Monday, May 17, 2021

ಹೆಲ್ಪ್ ಇಂಡಿಯಾ ಫೌಂಡೇಷನ್‍ ವತಿಯಿಂದ ಅಶಕ್ತರಿಗೆ ಊಟ ವಿತರಿಸಿದ ಶಾಸಕ ಯು.ಟಿ ಖಾದರ್..

ಮಂಗಳೂರು: ಹೆಲ್ಪ್ ಇಂಡಿಯಾ ಫೌಂಡೇಷನ್ ಉಳ್ಳಾಲ ಇತರೆ ಸಾಮಾಜಿಕ ಕಾರ್ಯಗಳ ಜೊತೆಗೆ ಲಾಕ್ ಡೌನ್ ಸಂದರ್ಭ  ರಸ್ತೆಬದಿಯಲ್ಲಿರುವ ಮಂದಿಯನ್ನು ಹಸಿವು ಮುಕ್ತ ಮಾಡುವ ಕಾರ್ಯ  ನಡೆಸುತ್ತಿರುವುದು ಮಾನವೀಯತೆಯ ಕಾರ್ಯ ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.  ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಮಲಗಿದ್ದ  ಭಿಕ್ಷುಕರಿಗೆ, ಹಾಗು ರಸ್ತೆಬದಿಯಲ್ಲಿರುವ ಮಂದಿಗೆ ಊಟ ವಿತರಿಸಿ ಮಾತನಾಡಿದ ಅವರು “ಸಂದಿಗ್ಧ ಸ್ಥಿತಿಯಲ್ಲಿ ಅಶಕ್ತರಿಗೆ ಸಹಕರಿಸುವ ಕಾರ್ಯ ಎಲ್ಲರಿಂದ ಆಗಬೇಕಿದೆ.

ಎಲ್ಲರೂ ತಮ್ಮಿಂದಾದಷ್ಟು   ಅಶಕ್ತರಿಗೆ  ಸಹಾಯ ಮಾಡಿ.   ಹೆಲ್ಪ್ ಇಂಡಿಯಾ ಫೌಂಡೇಷನ್  ಇದಕ್ಕೆ ಮಾದರಿ ಎಂದರು. ಇದೇ ಸಂದರ್ಭ ಬಸ್ಸು ನಿಲ್ದಾಣದಲ್ಲಿ ಅಸಹಾಯಕರಾಗಿ ಮಲಗಿದ್ದ ಮಂದಿಯಲ್ಲಿ  ಮಾಸ್ಕ್ ಇರಲಿಲ್ಲ.ಇದನ್ನು ಗಮನಿಸಿದ ಶಾಸಕರು ಹೆಲ್ಪ್ ಇಂಡಿಯಾ ಫೌಂಡೇಷನ್ನಿನವರು ನೀಡಿದ ಮಾಸ್ಕ್ ಅನ್ನು ಖುದ್ದು ತಾವೇ  ಅವರಿಗೆ ಹಾಕಿ ಕೋವಿಡ್  ಮುನ್ನೆಚ್ಚರಿಕೆ  ಕಾಪಾಡುವಂತೆ ಮನವಿ ಮಾಡಿದರು.

ಈ ವೇಳೆ ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್,  ಹೆಲ್ಪ್ ಇಂಡಿಯಾ ಫೌಂಡೇಷನ್‍ನ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್,  ಸದಸ್ಯ ಝಾಕಿರ್ ಇಕ್ಲಾಸ್ , ಝಕರಿಯಾ ಮಲಾರ್ ಉಪಸ್ಥಿತರಿದ್ದರು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...