Connect with us

KADABA

ಕಡಬದಲ್ಲಿ ಮೊಬೈಲ್‌ ಎಗರಿಸಿದ ಯುವಕ: ಸಿಸಿಟಿವಿಯಲ್ಲಿ ಕೃತ್ಯ ಬಯಲು

Published

on

ಕಡಬ: ಬ್ಯಾಂಕಿನಲ್ಲಿ ಬಾಕಿಯಾಗಿದ್ದ ಮಹಿಳೆಯೊಬ್ಬರ ಮೊಬೈಲನ್ನು ಹೆಲ್ಮೆಟ್ ಧರಿಸಿದ ಯುವಕನೊಬ್ಬ ಎಗರಿಸಿದ ಘಟನೆ  ಜಿಲ್ಲೆಯ  ಕಡಬ ಠಾಣೆಯ ಮುಖ್ಯ ಪೇಟೆಯ ಎ.ಟಿ.ಎಂ ಕೇಂದ್ರದಲ್ಲಿ ನಡೆದಿದೆ.

ಕಡಬದ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನ ಎಟಿಎಂ ಕೇಂದ್ರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ  ಯೋಜನೆಯ ಸೇವಾ ಪ್ರತಿನಿಧಿ ರೇಖಾ ಎಂಬವರು  ಹಣ ಪಡೆಯಲು ಬಂದಿದ್ದರು. ಈ ಸಂದರ್ಭದಲ್ಲಿ ಹಣ ಬಾರದ ಹಿನ್ನೆಲೆಯಲ್ಲಿ  ಮೊಬೈಲ್ ಅಲ್ಲೆ ಬಿಟ್ಟು ಪಕ್ಕದಲ್ಲಿ ಇದ್ದ ಬ್ಯಾಂಕ್  ಸಿಬ್ಬಂದಿಯನ್ನು  ಕರೆಯಲು ಬ್ಯಾಂಕಿಗೆ ಹೋಗಿದ್ದರು. ಆದರೆ ವಾಪಾಸು ಬಂದು ನೋಡಿದಾಗ ಮೊಬೈಲ್ ಇಲ್ಲದಿರುವುದು ಗಮನಕ್ಕೆ ಬಂದಿದೆ. ಸದ್ಯ ಈ ಘಟನೆಯ ದೃಶ್ಯಗಳು ಎಟಿಎಂ ನಲ್ಲಿದ್ದ  ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಕೂಟಿಯಲ್ಲಿ ಬಂದ ಯುವಕ ಹೆಲ್ಮೆಟ್ ಧರಿಸಿಯೇ ಎಟಿಎಂ ಪ್ರವೇಶಿಸಿ ಹಣ ಪಡೆದಿದ್ದಾನೆ. ಜೊತೆಗೆ ಪಕ್ಕದ ಟೇಬಲ್ ನಲ್ಲಿ ಇರಿಸಿದ್ದ ಮೊಬೈಲನ್ನು ಎಗಸಿರಿದ್ದಾನೆ.  ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಮೊಬೈಲ್ ಕಳೆದು ಹೋಗಿರುವ ಬಗ್ಗೆ ಕಡಬ ಠಾಣೆಯಲ್ಲಿ ದೂರು ನೀಡಲಾಗಿದೆ. ಸದ್ಯ ಹೆಲ್ಮೆಟ್ ಧರಿಸಿದ ಯುವಕನ ಪತ್ತೆಗೆ ಪೊಲೀಸರು ಶ್ರಮಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

Kadaba: ಅಕ್ರಮ ಮರಳುಗಾರಿಕೆಗೆ ದೂರು -ಮುಸ್ಲಿಂ ಯುವಕರಿಂದ ಕೊಲೆ ಬೆದರಿಕೆ..!

Published

on

ಕಡಬ: ಕಡಬದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ದೂರು ನೀಡಿದ ಹಿನ್ನಲೆಯಲ್ಲಿ ಮುಸ್ಲಿಂ ಯುವಕರನ್ನು ಮುಂದಿಟ್ಟುಕೊಂಡು ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಕಡಬ ತಾಲೂಕಿನ ನೂಜಿಬಾಳ್ತಿಲದ ಭಾಸ್ಕರ ಗೌಡ ಎಂಬವರು ದೂರು ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ದಿಬ್ಬದಿಂದ ಕಾನೂನು ಪ್ರಕಾರ ಮರಳು ತೆಗೆಯಬಹುದಾಗಿದೆ. ಆದರೆ ಕಡಬದ ಬಿಜೆಪಿ ಮುಖಂಡ ನಿಯಮಬಾಹಿರವಾಗಿ ಮರಳುಗಾರಿಕೆ ನಡೆಸುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮರಳುಗಾರಿಕೆಗೆ ತಡೆ ನೀಡಲಾಗಿದ್ದು, ಇದೀಗ ದೂರು ನೀಡಿದ ಭಾಸ್ಕರ ಗೌಡರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ಗಾಂಜಾ ಅಮಲಿನಲ್ಲಿರುವ ಮುಸ್ಲಿಂ ಯುವಕರನ್ನ ಬಿಟ್ಟು ಕೊಲೆ ಬೆದರಿಕೆಯೋಡ್ಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರು ರಕ್ಷಣೆ ಕೋರಿ ಪುತ್ತೂರು ಡಿವೈಎಸ್ಪಿಗೆ ದೂರು ಸಲ್ಲಿಸಿದ್ದಾರೆ.

