LATEST NEWS
ನಂತೂರಿನಲ್ಲಿ ಯೂ ಟರ್ನ್ ಮುಚ್ಚಿರುವುದನ್ನು ತೆರವುಗೊಳಿಸುವಂತೆ ಶಾಸಕರಿಂದ ಮನವಿ
ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ನಂತೂರು – ಪಂಪ್ವೆಲ್ ಮಧ್ಯೆ ಇರುವ ಮಂಗಳ ಜ್ಯೋತಿ ಶಾಂತಿ ಕಿರಣ ಕಟ್ಟದ ಮುಂಭಾಗದ ಯೂ ಟರ್ನ್ ಮುಚ್ಚಿರುವುದನ್ನು ತೆರವುಗೊಳಿಸುವ ಕುರಿತು ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಅವರು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಜೈನ್ ಅವರೊಂದಿಗೆ ಸಭೆ ನಡೆಸಿ ಮನವಿ ನೀಡಿದರು.
ಪಂಪ್ವೆಲ್ ಭಾಗದಿಂದ ಮರೋಳಿ, ಅಳಪೆ, ಕುಲಶೇಖರ ಭಾಗಕ್ಕೆ ತೆರಳುವ ವಾಹನ ಸವಾರರು, ನಂತೂರು – ಪಂಪ್ವೆಲ್ ರಾಷ್ಟ್ರೀಯ ಹೆದ್ದಾರಿಯ ಶಾಂತಿ ಕಿರಣದ ಬಳಿಯಿರುವ ಯೂಟರ್ನ್ ಮೂಲಕ ಸಂಚರಿಸುತಿದ್ದು, ಅಪಘಾತ ತಡೆಗಟ್ಟುವ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೆಲವು ದಿನಗಳಿಂದ ಯೂ ಟರ್ನ್ ಮುಚ್ಚಿದೆ.
ಇದರಿಂದಾಗಿ ಪಂಪ್ವೆಲ್ ಭಾಗದಿಂದ ಮರೋಳಿ, ಕುಲಶೇಖರ ತೆರಳುವ ವಾಹನಗಳು ನಂತೂರು ಜಂಕ್ಷನಿಗೆ ಬಂದು ಯೂ ಟರ್ನ್ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ನಂತೂರು ಜಂಕ್ಷನ್ ನಲ್ಲಿ ವಾಹನ ದಟ್ಟಣೆಯಿಂದ ಸಾರ್ವಜನಿಕರಿಗೆ ಉಂಟಾಗುವ ಸಮಸ್ಯೆಯನ್ನು ಸ್ಥಳೀಯರು ಶಾಸಕರ ಗಮನಕ್ಕೆ ತಂದಿದ್ದು, ಶಾಸಕ ಕಾಮತ್ ಅವರು ಆಯುಕ್ತರೊಂದಿಗೆ ಸುಧೀರ್ಘ ಚರ್ಚೆ ನಡೆಸಿ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು.
ಪೊಲೀಸ್ ಆಯುಕ್ತರು ಶಾಸಕರ ಮನವಿಯಂತೆ ಬೆಳಗಿನ ಹಾಗೂ ಸಂಜೆಯ ಸಮಯ ಯೂ ಟರ್ನ್ ತೆಗೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಕುರಿತು ಒಪ್ಪಿಕೊಂಡಿದ್ದಾರೆ. ಮರೋಳಿ ಮಾರಿಕಾಂಬ ದೇವಸ್ಥಾನದ ಭಾಗದಿಂದ ನಂತೂರು ಭಾಗಕ್ಕೆ ತೆರಳುವವರು ಪಂಪ್ವೆಲ್ ಮೂಲಕವೇ ಯೂ ಟರ್ನ್ ತೆಗೆದು ಬರಬೇಕು.
