Connect with us

LATEST NEWS

ಕಾಂಗ್ರೆಸ್ ನಾಯಕರು ಮಾನಸಿಕ ವೇದನೆಗೆ ಒಳಗಾಗಿದ್ದಾರೆ-ಸಚಿವ ಸುನಿಲ್

Published

on

ಉಡುಪಿ: ಹುಬ್ಬಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದ ಸಂದರ್ಭದಲ್ಲಿ ರಾಷ್ಟ್ರಧ್ವಜದ ಕುರಿತಾಗಿ ಕಾಂಗ್ರೆಸ್ ಯಾವ ರೀತಿ ನಡೆದುಕೊಂಡಿತು ಎನ್ನುವುದನ್ನು ಇಡೀ ದೇಶದ ಜನ ನೋಡಿದ್ದಾರೆ. ಒಂದು ರಾಷ್ಟ್ರಧ್ವಜವನ್ನು ಮಾರಲು ಬಿಡದೆ ಕರ್ಫ್ಯೂವನ್ನು ವಿಧಿಸಿ ರಾಷ್ಟ್ರಧ್ವಜದ ಎದುರು ನಪುಂಸಕರಂತೆ ನಡೆದುಕೊಂಡವರು ಕಾಂಗ್ರೆಸ್‌ನವರು ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ಕಿಡಿಕಾರಿದ್ದಾರೆ.


ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯನವರ ಕೆಲವು ಹೇಳಿಕೆಗೆ ವಿರುದ್ಧವಾಗಿ ಪ್ರತಿಕ್ರಿಯಿಸಿದ ಅವರು ‘ಕಾಂಗ್ರೆಸ್ ಇವತ್ತು ವಿನಾಕಾರಣ ರಾಷ್ಟ್ರಧ್ವಜದ ವಿಷಯ, ಸ್ವಾತಂತ್ರ್ಯದ ವಿಷಯ ತೆಗೆದುಕೊಂಡು ಅನಗತ್ಯವಾದ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿರುವುದು ಖಂಡನೀಯ ಸಂಗತಿ. ಕಾಂಗ್ರೆಸ್ ನಾಯಕರು ಮಾನಸಿಕ ವೇದನೆಗೆ ಒಳಗಾಗಿದ್ದಾರೆ.

ಕಾಂಗ್ರೆಸ್ ಕೇವಲ ಟ್ವಿಟರ್ ನಲ್ಲಿ ಟೀಕೆ ಮಾಡುವುದರಲ್ಲೇ ಮಗ್ನವಾಗಿದೆ’ ಎಂದು ಕಿಡಿಕಾರಿದ್ರು. ಇನ್ನು ಆರ್‌ಎಸ್‌ಎಸ್‌ನ್ನು ಅವಮಾನಿಸುವವರಿಗೆ ತಿರುಗೇಟು ನೀಡಿದ ಅವರು ‘ಆರೆಸ್ಸೆಸ್ ಕುರಿತು ಕಾಂಗ್ರೆಸ್ ಅನಗತ್ಯ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದೆ.

ಕಾಂಗ್ರೆಸ್ ಟ್ವೀಟನ್ನು ನಾನು ಖಂಡಿಸುತ್ತೇನೆ. ಮೋದಿ ಸರಕಾರ ಬರುವ ತನಕವೂ ಕಾಶ್ಮೀರದ ಶ್ರೀನಗರದಲ್ಲಿ  ರಾಷ್ಟ್ರಧ್ವಜ ಹಾರಿಸಲು ಬಿಡಲಿಲ್ಲ. ಅವತ್ತಿನ ಕಾಂಗ್ರೆಸ್ ಸರಕಾರ ನಪುಂಸಕತ್ವ ತೋರಿಸಿತ್ತು.

ಭಯೋತ್ಪಾದಕರ ಹುಟ್ಟಡಗಿಸಲು ಆರೆಸೆಸ್ ನ ಸರಕಾರ ಬರಬೇಕಾಯಿತು. ಪಾಕಿಸ್ತಾನಕ್ಕೆ ತಕ್ಕ ಬುದ್ದಿ ಕಲಿಸಲು ಆರೆಸೆಸ್ ಸಂಸ್ಕಾರದ ಆಡಳಿತ ಬರಬೇಕಾಯಿತು’ ಎಂದು ಆಕ್ರೋಶವನ್ನು ಹೊರಹಾಕಿದರು.
ಅಷ್ಟೇ ಅಲ್ಲದೆ ಭಯೋತ್ಪಾದಕರ ಮುಂದೆ ಮಂಡಿಯೂರಿ ನಿಂತು ನಪುಂಸಕರಂತೆ ನಡೆದುಕೊಂಡಿದ್ದು ಕಾಂಗ್ರೆಸ್. ಆಡಳಿತ ಮತ್ತು ನಡವಳಿಕೆಯಲ್ಲಿ ದೇಶದ ಪರವಾಗಿ ಯಾವತ್ತೂ ಆಲೋಚನೆ ಮಾಡದ ಕಾಂಗ್ರೆಸ್ ಅನಗತ್ಯವಾದ ವಿವಾದಗಳನ್ನು ಸೃಷ್ಠಿಸುತ್ತಿದೆ.

