Wednesday, June 16, 2021

ನವರಾತ್ರಿ ಉತ್ಸವ ದೇವಿ ಆರಾಧನೆಯೊಂದಿಗೆ ಸನ್ನಡತೆಯ ಮನಸ್ಸೂ ಜಾಗೃತವಾಗಲಿ : ಒಡಿಯೂರುಶ್ರೀ

ನವರಾತ್ರಿ ಉತ್ಸವ ದೇವಿ ಆರಾಧನೆಯೊಂದಿಗೆ ಸನ್ನಡತೆಯ ಮನಸ್ಸೂ ಜಾಗೃತವಾಗಲಿ : ಒಡಿಯೂರುಶ್ರೀ

ನಮ್ಮ ಕುಡ್ಲ ವಾಹಿನಿಯ 10 ದಿನಗಳ ದಸರಾ ವೈಭವ 2020ಗೆ ಚಾಲನೆ…

ಮಂಗಳೂರು : ಇಂದು ದಸರಾ ಅಂದಾಕ್ಷಣ ಎಲ್ಲರೂ ಮೈಸೂರಿನತ್ತ ಗಮನ ಕೇಂದ್ರೀಕರಿಸುತ್ತಾರೆ. ಆದರೆ ಜನ ಕರಾವಳಿಯತ್ತಲೂ ಈಗ ನೋಡುತ್ತಿದ್ದಾರೆ. ದಸರಾದ ಉತ್ಸವ ನಮ್ಮ ಅಂತರಂಗದ ಉತ್ಸವವಾಗಬೇಕು.

ದೇವಿ ಅನುಗ್ರಹವನ್ನು ಬೆಳಕಾಗಿಸುವ ಕೆಲಸ ನಾವು ಮಾಡಬೇಕು. ದೇವಿ ಆವಿರ್ಭಾವವಾಗಬೇಕು. ಅಂದರೆ ನಮ್ಮೊಳಗಿನ ಮನಸ್ಸು ದೇವಿಗಾಗಿ ಜಾಗೃತವಾಗಬೇಕು.

ಅಮ್ಮನ ಅನುಗ್ರಹವಿಲ್ಲದೆ ಯಾವುದೂ ನಡೆಯಲು ಸಾಧ್ಯವಿಲ್ಲ. ಮಹಾಕಾಳಿ, ಸರಸ್ವತಿ, ಶಾರದೆ ಹೀಗೆ ನಾನಾ ರೂಪದಲ್ಲಿ ದೇವಿ ಅವತರಿಸುತ್ತಾಳೆ.

ಜ್ಞಾನದ ಜೊತೆಗೆ ನಮ್ಮಲ್ಲಿ ಇಚ್ಛಾಶಕ್ತಿಯೂ ಇರಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

ಅವರು ನಮ್ಮ ಕುಡ್ಲ ವಾಹಿನಿಯ ದಸರಾ ವೈಭವ -2020ರ ಹತ್ತು ದಿನಗಳ ಕಾಲದ ಸಾಂಸ್ಕೃತಿಕ ವೈಭವಗಳ  ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಭಾರತಕ್ಕೆ ಸರಿಸಾಟಿಯಾಗಿ ಬೇರನನ್ನೂ ಕೊಡಲು ಸಾಧ್ಯವಿಲ್ಲ.  ಕೊರೊನಾದ ಸಂಕಷ್ಟದಲ್ಲಿರುವ ಭಾರತ ಅದನ್ನು ಮೆಟ್ಟಿನಿಂತಿದೆ. ಕರಾವಳಿಯಲ್ಲೂ ಕೊರೊನಾವನ್ನು ಎದುರಿಸಿ ಜನ ಮತ್ತೆ ಲವಲವಿಕೆಯತ್ತ ಮರಳಿದ್ದಾರೆ.

ಮತ್ತೆ ಉತ್ಸವ, ನೇಮ, ಕೋಲ ಶುರುವಾಗುತ್ತಿದೆ. ನಮ್ಮ ಬದುಕು ನಿಂತ ನೀರಲ್ಲ. ಅದು ಹರಿಯುವ ಶುದ್ಧ ನೀರಾಗುತ್ತಿರಬೇಕು. ತಾಯಿ ಎಲ್ಲರನ್ನೂ ಹರಸಲಿ ಎಂದು ಅವರು ಹರಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಸಂಸದ, ಬಿಜೆಪಿ ರಾಜ್ಯಾದ್ಯಕ್ಷ ನಳಿನ್‌ ಕುಮಾರ್ ಕಟೀಲು ಮಾತನಾಡಿ, ಭಾರತೀಯರ ಪ್ರತಿಯೊಂದು ಸೊತ್ತಿನಲ್ಲಿಯೂ ದೈವ ದೇವರನ್ನು ಕಂಡವರು. ಅಷ್ಟೇ ಅಲ್ಲ ಕಲೆ, ಸಂಸ್ಕೃತಿಯಲ್ಲೂ ನಾವು ದೇವರನ್ನು ಕಂಡವರು.

