Connect with us

    DAKSHINA KANNADA

    ಹಡಿಲು ಭೂಮಿ ಕೃಷಿ, ಗದ್ದೆಗಿಳಿದು ನಾಟಿ ಮಾಡಿದ ಶಾಸಕ ಉಮಾನಾಥ ಕೋಟ್ಯಾನ್

    Published

    on

    ಮಂಗಳೂರು : ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಪ್ರಾರಂಭಿಕ ಹಂತದಲ್ಲಿ ಸುಮಾರು 200 ಎಕ್ಕರೆ ಹಡಿಲು ಭೂಮಿ ಕೃಷಿ ಮಾಡಲಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.

    ಅವರು ಬಜಪೆ ಸಮೀಪದ ಎಕ್ಕಾರು ವಿಜಯ ಯುವ ಸಂಗಮ (ರಿ) ಎಕ್ಕಾರು ಇದರ ರಜತ ವರ್ಷಾಚರಣೆ ಪ್ರಯುಕ್ತ ಸಿರಿ ಕುರಲ್ ರೈತ ಉತ್ಪಾದಕರ ಸಂಸ್ಥೆ ಎಕ್ಕಾರು ಜೊತೆ ಸೇರಿ ಹಡಿಲು ಭೂಮಿಯನ್ನು ಕೃಷಿ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವತಃ ಗದ್ದೆಗಿಳಿದು ನಾಟಿ ಕಾರ್ಯದಲ್ಲಿ ತೊಡಗಿಕೊಂಡರು,

    ತಮ್ಮ ಅಂದಿನ ಕಷ್ಟದ ದಿನಗಳ ಜೊತೆ ಕೃಷಿ ಚಟುವಟಿಕೆಗಳಲ್ಲಿ ಜೀವನ ಸಾಗಿಸಿದ ಬಗ್ಗೆಗಿನ ನೆನಪನ್ನು ನಾಟಿ ಮಾಡುತ್ತಲೇ ಯುವ ಜನತೆ ಜೊತೆ ಹಂಚಿಕೊಂಡರು,

    ಶಾಸಕರ ಜೊತೆ ಜಿಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಜೆಪಿ ಮುಖಂಡ ಈಶ್ವರ್ ಕಟೀಲ್ ನಾಟಿ ಕಾರ್ಯದಲ್ಲಿ ತೊಡಗಿಕೊಂಡರು.

    ಸುಮಾರು 75 ಮಂದಿ ವಿಜಯ ಯುವ ಸಂಗಮದ ಸದಸ್ಯರು ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

    ಬಳಿಕ ಮಾತನಾಡಿದ ಉಮನಾಥ್ ಕೋಟ್ಯಾನ್ ಯುವ ಪೀಳಿಗೆ ಕೃಷಿಯತ್ತ ಒಲವು ತೋರಿಸಬೇಕು ಕೃಷಿ ಯಾವತ್ತೂ ನಮನ್ನು ಕೈ ಬಿಡಲ್ಲ, ನಮ್ಮ ಹಿರಿಯರು ಕೃಷಿಯನ್ನೆ ನಂಬಿ ಬದುಕಿದವರು, ಕೃಷಿ ಜೊತೆ ನಮ್ಮ ಸಂಸ್ಕೃತಿಯೂ ಬೆಳೆಯುವಂತಾಗಬೇಕು ಎಂದರು.

    ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಸುದೀಪ್ ಅಮೀನ್ ಅವರಿಗೆ ಸನ್ಮಾನಿಸಲಾಯಿತು, ಉತ್ತರ ಕರ್ನಾಟಕದಿಂದ ಕೃಷಿ ಕೂಲಿ ಕಾರ್ಮಿಕರನ್ನು ತಂದು ಮೂಲ್ಕಿ ತಾಲೂಕಿನ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಯನ್ನು ನೀಗಿಸಿದ ಮಾಂತೇಷ್, ಸಂಸ್ಥೆಯ ಸದಸ್ಯ ವಿಕ್ರಂ ಮಾಡ ಅವರನ್ನು ಗೌರವಿಸಲಾಯಿತು.

