತನ್ನ ನೃತ್ಯದ ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದಳು.

    ಇದರಲ್ಲಿ ಮಹಿಳೆ ತನ್ನ ಸ್ವಂತ ಮಗನೊಂದಿಗೆ ಕಾಣಿಸಿಕೊಂಡಿದ್ದಾಳೆ. ಮಗನ ವಯಸ್ಸು ಕೇವಲ 10 ರಿಂದ 12 ವರ್ಷಗಳು ಎಂದು ಊಹಿಸಲಾಗಿದೆ. ಈ ವೀಡಿಯೊಗಳು ತುಂಬಾ ಬೋಲ್ಡ್ ಆಗಿವೆ ಎನ್ನಲಾಗಿದೆ.

    ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ಇಂತಹ ಕೆಲವು ವಿಡಿಯೋಗಳಲ್ಲಿ, ಮಹಿಳೆ ತನ್ನ 10-12 ವರ್ಷದ ಮಗನೊಂದಿಗೆ ಅಶ್ಲೀಲ ನೃತ್ಯ ಮತ್ತು ನಟನೆಯನ್ನು ಕಾಣಬಹುದು.

    ಈ ರೀತಿಯ ಹಲವಾರು ಅಶ್ಲೀಲ ವೀಡಿಯೊಗಳ ಬಗ್ಗೆ ಅಸಮಾಧಾನ ಅವ್ಯಕ್ತಪಡಿಸಿರುವ ದೆಹಲಿ ಮಹಿಳಾ ಆಯೋಗವು (Delhi Mahila Ayog), ಈ ಚಿಕ್ಕ ವಯಸ್ಸಿನಲ್ಲಿ, ಮಗುವನ್ನು ಮಹಿಳೆಯರನ್ನು ವಸ್ತುವಾಗಿ ನೋಡಲು ಕಲಿಸಲಾಗುತ್ತಿದೆ,

    ಅದೂ ಕೂಡ ಅವನ ತಾಯಿಯಿಂದಲೇ ಎಂಬುದು ವಿಪರ್ಯಾಸ. ಅಂತಹ ವೀಡಿಯೊವನ್ನು ಮಾಡುವ ಮೂಲಕ, ಮಗುವಿಗೆ ತಪ್ಪು ಶಿಕ್ಷಣವನ್ನು ನೀಡಲಾಗುತ್ತಿದೆ ಮತ್ತು ತಾಯಿ ಮತ್ತು ಮಗನ ನಡುವಿನ ಪವಿತ್ರ ಸಂಬಂಧವನ್ನು ಸಹ ಕಳಂಕಿತಗೊಳಿಸಲಾಗುತ್ತಿದೆ ಎಂದು ಹೇಳಿದೆ.

    Baindooru

    ಪತಿ ಮೇಲೆ ಅನುಮಾನ; ಇಬ್ಬರು ಮಕ್ಕಳನ್ನು ಕೊಂ*ದ ಪಾಪಿ ತಾಯಿ!

    Published

    on

    ಮಂಗಳೂರು/ಬೆಂಗಳೂರು : ರಾಜ್ಯವೇ ಬೆಚ್ಚಿ ಬೀಳುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  ಕ್ರೂ*ರಿ ತಾಯಿಯೊಬ್ಬಳು ತನ್ನ ಪುಟ್ಟ ಕಂದಮ್ಮಗಳನ್ನು ಕೊಂ*ದಿರುವ ಅಮಾನವೀಯ ಘಟನೆ ನಡೆದಿದೆ. ಅಲ್ಲದೇ ಬಳಿಕ ಆಕೆ ಆತ್ಮಹ*ತ್ಯೆಗೂ ಯತ್ನಿಸಿದ್ದಾಳೆ .