ಇದನ್ನು ಬಿಟ್ಟು 60 ವರ್ಷದ ಆಡಳಿತದಲ್ಲಿ ರಾಷ್ಟ್ರಧ್ವಜ ,ಗಡಿ ,ಭಯೋತ್ಪಾದನೆ ನಿಗ್ರಹ ದಲ್ಲಿ ಕಾಂಗ್ರೆಸ್ ನಪುಂಸಕನಂತೆ ನಡೆದುಕೊಂಡಿರುವುದು ಹೊರತು ಇನ್ನ್ಯಾವುದೇ ಸಂಘ ಸಂಸ್ಥೆಗಳಲ್ಲ. ಟ್ವೀಟ್ ಮೂಲಕ ಬಿಜೆಪಿ ಸರ್ಕಾರವನ್ನು ಟೀಕೆ ಮಾಡುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೇಳಿಕೆಯನ್ನು ವಿರೋಧಿಸಿ ಮಾತನಾಡಿ ‘ಸಿದ್ದರಾಮಯ್ಯನ ಮೂಲ ಜನತಾಪರಿವಾರ ಅಲ್ಲವೇ? ನಂತರ ಕಾಂಗ್ರೆಸ್ಸಿಗೆ ವಲಸೆ ಹೋಗಿದ್ದು ಯಾರು? ನಿಮ್ಮ ಮೂಲ ಯಾವುದು? ನಿಮ್ಮದು ವರುಣ ಕ್ಷೇತ್ರ ಮೂಲವೋ? ಬಾದಾಮಿ ಕ್ಷೇತ್ರ ಮೂಲವೋ? ಬಎಲ್ಲಾ ವಿಷಯಗಳು ಚರ್ಚೆಯಾಗಬೇಕು.

ತಾನು ನೈತಿಕ ದಿವಾಳಿಯಾಗಿ ಬೇರೆಯವರ ಬಗ್ಗೆ ಮಾತನಾಡಬಾರದು. ಅಧಿಕಾರ ಬಂದಾಗ ಹೇಗೆ ಬೇಕಾದರೂ ವರ್ತಿಸುತ್ತೇನೆ ಅನ್ನೋದು ಸಿದ್ದರಾಮಯ್ಯ ಧೋರಣೆಯಾಗಿತ್ತು.

ಬೊಮ್ಮಾಯಿ ಮತ್ತು ಮೋದಿಯವರ ಉತ್ತಮ ಆಡಳಿತ ಸಹಿಸಲಾಗದೆ ಜನರನ್ನ ದಿಕ್ಕುತಪ್ಪಿಸುತ್ತಿದ್ದಾರೆ. ಮಾನಸಿಕ ಒಳ ವೇದನೆಗೆ ಒಳಗಾಗಿ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಜನ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದು ವ್ಯಂಗ್ಯವಾಡಿದರು.

FILM

ಮದುವೆ ಆಗೋ ಹುಡುಗ ‘VD’ ತರ ಇರ್ಬೇಕು ಎಂದ ರಶ್ಮಿಕಾ ಮಂದಣ್ಣ… vd ಅಂದ್ರೆ ಯಾರು?

Published

on

FILM : ನಟಿ ರಶ್ಮಿಕಾ ಮಂದಣ್ಣ ತಾನೋ ಮದುವೆ ಆಗೋ VD ತರ ಇರ್ಬೇಕು ಎಂದು ಬರೆದುಕೊಂಡಿದ್ದಾರೆ. ಹೌದು VD ಎಂದು ಬರೆದುಕೊಂಡಿರೋ ರಶ್ಮಿಕಾ ಮಂದಣ್ಣ VD ಎಂದರೆ ಯಾರು ಎಂಬುವುದನ್ನು ರಿವೀಲ್ ಮಾಡಿಲ್ಲ. ಆದ್ರೆ ಅಭಿಮಾನಿಗಳು ಮಾತ್ರ ಅದು ‘ವಿಜಯ್ ದೇವರಕೊಂಡ’ ಎಂದು ಹೇಳಿಕೊಂಡಿದ್ದಾರೆ.

ಈ ಬರಹ ನೋಡಿದ ಮೇಲೆ ಅತೀ ಶೀಘ್ರದಲ್ಲಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಆಗೋದಂತು ಖಚಿತ ಅನ್ನುತ್ತಿದ್ದಾರೆ ರಶ್ಮಿಕಾ, ವಿಜಯ್ ದೇವರಕೊಂಡ ಫ್ಯಾನ್ಸ್.

Continue Reading

DAKSHINA KANNADA

ಹೆಬ್ರಿ ಮಠದ ಬೆಟ್ಟು ಬಳಿ ಸಾರ್ವಜನಿಕರ ಪ್ರತಿಭಟನೆ-ಧರ್ಮಸ್ಥಳ ಕೊಲ್ಲೂರು ರಾಜ್ಯ ಹೆದ್ದಾರಿ ಬಂದ್

Published

on

ಹೆಬ್ರಿ : ಹೆಬ್ರಿ ತಾಲೂಕಿನ ಮಠದ ಬೆಟ್ಟು ಎಂಬಲ್ಲಿ ಹಾದು ಹೋಗುವ ಕೊಲ್ಲೂರು ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಅಗಲೀಕರಣಕ್ಕೆ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿರುವ ಹಿನ್ನಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ. ಅಗಲ ಕಿರಿದಾಗಿರುವ ಕೊಲ್ಲೂರು ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿದೆ.

