Connect with us

  DAKSHINA KANNADA

  ಕದ್ರಿಯಲ್ಲಿ ಅಕ್ರಮ ಗೂಡಂಗಡಿ ತೆರವು

  Published

  on

  ಮಂಗಳೂರು: ಕದ್ರಿ ಪಾರ್ಕ್‌ ಬಳಿಯ ಅಕ್ರಮ ಗೂಡಂಗಡಿಗಳನ್ನು ಮನಪಾ ಹಾಗೂ ಕಂದಾಯ ಅಧಿಕಾರಿಗಳು ಇಂದು ತೆರವುಗೊಳಿಸಿದ್ದಾರೆ.


  ಪಾಲಿಕೆಯ ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರ ಸೂಚನೆಯ ಮೇರೆಗೆ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ಗೂಡಂಗಡಿಗಳನ್ನು ತೆರವು ಮಾಡಲಾಗಿದೆ. ಸಾರ್ವಜನಿಕರ ದೂರಿನ ಮೇರೆಗೆ, ಕದ್ರಿ ಪಾರ್ಕ್‌ ಮುಂಭಾಗದಲ್ಲಿದ್ದ 10ಕ್ಕೂ ಹೆಚ್ಚು ಅಕ್ರಮ ಗೂಡಂಗಡಿಗಳನ್ನು ಪೊಲೀಸ್‌ ರಕ್ಷಣೆಯಲ್ಲಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

  ಸ್ಮಾರ್ಟ್ ಸಿಟಿ ಯೋಜನೆ ಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಫುಡ್‌ ಕೋರ್ಟ್‌‌ಗಳ ಕಾಮಗಾರಿ ನಡೆಸಲಾಗುತ್ತಿದ್ದು, ಈ ಹಿನ್ನೆಲೆ ಅಕ್ರಮ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಕಾರ್ಯಾಚರಣೆಯ ವೇಳೆ ಮನಪಾ ಕಂದಾಯ ಅಧಿಕಾರಿ ಪ್ರವೀಣ್‌‌ ಕರ್ಕೇರ ಹಾಗೂ ಮತ್ತಿತರರು ಇದ್ದರು.

  Click to comment

  Leave a Reply

  Your email address will not be published. Required fields are marked *

  DAKSHINA KANNADA

  ಹಾವು ಮನೆಯೊಳಗೆ ಬಂದರೆ ಶುಭ ಸೂಚಕವೇ..?

  Published

  on

  ಮಂಗಳೂರು: ಹಾವು.. ಆ ಶಬ್ಧ ಕೇಳಿದೊಡನೆ ಒಮ್ಮೆ ಭಯ ಹುಟ್ಟಿಸುತ್ತದೆ. ಇನ್ನು ಎದುರಿಗೆ ಹಾವು ನೋಡಿದರೆ ಹೃದಯದ ಬಡಿತವೇ ನಿಂತು ಹೋದಂತೆ ಆಗುತ್ತದೆ. ಹಾಗೆಯೇ ಒಂದು ವೇಳೆ ನಿಮ್ಮ ಮನೆಯೊಳಗೆ ಹಾವು ಬಂದರೆ ನಿಮಗೆ ಹೇಗಾಗಬಹುದು. ಕೆಲವೊಮ್ಮೆ ಎಷ್ಟೋ ಜನರ ಮನೆಯೊಳಗೆ ಹಾವು ಬಂದಿರುತ್ತದೆ. ಹಾಗೋ ಹೀಗೋ ಹಾವು ಹಿಡಿಯುವರನ್ನು ಕರೆದು ಹಾವನ್ನು ಹೊರಗೆ ಕಳಿಸುವ ಸಾಹಸ ಮಾಡಿದ ನಂತರವೂ ಕೆಲವು ದಿನಗಳವರೆಗೂ ಆ ಭಯ ಇದ್ದೇ ಇರುತ್ತದೆ.

  ಆದರೆ ಹಾವು ಮನೆಯೊಳಗೆ ಬಂದರೆ ಅದನ್ನು ಕೆಲವರು ಶುಭವೆಂದೂ ಇನ್ನೂ ಕೆಲವರು ಸಮಸ್ಯೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆಹಾವು ಮನೆಗೆ ಬಂದರೆ ಏನು ಅರ್ಥ? ಅದರಿಂದ ಏನಾದರೂ ಸಮಸ್ಯೆ ಇದೆಯೇ ತಿಳಿಯೋಣ.

