Connect with us

LATEST NEWS

ಘಾಜಿಯಾಬಾದಿನಲ್ಲಿ ಭೀಕರ ಅಗ್ನಿ ದುರಂತ : ಭರದಿಂದ ಸಾಗುತ್ತಿದೆ ರಕ್ಷಣಾ ಕಾರ್ಯ..!

Published

on

ಘಾಜಿಯಾಬಾದಿನಲ್ಲಿ ಭೀಕರ ಅಗ್ನಿ ದುರಂತ : ಭರದಿಂದ ಸಾಗುತ್ತಿದೆ ರಕ್ಷಣಾ ಕಾರ್ಯ..!

ಘಾಜಿಯಾಬಾದ್: ಇಲ್ಲಿನ ಸಾಹಿಬಾ ಬಾದ್‌ ಭೂಪುರ ಕೃಷ್ಣ ವಿಹಾರ್ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 200 ಕೊಳೆಗೇರಿಗಳು (ಸ್ಲಂ-ಪ್ರದೇಶ) ಅಪಾಯದಲ್ಲಿದೆ ಎಂದು ವರದಿಯಾಗಿದೆ.

ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ದೌಡಾಯಿಸಿದ್ದು, ಈ ಪ್ರದೇಶದಲ್ಲಿ ವಾಸಿಸುವ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳದಲ್ಲಿ ಇನ್ನೂ ಕೂಡ 30 ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಈ ಭಾರೀ ಬೆಂಕಿ ಅವಘಢಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಪರಿಸ್ಥಿತಿಯನ್ನು ಶೀಘ್ರವಾಗಿ ನಿಯಂತ್ರಣಕ್ಕೆ ತರುವುದು ನಮ್ಮ ಆದ್ಯತೆಯಾಗಿದೆ.

ಬೆಂಕಿಯಲ್ಲಿ ಅನೇಕ ಸ್ಲಂ ಪ್ರದೇಶಗಳು ನಾಶವಾಗಿವೆ. ಹಲವರನ್ನು ರಕ್ಷಿಸಿ , ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ.

ನಿನ್ನೆ ರಾತ್ರಿ 10ರ ಸುಮಾರಿಗೆ ನಮಗೆ ಕರೆ ಬಂದಿತು, ಅದರ ನಂತರ ಯುಪಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ಧಾವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜಾದೌನ್ ಹೇಳಿದ್ದಾರೆ.

bangalore

ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಶಾಕ್; ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ದರ ಏರಿಕೆ

Published

on

ಬೆಂಗಳೂರು : ಹೊಸ ವರ್ಷದ 3ನೇ ತಿಂಗಳು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಹೌದು, ತಕ್ಷಣದಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಬಳಕೆ ಸಿಲಿಂಡರ್ ದರದ ಬೆಲೆ ಏರಿಕೆಯಾಗಿದೆ. ಮಾರ್ಚ್ 1 ರ ಶುಕ್ರವಾರದಿಂದಲೇ ಜಾರಿಗೆ ಬರುವಂತೆ 19 ಕೆ.ಜಿ,ಯ ವಾಣಿಜ್ಯ ಸಿಲಿಂಡರ್ ಗಳ ಬೆಲೆ 25 ರೂ. ಏರಿಕೆ ಮಾಡಲಾಗಿದೆ. ಆದರೆ, ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಪ್ರತಿ ತಿಂಗಳ ಮೊದಲ ದಿನವೇ ಸಿಲಿಂಡರ್ ಬೆಲೆಯಲ್ಲಿ ಏರಿಳಿತ ಆಗುತ್ತದೆ. ಈ ಬಾರಿ ವಾಣಿಜ್ಯ ಬಳಕೆಯ ಸಿಲಿಂಡರ್ ದರದಲ್ಲಿ ಏರಿಕೆಯಾಗಿದೆ. ಅಲ್ಲದೇ,ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಶುಕ್ರವಾರದಿಂದಲೇ ಸಿಲಿಂಡರ್ ಗೆ ಹೆಚ್ಚು ಹಣ ಪಾವತಿ ಮಾಡಬೇಕಿದೆ.

ಎಲ್ಲಿ?ಎಷ್ಟು?