    ಎಲ್ಲವೂ ಚೆನ್ನಾಗಿತ್ತು…ಅನುಮಾನ ಶುರುವಾಯ್ತು :

    ಆ ಕುಟುಂಬ ಕಳೆದ ತಿಂಗಳಷ್ಟೇ ಜಾರ್ಖಂಡ್ ನಿಂದ ಬಂದು ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ವಾಸವಾಗಿತ್ತು.  ಪತಿ ಸುನೀಲ್ ಸಾಹೋ, ಪತ್ನಿ ಮಮತಾ ಸಾಹೋ, ಮಕ್ಕಳಾದ ಶಂಭು ಸಾಹೋ, ಶಿಯಾ ಸಾಹೋ…ಪುಟ್ಟ ಸಂಸಾರ…ಸಣ್ಣದೊಂದು ಬಾಡಿಗೆ ಮನೆಯಲ್ಲಿ ವಾಸ…ಆಟೋ ಚಾಲಕನಾಗಿ ದುಡಿಯುತ್ತಿದ್ದ ಸುನೀಲ್ ಸಾಹೋ..ಹೀಗೆ ಸಂಸಾರ ಸಾಗುತ್ತಿತ್ತು. ಎಲ್ಲವೂ ಸರಿಯಾಗಿತ್ತು. ಅದ್ಯಾವಾಗ ಗಂಡನ ಬಗ್ಗೆ ಅ*ನೈತಿಕ ಸಂಬಂಧದ ಅನುಮಾನ ಹುಟ್ಟಿಕೊಂತೋ ಎಲ್ಲವೂ ಎಕ್ಕುಟ್ಹೋಗಿತ್ತು. ಪತಿ ಬೇರೊಂದು ಯುವತಿಯೊಂದಿಗೆ ಮಾತಾಡುತ್ತಿರುವುದನ್ನು ಮಮತಾ ಕೇಳಿಸಿಕೊಂಡಿದ್ದಳಂತೆ. ಇದೇ ದಂಪತಿ ನಡುವೆ ನಿತ್ಯ ಜಗಳಕ್ಕೆ ಬುನಾದಿ ಹಾಕಿತ್ತಂತೆ. ನಿನ್ನೆಯೂ(ನ.21) ಜಗಳ ಮುಂದುವರಿದಾಗ ಸುನೀಲ್ ಆಟೋ ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ.

    ಗಂಡ ಹೊರಹೋದ ಮೇಲೆ ಬಾಗಿಲು ಹಾಕಿ, ಇತ್ತ ಮಕ್ಕಳಿಬ್ಬರನ್ನೂ ಕತ್ತು ಹಿಸುಕಿ ಮಮತಾ ಕೊಂ*ದಿದ್ದಾಳೆ. ಬಳಿಕ ತಾನೂ ಚಾ*ಕುವಿನಿಂದ ಕತ್ತು ಕೊ*ಯ್ದುಕೊಂಡಿದ್ದಾಳೆ. ಎಲ್ಲ ಆದ ಮೇಲೆ ತಪ್ಪಿನ ಅರಿವಾಗಿ ಪತಿಗೆ ಸೆಲ್ಫಿ ಫೋಟೋ ಕಳುಹಿಸಿದ್ದಾಳೆ. ಅಷ್ಟೇ ಅಲ್ಲ,  ‘ಗಲತ್ ಹೋಗಯಾ…ಮಾಫ್ ಕರೋ’ ಅಂತ ಮೆಸೇಜ್ ಬೇರೆ ಹಾಕಿದ್ದಾಳೆ.

    ಇದನ್ನೂ ಓದಿ : ತಮಾಷೆಗಾಗಿ ಕ*ಪಾಳಮೋಕ್ಷ; ಸೋದರ ಮಾವನಿಂದ 3 ವರ್ಷದ ಮಗುವಿನ ಜೀ*ವಾಂತ್ಯ

    ಮೆಸೇಜ್ ನೋಡಿದ ತಕ್ಷಣ ಮನೆಯತ್ತ ದೌಡಾಯಿಸಿದ ಪತಿ ಬಾಗಿಲು ಒಡೆದು ಒಳ ಹೋಗಿ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ನೀಡಿದ್ದಾನೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಮಮತಾ ಸಾಹೋ ಪ್ರಾ*ಣಾ*ಪಾಯದಿಂದ ಪಾರಾಗಿದ್ದಾಳೆ. ಆದರೆ, ಏನೂ ಅರಿಯದ ಕಂದಮ್ಮಗಳು ಪತಿ – ಪತ್ನಿ ಜಗಳಕ್ಕೆ ಬ*ಲಿಯಾಗಿವೆ.

