Connect with us

    DAKSHINA KANNADA

    ರಾಜ್ಯದಲ್ಲಿ ಮುಂಗಾರು ಚುರುಕು: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

    Published

    on

     ರಾಜ್ಯದಲ್ಲಿ ತಡವಾಗಿ ಆರಂಭವಾದ ಮುಂಗಾರು ಚುರುಕುಗೊಂಡಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜೂನ್ 24ರಿಂದ 28ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
    ಬೆಂಗಳೂರು :. ಬೀದರ್, ಕಲಬುರಗಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಮಳೆಯಾಗುವ ಸಂಭವವಿದ್ದು, ಜೂನ್ 27 ರಿಂದ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ನೀಡಿದೆ.

    ರಾಜ್ಯದಲ್ಲಿ ವಾಡಿಕೆಗಿಂತ ತಡವಾಗಿ ಆಗಮಿಸಿರುವ ಮುಂಗಾರು ಜೂನ್ 18ರವರೆಗೆ ದುರ್ಬಲಗೊಂಡಿತ್ತು. ಇದರಿಂದಾಗಿ ಪ್ರಸಕ್ತ ತಿಂಗಳಲ್ಲಿ ಹೇಳಿಕೊಳುವಷ್ಟೂ ಮಳೆ ಬಿದ್ದಿಲ್ಲ.

    ಕೆಲವೆಡೆ ಮಾತ್ರ ಒಂದೆರೆಡು ದಿನಗಳು ಜೋರಾಗಿ ಬಿದ್ದರೆ, ಉಳಿದ ಭಾಗಗಳಲ್ಲಿ ಸಾಧಾರಣ ಮಳೆಯಾಗಿತ್ತು.

    ಈಗ ಮುಂಗಾರು ಇನ್ನಷ್ಟು ಚುರುಕುಗೊಂಡಿದ್ದರಿಂದ ಮುಂದಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

    ಬಿಪೊರ್‌ಜಾಯ್ ಚಂಡಮಾರುತವು ತೇವಾಂಶಭರಿತ ಮೋಡಗಳನ್ನು ಸೆಳೆದುಕೊಂಡಿದ್ದು ದುರ್ಬಲಗೊಂಡಿದ್ದ ಮುಂಗಾರು ಮಾರುತಗಳು ಈಗ ರಾಜ್ಯಾದ್ಯಂತ ಆವರಿಸುತ್ತಿವೆ.

    ಕಳೆದ ಎರಡು ದಿನಗಳಿಂದ ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಾರುತಗಳು ತುಸು ಪ್ರಬಲಗೊಂಡಿದ್ದು ಮೋಡ ಕವಿದ ವಾತಾವರಣದೊಂದಿಗೆ ಅಗಾಗ್ಗೆ ಮಳೆಯಾಗುತ್ತಿದೆ.

    ಅರಬ್ಬಿ ಸಮುದ್ರದಲ್ಲಿ ಮುಂಗಾರು ಇನ್ನಷ್ಟು ಮುನ್ನಡೆಯಲು ಪೂರಕ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ಉತ್ತರ ಒಳನಾಡಿಗೂ ಮಾರುತಗಳು ಪ್ರವೇಶಿಸಿವೆ.

    ಈ ಹಿಂದೆಯೇ ಜೂನ್ 25ರಿಂದ ಈ ಭಾಗದಲ್ಲಿ ಜೋರಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.

     

     

    DAKSHINA KANNADA

    ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾ*ವು

    Published

    on

    ತೆಲಂಗಾಣ: ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾ*ವನ್ನಪ್ಪಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಚಿಂತಕಣಿಲ್ಲಿ ಶುಕ್ರವಾರ ನಡೆದಿದೆ.

    ಅಂಜಲಿ ಕಾರ್ತಿಕಾ (9) ಮೃ*ತ ಬಾಲಕಿ. ಮೊಬೈಲ್​​​ನಲ್ಲಿ ಆಟವಾಡುತ್ತಿರುವ ವೇಳೆ ಚಾರ್ಜ್ ಖಾಲಿಯಾಗಿದ್ದು, ಅಂಜಲಿ ಮೊಬೈಲ್ ಚಾರ್ಜ್ ಮಾಡಲು ಹೋಗಿದ್ದಾಳೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿದ್ದು, ಬಾಲಕಿ ಕುಸಿದು ಬಿದ್ದಿದ್ದಾಳೆ.

    ಕುಸಿದು ಬಿದ್ದು ಒದ್ದಾಡುತ್ತಿರುವ ಬಾಲಕಿಯನ್ನು ಗಮನಿಸಿದ ಆಕೆಯ ಪೋಷಕರು ತಕ್ಷಣ ಗ್ರಾಮದ ಖಾಸಗಿ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆದರೆ ಬಾಲಕಿ ಅದಾಗಲೇ ಮೃ*ತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

    ಬಾಲಕಿ ಆಟವಾಡುತ್ತಿದ್ದಂತೆ ಒದ್ದೆ ಕೈಯಲ್ಲಿ ಹೋಗಿ ವಿದ್ಯುತ್ ಸ್ಪರ್ಶಿಸಿರುವುದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಕೆಲ ಹೊತ್ತಿನ ಹಿಂದೆ ಮನೆಯಲ್ಲಿ ಕುಣಿದು ಕುಪ್ಪಳಿಸುತ್ತಾ ಆಟವಾಡುತ್ತಿದ್ದ ಬಾಲಕಿ ಏಕಾಏಕಿ ಪ್ರಾ*ಣ ಕಳೆದುಕೊಂಡಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಮೃ*ತ ಬಾಲಕಿ ಅಂಜಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿ. ತಂದೆ ರಾಮಕೃಷ್ಣ ದೂರಿನ ಮೇರೆಗೆ ಎಸ್‌ಎಸ್‌ಐ ನಾಗುಲ್ಮೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    DAKSHINA KANNADA

    ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ

    Published

    on

    ಚಾರ್ಮಾಡಿ: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿದು ಟ್ರಾಫಿಕ್ ಜಾಮ್ ಆದ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ.

    ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಚಾರ್ಮಾಡಿಘಾಟ್‌ನ 10ನೇ ತಿರುವಿನಲ್ಲಿ ಗುಡ್ಡ ಕುಸಿದಿದ್ದು ಚಾರ್ಮಾಡಿ ಘಾಟ್​ನಿಂದ ಕೊಟ್ಟಿಗೆಹಾರದವರೆಗೂ ವಾಹನಗಳು ನಿಂತಲ್ಲೇ ನಿಂತಿದ್ದವು. ಬಳಿಕ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಯ್ತು.

    ಅತ್ತ ಮಂಗಳೂರಿಗೆ ತೆರಳುವವರನ್ನು ಪೊಲೀಸರು ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲೇ ವಾಹನಗಳನ್ನು ತಡೆದು ವಾಪಸ್ ಕಳಿಸಿದ್ದಾರೆ. ಅತ್ತ ಉಜಿರೆ ಬಳಿಯೂ ಚಾರ್ಮಾಡಿ ಘಾಟ್ ಪ್ರವೇಶ ನಿರ್ಬಂಧಿಸಲಾಗಿತ್ತು.

    Continue Reading

    DAKSHINA KANNADA

    ಅರ್ಜುನ್​ ಪತ್ತೆಗೆ ಸೇನೆಗೆ ಸಹಾಯ..! ಶಿರೂರಿಗೆ ಈಶ್ವರ ಮಲ್ಪೆಗೆ ಬುಲಾವ್..!

    Published

    on

    ಅಂಕೋಲ: ಶಿರೂರು ಗುಡ್ಡ ಕುಸಿತ ಪ್ರಕರಣ ಸಂಭವಿಸಿ ಇಂದಿಗೆ 12 ದಿನವಾಗಿದೆ. ನಾಪತ್ತೆಯಾದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನದಿಯ ದಡದಲ್ಲಿ ಈಗಾಗಲೇ ಹುಡುಕಾಟ ಮುಗಿದಿದ್ದು, ಲಾರಿ ಮತ್ತು ಚಾಲಕ ಅರ್ಜುನ್​ ನದಿಯೊಳಗೆ ಇದ್ದಾರೆ ಎಂದು ಹೇಳಲಾಗುತ್ತಿದೆ. ಅತ್ತ ಗೋಕಾಕ್ ನಿಂದ ಬಂದ ಪೋಕ್ಲೈನ್ ತನ್ನ ಕೆಲಸ ಮುಗಿಸಿದ್ದು, ವಾಪಾಸ್ ಆಗುತ್ತಿದೆ.

    ಇಂದು ಅರ್ಜುನ್​ಗಾಗಿ ಮುಳುಗು ತಜ್ಞರಿಂದ ಹುಡುಕಾಟ ನಡೆಯಲಿದೆ. ಈಶ್ವರ್ ಮಲ್ಪೆ ತಂಡ ಇಂದು ಶಿರೂರಿಗೆ ಬರಲಿದ್ದು, ಅರ್ಜುನ್​​ಗಾಗಿ ಹುಡುಕಾಡಲಿದ್ದಾರೆ. ಜಿಲ್ಲಾಡಳಿತದ ಮನವಿ ಮೇರೆಗೆ ಮುಳುಗು ತಜ್ಞರ ತಂಡ ಶಿರೂರಿಗೆ ಆಗಮಿಸಲಿದ್ದಾರೆ.

     

    ಗಂಗಾವಳಿ ನದಿಯಲ್ಲಿ ನೀರಿನ ವೇಗ ಹೆಚ್ಚಿರುವ ಹಿನ್ನಲೆಯಲ್ಲಿ, ನೀರಿನೊಳಗೆ ಹೋಗಲು ನೌಕಾದಳದ ಮುಳುಗು ತಜ್ಞರು ಹಿಂದೇಟು ಹಾಕಿದ್ದಾರೆ. ಈ ವೇಳೆ ಶಾಸಕ ಸತೀಶ್ ಸೈಲ್ ಸ್ಥಳೀಯ ಮೀನುಗಾರ ಹಾಗೂ ಈಶ್ವರ್ ಮಲ್ಪೆ ಸಹಾಯ ಕೇಳಿದ್ದಾರೆ.

    ಇಂದು ಅರ್ಜುನ್​ ಮತ್ತು ಲಾರಿ ಪತ್ತೆಯಾದರೆ ನದಿಯ ಕೆಳಗೆ ಸುಮಾರು 20 ಅಡಿ ಆಳದಲ್ಲಿರುವ ಲಾರಿ ಮೇಲಕ್ಕೆ ಎತ್ತಲು ಪ್ರಯತ್ನ ನಡೆಯಲಿದೆ.

    Continue Reading

    LATEST NEWS

    Trending