  ಮನೆಯೊಳಗೆ ಹಾವು ಬರುವುದು ಶುಭ ಸೂಚಕ ಎಂದು ಹೇಳುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಹಾವನ್ನು ದೇವರ ರೂಪದಲ್ಲಿ ಪೂಜಿಸಲಾಗುತ್ತದೆ. ಆದಿಶೇಷ ಸರ್ಪಗಳ ರಾಜ, ಶಿವನು ಕೂಡಾ ಹಾವನ್ನು ತನ್ನ ಕತ್ತಿನಲ್ಲಿ ಸುತ್ತಿಕೊಂಡಿದ್ದಾನೆ. ಆದ್ದರಿಂದ ದೇವರ ಸ್ವರೂಪವಾಗಿರುವುದರಿಂದ ಮನೆಯೊಳಗೆ ಹಾವು ಬಂದರೆ ಅದು ಖಂಡಿತ ಏನೋ ಶುಭ ಮುನ್ಸೂಚನೆ ಎಂದು ನಂಬಲಾಗಿದೆ.

  ಮನೆಯೊಳಗೆ ಒಂದು ವೇಳೆ ಕಪ್ಪು ಹಾವು ಬಂದರೆ ಅದನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮಗೆ ಶಿವನ ಕೃಪೆ ದೊರೆಯಲಿದ್ದು ಕೆಲವೇ ದಿನಗಳಲ್ಲಿ ನಿಮ್ಮ ಜೀವನ ಬದಲಾಗಲಿದೆ, ನೀವು ಸಂತೋಷ ಜೀವನವನ್ನು ಗಳಿಸಲಿದ್ದೀರಿ ಎಂಬ ಅರ್ಥವನ್ನು ನೀಡುತ್ತದೆ.

  ಹಾವಿನ ಮರಿ ಮನೆಯೊಳಗೆ ಬಂದರೆ ನೀವು ಕೆಲವು ದಿನಗಳಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸಗಳು ಆದಷ್ಟು ಬೇಗ ಪೂರ್ಣಗೊಳ್ಳುತ್ತವೆ ಎಂದು ಅರ್ಥ. ಹಾವು ಮನೆಯನ್ನು ಪ್ರವೇಶಿಸಿದರೆ ಲಕ್ಷ್ಮೀ ಆಶೀರ್ವಾದ ಕೂಡಾ ನಿಮ್ಮ ಮೇಲಿದೆ ಎಂದು ಅರ್ಥ. ಇದುವರೆಗೂ ನೀವು ಎದುರಿಸುತ್ತಿದ್ದ ನಿಮ್ಮ ಆರ್ಥಿಕ ಸಮಸ್ಯೆ ಕೊನೆಗೊಳ್ಳುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸದೃಢಗೊಳ್ಳುವುದು ಖಚಿತ.

  ಒಂದು ವೇಳೆ ನಿಮ್ಮ ಮನೆಗೆ ಬಿಳಿ ಬಣ್ಣದ ಹಾವು ಪ್ರವೇಶಿಸಿದರೆ ಇದು ಇನ್ನಷ್ಟು ಮಂಗಳಕರ ಎನ್ನಲಾಗಿದೆ. ಇದು ಮನೆಯಲ್ಲಿ ಶಾಂತಿ, ಸುಖ, ಸಮೃದ್ಧಿ ನೆಲೆಸುವಂತೆ ಮಾಡುತ್ತದೆ. ಇದ್ದಕ್ಕಿದ್ದಂತೆ ನಿಮ್ಮ ಮನೆಗೆ ಹಸಿರು ಹಾವು ಬಂದರೆ ಅದೂ ಕೂಡಾ ಶುಭವೇ. ಶೀಘ್ರದಲ್ಲೇ ನೀವು ಶುಭ ಸುದ್ದಿ ಕೇಳಲಿದ್ದೀರಿ, ನಿಮ್ಮ ಕಷ್ಟನಷ್ಟಗಳು ಕೊನೆಗೊಳ್ಳುತ್ತವೆ.

