ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಕುದ್ರೋಳಿ ಬೆಂಗ್ರೆಯ ಶ್ರೀ ಗಂಗಾಂಜನೇಯ ದೇವಸ್ಥಾನದ ಬಳಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುದ್ರೋಳಿ ಬೆಂಗ್ರೆಯ ಪರಿಸರದ ನಂಬಿಕೆಯ ಭಾಗವಾಗಿರುವ ಶ್ರೀ ಗಂಗಾಂಜನೇಯ ದೇವಸ್ಥಾನದ ಬಳಿ ಅಭಿವೃದ್ಧಿ ಕಾಮಗಾರಿ ನಡೆಸಲು ಅನುದಾನ ಬಿಡುಗಡೆಗೊಳಿಸಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಹೇಳಿದರು.
ಹಿಂದೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ನಮ್ಮ ಸರಕಾರ ಆಡಳಿತಕ್ಕೆ ಬಂದ ಬಳಿಕ ದಾಖಲೆ ಪ್ರಮಾಣದ ಅನುದಾನ ಬಿಡುಗಡೆ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಅನೇಕ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಸ್ಥಳೀಯ ಕಾರ್ಪೋರೇಟರ್ ಸುನಿತಾ, ಮುಖಂಡರಾದ ಅರವಿಂದ್ ಬೆಂಗ್ರೆ, ವರದರಾಜ್, ಮಿಲನ್, ಯತೀಶ್, ಅಶ್ವತ್ಥಾಮ, ಪ್ರಸಾದ್, ಅಜಯ್, ನವೀನ್, ಭರತ್, ಪ್ರವೀಣ್, ಸುಧಾಕರ್, ವಸಂತ್ ಜೆ ಪೂಜಾರಿ, ಪ್ರಕಾಶ್, ಭಾಸ್ಕರ್, ಶ್ರೀಧರ್, ಭಾಗೀರಥಿ,
ಸುನಂದಾ, ಸೂರ್ಯಕಾಂತ್, ಪ್ರಜ್ವಲ್, ಸುಧೀರ್, ಸೂರಜ್, ದಾಕ್ಷಾಯಿಣಿ, ಶ್ರೀನಿವಾಸ್, ವಿನಯ್, ನವೀನ್ ಪುತ್ರನ್, ಸೀಮಾ, ಚಂಪಾ, ಶಶಿಕಲಾ, ಲೀಲಾವತಿ, ಮನೋಜ್, ಅನಿಲ್ ಕಾಂಚನ್, ಅನಿಲ್ ಕರ್ಕೇರ, ದಯಾನಂದ್, ಕಿರಣ್, ಮುತ್ತಮ್ಮ, ವಿಶಾಲಾಕ್ಷಿ, ಜನಾರ್ದನ್, ವಿಶಾಲ್, ಶೇಖರ್, ಸುರೇಖಾ, ರಮ್ಯಾ, ಪಾರ್ವತಿ, ಶ್ರೀಕಾಂತ್, ಚಂದ್ರ ಶೇಖರ್, ರಾಜೇಶ್ ಮತ್ತಿತರು ಉಪಸ್ಥಿತರಿದ್ದರು.