Saturday, August 20, 2022

ಶಿಥಿಲಗೊಂಡ ಶಿರಾಡಿ ಘಾಟ್ ರಸ್ತೆಯನ್ನು ಕೂಡಲೇ ಸರಿಪಡಿಸಿ-ಅಧಿಕಾರಿಗಳಿಗೆ ಸಚಿವದ್ವಯರ ಆದೇಶ

ಮಂಗಳೂರು: ಮಂಗಳೂರು ಹಾಗೂ ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಯಾಗಿರುವ ರಾಷ್ಟ್ರೀಯ ಹೆದ್ದಾರಿ 75 ಹಾಸನ ಸಕಲೇಶಪುರ ಶಿರಾಡಿಘಾಟ್ ಸಮೀಪದ ಮಾರನಹಳ್ಳಿ ರಸ್ತೆಯನ್ನು ಸಂಚಾರ ಯೋಗ್ಯ ಮಾಡುವ ಕುರಿತು ಇಂದು ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳೊಂದಿಗೆ ಸಚಿವ ವಿ ಸುನಿಲ್ ಕುಮಾರ್ ಸಭೆ ನಡೆಸಿದರು.


ಆದಷ್ಟು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡುವ ಬಗ್ಗೆ ಚರ್ಚಿಸಲಾಯಿತು. ಅಷ್ಟೇ ಅಲ್ಲದೆ ಅಧಿಕಾರಿಗಳಿಗೆ 10 ದಿನಗಳ ಒಳಗೆ ಕೆಲಸ ಮುಗಿಸಬೇಕೆಂದು ಗಡುವು ನೀಡಲಾಯಿತು.

ಸಭೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics