ರಾಷ್ಟ್ರೀಯ ಕೇಸರಿ ಕ್ರಾಂತಿ ಸಂಘಟನೆ ವತಿಯಿಂದ ಮಾಸ್ಕ್ ವಿತರಣೆ
ರಾಷ್ಟ್ರೀಯ ಕೇಸರಿ ಕ್ರಾಂತಿ ಸಂಘಟನೆ ವತಿಯಿಂದ ಮಾಸ್ಕ್ ವಿತರಣೆ
ಮಂಗಳೂರು: ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವುದರ ವಿರುದ್ಧ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಾಸ್ಕ್ ವಿತರಣಾ ಕಾರ್ಯವೂ ಎಲ್ಲಡೆ ನಡೆಯುತ್ತಿದೆ.
(ಸಂಗ್ರಹ ಚಿತ್ರ)
ರಾಷ್ಟ್ರೀಯ ಕೇಸರಿ ಕ್ರಾಂತಿ ಸಂಘಟನೆ ವತಿಯಿಂದ ಮಾಸ್ಕ್ ವಿತರಣೆ ಮಾಡಲಾಗಿದೆ.
ಇನ್ನೂ ಕೂಡಾ ಜನತೆ ಮಾಸ್ಕ್ ಧರಿಸದೇ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತಾಳುತ್ತಿದ್ದಾರೆ, ಅದು ಸರಿಯಲ್ಲ.
ಕೊರೊನಾ ಮಾರಿ ಆದಷ್ಟು ಬೇಗ ದೇಶ, ಪ್ರಪಂಚದಿಂದಲೇ ನಾಶವಾಗಿ ಹೋಗಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ.
ಇದಕ್ಕೋಸ್ಕರ ನಾವೆಲ್ಲರೂ ಮಾಸ್ಕ್ ವಿತರಿಸುತ್ತಿದ್ದೇವೆ ಎಂದು ಸಂಘಟನೆ ಕಾರ್ಯಕರ್ತರು ಕಾಳಜಿ ವ್ಯಕ್ತಪಡಿಸಿದ್ದಾರೆ.
DAKSHINA KANNADA
ಮಂಗಳೂರು : ಪೆಟ್ರೋಲ್ ಪಂಪ್ ಎದುರೇ ಹೊತ್ತಿ ಉರಿದ ಮಾರುತಿ 800
ಮಂಗಳೂರು : ಮಾರುತಿ 800 ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ಕಾರು ದಗದಗಿಸಿ ಉರಿದ ಘಟನೆ ಮಂಗಳೂರು ಲೇಡಿಹಿಲ್ ನ ಪೆಟ್ರೋಲ್ ಪಂಪ್ ಎದುರು ಇಂದು (ನ.10) ಅಪರಾಹ್ನ ಸಂಭವಿಸಿದೆ.
‘ನಗರದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿ ಉರಿದಿದ್ದು ರಸ್ತೆಯ ಅಂಚಿನಲ್ಲೇ ಇರುವ ಪೆಟ್ರೋಲ್ ಪಂಪ್ ಎದುರು ನಿಂತಿತು’ ಎಂದು ಕದ್ರಿ ಅಗ್ನಿಶಾಮಕ ಇಲಾಖೆಯವರು ತಿಳಿಸಿದ್ದಾರೆ. ತಕ್ಷಣವೇ ಪೆಟ್ರೋಲ್ ಪಂಪ್ ಸಿಬಂದಿ ಬೆಂಕಿ ನಂದಿಸಿರುವ ಕಾರಣ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಈ ಘಟನೆಯ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ವರದಿಯಾಗಿದೆ.
DAKSHINA KANNADA
ಗುರುಪುರ ಸೇತುವೆ ತಡೆಗೋಡಿ ಏರಿ ಮಗುವಿನೊಂದಿಗೆ ಆ*ತ್ಮಹತ್ಯೆಗೆ ಯತ್ನ; ಸ್ಥಳೀಯರಿಂದ ರಕ್ಷಣೆ
ಮಂಗಳೂರು : ಗುರುಪುರ ಸೇತುವೆ ಮೇಲಿಂದ ವ್ಯಕ್ತಿಯೊಬ್ಬ 2 ವರ್ಷದ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು (ನ।10) ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಕೈಕಂಬ ನಿವಾಸಿ ಸಂದೀಪ್ ಎಂದು ಗುರುತಿಸಲಾಗಿದೆ. ಸೇತುವೆಯ ತುದಿಭಾಗದಲ್ಲಿ ಮಗುವಿನ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದು ವಾಹನ ಸವಾರರು ತಡೆಹಿಡಿದು ರಕ್ಷಿಸಿ ಥಳಿಸಿದ್ದಾರೆ.