    ಸಂಸ್ಥೆ ವತಿಯಿಂದ ಸುಮಾರು ನಾಲ್ಕು ಎಕ್ಕರೆ ಭತ್ತದ ಗದ್ದೆಯನ್ನು ನಾಟಿ ಮಾಡಲಾಯಿತು.
    ಈ ಸಂದರ್ಭ ಎಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುರೇಖ ರೈ,ಸೂರಿಂಜೆ ಪಂಚಾಯತ್ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕೆ ಕಸ್ತೂರಿ ಪಂಜ, ಸಿರಿ ಕುರಲ್ ರೈತ ಉತ್ಪಾದಕರ ಸಂಸ್ಥೆ ಎಕ್ಕಾರು ಇದರ ಅಧ್ಯಕ್ಷ ಮುರ ಸದಾಶಿವ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಈಶ್ವರ್ ಕಟೀಲ್ , ಕೃಷ್ಣ ಶೆಟ್ಟಿ ಮುರ, ವಿಜಯ ಯುವ ಸಂಗಮದ ಅಧ್ಯಕ್ಷ ಆದರ್ಶ್ ಶೆಟ್ಟಿ ಎಕ್ಕಾರು, ಕೃಷಿ ಅಧಿಕಾರಿ ಬಶೀರ್ ಮತ್ತಿತರರು ಉಪಸ್ಥಿತರಿದ್ದರು, ರತ್ನಾಕರ ಶೆಟ್ಟಿ ಎಕ್ಕಾರು ಸ್ವಾಗತಿಸಿ, ರಾಜೇಂದ್ರ ಎಕ್ಕಾರು ಧನ್ಯವಾದ ಸಮರ್ಪಿಸಿದರು.

     

    DAKSHINA KANNADA

    ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾ*ವು

    Published

    on

    ತೆಲಂಗಾಣ: ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾ*ವನ್ನಪ್ಪಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಚಿಂತಕಣಿಲ್ಲಿ ಶುಕ್ರವಾರ ನಡೆದಿದೆ.

    ಅಂಜಲಿ ಕಾರ್ತಿಕಾ (9) ಮೃ*ತ ಬಾಲಕಿ. ಮೊಬೈಲ್​​​ನಲ್ಲಿ ಆಟವಾಡುತ್ತಿರುವ ವೇಳೆ ಚಾರ್ಜ್ ಖಾಲಿಯಾಗಿದ್ದು, ಅಂಜಲಿ ಮೊಬೈಲ್ ಚಾರ್ಜ್ ಮಾಡಲು ಹೋಗಿದ್ದಾಳೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿದ್ದು, ಬಾಲಕಿ ಕುಸಿದು ಬಿದ್ದಿದ್ದಾಳೆ.

    ಕುಸಿದು ಬಿದ್ದು ಒದ್ದಾಡುತ್ತಿರುವ ಬಾಲಕಿಯನ್ನು ಗಮನಿಸಿದ ಆಕೆಯ ಪೋಷಕರು ತಕ್ಷಣ ಗ್ರಾಮದ ಖಾಸಗಿ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆದರೆ ಬಾಲಕಿ ಅದಾಗಲೇ ಮೃ*ತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

    ಬಾಲಕಿ ಆಟವಾಡುತ್ತಿದ್ದಂತೆ ಒದ್ದೆ ಕೈಯಲ್ಲಿ ಹೋಗಿ ವಿದ್ಯುತ್ ಸ್ಪರ್ಶಿಸಿರುವುದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಕೆಲ ಹೊತ್ತಿನ ಹಿಂದೆ ಮನೆಯಲ್ಲಿ ಕುಣಿದು ಕುಪ್ಪಳಿಸುತ್ತಾ ಆಟವಾಡುತ್ತಿದ್ದ ಬಾಲಕಿ ಏಕಾಏಕಿ ಪ್ರಾ*ಣ ಕಳೆದುಕೊಂಡಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಮೃ*ತ ಬಾಲಕಿ ಅಂಜಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿ. ತಂದೆ ರಾಮಕೃಷ್ಣ ದೂರಿನ ಮೇರೆಗೆ ಎಸ್‌ಎಸ್‌ಐ ನಾಗುಲ್ಮೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    DAKSHINA KANNADA

    ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ

    Published

    on

    ಚಾರ್ಮಾಡಿ: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿದು ಟ್ರಾಫಿಕ್ ಜಾಮ್ ಆದ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ.

    ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಚಾರ್ಮಾಡಿಘಾಟ್‌ನ 10ನೇ ತಿರುವಿನಲ್ಲಿ ಗುಡ್ಡ ಕುಸಿದಿದ್ದು ಚಾರ್ಮಾಡಿ ಘಾಟ್​ನಿಂದ ಕೊಟ್ಟಿಗೆಹಾರದವರೆಗೂ ವಾಹನಗಳು ನಿಂತಲ್ಲೇ ನಿಂತಿದ್ದವು. ಬಳಿಕ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಯ್ತು.