ಇತ್ತೀಚಿನ ವರ್ಷದಲ್ಲಿ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ ಕಾರಣ ಪದೇ ಪದೇ ಅಪಘಾತಗಳೂ ಕೂಡಾ ಸಂಭವಿಸ್ತಾ ಇದೆ. ಕೆಲ ದಿನಗಳ ಹಿಂದೆಯೂ ಸ್ಥಳೀಯ ದ್ವಿಚಕ್ರವಾಹನಕ್ಕೆ ಪ್ರವಾಸಿ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಯುವಕನೊಬ್ಬ ಗಂಭೀರ ಗೊಂಡಿದ್ದ. ಹೀಗಾಗಿ ಅರಣ್ಯ ಇಲಾಖೆಯೇ ರಸ್ತೆ ಅಭಿವೃದ್ದಿಗೆ ಅಡ್ಡಿ ಪಡಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ರಸ್ತೆಯ ಇಕ್ಕೆಲೆಯಲ್ಲಿ ಇರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದು, ಅರಣ್ಯ ಇಲಾಖೆ ರಸ್ತೆ ಅಗಲೀಕರಣಕ್ಕೆ ಮರ ಕಡಿಯಲು ಹಾಗೂ ಅರಣ್ಯ ಭೂಮಿ ನೀಡಲು ಒಪ್ಪಿಗೆ ನೀಡಿಲ್ಲ.

ಹೀಗಾಗಿ ಹಿರಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಸ್ಥಳೀಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪೊಲೀಸರು ಪ್ರತಿಭಟನಾಕಾರರ ಮನ ಒಲಿಸುವ ಪ್ರಯತ್ನ ನಡೆಸಿದ್ದರಾದ್ರೂ ಪ್ರಯೋಜನವಾಗಿಲ್ಲ. ಹಿರಿಯ ಅರಣ್ಯ ಅಧಿಕಾರಿಗಳು ಬರುವ ತನಕ ರಸ್ತೆ ತೆರವು ಮಾಡೋದಿಲ್ಲ ಎಂದು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಲಾಗುತ್ತಿದೆ.

Continue Reading

DAKSHINA KANNADA

ಮಂಗಳೂರು: ಕಟ್ಟಡದಿಂದ ಬಿದ್ದು ಕರ್ತವ್ಯ ನಿರತ ಪೈಂಟರ್‌ ಸಾವು

Published

on

ಮಂಗಳೂರು : ಪೈಂಟ್ ಮಾಡುವ ವೇಳೆ ಕಟ್ಟಡವೊಂದರ ಎರಡನೇ ಮಹಡಿಯಿಂದ ಬಿದ್ದ ಯುವಕ ಸ್ಥಳದಲ್ಲೇ ಮೃತ ಪಟ್ಟ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ನಡೆದಿದೆ. ಏಣಿಯನ್ನು ಬಳಸಿ ಪೈಂಟಿಂಗ್ ಮಾಡುತ್ತಿದ್ದ 26 ವರ್ಷ ಪ್ರಾಯದ ಮೋಹಿತ್ ಪೂಜಾರಿ ಮೃತ ದುರ್ದೈವಿ.

ಕುಡುಪು ಕೊಂಚಾಡಿ ನಿವಾಸಿಯಾಗಿದ್ದ ಮೋಹಿತ್ ಪೂಜಾರಿ ಶಕ್ತಿನಗರದ ಮನೆಯೊಂದರಲ್ಲಿ ಕಳೆದ 15 ದಿನಗಳಿಂದ ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ದೀಪಕ್ ಎಂಬ ಇನ್ನೊಬ್ಬರ ಜತೆ ಮಹಡಿಯ ಹೊರಭಾಗದಲ್ಲಿ ಪೈಂಟಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಮೋಹಿತ್ ನಿಂತಿದ್ದ ಏಣಿ ಗೋಡೆಯಿಂದ ಜಾರಿದ್ದು, ಮೋಹಿತ್ ಮನೆಯ ಹೊರಭಾಗದ ರಸ್ತೆಗೆ ಎಸೆಯಲ್ಪಟ್ಟಿದ್ದರು. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆದಿತ್ತಾದ್ರೂ ಈ ವೇಳೆಗಾಗಲೇ ಮೋಹಿತ್ ಇಹಲೋಕ ತ್ಯಜಿಸಿದ್ದರು. ಈ ಕುರಿತು ಮೋಹಿತ್ ಪೈಂಟಿಂಗ್ ಮಾಡುತ್ತಿದ್ದ  ಶಕ್ತಿನಗರದ ಶಿವ ಡೆಕೊರೇಟರ್ಸ್‌ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Continue Reading

LATEST NEWS

Trending