    Continue Reading

    LATEST NEWS

    ನೀರಸ ಪ್ರದರ್ಶನ ಮುಂದುವರಿಸಿದ ಭಾರತ: ವಿವದಾತ್ಮಕ ತೀರ್ಪಿಗೆ ರಾಹುಲ್ ಬಲಿ !

    Published

    on

    ಮಂಗಳೂರು/ಆಸ್ಟ್ರೇಲಿಯಾ: ಪರ್ತ್ ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ನಲ್ಲಿ ಪ್ರವಾಸಿ ಭಾರತ ತಂಡ ತನ್ನ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದೆ.


    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಕೆ ಎಲ್ ರಾಹುಲ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ ಸ್ವಲ್ಪ ಹೊತ್ತು ಕ್ರೀಸ್ ನಲ್ಲಿ ನಿಂತಿದ್ದು ಬಿಟ್ಟರೆ, ಉಳಿದವರಿಂದ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ನೀಡಿದ್ದ ಅದೇ ನೀರಸ ಪ್ರದರ್ಶನ ಮುಂದುವರಿಯಿತು.
    ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಜೊತೆಯಾಟ ಮುಂದುವರಿಸಲು ಸಾಧ್ಯವಾಗಲಿಲ್ಲ. 5 ರನ್ ಅಷ್ಟೇ ಜೊತೆಯಾಟವಾಡಿದ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್ ರಾಹುಲ್ ಜೋಡಿ, ಜೈಸ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸುವುದರ ಮೂಲಕ ಆರಂಭಿಕ ನಿರಾಸೆ ಮೂಡಿಸಿದರು. ನಂತರ ಬಂದ ದೇವದತ್ ಪಡಿಕ್ಕಲ್, ಜೋಶ್ ಹೇಜಲ್ ವುಡ್ ಮಾರಕ ದಾಳಿಗೆ ಖಾತೆ ತೆರೆಯಲು ಕೂಡ ಸಾಧ್ಯವಾಗದೇ ಪೆವಿಲಿಯನ್ ಗೆ ಮರಳಿದರು.

    ಇದನ್ನೂ ಓದಿ:ನ್ಯೂ ಇಯರ್ ನಶೆಗೆ ಸಿಸಿಬಿ ಬ್ರೇಕ್‌..! 6 ಕೋಟಿ ಮೌಲ್ಯದ ಡ್ರ*ಗ್ಸ್‌ ಜಪ್ತಿ..!
    ಅಪಾರ ನಿರೀಕ್ಷೆಗಳ ಸಾಗರವೇ ಹೊತ್ತು ಬ್ಯಾಟಿಂಗ್ ಗೆ ಇಳಿದಿದ್ದ ವಿರಾಟ್ ಕೊಹ್ಲಿ ಮತ್ತೆ ನಿರಾಸೆ ಮೂಡಿಸಿದ್ದಾರೆ, ಕೇವಲ 5 ರನ್ ಗಳಸಿ ಔಟಾದರು. ನಂತರ ಬಂದ ಪಂತ್ ಆಟ ಲಯಕ್ಕೆ ತಂದರಾದರೂ ಇವರಿಗೆ ಯಾರೂ ಕೂಡ ಜೋಡಿಯಾಗಿ ನಿಲ್ಲಲೇ ಇಲ್ಲ. ಧ್ರುವ್ ಜುರೆಲ್ 11 ರನ್ ಗಳಿಗೆ ಔಟಾದರೆ, ವಾಷಿಂಗ್ಟನ್ ಸುಂದರ್ ಕೂಡ ನಾಲ್ಕು ರನ್ ಗೆ ಸುಸ್ತಾದರು. ಆದರೆ 7 ನೇ ವಿಕೆಟ್ ಗೆ ಪಂತ್‌ ಮತ್ತು ನಿತೀಶ್ 48 ರನ್ ಗಳ ಜೊತೆಯಾಟ ನೀಡಿದರು.
    ನಂತರ ಬಂದ ಹರ್ಷಿತ್ ರಾಣಾ 7 ರನ್ ಗಳಿಸಿ ಔಟಾದರು. ಇನ್ನೂ ಬುಮ್ರಾ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತದ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರಿಯಿತು.