ಮೊದಲಿಗೆ ಕೆಲ ಮುಸ್ಲಿಂ ಯುವಕರು ಸಂದೀಪ್‌ನ ಮನವೊಲಿಸುವ ಪ್ರಯತ್ನ ಮಾಡಿದ್ದಾಗ ಅವನು ಯಾರನ್ನೂ ಸಮೀಪಕ್ಕೆ ಬಿಟ್ಟುಕೊಂಡಿಲ್ಲ. ಈ ವೇಳೆ ಅವನು ನದಿಗೆ ಹಾರಿದ್ದೇ ಆದಲ್ಲಿ ರಕ್ಷಣೆ ಮಾಡಲು ಸಹ ಕೆಲ ಯುವಕರು ಸಿದ್ದರಾಗಿ ನಿಂತಿದ್ದರು.
ಆದರೂ, ಕೊನೆಗೆ ನದಿಗೆ ಹಾರಲು ಸಂದೀಪ್ ಯತ್ನಿಸಿದಾತ ಆಯತಪ್ಪಿ ಸೇತುವೆಯ ಮೇಲೆ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಹಿಡಿದು ಮಗುವನ್ನ ರಕ್ಷಣೆ ಮಾಡಿ ಆತ್ಮಹತ್ಯೆ ಮಾಡಲು ಮುಂದಾದವನಿಗೆ ಯುವಕರು ಎರಡೇಟು ನೀಡಿ ಬುದ್ದಿ ಕಲಿಸಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಯಾಕಾಗಿ ಹಾಗೆ ಮಾಡಿದ? ಏನು ವಿಷಯ? ಎಂಬ ಸಂಪೂರ್ಣ ಮಾಹಿತಿ ತಿಳಿದು ಬರಬೇಕಷ್ಟೇ.
LATEST NEWS
ಕಾಲಿಗೆ ಕಪ್ಪು ದಾರ ಕಟ್ಟುವುದರ ಹಿಂದಿನ ಮಹತ್ವ ನಿಮಗೆ ಗೊತ್ತಾ ??
ಇತ್ತೀಚೆಗೆ ಕಾಲಿಗೆ ಕಪ್ಪು ದಾರ ಕಟ್ಟುವುದು ಕೂಡ ಒಂದು ಪ್ಯಾಷನ್ ಆಗಿ ಬದಲಾಗಿದೆ. ಅನೇಕರು ತಮ್ಮ ಕಾಲಿಗೆ ಕಪ್ಪು ದಾರವನ್ನು ಕಟ್ಟುತ್ತಾರೆ. ನಿಜವಾಗಿ ನೊಡಲು ಹೋಗುವುದಾದರೆ ಅದರ ಹಿಂದೆ ಬಹುದೊಡ್ಡ ಕಾರಣನೇ ಇದೆ. ಅದು ಏನೆಂದು ಹಂತ ಹಂತವಾಗಿ ತಿಳಿದುಕೊಳ್ಳೋಣ.
ಕಪ್ಪು ದಾರವನ್ನು ಅನೇಕರು ಕಟ್ಟುತ್ತಾರೆ ಮಕ್ಕಳು ತಮ್ಮ ತೋಳುಗಳು, ಕಾಲುಗಳು, ಕುತ್ತಿಗೆ ಮತ್ತು ಸೊಂಟದ ಸುತ್ತಲೂ ಕಪ್ಪು ದಾರವನ್ನು ಧರಿಸುತ್ತಾರೆ. ಕಾಲಿಗೆ ಕಪ್ಪು ದಾರ ಕಟ್ಟುವುದರಿಂದ ಹಲವಾರು ಪ್ರಯೋಜನಗಳಿವೆ. ಶನಿ ದೋಷದಿಂದ ಹೊರಬರಬಹುದು.ಶನಿದೋಷ ಬಾಧಿಸುವಿಕೆಗೆ ಕಪ್ಪು ದಾರ ಉತ್ತಮ. ಶನಿದೋಷದಿಂದ ಆಗುವ ತೊಂದರೆ ತಪ್ಪಿಸಲು ಶನಿವಾರದಂದು ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದು ಮಹತ್ತರ ಪರಿಣಾಮ ಬೀರುತ್ತದೆ.
