ಬಂಟ್ವಾಳ: ಬಸ್‌ನಲ್ಲಿ ಅನ್ಯಧರ್ಮದ ಯುವಕನೋರ್ವ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಎಂದು ಆರೋಪಿಸಿ ಹಿಂದೂ ಕಾರ್ಯಕರ್ತರ ಎನ್ನಲಾದ ತಂಡವೊಂದು ಆತನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ಬಂಟ್ವಾಳದ ರಾಯಿ ಎಂಬಲ್ಲಿ ನಡೆದಿದೆ.
ಮೂಲರಪಟ್ನ ನಿವಾಸಿ ಇಸಾಕ್ (45) ಹಲ್ಲೆಗೊಳಗಾದ ಯುವಕ.
ಬಸ್ ರಶ್ ಇದ್ದ ಕಾರಣ ಮಹಿಳೆಯೊಬ್ಬರು ಸೀಟಿನಲ್ಲಿ ಕುಳಿತಿದ್ದ ಇಸಾಕ್ ಅವರಲ್ಲಿ ತನ್ನ ಬ್ಯಾಗ್ ಹಿಡಿದುಕೊಳ್ಳುವಂತೆ ಕೊಟ್ಟಿದ್ದರು.
ನಂತರ ತನ್ನ ಇಳಿಯುವ ಸ್ಥಳ ಬಂದಾಗ ಬ್ಯಾಗ್ ಪಡೆದುಕೊಂಡು ಮಹಿಳೆ ಹೋಗಿದ್ದಾರೆ.
ಆದರೆ ಇದಾದ ಬಳಿಕ ಕಂಡಕ್ಟರ್ ಇಸಾಕ್‌ನ ಬಳಿ ನೀವು ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಬಸ್‌ನಿಂದ ಕೆಳಗಿಳಿಸಿ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ತನ್ನ ಉಳಿದ ಸಂಗಡಿಗರನ್ನು ಕರೆಸಿ ಇಸಾಕ್‌ನನ್ನು ಆ ತಂಡಕ್ಕೆ ಹಸ್ತಾಂತರಿಸಿದ್ದಾರೆ.
ನಂತರ ಇಸಾಕ್‌ನನ್ನು ಅವರು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ಇದಾದ ನಮತರ ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಪೊಲೀಸರು ಇಸಾಕ್‌ನನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.