    ಅಂಪೈರ್ ತೀರ್ಪು ವಿರುದ್ದ ರಾಹುಲ್ ಅಸಮಾಧಾನ:

    ಮಿಚೆಲ್ ಸ್ಟಾರ್ಕ್ ಎಸೆತವನ್ನು ರಾಹುಲ್ ಹೊಡೆಯಲು ಮುಂದಾದಾಗ, ಅದು ರಾಹುಲ್ ಅವರ ಬ್ಯಾಟ್ ನ ಸಮೀಪ ಹಾದು ಹೋಗಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕ್ಯಾಚ್ ಹಿಡಿದರು. ತಕ್ಷಣವೇ ಫೀಲ್ಡ್ ಅಂಪೈರ್ ಬಳಿ ಮನವಿ ಮಾಡಿದರು. ನಂತರ ಆಸೀಸ್ ತಂಡ ಥರ್ಡ್ ಅಂಪೈರ್ ಮೊರೆ ಹೋದರು. ಇದನ್ನು ಪುರಸ್ಕರಿಸಿದ ಮೂರನೇ ಅಂಪೈರ್ ರಾಹುಲ್ ಔಟ್ ಎಂದು ಘೋಷಿಸಿದರು.
    ಸ್ಟಾರ್ಕ್ ಎಸೆದ ಚೆಂಡು ರಾಹುಲ್ ಬ್ಯಾಟ್ ತಾಗಿದೆಯೇ ಅಥವಾ ಪ್ಯಾಡ್ ಗೆ ತಾಗಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲ. ರೀಪ್ಲೇಯಲ್ಲಿ ವಿವಿಧ ಆಯಾಮಗಳಿಂದ ಪರಿಶೀಲಿಸಿದ ನಂತರ, ಸ್ನಿಕ್ಕೋಮೀಟರ್ ಏರಿಳಿತವನ್ನು ಆಧರಿಸಿ ರಾಹುಲ್ ಔಟ್ ಎಂದು ತೀರ್ಪು ನೀಡಲಾಯಿತು. ಇದರಿಂದ ರಾಹುಲ್ ಅಸಮಾಧಾನದಿಂದಲೇ ಹೊರ ನಡೆದರು.

    Continue Reading

    Baindooru

    ನ್ಯೂ ಇಯರ್ ನಶೆಗೆ ಸಿಸಿಬಿ ಬ್ರೇಕ್‌..! 6 ಕೋಟಿ ಮೌಲ್ಯದ ಡ್ರ*ಗ್ಸ್‌ ಜಪ್ತಿ..!

    Published

    on

    ಬೆಂಗಳೂರು : ಮಾದಕ ವಸ್ತು ಮಾರಾಟ, ಸಾಗಾಟ ಜಾಲದ ಮೇಲೆ ಕಣ್ಣಿಟ್ಟಿರುವ ಸಿಸಿಬಿ ಅಧಿಕಾರಿಗಳು ಬರೋಬ್ಬರಿ 6 ಕೋಟಿ ರೂ. ಮೌಲ್ಯದ ಮಾ*ದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಹಾಗೂ ಸಿಸಿಬಿ  ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ  ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಹೊಸ ವರ್ಷಕ್ಕೆ ಗಾಂ*ಜಾ ಸಪ್ಲೈ :
    ಹೊಸ ವರ್ಷಾಚರಣೆಯ ಸಲುವಾಗಿ ಕ್ವಿಂಟಾಲ್ ಗಟ್ಟಲೆ ಗಾಂ*ಜಾ ಸಪ್ಲೈ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಪೆಡ್ಲರ್ ಅಚ್ಚು ಹಾಗೂ ಜಮೀರ್, ರೇಷ್ಮಾ ದಂಪತಿ ಬಂಧಿತರು. ಆರೋಪಿಗಳಿಂದ 3.25 ಕೋಟಿ ರೂಪಾಯಿ ಮೌಲ್ಯದ 318 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.