    ಅತ್ತ ಮಂಗಳೂರಿಗೆ ತೆರಳುವವರನ್ನು ಪೊಲೀಸರು ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲೇ ವಾಹನಗಳನ್ನು ತಡೆದು ವಾಪಸ್ ಕಳಿಸಿದ್ದಾರೆ. ಅತ್ತ ಉಜಿರೆ ಬಳಿಯೂ ಚಾರ್ಮಾಡಿ ಘಾಟ್ ಪ್ರವೇಶ ನಿರ್ಬಂಧಿಸಲಾಗಿತ್ತು.

    Continue Reading

    DAKSHINA KANNADA

    ಅರ್ಜುನ್​ ಪತ್ತೆಗೆ ಸೇನೆಗೆ ಸಹಾಯ..! ಶಿರೂರಿಗೆ ಈಶ್ವರ ಮಲ್ಪೆಗೆ ಬುಲಾವ್..!

    Published

    on

    ಅಂಕೋಲ: ಶಿರೂರು ಗುಡ್ಡ ಕುಸಿತ ಪ್ರಕರಣ ಸಂಭವಿಸಿ ಇಂದಿಗೆ 12 ದಿನವಾಗಿದೆ. ನಾಪತ್ತೆಯಾದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನದಿಯ ದಡದಲ್ಲಿ ಈಗಾಗಲೇ ಹುಡುಕಾಟ ಮುಗಿದಿದ್ದು, ಲಾರಿ ಮತ್ತು ಚಾಲಕ ಅರ್ಜುನ್​ ನದಿಯೊಳಗೆ ಇದ್ದಾರೆ ಎಂದು ಹೇಳಲಾಗುತ್ತಿದೆ. ಅತ್ತ ಗೋಕಾಕ್ ನಿಂದ ಬಂದ ಪೋಕ್ಲೈನ್ ತನ್ನ ಕೆಲಸ ಮುಗಿಸಿದ್ದು, ವಾಪಾಸ್ ಆಗುತ್ತಿದೆ.

    ಇಂದು ಅರ್ಜುನ್​ಗಾಗಿ ಮುಳುಗು ತಜ್ಞರಿಂದ ಹುಡುಕಾಟ ನಡೆಯಲಿದೆ. ಈಶ್ವರ್ ಮಲ್ಪೆ ತಂಡ ಇಂದು ಶಿರೂರಿಗೆ ಬರಲಿದ್ದು, ಅರ್ಜುನ್​​ಗಾಗಿ ಹುಡುಕಾಡಲಿದ್ದಾರೆ. ಜಿಲ್ಲಾಡಳಿತದ ಮನವಿ ಮೇರೆಗೆ ಮುಳುಗು ತಜ್ಞರ ತಂಡ ಶಿರೂರಿಗೆ ಆಗಮಿಸಲಿದ್ದಾರೆ.

     

    ಗಂಗಾವಳಿ ನದಿಯಲ್ಲಿ ನೀರಿನ ವೇಗ ಹೆಚ್ಚಿರುವ ಹಿನ್ನಲೆಯಲ್ಲಿ, ನೀರಿನೊಳಗೆ ಹೋಗಲು ನೌಕಾದಳದ ಮುಳುಗು ತಜ್ಞರು ಹಿಂದೇಟು ಹಾಕಿದ್ದಾರೆ. ಈ ವೇಳೆ ಶಾಸಕ ಸತೀಶ್ ಸೈಲ್ ಸ್ಥಳೀಯ ಮೀನುಗಾರ ಹಾಗೂ ಈಶ್ವರ್ ಮಲ್ಪೆ ಸಹಾಯ ಕೇಳಿದ್ದಾರೆ.

    ಇಂದು ಅರ್ಜುನ್​ ಮತ್ತು ಲಾರಿ ಪತ್ತೆಯಾದರೆ ನದಿಯ ಕೆಳಗೆ ಸುಮಾರು 20 ಅಡಿ ಆಳದಲ್ಲಿರುವ ಲಾರಿ ಮೇಲಕ್ಕೆ ಎತ್ತಲು ಪ್ರಯತ್ನ ನಡೆಯಲಿದೆ.

    Continue Reading

    LATEST NEWS

    Trending