ಆಡುಮರೋಳಿ ರಸ್ತೆಯಿಂದ ನಂತೂರು ಭಾಗಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುವುದರಿಂದ ಅಪಘಾತಗಳು ನಡೆಯುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಅಪಘಾತಕ್ಕೊಳಗಾದವರಿಗೆ ಯಾವುದೇ ವಿಮೆ ಸೌಲಭ್ಯ, ಪರಿಹಾರ ನೀಡಲು ಸಾಧ್ಯವಾಗದಿರುವ ಘಟನೆಗಳು ನಡೆದಿವೆ. ಹಾಗಾಗಿ ಯೂ ಟರ್ನ್ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಶಾಸಕರಿಗೆ ತಿಳಿಸಿದ್ದಾರೆ.
ಆಡುಮರೋಳಿ ಪರಿಸರದಿಂದ ನಂತೂರಿಗೆ ತೆರಳುವ ವಾಹನ ಸವಾರರು ವಿರುದ್ಧ ದಿಕ್ಕಿನಲ್ಲಿ ಸಾಗದಂತೆ ತಡೆಯಲು ಯೂ ಟರ್ನ್ ಇರುವ ಸ್ಥಳದ ಬಳಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಎಂದು ಶಾಸಕರ ಸಲಹೆಯಂತೆ ಬೆಳಗಿನ ಹಾಗೂ ಸಂಜೆಯ ವೇಳೆ ಸಿಬ್ಬಂದಿ ನೇಮಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಆಯುಕ್ತರು ಒಪ್ಪಿಗೆ ನೀಡಿದ್ದಾರೆ.
ಈ ಕುರಿತು ಸಾರ್ವಕರಲ್ಲಿ ಮನವಿ ಮಾಡಿಕೊಂಡಿರುವ ಶಾಸಕರು, ಸಂಚಾರಿ ನಿಯಮಗಳನ್ನು ಪಾಲಿಸಬೇಕು ಹಾಗೂ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸದಿರಲು ಕೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಅನಿರುದ್ಧ್ ಕಾಮತ್, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
LATEST NEWS
ಮಕ್ಕಳಿಗೆ ಹಣ್ಣು ಕೊಡುವಾಗ ಎಚ್ಚರ! ರಂಬುಟಾನ್ ಹಣ್ಣು ಗಂಟಲಲ್ಲಿ ಸಿಲುಕಿ ಬಾಲಕಿ ಸಾ*ವು
ಕಾಸರಗೋಡು : ಸಾ*ವು ಹೇಗೆ ಬರುತ್ತೆ ಎಂಬುದನ್ನು ಹೇಳಲಾಗದು. ಅದರಲ್ಲೂ ಮಕ್ಕಳತ್ತ ಗಮನ ಇರಲೇಬೇಕು. ಅವರ ಚಲನವಲನ ಗಮನಿಸುತ್ತಿರಬೇಕು. ಏನಾದರೂ ತಿನ್ನಲು ಕೊಡುವಾಗಲಂತೂ ಜಾಗೃತೆ ವಹಿಸಲೇಬೇಕು.
ಇತ್ತೀಚೆಗಷ್ಟೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಗುವೊಂದು ಬಾಟಲಿ ಮುಚ್ಚಳ ನುಂಗಿ ಅಸುನೀಗಿತ್ತು. ಇದೀಗ ಮತ್ತೊಂದು ಘಟನೆ ಕೇರಳದಲ್ಲಿ ವರದಿಯಾಗಿದೆ.
ರಂಬುಟಾನ್ ಹಣ್ಣು ತಿನ್ನುವಾಗ ಗಂಟಲಲ್ಲಿ ಸಿಲುಕಿ 6 ವರ್ಷದ ಮಗು ಇಹಲೋಕ ತ್ಯಜಿಸಿರುವ ಘಟನೆ ಪೆರುಂಬವೂರಿನಲ್ಲಿ ನಡೆದಿದೆ. ಕಂಡಂತರ ಚಿರಾಯತುವೀಟ್ ನಲ್ಲಿ ಮನ್ಸೂರ್ ಎಂಬವರ ಪುತ್ರಿ ನೂರಾ ಫಾತಿಮಾ(6) ಮೃ*ತ ಬಾಲಕಿ.
ಇದನ್ನೂ ಓದಿ : ಅಯ್ಯೋ ಗಣಪ, ಎಡವಟ್ಟಾಯ್ತು! 65 ಗ್ರಾಂ ಚಿನ್ನದ ಸರ ಸಮೇತ ಗಣೇಶ ವಿಸರ್ಜನೆ ಮಾಡಿದ ಯುವಕರು
ಭಾನುವಾರ(ಸೆ.8) ಸಂಜೆ ಮನೆಯಲ್ಲಿ ಇತರ ಮಕ್ಕಳೊಂದಿಗೆ ರಂಬುಟಾನ್ ಹಣ್ಣನ್ನು ತಿನ್ನುತ್ತಿದ್ದಾಗ ಈ ದುರಂ*ತ ಸಂಭವಿಸಿದೆ. ಗಂಟಲಲ್ಲಿ ರಂಬುಟಾನ್ ಹಣ್ಣಿನ ಬೀಜ ಸಿಲುಕಿದ ಕಾರಣ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಬಾಲಕಿ ಇಹಲೋಕ ತ್ಯಜಿಸಿದ್ದಳು. ನೂರಾ ಫಾತಿಮಾ, ಕಂಡಂತರ ಹಿದಾಯತುಲ್ ಇಸ್ಲಾಂ ಶಾಲೆಯಲ್ಲಿ ಯು.ಕೆ.ಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
LATEST NEWS
ವರ್ಕ್ ಫ್ರಮ್ ಹೋಮ್ ಲಿಂಕ್ ಒತ್ತಿ 67ಸಾವಿರ ರೂ ಕಳೆದುಕೊಂಡ ಮಹಿಳೆ..! ದೂರು ದಾಖಲು
ಕೋಟ: ಇನ್ಸ್ಟಾಗ್ರಾಂ ಖಾತೆಯಲ್ಲಿ ಬಂದ ಜಾಹೀರಾತನ್ನು ನಂಬಿ ಯುವತಿಯೊಬ್ಬಳು 60 ಸಾವಿರ ರೂ. ಹಣವನ್ನು ಕಳೆದುಕೊಂಡಿರುವ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲಿ ಕೆಲಸ ಮಾಡುವ ವಿಚಾರಕ್ಕೆ ಸಂಬಂಧಿಸಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಂದ ಜಾಹೀರಾತನ್ನು ನೋಡಿ ಯುವತಿಯೊಬ್ಬಳು 60 ಸಾವಿರ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾಳೆ. ಇನ್ಸ್ಟಾಗ್ರಾಮ್‌ನಲ್ಲಿ ಬಂದ ಲಿಂಕನ್ನು ಅಕ್ಷತಾ(26 ವ) ಸ್ವೀಕರಿಸಿದ್ದಾರೆ. ಅದರಂತೆ ಲಿಂಕ್‌ಅನ್ನು ಒತ್ತಿದ ಕೂಡಲೇ ಅದು ವ್ಯಾಟ್ಸಾಪ್ ನಂಬರ್‌ಗೆ ಸಂಪರ್ಕಗೊಂಡಿದೆ. ಅದರಲ್ಲಿ ಮೊಬೈಲ್‌ನಲ್ಲಿ ಮಾಡುವ ಕೆಲಸದ ಬಗ್ಗೆ ಮಾಹಿತಿಯನ್ನು ನೀಡಿದ್ದರು.
ಆರಂಭದಲ್ಲಿ ನೋಂದಣಿ ಶುಲ್ಕ ಎಂದು ಅಕ್ಷತಾ 200 ರೂಪಾಯಿ ಹಣವನ್ನು ಫೋನ್ ಪೇ ಮೂಲಕ ವರ್ಗಾವಣೆ ಮಾಡಿದ್ದಾರೆ. ನಂತರ ಬೋನಸ್ ಎಂದು ಹೇಳಿ ಅಕ್ಷತಾ ರವರಿಗೆ 60 ರೂಪಾಯಿ ಹಣವನ್ನು ನೀಡಲಾಗಿದೆ. ಹೀಗೆ ಒಂದೇ ದಿನ 1,615 ರೂಪಾಯಿ ಅವರು ಪಾವತಿ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವೈದ್ಯರಿಗೆ ಕೋಟ್ಯಾಂತರ ರೂಪಾಯಿ ಆನ್ಲೈನ್ ವಂಚನೆ..! ಆರೋಪಿಗಳಿಂದ 13,95,000 ನಗದು ವಶ..!!