  ಹಳದಿ ಬಣ್ಣದ ಹಾವು ಮನೆಗೆ ಬಂದರೆ ನೀವು ಅತಿ ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ಜೀವನದಲ್ಲಿ ಪ್ರಗತಿ ಹೊಂದಲಿದ್ದೀರಿ ಎಂದು ಅರ್ಥ. ಅಷ್ಟೇ ಅಲ್ಲ, ಮನೆಗೆ ಹಾವು ಬಂದರೆ ಪತಿ ಪತ್ನಿ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ. ಪರಸ್ಪರ ಪ್ರೀತಿ ವಿಶ್ವಾಸ ಬೆಳೆಯುತ್ತದೆ. ಜೀವನ ಸುಂದರವಾಗಿರುತ್ತದೆ.

  Continue Reading

  DAKSHINA KANNADA

  ಚಿಕಿತ್ಸೆಗೆಂದು ಬಂದ ಯುವತಿ ಮೇಲೆ ಅತ್ಯಾ*ಚಾರ..! ಕಾಸರಗೋಡು ಮೂಲದ ಯುವಕನ ಬಂಧನ

  Published

  on

  ಮಂಗಳೂರು: ಅನಾರೋಗ್ಯ ಹಿನ್ನಲೆ ಚಿಕಿತ್ಸೆಗೆ ಬಂದ ಮಹಿಳೆಗೆ ಸಹಾಯ ಮಾಡುವ ನಾಟಕವಾಡಿ ಆಕೆಯನ್ನು ಅತ್ಯಾ*ಚಾರ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೇರಳ ಮೂಲದ ಮಹಿಳೆ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಬಂದಿದ್ದು, ಅಲ್ಲಿ ಪರಿಚಿತ ಹಾಗೂ ಸಹಾಯ ಮಾಡಲು ನಿಂತಿದ್ದ ಯುವಕನೊಬ್ಬ ಅತ್ಯಾಚಾರ ಮಾಡಿದ್ದಾಗಿ ಮಹಿಳೆ ದೂರು ನೀಡಿದ್ದಾರೆ. ಅತ್ಯಾಚಾರ ಮಾಡಿದ್ದು ಅಲ್ಲದೆ ಅದನ್ನ ತನ್ನ ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದು ಬಳಿಕ ಆರೋಪಿ ಆ ವಿಡಿಯೋವನ್ನು ತೋರಿಸಿ ಬ್ಲ್ಯಾಕ್ಮೇಲ್ ಮಾಡಿ ನಿರಂತರ ಅತ್ಯಾಚಾರ ನಡೆಸಿರುವುದಾಗಿ ದೂರು ದಾಖಲಾಗಿದೆ.

  ಇದನ್ನೂ ಓದಿ..; ಲ್ಯಾಪ್ ಟಾಪ್ ಚಾರ್ಜ್ ಮಾಡುವಾಗ ದುರಂ*ತ; ವಿದ್ಯುತ್ ಸ್ಪರ್ಶಿಸಿ ವೈದ್ಯೆ ಸಾ*ವು

  ಕಾಸರಗೋಡು ಮೂಲದ ನೊಂದ ಮಹಿಳೆ ಪರಿಚಿತ ಸುಜಿತ್ ಈ ಕೃತ್ಯ ಎಸಗಿರುವುದಾಗಿ ಆರೋಪಿಸಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಮೊದಲ ಬಾರಿಗೆ ತನ್ನ ಮೇಲೆ ಅತ್ಯಾಚಾರ ನಡೆಸಿದ ಸುಜಿತ್, ವಿಡಿಯೋ ಬಹಿರಂಗ ಪಡಿಸುವ ಬೆದರಿಕೆ ಹಾಕಿ ನಿರಂತರ ಕಿರುಕುಳ ನೀಡಿದ್ದಾಗಿ ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತೀಚೆಗೆ ನೊಂದ ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಅಲ್ಲಿಯೂ ತನ್ನ ಮೇಲೆ ಸುಜೀತ್ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯ ಬಳಿಕ ನೊಂದ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿ ರಕ್ಷಣೆ ಕೋರಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಕಾಸರಗೋಡಿನ ಹೊಸದುರ್ಗದಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

  Continue Reading

  DAKSHINA KANNADA

  ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಹೆಲ್ಪ್‌ ಲೈನ್

  Published

  on

  ಮಂಗಳೂರು: ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯ ಕರ್ನಾಟಕ ರಾಜ್ಯ ಘಟಕವು ಸಹಾಯವಾಣಿ ವ್ಯವಸ್ಥೆಯನ್ನು ಇಂದಿನಿಂದ ಕಾರ್ಯಾರಂಭಗೊಳಿಸಿದೆ.  ಮೇ.29ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್‌ ರವರು ಈ ಬಗ್ಗೆ ಮಾಹಿತಿ ನೀಡಿದರು.