ನವರಾತ್ರಿ ಉತ್ಸವ ಕರಾವಳಿಯಲ್ಲೂ ಸಾಕಷ್ಟು ಕಲಾವಿದರಿಗೆ ನೆರವು ಸಿಗುತ್ತಿದೆ. ಆರಾಧನೆ ಮೂಲಕ ನಾವು ಸಂಸ್ಕೃತಿ ಪೂಜಿಸೋಣ ಎಂದರು.

ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಈ ಉತ್ಸವದ ಸಂದರ್ಭದಲ್ಲಿ ಕೊರೊನಾ ಕಾಡಿದ ಹಿನ್ನೆಲೆಯಲ್ಲಿಯೂ ನಾವು ಹುಲಿವೇಷ ಕುಣಿತಕ್ಕೆ, ಉತ್ಸವಗಳಿಗೆ ಅನುಮತಿಯನ್ನು ಪಕ್ಷ ನೀಡಿದೆ.

ಜನರ ಮನಸ್ಸು ಕೇವಲ ದೇವರು ಮಾತ್ರ ನಮಗೆ ರಕ್ಷಣೆ ನೀಡಬಲ್ಲ ಎನ್ನುವ ಅರಿವು ಆಗಿದೆ. ಜನರ ಆಧ್ಯಾತ್ಮಿಕ ಬದುಕಿಗೆ ನಮಗೆ ಉತ್ಸವಗಳು ಹೆಚ್ಚು ಶಕ್ತಿ ನೀಡಲಿ ಎಂದು ಆಶಿಸಿದರು.

ಕೊರೊನಾ ಬಂದ ಬಳಿಕ ಎಲ್ಲರೂ ನೆಮ್ಮದಿಯನ್ನು ಕೆಡಿಸಿಕೊಂಡು ಬದುಕುತ್ತಿದ್ದಾರೆ. ಈ ಪರಿಸ್ಥಿತಿಗೆ ಕಾರಣವೇ ನಮ್ಮೊಳಗಿನ ದುಷ್ಟತನವಾಗಿದೆ.

ಈ ದುಷ್ಟತನವನ್ನು ಕೊನೆಗೊಳಿಸಬೇಕಾದರೆ ದೇವಿ ಆರಾಧನೆ, ಹಬ್ಬಗಳ ಆಚರಣೆ ಅತೀ ಅಗತ್ಯ ಎಂದು ಕರ್ಣಾಟಕ ಬ್ಯಾಂಕಿನ ಚೀಫ್‌ ಆಪರೇಟಿಂಗ್‌ ಆಫೀಸರ್‌ ವೈ ವಿ ಬಾಲಚಂದ್ರ ಅಭಿಪ್ರಾಯಪಟ್ಟರು.

ಎನ್‌ಎಂಪಿಟಿಯ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಮಾತನಾಡಿ, ನವರಾತ್ರಿಯನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ರೂಪದಲ್ಲಿ ಆಚರಿಸುತ್ತಾರೆ.

ಆದರೆ ಎಲ್ಲರ ಮನಸ್ಸೂ ಒಂದೇ ಅದು ದೇವಿ ಆರಾಧನೆ. ಪುರಾತನ ಕಾಲದಿಂದಲೂ ದೇವಿ ಆರಾಧನೆಯನ್ನು ರಾಜಮಹಾರಾಜರೇ ಮಾಡಿಕೊಂಡು ಬಂದಿರುವುದನ್ನು ನಾವು ಕಂಡಿದ್ದೇವೆ. ಮಹಾಭಾರತ, ರಾಮಾಯಣದಲ್ಲೂ ನವರಾತ್ರಿಯ ಉಲ್ಲೇಖವಿದೆ. ದೇವಿ, ಧರ್ಮದ ಆರಾಧನೆಯೇ  ನಮ್ಮ ಸಫಲತೆಯ ರಹಸ್ಯವಾಗಿದೆ ಎಂದರು.

ನಮ್ಮ ಕುಡ್ಲ ನಿರ್ದೇಶಕ ಹರೀಶ್ ಬಿ. ಕರ್ಕೇರಾ, ಲೀಲಾಕ್ಷ ಬಿ. ಕರ್ಕೇರ, ಸೌಮ್ಯ ಬಿ ಕರ್ಕೇರಾ,  ಶರಣ್ ಕರ್ಕೇರಾ‌ ಮೊದಲಾದವರಿದ್ದರು. ಕುಮಾರಿ ಐಶ್ವರ್ಯ ಅವರು ಪ್ರಾರ್ಥಿಸಿದರು.  ನಿತಿನ್ ಬಿ. ಸಾಲಿಯಾನ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ದಸರಾ ವೈಭವ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ತಂಡಗಳ, ಒಂದೂವರೆ ಸಾವಿರಕ್ಕೂ ಅಧಿಕ ಕಲಾವಿದರ ಪ್ರದರ್ಶನ ನಮ್ಮ ಕುಡ್ಲ 24×7 ವಾಹಿನಿಯಲ್ಲಿ ನಿರಂತರ 10 ದಿನಗಳ ಕಾಲ ನಡೆಯಲಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...