Connect with us

LATEST NEWS

MLC ಫೈಟ್‌: ಬಿಜೆಪಿಯಲ್ಲಿ ಓರ್ವ ಮಹಿಳೆ ಸೇರಿ ನಾಲ್ವರಿಗೆ ಟಿಕೆಟ್‌ ಘೋಷಣೆ

Published

on

ಬೆಂಗಳೂರು: ವಿಧಾನಪರಿಷತ್ತಿನ 7 ಸ್ಥಾನಗಳಿಗೆ ಜೂ.3ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ನಾಲ್ವರು ಅಭ್ಯರ್ಥಿಗಳನ್ನು ಪ್ರಕಟಿಸಿದೆ.


ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಹೇಮಲತಾ ನಾಯಕ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವ ಪ್ರಸಾದ್, ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಗಳಾಗಿ ಘೋಷಿಸಿದೆ.

ಇದೇ ವೇಳೆ ಹುಬ್ಬಳ್ಳಿ ನೈರುತ್ಯ ಕ್ಷೇತ್ರದ ಪದವೀಧರ ಕ್ಷೇತ್ರಕ್ಕೆ ಬಸವರಾಜ ಹೊರಟ್ಟಿ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ.

ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯಾಗಿದೆ. ಕಾಂಗ್ರೆಸ್‌ನಿಂದ ಇಬ್ಬರಿಗೆ ಟಿಕೆಟ್‌ ಸಿಕ್ಕಿದ್ದು, ಜೆಡಿಎಸ್‌ ಇನ್ನೂ ಸಹ ಹೆಸರು ಘೋಷಣೆ ಮಾಡಿಲ್ಲ.

Click to comment

Leave a Reply

Your email address will not be published. Required fields are marked *

DAKSHINA KANNADA

ಪುತ್ತಿಲ ಸ್ಪರ್ಧೆ ಪಕ್ಷಕ್ಕೆ ಸವಾಲೇ ಅಲ್ಲ -ಸಂಸದ ನಳಿನ್ ಕುಮಾರ್

Published

on

ಮಂಗಳೂರು: ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಪುತ್ತಿಲ ಪರಿವಾರ ಘೋಷಣೆ ಮಾಡಿರುವುದು ಅವರ ವೈಯಕ್ತಿಕ ವಿಚಾರ ಅಂತ ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಪುತ್ತಿಲ ಪರಿವಾರದ ಮನವೊಲಿಸಲು ಪಕ್ಷ ಸಾಕಷ್ಟು ಪ್ರಯತ್ನ ಮಾಡಿದೆ. ಅವರದ್ದು ಒಂದು ಸ್ವತಂತ್ರ ಸಂಸ್ಥೆ ಆಗಿರುವ ಕಾರಣ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯ ಅವರಿಗೆ ಇದೆ. ಬಿಜೆಪಿ ಹಲವು ವರ್ಷಗಳ ಹೋರಾಟದಿಂದ ಬೆಳೆದು ದೊಡ್ಡದಾಗಿರುವ ಪಕ್ಷವಾಗಿದ್ದು, ನಮ್ಮ ಪಕ್ಷಕ್ಕೆ ಎದುರಾಳಿ ಯಾರು ಅನ್ನೋ ಪ್ರಶ್ನೆಯೇ ಬರೋದಿಲ್ಲ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ನ್ನು ಸೋಲಿಸಿ ಅತೀ ಹೆಚ್ಚು ಸೀಟ್ ಪಡೆದು ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಹೀಗಾಗಿ ಪುತ್ತಿಲ ಅವರ ಸ್ಪರ್ಧೆ ನಮಗೆ ಸವಾಲೇ ಅಲ್ಲ ಎಂಬ ಅರ್ಥದಲ್ಲಿ ನಳಿನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಮ ಮಂದಿರ ನಿರ್ಮಾಣದ ಬಳಿಕ ಪಕ್ಷದ ವರ್ಚಸ್ಸು ಹೆಚ್ಚಿದ್ದು, ಜನರು ಹಿಂದುತ್ವ, ರಾಷ್ಟ್ರವಾದ, ಅಭಿವೃದ್ದಿ ವಿಚಾರವಾಗಿ ಮತ ಹಾಕುತ್ತಾರೆ. ಸೀಟು ಕೊಡುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸ್ತಾರೆ. ಆದರೆ ಈ ಬಾರಿ ಅತೀ ಹೆಚ್ಚಿನ ಅಂತರದ ಗೆಲವು ಸಾಧಿಸುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Continue Reading

LATEST NEWS

ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ವಿವಾಹ ಅನ್ನ ಸೇವೆಯೊಂದಿಗೆ ಪ್ರಾರಂಭ

Published

on

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ, ಸೊಸೆ ರಾಧಿಕಾ ಮರ್ಚೆಂಟ್ ಅವರ ವಿವಾಹವು ಪೂರ್ವ ಅನ್ನ ಸೇವೆಯೊಂದಿಗೆ ಫೆ.28ರಂದು ನಡೆಯಿತು.