Continue Reading

DAKSHINA KANNADA

Kadaba: ಕರ್ತವ್ಯದಲ್ಲೇ ವಿಎಗೆ ಬಸ್ ಸೀಟ್ ಅಡಿಯಲ್ಲಿ ಸಕತ್ ನಿದ್ರೆ..!

Published

on

ಕಡಬ: ಕುಡಿತದ ಚಟಕ್ಕಾಗಿ ಹಲವು ಬಾರಿ ಹಿರಿಯ ಅಧಿಕಾರಿಗಳಿಂದ ಛೀಮಾರಿ ಹಾಕಿಸಿಕೊಂಡಿದ್ದ ವಿಎ ಫೆ.20ರಂದು ಮತ್ತೆ ಕುಡಿದು ಅವಾಂತರ ಮಾಡಿರುವ ಘಟನೆ ಕಡಬದಲ್ಲಿ ನಡೆದಿದೆ.

ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿಎ ಕುಡಿದ ಅಮಲಿನಲ್ಲಿ ಬಸ್ ನಲ್ಲಿ ಬಿದ್ದುಕೊಂಡಿದ್ದಾನೆ. ಇದೆಲ್ಲಾ ನಡೆದದ್ದು, ಸುಬ್ರಹ್ಮಣ್ಯ- ಕಡಬ ಬಸ್ ನಲ್ಲಿ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ವಿಎ ನಾಗಸುಂದರ ಕುಡಿದು ಬಸ್ ಸೀಟ್ ಅಡಿಯಲ್ಲಿ ಮಲಗಿ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಸಿದ್ದ. ಹೀಗಾಗಿ ಬಸ್ ಚಾಲಕ ನೆರವಾಗಿ ಬಸ್ಸನ್ನು ಕಡಬ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಸ್ಟೇಷನ್ ಪೊಲೀಸರ ಸಹಾಯದಿಂದ ವಿಎ ಯನ್ನು ಇಳಿಸಿ ಬಸ್ ಮುಂದೆ ಹೋಗಿದೆ. ಬಳಿಕ ಹಲವರು ಸೇರಿ ವಿಎಯನ್ನು ಆತನ ನಿವಾಸದ ಹೊರಗೆ ಮಲಗಿಸಿ ಬಂದಿದ್ದಾರೆ. ವಿಎ ನಾಗಸುಂದರ ಈ ಹಿಂದೆಯೂ ಹಲಾವರು ಬಾರಿ ಕುಡಿದು ರಸ್ತೆಯಲ್ಲಿ ಬಿದ್ದು ಇದೇ ರೀತಿ ವರ್ತಿಸಿ ಹಿರಿಯ ಅಧಿಕಾರಿಗಳಿಂದ ತರಾಟೆಗೆ ಒಳಗಾಗಿದ್ದ. ಆದರೆ ಇತ್ತೀಚೆಗೆ ಇದು ಈತನ ನಿತ್ಯ ಕಾಯಕ ಎಂಬಂತಾಗಿದ್ದು ಈತನ ಈ ಚಟದಿಂದ ಹಲವು ದಾಖಲೆ ಪತ್ರ ಕಳೆದು ಹಾಕಿದ್ದಾನೆ ಎಂಬ ಆರೋಪವೂ ಇದೆ. ಈತನ ವಿಚಾರ‌ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಈ ವಿಎಯನ್ನು ವರ್ಗಾವಣೆ ಮಾಡಿ ಇಲ್ಲ ಮದ್ಯವರ್ಜನ ಶಿಬಿರದಲ್ಲಾದ್ರೂ ಬಿಡಿ ಅನ್ನೋದು ಸ್ಥಳಿಯರ ಮನವಿ.

Continue Reading

DAKSHINA KANNADA

Kadaba: ಬೈಕ್, ಬಸ್ ನಡುವೆ ಭೀಕರ ಅಪಘಾತ- ಸವಾರ ಸ್ಥಳದಲ್ಲೇ ಸಾವು..!

Published

on

ಕಡಬ: ಬೈಕ್ ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ ಸೋಮವಾರದಂದು ನಡೆದಿದೆ.

ಮೃತ ಬೈಕ್ ಸವಾರನನ್ನು ಕೊಂಬಾರು ಮಣಿಭಾಂಡ ತೇರೆಬೀದಿ ನಿವಾಸಿ ನೆಟ್ಟಣದಲ್ಲಿ ಮೆಕ್ಯಾನಿಕ್ ಆಗಿದ್ದ ವಾಸುದೇವ ಗೌಡ ಎಂದು ಗುರುತಿಸಲಾಗಿದೆ. ಕೆಎಸ್ಸಾರ್ಟಿಸಿ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬಂದ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ವಾಸುದೇವ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

LATEST NEWS

Trending