Wednesday, October 5, 2022

ವೆನ್‌ಲಾಕ್ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸುವ ಬಗ್ಗೆ ಶಾಸಕರ ಚರ್ಚೆ..!

ಮಂಗಳೂರು: ಕೋವಿಡ್ 19 ಸೋಂಕು ಎಲ್ಲೆಡೆ ತೀವ್ರವಾಗಿ ಹಬ್ಬುತ್ತಿರುವುದರಿಂದ ಮಂಗಳೂರು ಹೊರವಲಯದ ಉತ್ತರ ಶಾಸಕ ಡಾ।ಭರತ್ ಶೆಟ್ಟಿ ವೈ ಮತ್ತು ದಕ್ಷಿಣ ಶಾಸಕ ವೇದವ್ಯಾಸ ಕಾಮತ್  ಮಂಗಳೂರಿನ ಸರ್ಕಾರಿ ಕೋವಿಡ್ ಆಸ್ಪತ್ರೆ ಯಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸುವ ಬಗ್ಗೆ  ವೆನ್ಲಾಕ್ ಆಸ್ಪತ್ರೆಯಲ್ಲಿ ಚರ್ಚೆ  ನಡೆಸಿದರು. ಈ ವೇಳೆ ಆಸ್ಪತ್ರೆಯ ಶುಶ್ರೂಷೆ  ವಿಭಾಗಕ್ಕೆ ಭೇಟಿ ನೀಡಿದರು. ಕೌನ್ಸಿಲರ್ ಜತೆ ಮಾತುಕತೆ ನಡೆಸಿದರು. ರೋಗಿಗಳ ಸಂಬಂಧಿಗಳು ಗೊಂದಲಕ್ಕೆ ಒಳಗಾಗದಂತೆ ಸೂಕ್ತ ಮಾಹಿತಿ ನೀಡುವಂತೆ ಸೂಚಿಸಿದರು ಪರಿಣಿತ ಮಾಹಿತಿ ಸಂವಹನಕಾರರನ್ನು ನೇಮಿಸಲು ಸಲಹೆ ನೀಡಿದರು. ಮಂಗಳೂರಿನ ವೆನ್ ಲಾಕ್ ನಲ್ಲಿ ಯಾವುದೇ ಮಾಹಿತಿ ಸಿಗದೆ ರೋಗಿಗಳು,ಅವರ ಕುಟುಂಬಸ್ಥರು  ಆತಂಕಕ್ಕೆ ಒಳಗಾಗಿದ್ದಾರೆ. ಇದರ ನಡುವೆ ಇಲ್ಲಿನ ಸಿಬ್ಬಂದಿಗಳ  ಅತಿರೇಕದ ವರ್ತನೆಯಿಂದ ಜನ ವೆನ್ ಲಾಕ್ ಬಗ್ಗೆ   ಭೀತಿ ಇಟ್ಟುಕೊಂಡಿದ್ದು  ಜನರ ಮನಸ್ಸಿನಲ್ಲಿ ಹೇಸಿಗೆ ಹುಟ್ಟುವ ಪರಿಸ್ಥಿತಿ ಬರುತ್ತಿದೆ.ಇದನ್ನು ಹೋಗಲಾಡಿಸಲು ಜನಸಂಪರ್ಕ ( ಹೆಲ್ಪ್ ಡೆಸ್ಕ್) ಕೂಡಲೇ ರಚಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಸೂಚಿಸಿದ್ದಾರೆ.

ಜನರಿಗೆ ಮೊದಲೇ ವೆನ್ ಲಾಕ್ ಬಗ್ಗೆ ತಪ್ಪು ಕಲ್ಪನೆಯಿದೆ.ಇಲ್ಲಿನ ಸಿಬಂದಿಗಳ ಅತಿರೇಕದ ,ಉಡಾಫೆಯ ವರ್ತನೆ ಮತ್ತಷ್ಟು ತಪ್ಪು ಕಲ್ಪನೆಗೆ ಕಾರಣವಾಗುತ್ತದೆ.

ಡಾಕ್ಟರ್ ಮತ್ತು ನರ್ಸ್ ಗಳು ,ಇಲ್ಲಿನ ವಾರ್ಡನ್ ಗಳು ಸರಿಯಾಗಿ ರೋಗಿಗಳ ಸಂಬಂದಿಗಳೊಂದಿಗೆ ತಾಳ್ಮೆ ಯಿಂದ ವರ್ತಿಸಿ ದಾಗ ಒಂದಿಷ್ಟು ಭರವಸೆ ಮೂಡಿಸುವ ಕೆಲಸವಾಗುತ್ತದೆ.

ವೆನ್ ಲಾಕ್ ನಲ್ಲಿ ಇಡೀ ದಿನ ಅಲೆದಾಡಿಸುವುದನ್ನು ಕೈ ಬಿಡಿ ಸರಿಯಾದ ಮಾಹಿತಿ ನೀಡಿ ಅವರಿಗೆ ಬೇಕಾದ ಸೌಲಭ್ಯ,ಬೇಕಾದ ಕೆಲಸ ಆಗುವ ಹಾಗೆ ಮಾಡಿ.ಇದಕ್ಕಿಂತ ಹೆಚ್ಚಾಗಿ ಅವರು  ಏನೂ ಕೇಳುವುದಿಲ್ಲ.