ಮುಕೇಶ್ ಅಂಬಾನಿ, ಅವರ ಕಿರಿಯ ಪುತ್ರ ಅನಂತ್ ಅಂಬಾನಿ, ಸೊಸೆ ರಾಧಿಕಾ ಮರ್ಚೆಂಟ್, ವೀರೇನ್ ಮರ್ಚೆಂಟ್, ಶೈಲಾ ಮರ್ಚೆಂಟ್, ರಾಧಿಕಾ ಮರ್ಚೆಂಟ್ ಅವರ ಪೋಷಕರು ಮತ್ತು ರಾಧಿಕಾ ಅವರ ಅಜ್ಜಿ ವೈಯಕ್ತಿಕವಾಗಿ ಸಮುದಾಯದ ಸದಸ್ಯರಿಗೆ ಸಾಂಪ್ರದಾಯಿಕ ಗುಜರಾತಿ ಭೋಜನವನ್ನು ಬಡಿಸಿದರು.

ಅಂಬಾನಿ ಕುಟುಂಬವು ಫೆ.28 ರಂದು ರಿಲಯನ್ಸ್‌ನ ಜಾಮ್‌ನಗರ ಟೌನ್‌ಶಿಪ್ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರ ವಿವಾಹಪೂರ್ವ ಉತ್ಸವಗಳನ್ನು ಭವ್ಯವಾದ “ಅನ್ನ ಸೇವೆ” ಯೊಂದಿಗೆ ಪ್ರಾರಂಭಿಸಿತು

Continue Reading

FILM

‘ಲಕ್ಷ್ಮೀ ನಿವಾಸ’ ಧಾರವಾಹಿ ನಟ ದೀಪಕ್ ಸುಬ್ರಹ್ಮಣ್ಯ ಎಷ್ಟು ಕ್ಯೂಟ್ ಅಲ್ವಾ?

Published

on

FILM : ದಾಸ ಪುರಂದರ ಧಾರವಾಹಿ ಯಾರಿಗೆಲ್ಲಾ ಗೊತ್ತು? ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರವಾಹಿ ವಿಭಿನ್ನ ಚಿತ್ರಕಥೆ ಮೂಲಕ ಹಾಗೂ ಕಲಾವಿದರ ಅಭಿನಯದ ಮೂಲಕ ಜನ ಮನ ಗೆದ್ದ ಧಾರವಾಹಿ ಆಗಿತ್ತು.ಇದೇ ಧಾರವಾಹಿಯಲ್ಲಿ ಪುರಂದರದಾಸರ ಪಾತ್ರ ಮಾಡಿದ್ದ ದೀಪಕ್ ಸುಬ್ರಹ್ಮಣ್ಯ ತಮ್ಮ ಪಾತ್ರದಲ್ಲಿ ತಲ್ಲೀನರಾಗಿ ಅಭಿನಯಿಸಿ ಮನೆ ಮಾತಾಗಿದ್ರು.

ಆದ್ರೆ ಈಗ ಸಂಪೂರ್ಣವಾಗಿ ಬದಲಾಗಿ ಮಾರ್ಡನ್ ಆಗಿ ಬದಲಾಗಿದ್ದಾರೆ. ಅವರೇ ಇವರ ಎಂಬ ಅನುಮಾನ ಮೂಡಿದೆ. ಅಷ್ಟು ಬದಲಾವಣೆಯಾಗಿದ್ದಾರೆ.

ಇದೀಗ ಹೊಚ್ಚ ಹೊಸ ಧಾರವಾಹಿ ಲಕ್ಷ್ಮೀ ನಿವಾಸ ಧಾರವಾಹಿ ಮೂಲಕ ಎಂಟ್ರಿ ಕೊಟ್ಟಿರುವ ದೀಪಕ್ ಸುಬ್ರಹ್ಮಣ್ಯ ಹ್ಯಾಂಡ್ಸಂ ಆಗಿ ಕಾಣುತ್ತಿದ್ದಾರೆ. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಂಡಿರುವ ದೀಪಕ್ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ.

ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಸಕ್ಸಸ್ ಫುಲ್ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಪುರದಂರನಾಗಿ ನೋಡಿದ ದೀಪಕ್ ಅವರಿಗೂ ಸೂಟು ಬೂಟು ಹಾಕಿ ಟಿಪ್ ಟಾಪ್ ಆಗಿ ಕಾಣಿಸಿಕೊಂಡಿರುವ ದೀಪಕ್ ಅವರನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.ಇದ್ಯಾರೋ K ಡ್ರಾಮಾ ನಟನ ರೀತಿ ಇದ್ದಾರಲ್ವಾ? ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ.

Continue Reading

LATEST NEWS

Trending