    ಮೂವರು ಆರೋಪಿಗಳು ಒಡಿಶಾ ಮತ್ತು ಆಂಧ್ರದಲ್ಲಿ ಗಾಂ*ಜಾ ಸಂಗ್ರಹಿಸಿದ್ದರು. ಹೊಸ ವರ್ಷಾಚರಣೆ ವೇಳೆ ಬೆಂಗಳೂರು, ಕೇರಳದಲ್ಲಿ ಮಾರಾಟ ಮಾಡಲು ಯೋಜಿಸಿದ್ದರು. ಜಮೀರ್ ಮತ್ತು ರೇಷ್ಮಾ ದಂಪತಿ ಬೆಂಗಳೂರಿನಲ್ಲಿ, ಪೆಡ್ಲರ್ ಅಚ್ಚು ಕೇರಳದಲ್ಲಿ ಗಾಂ*ಜಾ ಮಾರಲು ನಿರ್ಧರಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

    ಬೆಂಗಳೂರು ಮತ್ತು ಕೇರಳಕ್ಕೆ ಸಾಗಿಸಲು ಆರೋಪಿಗಳು ಸೆಲ್ಫ್ ಡ್ರೈವಿಂಗ್ ಕಾರು ಬಾಡಿಗೆಗೆ ಪಡೆದಿದ್ದರು. ಬಳಿಕ ಬೆಡ್ ಶೀಟ್ ನಲ್ಲಿ ಗಾಂಜಾ ತುಂಬಿ ಕಾರಿನಲ್ಲಿ ಬೆಂಗಳೂರಿಗೆ ತರುತ್ತಿದ್ದರು . ಗಾಂಜಾ ತರುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗೋವಿಂದಪುರ ಠಾಣೆ ಪೊಲೀಸರು ಹೆಚ್ ಬಿ ಆರ್ ಲೇಔಟ್ ಬಳಿ ಕಾರನ್ನು ಅಡ್ಡ ಹಾಕಿದ್ದಾರೆ. ಪೊಲೀಸರು ಪರಿಶೀಲನೆ ನಡೆಸುವಾಗ ಕಾರಿನಲ್ಲಿ 3 ಕೋಟಿ ರೂ. ಮೌಲ್ಯದ ಗಾಂ*ಜಾ ಪತ್ತೆಯಾಗಿದೆ. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಡ್ರಗ್ ಪೆಡ್ಲರ್ ಅಚ್ಚು ಕೇರಳ ಪೊಲೀಸರಿಗೆ ಬೇಕಾದ ಮೋಸ್ಟ್ ವಾಂಟೆಡ್  ಆರೋಪಿ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದ್ದು, ಆತನ ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

    ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ಸ್ ಅರೆಸ್ಟ್ :

    ಬೆಂಗಳೂರಿನಲ್ಲಿ ವಿದೇಶಿ ಡ್ರ*ಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಬಂಧಿತರ ಬಳಿಯಿದ್ದ 3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಡ್ರಗ್ಸ್ ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ದಾ*ಳಿ ನಡೆಸಿದ ಸಿಸಿಬಿ ಅಧಿಕಾರಿಗಳು,  1 ಕೆಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್, 202 ಗ್ರಾಂ ಕೊಕೇನ್, 12 ಗ್ರಾಂ ಎಂಡಿಎಂಎ ಎಕ್ಸೆಟೆಸಿ ಪಿಲ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.

    ಇದನ್ನೂ ಓದಿ : ಏನಾಶ್ಚರ್ಯ ? ಈ ಡಯಟ್​ನಿಂದ ಪತ್ನಿಯ 4ನೇ ಸ್ಟೇಜ್ ಸ್ತನ ಕ್ಯಾನ್ಸರ್ ಮಾಯ !!
    ಆರೋಪಿಗಳು ಮುಂಬೈನಿಂದ ಬೆಂಗಳೂರಿಗೆ ಡ್ರ*ಗ್ಸ್ ತರಿಸುತ್ತಿದ್ದರು. ಹೊಸ ವರ್ಷಾಚರಣೆಯಂದು ಬೆಂಗಳೂರಿನಲ್ಲಿ ಮಾರಲು ಸಜ್ಜಾಗಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ, ಈ ವಿದೇಶಿ ಪೆಡ್ಲರ್ ಗಳು ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದಿದ್ದರು ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.

    Continue Reading

    LATEST NEWS

    Trending