ಮಂಗಳೂರು: ನಾಪತ್ತೆಯಾದ ಹೆಂಡತಿಯನ್ನು ಪತ್ತೆಮಾಡಿಕೊಡುವಂತೆ ವ್ಯಕ್ತಿಯೋರ್ವ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಪತ್ತೆಯಾದವಳನ್ನು ಕರ್ಪೆ ಪೇಗು(36) ಎಂದು ಗುರುತಿಸಲಾಗಿದೆ.
ನಗರ ಹೊರವಲಯದ ಬೈಕಂಪಾಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಸ್ಸಾಂ ರಾಜ್ಯದ ಮೊನಿಕಾಂಟೊ ಮಿಲಿ ಎಂಬಾತ ತನ್ನ ಪತ್ನಿ ಕರ್ಪೆ ಪೇಗು ಎಂಬುವವಳೊಂದಿಗೆ ಮಂಗಳೂರಿನ ಬೈಕಂಪಾಡಿಯ ಶ್ರೀರಾಮ ಭಜನಾ ಮಂದಿರ ಸಮೀಪ ಬಾಡಿಗೆಗೆ ರೂಮ್ ಮಾಡಿ ವಾಸವಾಗಿದ್ದರು.
ಮೇ.25ರಂದು ಪತಿ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದರು.
ನಂತರ ಮದ್ಯಾಹ್ನ ಬಂದು ಊಟ ಮಾಡಿ ವಾಪಾಸು ಹೋಗುವಾಗ ಹೆಂಡತಿ ಮನೆಯಲ್ಲಿಯೆ ಇದ್ದಳು. ನಂತರ ಸಂಜೆ ಪತಿ ಕೆಲಸ ಮುಗಿಸಿ ಮನೆಗೆ ಬಂದು ಸಂಜೆ 5.30 ಗಂಟೆಗೆ ನೋಡಿದಾಗ ಹೆಂಡತಿ ಮನೆಯಲ್ಲಿ ಕಾಣಿಸಲಿಲ್ಲ.
ಈ ಬಗ್ಗೆ ಅಕ್ಕಪಕ್ಕದಲ್ಲಿ ಹುಡುಕಿ ಹೇಳದೆ ಊರಿಗೆ ಹೋಗಿರಬಹುದಾ ಎಂದು 4ದಿನ ಕಾದು ಅಲ್ಲಿಗೆ ಪೋನ್ ಮೂಲಕ ವಿಚಾರಿಸಿದ್ದಾರೆ. ಅಲ್ಲಿಗೂ ತಲುಪದೇ ಏಕಾಏಕಿ ನಾಪತ್ತೆಯಾಗಿದ್ದಾರೆ. ಕಾಣೆಯಾಗಿರುವ ಹೆಂಡತಿಯನ್ನು ಪತ್ತೆ ಮಾಡಿಕೊಡಬೇಕಾಗಿ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾಣೆಯಾಗಿರುವವರ ಚಹರೆಯ ವಿವರ:
ಹೆಸರು: ಕರ್ಪೆ ಪೇಗು
ಪ್ರಾಯ:36 ವರ್ಷ,
ಎತ್ತರ: ಸುಮಾರು 4.7ಅಡಿ
ದಪ್ಪ ಶರೀರ ಬಿಳಿ ಮೈ ಬಣ್ಣ ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಅಸ್ಸಾಮಿ, ಹಿಂದಿ ಭಾಷೆಯನ್ನು ಮಾತನಾಡುತ್ತಾರೆ.