  ಹಿಂದೂ ಯುವತಿಯರ ರಕ್ಷಣೆ ಈ ಸಹಾಯವಾಣಿ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ. ಕರ್ನಾಟಕದ ಮಂಗಳೂರು, ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ- ಧಾರವಾಡ, ದಾವಣಗೆರೆ, ಬಾಗಲಕೋಟೆ ಎಂಬ 6 ಕಡೆ ಏಕಕಾಲದಲ್ಲಿ ಹೆಲ್ಪ್ ಲೈನ್‌ ಕಾರ್ಯಾರಂಭಗೊಂಡಿದೆ. ಹುಬ್ಬಳ್ಳಿಯಲ್ಲಿ ಈ ಸಹಾಯವಾಣಿಯ ಕೇದ್ರ ಇರುತ್ತದೆ ಎಂದು ತಿಳಿಸಿದರು.

  Read More..;ಕಾಂಗ್ರೆಸ್ ಅಭ್ಯರ್ಥಿಯ ಕರಪತ್ರದಲ್ಲಿ ಬಿಜೆಪಿ ನಾಯಕನ ಫೋಟೋ! ನಗೆಪಾಟಲಿಗೀಡಾದ ಕಾಂಗ್ರೆಸ್

  ಸಹಾಯವಾಣಿಯು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ರಾಜ್ಯದ ಯಾವುದೇ ಮೂಲೆಯಿಂದ ಕರೆ ಮಾಡಬಹುದಾಗಿದ್ದು, ಆಧಾರ ಸಹಿತವಾಗಿ ಕರೆ ಮಾಡಬೇಕು. ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುವುದು. ಲವ್‌ ಜಿಹಾದ್ ಕೆರಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಕರೆಗಳ ಸತ್ಯಾಸತ್ಯತೆ ತಿಳಿದು ಬಳಿಕ ಮುಂದಿನ ಹೆಜ್ಜೆ ಇರಿಸಲಾಗುವುದು. ಕಾನೂನು ಮೀರುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿಯೇ ಹೆಲ್ಪ್ ಲೈನ್‌ ಕಾರ್ಯಾಚರಿಸಲಿದೆ. ಸಹಾಯವಾಣಿ ವ್ಯವಸ್ಥೆಯ ನಿರ್ವಹಣೆಯಲ್ಲಿ ವಕೀಲರ ತಂಡ, ಮಾಜಿ ಪೊಲೀಸ್ ಅಧಿಕಾರಿಗಳು, ಮಹಿಳೆಯರು ಇರುತ್ತಾರೆ. ಕಾನೂನು ಸಲಹೆಯನ್ನು ನೀಡಲಾಗುತ್ತದೆ ಎಂದರು. ಲವ್‌ ಜಿಹಾದ್ ಗೆ ಸಂಬಂಧಿಸಿ ಉತ್ತರ ಭಾರತದಲ್ಲಿ 2022- 23 ರಲ್ಲಿ 153 ಹಿಂದು ಯುವತಿಯರ ಕೊಲೆಯಾಗಿದೆ ಎಂದು ಮಾಹಿತಿ ನೀಡಿದರು.

  ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಮಂಗಳೂರು/ ಉಡುಪಿ ವಿಭಾಗದ ಅಧ್ಯಕ್ಷ ಮಧುಸೂದನ್‌ ಉರ್ವಸ್ಟೋರ್‌, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ್‌ ಅಂಬೆಕಲ್ಲು, ಮಂಗಳೂರು ಕಾರ್ಯಾಧ್ಯಕ್ಷ ಅರುಣ್ ಕದ್ರಿ, ಸುದರ್ಶನ್‌ ಪೂಜಾರೆ, ಹೇಮಂತ ಜಾನಕೆರೆ ಅವರು ಉಪಸ್ಥಿತರಿದ್ದರು.

  ಈ ಸಹಾಯವಾಣಿಯ ನಂಬರ್‌ 9090443444 

   

  Continue Reading

  LATEST NEWS

  Trending