ಜಾಹಿರಾತುದಾರರು 1/09/2024ರಂದು ಒಂಭತ್ತು ಆರ್ಡರ್‌ಗಳನ್ನು ಮುಗಿಸುವಂತೆ ತಿಳಿಸಿದ್ದು ಮೊದಲಿಗೆ 500ರೂ. ಪಾವತಿಸಿ ಅಕ್ಷತಾ ಕೆಲಸವನ್ನು ಆರಂಭಿಸಿದ್ದಾರೆ. ಪ್ರತಿಯೊಂದು ಆರ್ಡರ್‌ಗೆ ಹಣ ಪಾವತಿಸಲು ಅವರು ತಿಳಿಸಿದ್ದು ಅದರಂತೆ ಅಕ್ಷತಾ ಒಟ್ಟು 67,330 ರೂಪಾಯಿ ಹಣ ಪಡೆದು ತನಗೆ ಹಣ ವಂಚನೆ ಮಾಡಿರುವುದಾಗಿ ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
LATEST NEWS
ಮಣಿಪುರದಲ್ಲಿ ನಿಯಂತ್ರಣಕ್ಕೆ ಬಾರದ ಹಿಂಸಾಚಾರ: 3 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ
ಇಂಫಾಲ್: ಮಣಿಪುರದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ತೌಬಲ್ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಹಿಂದಿನ ಆದೇಶದಲ್ಲಿ, ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಆಯಾ ಜಿಲ್ಲೆಗಳಲ್ಲಿ ಮಂಗಳವಾರ ಬೆಳಿಗ್ಗೆ 5 ರಿಂದ 10 ರವರೆಗೆ ಕರ್ಫ್ಯೂ ಸಡಿಲಿಸುವುದಾಗಿ ಘೋಷಿಸಲಾಗಿತ್ತು. ಆದರೆ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಸಡಿಲಿಕೆ ಆದೇಶವನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಎರಡೂ ಜಿಲ್ಲೆಗಳಲ್ಲಿ ಕರ್ಫ್ಯೂ ಮರು ಹೇರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಗಸ್ತು ತಿರುಗಲು ಮತ್ತು ವೈಮಾನಿಕ ಸಮೀಕ್ಷೆ ನಡೆಸಲು ಮಿಲಿಟರಿ ಹೆಲಿಕಾಪ್ಟರ್ ಅನ್ನು ನಿಯೋಜಿಸಲಾಗಿದ್ದು, ಕೂಂಬಿಂಗ್ ಕಾರ್ಯಾಚರಣೆಯೂ ನಡೆಯುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಗುಪ್ತಚರ ವಿಭಾಗದ ಪೊಲೀಸ್ ಮಹಾನಿರೀಕ್ಷಕರು ತಿಳಿಸಿದ್ದಾರೆ.
- LATEST NEWS6 days ago
ಪೇಟಿಎಂ ಮೂಲಕ ಲಕ್ಷ ಹಣ ವರ್ಗಾವಣೆ..! ಆರೋಪಿಯ ಬಂಧನ
- DAKSHINA KANNADA5 days ago
ದ.ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ ಪ್ರಕಟ; 21 ಶಿಕ್ಷಕರಿಗೆ ಪ್ರಶಸ್ತಿ
- FILM5 days ago
ಅಮ್ಮನಾದ ಮಿಲನಾ ನಾಗರಾಜ್; ಸಂತಸ ಹಂಚಿಕೊಂಡ ನಟ ಡಾರ್ಲಿಂಗ್ ಕೃಷ್ಣ
- LATEST NEWS1 day ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್