1. ರೋಗಿಗಳು ಬಂದಾಗ ಮಾಹಿತಿ ಪಡೆದು ಅವರಿಗೆ ಬೇಕಾದ ಸ್ಥಳಕ್ಕೆ ತಲುಪಿಸುವ ಯೋಜನೆ ರೂಪಿಸಿ.

2.ಕಡ್ಡಾಯವಾಗಿ ಹೆಲ್ಪ್ ಲೈನ್ ಡೆಸ್ಕ್ ಸ್ಥಾಪಿಸಿ ,ಕೌನ್ಸಿಲಿಂಗ್ ಮಾಡಿ

3.ರೋಗಿ ಸಂಬಂಧಿಗಳು ತೀರಾ ಕೆಟ್ಟದಾಗಿ ವರ್ತಿಸಿದರೂ ಸರಕಾರದ ಭಾಗವಾಗಿರುವ ವೈದ್ಯರು ಒತ್ತಡದಲ್ಲಿದ್ದರೂ  ತಾಳ್ಮೆಕಳೆದುಕೊಳ್ಳುವುದು  ಸರಿಯಲ್ಲ.

ಕನಿಷ್ಟ ರೋಗಿಯ ಆರೋಗ್ಯದ ಬಗ್ಗೆ ಮಾಹಿತಿ ಕೊಡುತ್ತಾ ಇದ್ದಾಗ ಅವರಿಗೂ ನೆಮ್ಮದಿ ಸಿಗುತ್ತದೆ.

4.ಅನಾವಶ್ಯಕ ವಾಗಿ ರೋಗಿಗಳಿಗೆ  ಹೆದರಿಸುವ ,ರೋಗಿಗಳ ಬಗ್ಗೆ ಅನಾವಶ್ಯಕ ಮಾಹಿತಿ ನೀಡಬೇಡಿ.

5.ವೈದ್ಯರನ್ನು ರೋಗಿಗಳು ಪೂರ್ಣವಾಗಿ ನಂಬಿರುವುದರಿಂದ ಸ್ವಲ್ಪ ದಕ್ಕೆಯಾದರೂ ರೋಗಿಗಳ ಕಡೆಯವರು ಆಕ್ರೋಶಕ್ಕೆ ಒಳಗಾಗುವುದು ಸಾಮಾನ್ಯ.ಇದನ್ನು ಗಮನದಲ್ಲಿಟ್ಟು ,ತಾಳ್ಮೆ ಕಳೆದುಕೊಳ್ಳದಿರಿ ಎಂದು ಮನವಿ ಮಾಡಿದ್ದಲ್ಲದೆ  ಇದನ್ನೆಲ್ಲ ನಿರ್ವಹಿಸಲು ಹೆಲ್ಪ್ ಡೆಸ್ಕ್ ಸ್ಥಾಪನೆ ಅತ್ಯಾವಶ್ಯಕ ಎಂದು ಹೇಳಿದರು.

ಚರ್ಚಾಕೂಟದಲ್ಲಿ ಡಿಎಚ್ ಒ ಡಾ. ಕಿಶೋರ್ ಕುಮಾರ್,  ಡಿಎಂಒ ಡಾ.ಸದಾಶಿವ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಉಡುಪಿಯಲ್ಲಿ ಬೋನಿಗೆ ಬಿದ್ದ ಚಿರತೆ: ಮತ್ತೆ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ಉಡುಪಿ: ಜಿಲ್ಲೆಯ ಮಟಪಾಡಿ ಗ್ರಾಮದಲ್ಲಿ ಊರಿನ ಜನರು ಅರಣ್ಯ ಇಲಾಖೆ ಮೂಲಕ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.ಮಟಪಾಡಿ ಗ್ರಾಮದಲ್ಲಿ ಬಹಳಷ್ಟು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಮೂಲಕ ಬೋನನ್ನು...

ಎಲ್‌ಇಡಿ ಟಿ.ವಿ ಬ್ಲಾಸ್ಟ್‌..! : ಬಾಲಕ ಸಾವು-ಮನೆ ಗೋಡೆ ಕುಸಿತ

ಲಕ್ನೋ: ಎಲ್‌ಇಡಿ ಟಿ.ವಿ ಸ್ಪೋಟಗೊಂಡ ಪರಿಣಾಮ ಬಾಲಕನೊಬ್ಬ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.ಮೃತ ಬಾಲಕನನ್ನು ಓಮೇಂದ್ರ (16) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಎಲ್ ಐಡಿ ಟಿವಿ...

Breaking: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಪತನ..!

ನವದೆಹಲಿ: ಭಾರತೀಯ ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್‌ ಪತನವಾಗಿದೆ. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಪತನವಾಗಿದೆ. ಇದರಲ್ಲಿದ್ದ ಓರ್ವ ಪೈಲೆಟ್‌ ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.