ಇಂದಿನಿಂದ ವಾಣಿಜ್ಯ ಬಳಕೆ ಎಲ್ ಪಿ ಜಿ ಸಿಲಿಂಡರ್ ದೆಹಲಿಯಲ್ಲಿ 1,769.50 ರೂ. ಇದ್ದ ಬೆಲೆ 1795 ರೂ. ಏರಿಕೆ ಕಂಡಿದೆ. ಕೋಲ್ಕತ್ತಾದಲ್ಲಿ 1,887ರ ಬದಲಿಗೆ 1,911 ರೂ.ಗೆ ಲಭ್ಯವಾಗಲಿದೆ.ಮುಂಬೈನಲ್ಲಿ 1,749 ರೂ., ಹಾಗೂ ಚೆನ್ನೈನಲ್ಲಿ 1,960 ರೂ.ಗೆ ಲಭ್ಯವಾಗಲಿದೆ. ದೇಶೀಯ ಗ್ಯಾಸ್ ಸಿಲಿಂಡರ್ ದೆಹಲಿಯಲ್ಲಿ 903 ರೂ. ಮತ್ತು ಕೋಲ್ಕತ್ತಾದಲ್ಲಿ 929 ರೂ., ಮುಂಬೈನಲ್ಲಿ 902.50 ರೂ., ಚೆನ್ನೈನಲ್ಲಿ 918.50 ರೂ. ಗೆ ಹೆಚ್ಚಳ ಕಂಡಿದೆ.

Continue Reading

LATEST NEWS

100 ಅಡಿ ಆಳದ ಬಾವಿಗೆ ಬಿದ್ದ ಬಾಲಕ- ಪಾಳು ಬಾವಿಗೆ ಬಿದ್ರೂ ಬಾಲಕ ಬಚಾವ್

Published

on

ಹುಬ್ಬಳ್ಳಿ: ಮಾನಸಿಕ ಅಸ್ವಸ್ಥ ಬಾಲಕನೊರ್ವ 100 ಅಡಿ ಆಳದ ಬಾವಿಗೆ ಬಿದ್ದರೂ ಪವಾಡ ಸದೃಶ ರೀತಿಯಲ್ಲಿ ಬಚಾವಾದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ಮಾಲತೇಶ ಮಾವನೂರ ಎಂಬ(16)  ಬಾಲಕ ಮನೆಯಿಂದ ಹೊರಬಂದು ಏಕಾ ಏಕಿ ಬಾವಿಗೆ ಹಾರಿದ್ದ. ಸದ್ದು ಕೇಳಿ ಬಾವಿ ಬಳಿ ಬಂದ ಸ್ಥಳೀಯರಿಗೆ ಬಾಲಕ ಬಾವಿಗೆ ಬಿದ್ದ ವಿಚಾರ ಗೊತ್ತಾಗಿದೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಬಾವಿಯಲ್ಲಿ ನೀರಿಲ್ಲದೆ ಕೇವಲ ಕಸ ಕಡ್ಡಿ ಪ್ಲಾಸ್ಟಿಕ್ ತುಂಬಿಕೊಂಡಿದ್ದು ಬಾವಿಯ ಸುತ್ತ ಮುಳ್ಳುಕಂಟಿಗಳು ಬೆಳೆದಿತ್ತು. ಆದ್ರೆ 100 ಅಡಿ ಆಳಕ್ಕೆ ಬಿದ್ದಿದ್ದರೂ ಬಾಲಕ ಮಾಲತೇಶನಿಗೆ ಯಾವುದೇ ಗಾಯಗಳಾಗದೆ ಪಾರಾಗಿದ್ದೇ ದೊಡ್ಡ ಅಚ್ಚರಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಹಗ್ಗಕ್ಕೆ ಬುಟ್ಟಿ ಕಟ್ಟಿ ಬಾವಿಗೆ ಇಳಿಸಿ ಮಾಲತೇಶನನ್ನು ಮೇಲೆತ್ತಿದ್ದಾರೆ. ಮುಳ್ಳುಕಂಟಿ ತಾಗಿದ ಕಾರಣ ಸಣ್ಣಪುಟ್ಟ ತರುಚಿದ ಗಾಯಗಳಷ್ಟೇ ಆಗಿದೆ.

Continue Reading

LATEST NEWS

Udupi: ನೇಜಾರು ಕೊಲೆ ಪ್ರಕರಣ-ಆರೋಪಿ ಪ್ರವೀಣ್‌ ಗೆ ಕೋರ್ಟಿಗೆ ಹಾಜರಾಗಲು ನೋಟಿಸ್‌

Published

on

ಉಡುಪಿ : ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್‌ ಚೌಗುಲೆಯನ್ನು ಮಾ. 7 ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ.

ಆರೋಪಿ ಪ್ರವೀಣ್‌ ಚೌಗುಲೆ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಪ್ರವೀಣ್‌ ಚೌಗುಲೆ ವಿರುದ್ಧ ಈಗಾಗಲೇ ಉಡುಪಿಯ ಪೊಲೀಸರು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.ಇದೀಗ ದೋಷಾರೋಪ ವಾಚಿಸುವ ಪ್ರಕ್ರಿಯೆಗೆ ಮೊದಲು ನಡೆಯುವ ಪೂರ್ವಭಾವಿ ವಿಚಾರಣೆಗಾಗಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಉಡುಪಿಯ ನ್ಯಾಯಾಲಯ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಮಾರ್ಚ್ 7 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ.

Continue Reading

LATEST NEWS

Trending