ಬೈಂದೂರು: ಉಡುಪಿ ಜಿಲ್ಲೆ ಗಂಗೊಳ್ಳಿ ಮೀನುಗಾರಿಕಾ ಬಂದರಿನ ನಿರ್ಮಾಣ ಹಂತದ ಜೆಟ್ಟಿ ಕುಸಿತವಾದ ಪ್ರದೇಶಕ್ಕೆ ಮೀನುಗಾರಿಕಾ ಸಚಿವ ಎಸ್. ಅಂಗಾರ ಅವರು ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು ‘ಜೆಟ್ಟಿಯ 150 ಮೀಟರಿಗೂ ಅಧಿಕ ಭಾಗ ಕುಸಿದಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಅಲ್ಲಿದ್ದ ಮೀನುಗಾರರು ಜೆಟ್ಟಿ ಕುಸಿತದಿಂದಾಗಿ ತಮಗಾಗಿರುವ ಆನನುಕೂಲತೆಗಳನ್ನು ವಿವರಿಸಿ, ಅವೈಜ್ಞಾನಿಕವಾಗಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ನಿರ್ಮಾಣ ಹಂತದಲ್ಲಿರುವಾಗಲೇ ಜೆಟ್ಟಿ ಕುಸಿದಿದೆ.
ಇದಕ್ಕೆ ನೇರ ಹೊಣೆಗಾರಿಕೆ ಇಲಾಖೆ ಹಾಗೂ ಗುತ್ತಿಗೆದಾರರು ಎಂದು ಮೀನುಗಾರರು ಆರೋಪಿಸಿದರು. ಘಟನೆಯ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ವತಿಯಿಂದ ತನಿಖೆ ನಡೆಸಲಾಗುವುದು ಹಾಗೂ ಈ ಕಾಮಗಾರಿಯಲ್ಲಿ ಇಲಾಖೆಯ ಯಾವುದೇ ಅಧಿಕಾರಿಗಳು ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ ಅವರ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರರಿಗೆ ಭರವಸೆ ನೀಡಿದರು.
ಸಚಿವರು ಬಳಿಕ ಮಾಧ್ಯಮದವರ ಜತೆ ಮಾತನಾಡಿದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್, ತಹಸೀಲ್ದಾರ್ ಕಿರಣ್ ಬೋರಯ್ಯ, ಬಿಜೆಪಿ ಬೈಂದೂರು ಮಂಡಲ ಆಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಆಧ್ಯಕ್ಷ ಸದಾಶಿವ ಖಾರ್ವಿ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಮೀನುಗಾರರ ಮುಖಂಡರು, ಪೋಲಿಸ್ ಇಲಾಖೆ, ಸಾರ್ವಜನಿಕರು ಹಾಜರಿದ್ದರು.