ಕಪ್ಪು ದಾರವನ್ನು ಕಾಲಿಗೆ ಕಟ್ಟುವ ಮುಲಕ ಶತ್ರು ಗ್ರಹವು ಮನೆಗೆ ಪ್ರವೇಶಿಸಿ ಮನೆಯ ಜೀವನವನ್ನು ತೊಂದರೆಗೊಳಿಸುವುದನ್ನು ತಪ್ಪಿಸಬಹುದು. ಆರ್ಥಿಕ ಸಮಸ್ಯೆಗಳು ಉದ್ಭವಿಸುತ್ತವ ಸಂದರ್ಭದಲ್ಲಿ ನಿಮ್ಮ ಎಡಗಾಲಿಗೆ ಕಪ್ಪು ದಾರವನ್ನು ಕಟ್ಟಿದರೆ ಸಮಸ್ಯೆ ನಿವಾರಣೆಗೆ ಸಹಕಾರ ಮಾಡುತ್ತದೆ. ಕಪ್ಪು ದಾರ ಕಾಲಲ್ಲಿ ಇದ್ದರೆ ರಾಹು ಮತ್ತು ಕೇತುಗಳ ಕೋಪದಿಂದ ಮುಕ್ತರಾಗುವ ಮೂಲಕ ಶಾಂತಿ ನಲೆಸಿರುತ್ತದೆ.
ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಬಲಗಾಲಿಗೆ ಕಪ್ಪು ದಾರ ಕಟ್ಟುವ ಮೂಲಕ ಹಣಕಾಸಿನ ಸಮಸ್ಯೆಗಳಿಂದ ಮುಕ್ತರಾಗಬಹುದು ಮತ್ತು ಯಾರಾದರೂ ನಮ್ಮ ಬಗ್ಗೆ ಅಸೂಯೆ ಪಟ್ಟರೆ ದೃಷ್ಟಿಗೆ ಧಕ್ಕೆಯಾಗುತ್ತದೆ, ಆ ಸಂದರ್ಭ ಕಪ್ಪು ದಾರವನ್ನು ಕಟ್ಟಿದ್ದರೆ ನಮಗೆ ರಕ್ಷಣೆ ಒದಗಿದುತ್ತದೆ, ಕಪ್ಪು ದಾರವು ನರರೋಗಕ್ಕೆ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಪ್ಪು ದಾರವನ್ನು ನೋಟದಿಂದ ಮರೆಮಾಡಬೇಕು. ಅದನ್ನು ಕಟ್ಟುವಾಗ, ಇತರ ಬಣ್ಣಗಳ ಎಳೆಗಳನ್ನು ಕಾಲುಗಳಿಗೆ ಕಟ್ಟಬಾರದು. ಮಂಗಳವಾರ ಅಥವಾ ಶನಿವಾರ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ಒಳ್ಳೆಯದು. ಕಪ್ಪು ದಾರವನ್ನು ಕಟ್ಟಿದಂತೆ ಶನಿ ಮಂತ್ರವನ್ನು 22 ಬಾರಿ ಪಠಿಸುವುದು ಇನ್ನೂ ಉತ್ತಮ.
- LATEST NEWS4 days ago
ವಧುವಿನಿಂದ ʼಮೊದಲ ರಾತ್ರಿʼ ನಿರಾಕರಣೆ; ಕಾರಣ ತಿಳಿದು ವರನಿಗೆ ಶಾ*ಕ್
- FILM5 days ago
ಕೋರ್ಟ್ ಮೆಟ್ಟಿಲೇರಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
- LATEST NEWS5 days ago
ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
- LATEST NEWS7 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್