Tuesday, January 31, 2023

ಚಿತ್ರಕಲೆ ಸ್ಪರ್ಧೆಯಲ್ಲಿ ಮೂಡುಬಿದಿರೆಯ ವಿರಾಟ್‌ಕೃಷ್ಣ ರಾಜ್ಯಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ಆಜಾದಿ ಕಾ ಅಮೃತ್ ಮಹೋತ್ಸವ ಎಂಬ ಶೀರ್ಷಿಕೆಯಲ್ಲಿ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಕಬ್ ವಿಭಾಗದಲ್ಲಿ‌ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯೋರ್ವ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.


ಆಳ್ವಾಸ್ ಆಂಗ್ಲಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ವಿರಾಟ್ ಕೃಷ್ಣ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಸೂಚನೆಯಂತೆ ಕಬ್, ಬುಲ್ ಬುಲ್, ಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್ಸ್ ವಿಭಾಗಕ್ಕೆ ಆಯೋಜಿಸಿದ್ದ ಚಿತ್ರಕಲಾ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನಿಯಾಗಿದ್ದಾನೆ.

ವಿರಾಟ್ ಕೃಷ್ಣ ಇತ್ತೀಚೆಗೆ ಸ್ಕೌಟ್ ಮತ್ತು ಗೈಡ್ಸ್ ವತಿಯಿಂದ ಮೂಡುಬಿದಿರೆಯಲ್ಲಿ ನಡೆದ ಕಬ್ ವಿಭಾಗದ ತಾಲೂಕು ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಆಯ್ಕೆಯಾಗಿದ್ದಾನೆ.

ಹಾಗೂ ವಲಯ ಮಟ್ಟದ ಪ್ರತಿಭಾ ಕಾರಂಜಿಯ ಪ್ರಾಥಮಿಕ ಶಾಲಾ ಮಟ್ಟದ ಕಥೆ ಹೇಳುವುದು ಮತ್ತು ಧಾರ್ಮಿಕ ಪಠಣ ವಿಭಾಗದಲ್ಲಿ ಕೂಡಾ ಪ್ರಥಮ ಸ್ಥಾನಿಯಾಗಿದ್ದಾನೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು : ಮೊಬೈಲ್ ಬಳಕೆಗೆ ಗದರಿದ ತಾಯಿ – ನೇಣಿಗೆ ಕೊರಳೊಡ್ಡಿದ ಬಾಲಕ..!

ಮಂಗಳೂರು : ಮೊಬೈಲ್ ಬಳಕೆಯ ಬಗ್ಗೆ ತಾಯಿ ಗದರಿಸಿದರು ಎಂಬ ಕಾರಣಕ್ಕೆ ಬಾಲಕ ಜೀವಾಂತ್ಯ ಮಾಡಿದ ಘಟನೆ ಮಂಗಳೂರು ನಗರದ ಕುಲಶೇಖರ ಕೋಟಿಮುರ ಅಪಾರ್ಟ್ ಒಂದಲ್ಲಿ ನಡೆದಿದೆ.ಜಗದೀಶ್ ಹಾಗೂ ವಿನಯ ದಂಪತಿಗಳ ಮಗನಾದ...

“ನಾಯಿ ಥರ ಅವರ ಹಿಂದೆ ಹೋಗ್ತಾರಲ್ವಾ..ನಾಚಿಕೆ ಇಲ್ವಾ.!?” ಉಳ್ಳಾಲ ಪೊಲೀಸರಿಗೆ ಶಾಸಕ ಖಾದರ್ ಕ್ಲಾಸ್..!

ಮಂಗಳೂರು: ಜನ ಸಾಮಾನ್ಯರ ಮನೆಯ ತಳಪಾಯ ಬಿದ್ದುಹೋಗುವ ಸ್ಥಿತಿ ನಿರ್ಮಾಣ ಮಾಡಿದ ಮರಳು ಮಾಫಿಯಾ ವಿರುದ್ದ ಉಳ್ಳಾಲ ಶಾಸಕ ಯು ಟಿ. ಖಾದರ್ ಗರಂ ಆಗಿದ್ದಾರೆ.ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗದ ಉಳ್ಳಾಲ ಪೊಲೀಸರು...

ಕಾರವಾರ : ಕಾಡುಹಂದಿ ಮಾಂಸ ಎಂದು ನಂಬಿಸಿ ನಾಯಿ ಮಾಂಸ ಮಾರಾಟ..! ಇಬ್ಬರ ಬಂಧನ

ಕಾಡುಹಂದಿ ಮಾಂಸ ಎಂದು ನಂಬಿಸಿ ಊರು ಹಂದಿ, ನಾಯಿ ಮಾಂಸ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳನ್ನು ಹಿಡಿದು ಸಾರ್ವಜನಿಕರು ಥಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕಾರವಾರ:...